Home
ಮೊಬೈಲ್

ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿರುವ ನೋಟ್ ಸ್ಮಾರ್ಟ್‌ಫೋನ್ ರೂ.8,999ಕ್ಕೆ...!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯೂ ಸಾಕಷ್ಟು ವಿಸ್ತಾರವನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಂಪನಿಗಳು ಬಜೆಟ್ ಬೆಲೆಯಲ್ಲಿಯೇ ಸ್ಮಾರ್ಟ್‌ಫೋನ್ ಗಳನ್ನು ಲಾಂಚ್ ಮಾಡುತ್ತಿವೆ. ಇದೇ ಮಾದರಿಯಲ್ಲಿ ಕೂಲ್ ಪ್ಯಾಡ್ ಕಂಪನಿಯೂ ಹೊಸದೊಂದು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ಭಾರತೀಯ ಬಜೆಟ್ ಸ್ಮಾರ್ಟ್‌ಫೋನ್ ಇತಿಹಾಸದಲ್ಲಿಯೇ ಹೊಸ ಭಾಷ್ಯವನ್ನು ಈ ಸ್ಮಾರ್ಟ್‌ಫೋನ್ ಬರೆಯಲಿದೆ ಎನ್ನಲಾಗಿದೆ.

ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿರುವ ನೋಟ್ ಸ್ಮಾರ್ಟ್‌ಫೋನ್ ರೂ.8,999ಕ್ಕೆ...!

ಕೂಲ್ ಪ್ಯಾಡ್ ನೋಟ್ 6 ಸ್ಮಾರ್ಟ್‌ಫೋನ್ ಭಾರತದಲ್ಲಿ ಲಾಂಚ್ ಆಗಿದ್ದು, ಭಾರತಕ್ಕಾಗಿಯೇ ಎಕ್ಸ್‌ಕ್ಲೂಸಿವ್ ಆಗಿ ಈ ಸ್ಮಾರ್ಟ್‌ಫೋನ್ ಅನ್ನು ವಿನ್ಯಾಸ ಮಾಡಲಾಗಿದೆ. ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಭಾರೀ ಪ್ರಮಾಣದ ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ ಎನ್ನಲಾಗಿದ್ದು, ಈ ಕುರಿತ ಸಂಪೂರ್ಣ ಮಾಹಿತಿಯೂ ಮುಂದಿನಂತಿದೆ.

ಓದಿರಿ: SIM ಇಲ್ಲ, ನೆಟ್‌ವರ್ಕ್ ಬೇಕಿಲ್ಲ: ಫುಲ್‌ Freeಯಾಗಿ ಕಾಲ್ ಮಾಡಿ..!

ಡ್ಯುಯಲ್ ಸೆಲ್ಫಿ ಕ್ಯಾಮೆರಾ:

ಡ್ಯುಯಲ್ ಸೆಲ್ಫಿ ಕ್ಯಾಮೆರಾ:

ಕೂಲ್ ಪ್ಯಾಡ್ ನೋಟ್ 6 ಸ್ಮಾರ್ಟ್‌ಫೋನ್ ಪ್ರಮುಖ ಆಕರ್ಷಣೆ ಎಂದರೆ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಎಂದರೆ ತಪ್ಪಾಗುವುದಿಲ್ಲ ಎನ್ನಲಾಗಿದೆ. ಮುಂಭಾಗದಲ್ಲಿ ಉತ್ತಮವಾಗಿ ಸೆಲ್ಫಿಗಳನ್ನು ಸೆರೆಹಿಡಿಯುವ ಸಲುವಾಗಿ 8MP + 5MP ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೇ ಹಿಂಭಾಗದಲ್ಲಿ 13MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಕೂಲ್ ಪ್ಯಾಡ್ ನೋಟ್ 6:

ಕೂಲ್ ಪ್ಯಾಡ್ ನೋಟ್ 6:

ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶ ಇರುವ ಕೂಲ್ ಪ್ಯಾಡ್ ನೋಟ್ 6 ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ 7.1 ನಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 435 ಪ್ರೋಸೆಸರ್ ಅನ್ನು ಸಹ ಕಾಣಬಹುದಾಗಿದೆ. ಇದರೊಂದಿಗೆ ಆಡ್ರಿನೋ 505 GPU ಸಹ ಅಳವಡಿಸಲಾಗಿದೆ.

4GB RAM:

4GB RAM:

ಕೂಲ್ ಪ್ಯಾಡ್ ನೋಟ್ 6 ಸ್ಮಾರ್ಟ್‌ಫೋನಿನಲ್ಲಿ 4GB RAM ಅಳವಡಿಸಲಾಗಿದ್ದು, ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. 32GB ಆವೃತ್ತಿ ಮತ್ತು 64GB ಆವೃತ್ತಿಯಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟವಾಗುತ್ತಿದೆ. ಅಲ್ಲದೇ 128GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

Karnataka Election 2018: Chunavana app will find your booth in click - GIZBOT KANNADA
ಎರಡು ಆವೃತ್ತಿಯಲ್ಲಿ ಲಭ್ಯ:

ಎರಡು ಆವೃತ್ತಿಯಲ್ಲಿ ಲಭ್ಯ:

ಕೂಲ್ ಪ್ಯಾಡ್ ನೋಟ್ 6 ಸ್ಮಾರ್ಟ್‌ಫೋನ್ ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, 32GB ಆವೃತ್ತಿಯೂ ರೂ.8.999ಕ್ಕೆ ಮತ್ತು 64GB ಆವೃತ್ತಿಯೂ ರೂ.9999ಕ್ಕೆ ಮಾರಾಟವಾಗುತ್ತಿದ್ದು, ಆಫ್‌ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಶಿಯೋಮಿಗೆ ಸೆಡ್ಡು;

ಶಿಯೋಮಿಗೆ ಸೆಡ್ಡು;

ಇದೇ ಬೆಲೆಯಲ್ಲಿ ಮಾರಾಟವಾಗುತ್ತಿರುವ ಶಿಯೋಮಿ ನೋಟ್ 5 ಸ್ಮಾರ್ಟ್‌ಫೋನಿಗೆ ಕೂಲ್ ಪ್ಯಾಡ್ ನೋಟ್ 6 ಸ್ಮಾರ್ಟ್‌ಫೋನ್ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಸ್ಪರ್ಧೆಯೂ ನಿರ್ಮಾಣವಾಗಲಿದೆ.

Best Mobiles in India

English summary
Coolpad Note 6 With Dual Selfie Camera Launched. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+