ಕನ್ನಡದಲ್ಲಿಯೂ ಕಾರ್ಯನಿರ್ವಹಿಸುವ ಈ ಫೀಚರ್ ಫೋನ್‌ ಬೆಲೆ ರೂ.700ಕ್ಕಿಂತಲೂ ಕಡಿಮೆ..!

|

ಭಾರತೀಯ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಫೀಚರ್ ಫೋನ್‌ ಗಳನ್ನು ಮಾರಾಟ ಮಾಡುತ್ತಿರುವ ಡಿಟೆಲ್ ಕಂಪನಿಯೂ ನೂತನವಾಗಿ ನಾಲ್ಕು ಹೊಸ ಫೀಚರ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯವನ್ನು ಮಾಡಲು ಮುಂದಾಗಿದೆ. D1 ಬೂಮ್, D4 ಪ್ರೈಮ್, D120 ಮತ್ತು D500 ಫೀಚರ್ ಫೋನ್‌ಗಳ ಮಾರಾಟವೂ ಇಂದಿನಿಂದ ಆರಂಭವಾಗುವುದು ಎಂದು ಡಿಟೆಲ್ ಕಂಪನಿಯೂ ಘೋಷಣೆ ಮಾಡಿದೆ.

ಕನ್ನಡದಲ್ಲಿಯೂ ಕಾರ್ಯನಿರ್ವಹಿಸುವ ಈ ಫೀಚರ್ ಫೋನ್‌ ಬೆಲೆ ರೂ.700ಕ್ಕಿಂತಲೂ ಕಡಿಮೆ..

ಭಾರತ ಸರಕಾರವೂ ಫೀಚರ್ ಫೋನ್ ತಯಾರಿಸುವ ಸೇವೆಯಲ್ಲಿ ಮಹಿಳೆಯ ಸುರಕ್ಷತೆಗಾಗಿ ಪ್ಯಾನಿಕ್ ಬಟನ್‌ವೊಂದನ್ನು ಅಳವಡಿಸುವಂತೆ ಸೂಚನೆಯನ್ನು ನೀಡಿತ್ತು. ಈ ಫೀಚರ್ ಫೋನ್‌ಗಳು ಈ ನಿಯಮವನ್ನು ಪಾಲಿಸಿವೆ ಎನ್ನಲಾಗಿದೆ. ಇದಲ್ಲದೇ ಈ ಫೀಚರ್ ಫೋನ್‌ಗಳಲ್ಲಿ ಕ್ಯಾಮೆರಾವನ್ನು ಸಹ ಕಾಣಬಹುದಾಗಿದೆ. ಈ ಫೀಚರ್ ಫೋನ್‌ಗಳು ಕನ್ನಡ ಸೇರಿದಂತೆ 22 ಭಾಷೆಗಳಿಗೆ ಸಫೋರ್ಟ್ ಮಾಡಲಿವೆ.

D1 ಬೂಮ್ ಮತ್ತು D4 ಪ್ರೈಮ್ ಫೀಚರ್‌ ಫೋನ್‌ಗಳು ಕ್ರಮವಾಗಿ ರೂ.599 ಮತ್ತು ರೂ.699ಗೆ ದೊರೆಯಲಿದೆ. ಹಾಗೆಯೇ D120 ಮತ್ತು D500 ಫೀಚರ್ ಫೋನ್‌ಗಳ ರೂ. 649ಕ್ಕೆ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್‌ಗಳನ್ನು B2BAdda.com ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಖರೀದಿ ಮಾಡಬಹುದಾಗಿದೆ. ಪ್ಯಾನಿಕ್ ಬಟನ್‌ ಹೊಂದಿರುವ ಭಾರತದ ಮೊದಲ ಫೀಚರ್ ಪೋನ್‌ಗಳು ಎನ್ನುವ ಖ್ಯಾತಿಗೆ ಈ ಫೋನ್‌ಗಳು ಪಾತ್ರವಾಗಿವೆ.

ಕನ್ನಡದಲ್ಲಿಯೂ ಕಾರ್ಯನಿರ್ವಹಿಸುವ ಈ ಫೀಚರ್ ಫೋನ್‌ ಬೆಲೆ ರೂ.700ಕ್ಕಿಂತಲೂ ಕಡಿಮೆ..

ಈ ಫೀಚರ್ ಫೊನ್‌ಗಳು 1.8 ಇಂಚಿನ ಡಿಸ್‌ಪ್ಲೇಯೊಂದಿಗೆ ಕಾಣಿಸಿಕೊಳ್ಳಲಿದ್ದು, ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನುವನ್ನು ಹೊಂದಿದೆ. ಅಲ್ಲದೇ ಎಲ್ಲಾ ಫೀಚರ್ ಫೋನ್ ಹಿಂಭಾಗದಲ್ಲಿ ಡಿಜಿಟಲ್ ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಇದು ವಿಡಿಯೋ ರೆಕಾರ್ಡಿಂಗ್ ಸಹ ಮಾಡಲಿದ್ದು, ವಿಡಿಯೋ, ಆಡಿಯೋ ಪ್ಲೇಯರ್ ಸಹ ಜೊತೆಗಿದೆ. ಮೆಮೊರಿ ಹಾಕಿಕೊಳ್ಳುವ ಅವಕಾಶ ನೀಡಲಾಗಿದ್ದು, 16GB ವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

How To Link Aadhaar With EPF Account Without Login (KANNADA)

D1 ಬೂಮ್ ಮತ್ತು D4 ಪ್ರೈಮ್ ಫೀಚರ್‌ ಫೋನ್‌ಗಳು ಕ್ರಮವಾಗಿ 1600mAh 1650mAh ಬ್ಯಾಟರಿಯನ್ನು ಹೊಂದಿದ್ದರೇ D120 ಮತ್ತು D500 ಫೀಚರ್ ಫೋನ್‌ಗಳು 1050mAh ಬ್ಯಾಟರಿಯೊಂದಿಗೆ ಕಾಣಿಸಿಕೊಳ್ಳಲಿದೆ. ಈ ಫೀಚರ್ ಫೋನಿನಲ್ಲಿ 23 ಭಾಷೆಗಳು ಲಭ್ಯವಿದ್ದು, ವಿವಿಧ ಬಣ್ಣದಲ್ಲಿ ದೊರೆಯಲಿದೆ.

Best Mobiles in India

English summary
Detel Launches Four Feature Phones With Panic Button in India Under Rs 700. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X