3ಡಿ ಎಫೆಕ್ಟ್ ನೀಡುತ್ತೆ ಕ್ರಿಯೇಟಿವ್ ಹೆಡ್ ಸೆಟ್

Posted By: Staff
3ಡಿ ಎಫೆಕ್ಟ್ ನೀಡುತ್ತೆ ಕ್ರಿಯೇಟಿವ್ ಹೆಡ್ ಸೆಟ್

ದಿನೇ ದಿನೇ ಹೊಸ ವಿನ್ಯಾಸದ, ಹೊಸ ಮಾದರಿಯ, ಹೊಸ ಆಯ್ಕೆಗಳ ಹೆಡ್ ಸೆಟ್ ಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಕ್ರಿಯೇಟಿವ್ ಸೌಂಡ್ ಬ್ಲಾಸ್ಟರ್ ಟ್ಯಾಕ್ಟಿಕ್ ಆಲ್ಫಾ ಹೆಡ್ ಸೆಟ್ ಇದೀಗ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಗೇಮ್ ಗಳಿಗೆ ಮತ್ತು ಸಂಗೀತಕ್ಕೆಂದು ಅನೇಕ ಆಯ್ಕೆಗಳನ್ನು ಹೊತ್ತು ತಂದಿರುವ ಈ ಹೆಡ್ ಸೆಟ್ ವಿಶೇಷತೆಗಳನ್ನು ಇಲ್ಲಿ ತಿಳಿಯೋಣ.

ಈ ಹೆಡ್ ಸೆಟ್ ಗಳನ್ನು Xbox 360, PS3, PC, Mac ಗಳಿಗೆ ವಿನ್ಯಾಸಗೊಳಿಸಲಾಗಿದೆ.

ಕ್ರಿಯೇಟಿವ್ ಸೌಂಡ್ ಬ್ಲಾಸ್ಟರ್ ಟ್ಯಾಕ್ಟಿಕ್ 3ಡಿ ವಿಶೇಷತೆ:

* ಡ್ಯೂಯಲ್ ಮೋಡ್

* VoiceFX ತಂತ್ರಜ್ಞಾನ

* THX TruStudio ಪ್ರೊ ತಂತ್ರಜ್ಞಾನ

* ಟಚ್ ಸ್ಕ್ರೀನ್ ಕಂಟ್ರೋಲ್

* ಆಪ್ಟಿಮೈಸ್ ಆಡಿಯೋ ಸೆಟ್ಟಿಂಗ್

* ಗೇಮಿಂಗ್ ವಾಯ್ಸ್

* ಇನ್ ಲೈನ್ ವಾಲ್ಯೂಮ್ ಕಂಟ್ರೋಲ್

* USB ಅಡಾಪ್ಟರ್, ಕ್ವಕ್ ಸ್ಟಾರ್ಟ್ ಗೈಡ್

* ಯೂಸರ್ ಗೈಡ್ ಸಾಫ್ಟ್ ವೇರ್

* ನಾಯ್ಸ್ ಕ್ಯಾನ್ಸಲೇಶನ್

* 20Hz ರಿಂದ 20KHz ಫ್ರಿಕ್ವೆನ್ಸಿ ಬೆಂಬಲಿತ

ಗೇಮ್ ಮತ್ತು ಸಂಗೀತ ಪ್ರಿಯರಿಗೆ ಇದು ಅತ್ಯುನ್ನತ ಶಬ್ಧದ ಅನುಭವವನ್ನು ನೀಡುತ್ತದೆ. ಈ ಸಾಧನದೊಂದಿಗೆ 40 ಎಂಎಂ ನಿಯೋ ಡೈಮಿಯಂ ಡ್ರೈವರ್ ಗಳನ್ನು ನೀಡಲಾಗಿದೆ.

ಶಬ್ಧದ ಗುಣಮಟ್ಟ ಹೆಚ್ಚಿಸಲು ಬಳಕೆದಾರರಿಗೆ THX TruStudio Pro ಸಾಫ್ಟ್ ವೇರ್ ಗಳನ್ನು ನೀಡಲಾಗಿದೆ. ಇದರಿಂದ 3ಡಿ ಸೌಂಡ್ ಎಫೆಕ್ಟ್ ಸಾಧ್ಯವಾಗಲಿದೆ. ಇದರೊಂದಿಗೆ 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಡ್ಯೂಯಲ್ ಮೋಡ್ USB 2.0 ಅಡಾಪ್ಟರ್ ನೀಡಲಾಗಿದೆ.

ಈ ಸಾಧನದೊಂದಿಗೆ ಗ್ರಾಫಿಕ್ ಇಕ್ವಿಲೈಸರ್ ಕೂಡ ಇದೆ. ಅತ್ಯುತ್ತಮ ಗುಣಮಟ್ಟದ ರಿಬ್ಬನ್ ಕೇಬಲ್ ಹೆಡ್ ಸೆಟ್ ಜೊತೆಗಿದೆ. ಈ ಕ್ರಿಯೇಟಿವ್ ಬ್ಲಾಸ್ಟರ್ ಟಾಕ್ಟಿಕ್ 3ಡಿ ಆಲ್ಫಾ ಹೆಡ್ ಸೆಟ್ ಸುಮಾರು 5000 ರುಪಾಯಿಗೆ ದೊರೆಯಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot