ಪರಿಷ್ಕರಣೆಗೊಂಡಿದೆ ಡೆಲ್ ವೆನ್ಯೂ ಪ್ರೊ ಸ್ಮಾರ್ಟ್ ಫೋನ್

Posted By: Staff
ಪರಿಷ್ಕರಣೆಗೊಂಡಿದೆ ಡೆಲ್ ವೆನ್ಯೂ ಪ್ರೊ ಸ್ಮಾರ್ಟ್ ಫೋನ್

ಸಾಫ್ಟ್ ವೇರ್ ಗಳನ್ನು ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಗಳಿಗೆಂದು ಪರಿಷ್ಕ್ರತಗೊಳಿಸುವುದು ಹಳೆಯ ವಿಷಯ. ದಿನೇ ದಿನೇ ಹೊಸ ತಂತ್ರಜ್ಞಾನ ಬೆಳೆದಂತೆ ಸ್ಮಾರ್ಟ್ ಫೋನ್ ಗಳ ಸಾಫ್ಟ್ ವೇರ್ ಕೂಡ ಪರಿಷ್ಕ್ರತಗೊಳ್ಳುತ್ತಿದೆ. ಸ್ಮಾರ್ಟ್ ಫೋನಿನ ಕಾರ್ಯ ವೈಖರಿಯಾಗಿರುವ ಆಪರೇಟಿಂಗ್ ಸಿಸ್ಟಮ್ ನಲ್ಲಿ ದಿನೇ ದಿನೇ ಹೊಸತು ಕಾಣಿಸಿಕೊಳ್ಳುತ್ತಲೇ ಇದೆ.

ಅದೇ ಹಾದಿಯಲ್ಲಿ ಇದೀಗ ಡೆಲ್ ವೆನ್ಯೂ ಪ್ರೊ ಮೊಬೈಲಿನ ಆಪರೇಟಿಂಗ್ ಸಿಸ್ಟಮ್ ಕೂಡ ಪರಿಷ್ಕರಣೆಗೊಳ್ಳುತ್ತಿದೆ. ಈ ಮೊದಲು ಡೆಲ್ ವೆನ್ಯೂ ಪ್ರೊ ವಿಂಡೋಸ್ ಫೋನ್ ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು ಇದೀಗ ವಿಂಡೋಸ್ ಫೋನ್ 7.5 ಆಯಾಮಕ್ಕೆ ಪರಿಷ್ಕ್ರತಗೊಂಡಿದೆ.

ಕಾರ್ಯ ವೈಖರಿಯಲ್ಲಿ ಹೆಸರು ಮಾಡಿರುವ ವಿಂಡೋಸ್ ಫೋನ್ ಆಪರೇಟಿಂಗ್ ಸಿಸ್ಟಮ್ ದಿನೇ ದಿನೇ ಹೆಚ್ಚು ಅಭಿವೃದ್ಧಿಯಾಗುತ್ತಿರುವ ಸೂಚನೆ ಇದಾಗಿದೆ. ಇದರಿಂದ ಡ್ಯೂಯಲ್ ಕೋರ್ ಸಿಪಿಯು, WVGA ರೆಸೊಲ್ಯೂಷನ್ ನೊಂದಿಗೆ ಹಲವು ಆಯ್ಕೆಯ ಈ ಆಪರೇಟಿಂಗ್ ಸಿಸ್ಟಮ್ ಗಳು ಗ್ರಾಹಕಪ್ರೇಮಿಯಾಗುತ್ತಿದೆ.

ಡೆಲ್ ಕಂಪನಿ ಡೆಲ್ ವೆನ್ಯೂ ಪ್ರೊ ಮೊಬೈಲನ್ನು ಭಾರತದಲ್ಲಿ 30,000 ರೂಗೆ ಪರಿಚಯಿಸಲಾಗಿತ್ತು. ಈ ಫೋನ್ ವಿಂಡೋಸ್ ಫೋನ್ ಆಯಾಮದ ಆಪರೇಟಿಂಗ್  ಸ್ಟಮ್ ಬೆಂಬಲಿತವಾಗಿದ್ದು, ಇದೀಗ ವಿಂಡೋಸ್ ಫೋನ್  7.5 ಆಯಾಮಕ್ಕೆ ಪರಿಷ್ಕ್ರತಗೊಂಡಿದೆ. ಇದರೊಂದಿಗೆ ಕ್ವಾಲ್ಕಂ (ಸ್ಕಾರ್ಪಿಯನ್ ಕೋರ್) 1GHz ಸ್ನಾಪ್ ಡ್ರಾಗನ್ ಸಿಪಿಯು ಮತ್ತು ಉತ್ತಮ ಗ್ರಾಫಿಕ್ ಬೆಂಬಲಕ್ಕೆಂದು ಅಡೆರ್ನೊ 200 ಗ್ರಾಫಿಕ್ ಪ್ರೊಸೆಸರ್ ಇದೆ.

ಡೆಲ್ ವೆನ್ಯೂ ಪ್ರೊ ಮೊಬೈಲ್ ವಿಶೇಷತೆ:

* ಸ್ಲೈಡ್ ವಿನ್ಯಾಸದ ಮೊಬೈಲ್

* ಕ್ವೆರ್ಟಿ ಕೀ ಪ್ಯಾಡ್

* 4.1 ಇಂಚಿನ ಅಮೊಲೆಡ್ ಟಚ್ ಸ್ಕ್ರೀನ್

* 5 ಮೆಗಾ ಪಿಕ್ಸಲ್ ಕ್ಯಾಮೆರಾ, LED ಫ್ಲಾಶ್, ಆಟೊ ಫೋಕಸ್

* 720p ಹೈ ಡೆಫನಿಶನ್ ವಿಡಿಯೋ ಸಾಮರ್ಥ್ಯ

* 8 ಜಿಬಿ ಮೆಮೊರಿ ಸಾಮರ್ಥ್ಯ, 512 ಎಂಬಿ RAM

ಈ ಪರಿಷ್ಕ್ರತ ಆಪರೇಟಿಂಗ್ ಸಿಸ್ಟಮ್ ಬೆಂಬಲದಿಂದ ಬಳಕೆದಾರರು ಸಿಂಕ್, ಎಡಿಟ್, ವ್ಯೂ, ಶೇರ್ ಎಲ್ಲಾ ಆಯ್ಕೆಗಳನ್ನೂ ಬಳಸಬಹುದು. ಫೇಸ್ ಬುಕ್, ವಿಂಡೋಸ್ ಲೈವ್ ಮತ್ತು ಫ್ಲಿಕ್ಕರ್ ಗಳಿಗೆ ಚಿತ್ರಗಳನ್ನು ಹಂಚಲು ಈಗ ಸುಲಭವೆನಿಸಿದೆ.

ಕ್ರೀಡೆ, ಸುದ್ದಿ, ಸಂಗೀತ, ಗೇಮ್ ಎಲ್ಲದಕ್ಕೂ ಅಪ್ಲಿಕೆಶನ್ ಗಳನ್ನೂ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಮಲ್ಟಿ ಪ್ಲೇಯರ್ ಆಯ್ಕೆಯಿದ್ದು,  Xbox LIVE ಮತ್ತು ಇನ್ನಿತರ ಗೇಮಿಂಗ್ ಆಯ್ಕೆಗಳು ಈ ಡೆಲ್ ವೆನ್ಯೂ ಪ್ರೊ ಮೊಬೈಲನ್ನು ಇನ್ನಷ್ಟು ಆಕರ್ಷಕಗೊಳಿಸಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot