ಡೆಲ್ ಸ್ಟ್ರೀಕ್ ಮೊಬೈಲ್ ನಲ್ಲಿ ವಿಶೇಷವೇನಿದೆ?

Posted By: Staff
ಡೆಲ್ ಸ್ಟ್ರೀಕ್ ಮೊಬೈಲ್ ನಲ್ಲಿ ವಿಶೇಷವೇನಿದೆ?

ಡೆಲ್ ಕಂಪನಿ ಅತ್ಯಾಕರ್ಷಕ ಮೊಬೈಲೊಂದನ್ನು ಪರಿಚಯಿಸಲಿದೆ. ಡೆಲ್ ಸ್ಟ್ರೀಕ್ ಪ್ರೊ D43 ಎಂಬ ಈ ಮೊಬೈಲ್ ವಿನ್ಯಾಸದಲ್ಲಿ ಆಕರ್ಷಕವಾಗಿದ್ದು, ಚಿಕ್ಕ ಟಚ್ ಬಾರ್ ಫೋನ್ ಮಾದರಿಯಲ್ಲಿದೆ. ಈ ಹ್ಯಾಂಡ್ ಸೆಟ್ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಎರಡರ ಉಪಯೋಗವನ್ನೂ ನಿಮಗೆ ನೀಡುತ್ತದೆ. ಡೆಲ್ ಮೊಬೈಲ್ ಗಳು ತಮ್ಮ ಕಾರ್ಯ ಕ್ಷಮತೆಯಿಂದಲೇ ಹೆಚ್ಚು ಹೆಸರುವಾಸಿಯಾಗಿದೆ ಎಂದರೆ ತಪ್ಪಿಲ್ಲ.

ಜಿಎಸ್ ಎಂ ಬೆಂಬಲಿತವಾಗಿರುವ ಈ ಮೊಬೈಲ್ ಕ್ವಾಲ್ಕಂ MSM8260 ಸ್ನಾಪ್ ಡ್ರಾಗನ್ ಚಿಪ್ ಸೆಟ್ ಮತ್ತು ಡ್ಯೂಯಲ್ ಕೋರ್ ಸ್ಕಾರ್ಪಿಯನ್ ಪ್ರೊಸೆಸರ್ ಪಡೆದುಕೊಂಡಿದೆ. 1.5 GHz ವೇಗದಿಂದ ಕಾರ್ಯ ನಿರ್ವಹಿಸಲಿದ್ದು, ಗ್ರಾಫಿಕ್ ಗೆಂದು ಅಡೆರ್ನೊ 220 ಗ್ರಾಫಿಕ್ ಪ್ರೊಸೆಸಿಂಗ್ ಯುನಿಟ್ ಈ ಮೊಬೈಲಿನಲ್ಲಿದೆ.

ಡೆಲ್ ಸ್ಟ್ರೀಕ್ ಪ್ರೊ D43 ಮೊಬೈಲ್:

* 124.9 ಎಂಎಂ x 64.5 ಎಂಎಂ x 10.3 ಎಂಎಂ ಸುತ್ತಳತೆ

* 145 ಗ್ರಾಂ ತೂಕ

* 4.3 ಇಂಚಿನ ಸೂಪರ್ ಅಮೊಲೆಡ್ ಟಚ್ ಸ್ಕ್ರೀನ್ ಡಿಸ್ಪ್ಲೇ

* 540 x 960 ಪಿಕ್ಸಲ್ ಸ್ಕ್ರೀನ್ ರೆಸೊಲ್ಯೂಷನ್, 16 ಮಿಲಿಯನ್ ಬಣ್ಣ ಬೆಂಬಲಿತ ಸ್ಕ್ರೀನ್

* ಸ್ಕ್ರೀನ್ ಸುರಕ್ಷತೆಗೆ ಗೊರಿಲ್ಲಾ ಗ್ಲಾಸ್

* 8 ಜಿಬಿ ಆಂತರಿಕ ಮೆಮೊರಿ

* 1 ಜಿಬಿ ಸಿಸ್ಟಮ್ ಮೆಮೊರಿ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* ನಾಯ್ಸ್ ಕ್ಯಾನ್ಸಲೇಶನ್ ಸೌಲಭ್ಯ

* ವೈ-ಫೈ 802.11 b/g/n ಜೊತೆ ವೈ-ಫೈ ಹಾಟ್ ಸ್ಪಾಟ್

* ಬ್ಲೂಟೂಥ್ 2.1, A2DP ಸಂಪರ್ಕ

* 14.4 Mbps ವೇಗದ HSDPA

* USB ಸಂಪರ್ಕ, ಮೈಕ್ರೊ USB ಪೋರ್ಟ್

* 8 ಮೆಗಾ ಪಿಕ್ಸಲ್ ಕ್ಯಾಮೆರಾ, 3264 x 2448 ಪಿಕ್ಸಲ್ ರೆಸೊಲ್ಯೂಷನ್

* 1.3 ಮೆಗಾ ಪಿಕ್ಸಲ್ ಸೆಕೆಂಡರಿ ಕ್ಯಾಮೆರಾ

* ಆಟೊ ಫೋಕಸ್, LED ಫ್ಲಾಶ್

* GPS ಬೆಂಬಲಿತ

ಮನರಂಜನೆಗೆಂದು RDS ಜೊತೆಗೆ ಸ್ಟಿರಿಯೋ ಎಫ್ ಎಂ ಇದೆ. ಲೀಥಿಯಂ ಐಯಾನ್ 1520 mAh ಬ್ಯಾಟರಿ ಹೊಂದಿರುವ ಈ ಡೆಲ್ ಮೊಬೈಲ್ 2ಜಿಯಲ್ಲಿ 281 ಗಂಟೆ ಸ್ಟ್ಯಾಂಡ್ ಬೈ ಟೈಂ, 3ಜಿನಲ್ಲಿ 353 ಗಂಟೆ ಸ್ಟ್ಯಂಡ್ ಬೈ ಟೈಂ ಮತ್ತು 2ಜಿನಲ್ಲಿ 13 ಗಂಟೆ ಟಾಕ್ ಟೈಂ ಮತ್ತು 3ಜಿನಲ್ಲಿ 9 ಗಂಟೆ ಟಾಕ್ ಟೈಂ ನೀಡುತ್ತದೆ.

ಮೊಬೈಲ್ ನಲ್ಲಿ ಇಮೇಜ್ ಮ್ಯಾನಿಪುಲೇಶನ್ ಮತ್ತು ಡಾಕ್ಯುಮೆಂಟ್ ಎಡಿಟಿಂಗ್ ಸಾಫ್ಟ್ ವೇರ್ ಗಳ ಅಪ್ಲಿಕೇಶನ್ ಗಳಿದೆ. ಈ ಮೊಬೈಲಿನ ಮೈಕ್ರೊಫೋನ್ ನಲ್ಲಿ ನಾಯ್ಸ್ ಕ್ಯಾನ್ಸಲೆಶನ್ ಇರುವುದು ವಿಶೇಷವಾಗಿದೆ. ಈ ಡೆಲ್ ಸ್ಟ್ರೀಕ್ ಪ್ರೊ D43 ಮೊಬೈಲಿನ ನಿಖರ ಬೆಲೆ ಭಾರತದಲ್ಲಿ ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆದರೆ ಈ ಮೊಬೈಲ್ ಸುಮಾರು 35,000 ರೂಪಾಯಿ ಇರುವ ಅಂದಾಜಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot