Home
ಮೊಬೈಲ್

ಮಾರುಕಟ್ಟೆಗೆ ಸೆಲ್ಪಿ ಕ್ಯಾಮೆರಾ ಇರುವ ಫೀಚರ್ ಫೋನ್..!

By Lekhaka

ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಲಾಂಚ್ ಆದ ನಂತರದಲ್ಲಿ ಹೆಚ್ಚಿನ ಪ್ರಮಾಣದ ಫೀಚರ್ ಫೋನ್ ಗಳು ಕಾಣಿಸಿಕೊಂಡಿದ್ದು, ಇದೇ ಮಾದರಿಯಲ್ಲಿ ಡಿಟೇಲ್ ಕಂಪನಿಯೂ ಹಲವು ಫೀಚರ್ ಫೋನ್ ಗಳನ್ನು ಮಾರಾಟ ಮಾಡುತ್ತಿದ್ದು, ಸದ್ಯ ಇದೇ ಮಾದರಿಯಲ್ಲಿ ರೂ.899ಕ್ಕೆ ಸೆಲ್ಫಿ ಕ್ಯಾಮೆರಾ ಇರುವಂತ ಫೀಚರ್ ಪೋನ್ ವೊಂದನ್ನು ಲಾಂಚ್ ಮಾಡಿದ್ದು, ಸದ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಅತೀ ಕಡಿಮೆ ಬೆಲೆಯ ಕ್ಯಾಮೆರಾ ಹೊಂದಿರುವ ಫೀಚರ್ ಪೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

ಮಾರುಕಟ್ಟೆಗೆ ಸೆಲ್ಪಿ ಕ್ಯಾಮೆರಾ ಇರುವ ಫೀಚರ್ ಫೋನ್..!


ಡಿಟೇಲ್ D30 ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, B2BAdda.comನಲ್ಲಿ ಮಾತ್ರವೇ ದೊರೆಯುತ್ತಿದೆ ಎನ್ನಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಈ ಫೀಚರ್ ಫೋನ್ ಬರೆಯುವ ಸಾಧ್ಯತೆಯೂ ತೀರಾ ದಟ್ಟವಾಗಿದೆ. ಹಿಂಭಾಗದ ಮತ್ತು ಮುಂಭಾಗದ ಕ್ಯಾಮೆರಾ ಇದರ ಮಾರಾಟವನ್ನು ಹೆಚ್ಚಿಸಲಿದೆ ಎನ್ನಲಾಗಿದೆ.

ಡಿಟೇಲ್ D30 ಫೀಚರ್ ಫೋನಿನಲ್ಲಿ 2.4 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಫೋನಿನ ಹಿಂಭಾಗ ಮತ್ತು ಮುಂಭಾಗದಲ್ಲಿ ಕ್ಯಾಮೆರಾವನ್ನು ನೋಡಬಹುದಾಗಿದ್ದು, 1400mAh ಬ್ಯಾಟರಿಯನ್ನು ಈ ಫೋನಿನಲ್ಲಿ ಅಳವಡಿಸಲಾಗಿದೆ. ಇದಲ್ಲದೇ ಪವರ್ ಸೇವಿಂಗ್ ಮೋಡ್ ಸಹ ಈ ಫೀಚರ್ ಫೋನಿನಲ್ಲಿ ಕಾಣಿಸಿಕೊಂಡಿದೆ.

ಇದಲ್ಲದೇ ಆಟೋ ಕಾಲ್ ರೆಕಾರ್ಡಿಂಗ್, ಕಾಲ್ ಬ್ಲಾಕ್ ಲಿಸ್ಟ್, ಮಲ್ಟಿಪಲ್ ಲಾಂಗ್ವೇಜ್ ಸಫೋರ್ಟ್ ಸೇರಿದಂತೆ ಹಲವು ಆಯ್ಕೆಗಳನ್ನು ಹೊಂದಿದೆ. ವಿಡಿಯೋ ಮತ್ತು ಆಡಿಯೋ ಪ್ಲೇಯರ್ ಸಹ ಲಭ್ಯವಿದೆ. ಇದಲ್ಲದೇ LED ಫ್ಲಾಷ್ ಲೈಟ್ ಸಹ ಕಾಣಬಹುದಾಗಿದ್ದು, ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ನೀಡಿದ್ದು, 16GB ವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

ಇದರೊಂದಿಗೆ ಡಿಟೇಲ್ D30 ಫೀಚರ್ ಫೋನ್ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವು ಲಭ್ಯವಿದ್ದು, GPRS, ವೈರ್ ಲೇಸ್ FM, ಗೇಮ್ ಗಳು ಸೇರಿದಂತೆ ಹಲವು ಆಯ್ಕೆಗಳನ್ನು ಕಾಣಬಹುದಾಗಿದೆ. ಇದಲ್ಲದೆ SOS ಪಾನಿಕ್ ಬಟನ್ ಅನ್ನು ಸಹ ಹೊಂದಿದೆ ಎನ್ನಲಾಗಿದೆ.

Best Mobiles in India

English summary
Detel launches D30 ‘Selfie’ feature phone at Rs 899. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+