ಭಾರತಕ್ಕೆ Oppo Find X9 ಫೋನ್ ಆಗಮನ ಖಚಿತ: ಬೆಲೆ ಮತ್ತು ಫೀಚರ್ಸ್ ನೋಡಿ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Oppo ತನ್ನ ಮುಂದಿನ Find X9 ಸರಣಿ ಪೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಸಾಧನವು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ವೆಬ್‌ಸೈಟ್‌ನಲ್ಲಿ ಮಾಡೆಲ್ ಸಂಖ್ಯೆ CPH2791 ರೊಂದಿಗೆ ಕಾಣಿಸಿಕೊಂಡಿದ್ದು, ಇದು ಭಾರತದಲ್ಲಿ ಇದರ ಬಿಡುಗಡೆ ಹತ್ತಿರದಲ್ಲಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ. ಸೋರಿಕೆಯಾದ ಮಾಹಿತಿಯ ಪ್ರಕಾರ, ಚೀನಾದಲ್ಲಿ ಅಕ್ಟೋಬರ್ 16 ರಂದು ಬಿಡುಗಡೆಯಾಗಲಿರುವ ಈ ಫೋನ್, ಡಿಸೆಂಬರ್ ಮೊದಲ ವಾರದಲ್ಲಿ ಭಾರತೀಯ ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ.! ಹಾಗಾದರೆ, ಹೊಸ Oppo Find X9 ಫೋನ್ ಹೇಗಿರಲಿದೆ?, ಫೀಚರ್ಸ್ ಯಾವುವು ಮತ್ತು ಬೆಲೆ ಎಷ್ಟಿರಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
Oppo Find X9: ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳು
ಹೊಸ Oppo Find X9 ಫೋನ್ ಸರಣಿಯು ಹಿಂದಿನ ಸುತ್ತಿನ ಕ್ಯಾಮೆರಾ ಮಾಡ್ಯೂಲ್ ಬದಲಿಗೆ, ಹೊಸದಾಗಿ ಎಡ ಮೂಲೆಯಲ್ಲಿ ಇರಿಸಲಾದ ಅನನ್ಯವಾದ 'ಅಳಿಲು' ಆಕಾರದ ಕ್ಯಾಮೆರಾ ದ್ವೀಪವನ್ನು ಹೊಂದಿರುವ ಹೊಸ ವಿನ್ಯಾಸವನ್ನು ಹೊಂದಿದೆ. ಜೊತೆಗೆ ಫೋನ್‌ನ ತೆಳುವಾದ ಮತ್ತು ಸಮ್ಮಿತೀಯ ಬೆಜೆಲ್‌ಗಳು ಫೋನ್‌ಗೆ ವಿಶಿಷ್ಟ ಮತ್ತು ಆಧುನಿಕ ನೋಟವನ್ನು ನೀಡುತ್ತಿವೆ. ಡಿಸ್‌ಪ್ಲೇ ವಿಭಾಗದಲ್ಲಿ, ಈ ಫೋನ್ ಸರಣಿಯು 6.59 ಇಂಚಿನ 1.5K ರೆಸಲ್ಯೂಶನ್‌ನೊಂದಿಗೆ ಟಿಯಾನ್ಮಾ OLED ಪ್ಯಾನೆಲ್ ಅನ್ನು 120Hz ರಿಫ್ರೆಶ್ ದರ ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ ಬಳಸುತ್ತದೆ ಎಂದು ವದಂತಿಗಳಿವೆ.
ಬ್ಯಾಟರಿ ಸಾಮರ್ಥ್ಯವು ಈ ಫೋನ್ ಸರಣಿಯ ಪ್ರಮುಖ ಆಕರ್ಷಣೆಯಾಗಿದೆ. ಫೈಂಡ್ X9 ನಲ್ಲಿ 7,000mAh ಬ್ಯಾಟರಿ ಮತ್ತು ಪ್ರೊ ಮಾದರಿಯಲ್ಲಿ ಇನ್ನೂ ದೊಡ್ಡದಾದ 7,500mAh ಬ್ಯಾಟರಿ ಇರುವ ಸಾಧ್ಯತೆಯಿದೆ. ಇಂತಹ ದೊಡ್ಡ ಬ್ಯಾಟರಿಗಳು ಅತ್ಯುತ್ತಮ ಬಾಳಿಕೆ ನೀಡಿ, ಸರಣಿಯ ದೊಡ್ಡ ಮಾರಾಟದ ಅಂಶವಾಗಬಹುದು. ಕ್ಯಾಮೆರಾದಲ್ಲಿ ಒಪ್ಪೋ ಮತ್ತೊಮ್ಮೆ ಹಾಸೆಲ್‌ಬ್ಲಾಡ್ ಜೊತೆ ಕೈಜೋಡಿಸಿದೆ. ಫೈಂಡ್ X9 ಪ್ರೊ ಮಾದರಿಯು 200-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದ್ದು, ಇದು ಅತ್ಯುತ್ತಮ ಜೂಮ್ ಮತ್ತು ವಿವರವಾದ ಛಾಯಾಗ್ರಹಣಕ್ಕೆ ಸೂಕ್ತವಾಗಿದೆ.

ಕಾರ್ಯಕ್ಷಮತೆಯ ವಿಷಯದಲ್ಲಿ, ಈ ಫೋನ್ ಸರಣಿಯು ಮೀಡಿಯಾಟೆಕ್‌ನ ಅತ್ಯಾಧುನಿಕ ಚಿಪ್‌ಸೆಟ್ ಆದ ಡೈಮೆನ್ಸಿಟಿ 9500 (Dimensity 9500) ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಪ್ರಬಲ ಪ್ರೊಸೆಸರ್ ಕ್ವಾಲ್ಕಾಮ್‌ನ ಹೊಸ ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 (Snapdragon 8 Elite Gen 5) ನಂತಹ ಪ್ರೀಮಿಯಂ ವಿಭಾಗದ ಇತರ ಪ್ರಮುಖ ಫೋನ್‌ಗಳಿಗೆ ನೇರ ಸ್ಪರ್ಧೆ ನೀಡಲಿದೆ. ಇದರೊಂದಿಗೆ, ಫೈಂಡ್ X9 ಅನ್ನು ಭಾರತದಲ್ಲಿ ₹65,000 ಮತ್ತು ಪ್ರೊ ಮಾದರಿಯನ್ನು ₹89,000 ಕ್ಕೆ ಬಿಡುಗಡೆ ಮಾಡುವ ನಿರೀಕ್ಷೆಯಿದ್ದು, ಪ್ರೀಮಿಯಂ ಫ್ಲ್ಯಾಗ್‌ಶಿಪ್ ಮಾರುಕಟ್ಟೆಯಲ್ಲಿ ನೇರ ಸ್ಪರ್ಧೆಯನ್ನು ತರಬಹುದು.
Oppo Find X9: ಹೋಲಿಕೆಯನ್ನು ನೋಡೋಣ
ಕ್ಯಾಮೆರಾ ವಿಭಾಗದಲ್ಲಿ, Oppo Find X9 ಸರಣಿಯು ಗ್ಯಾಲಕ್ಸಿ ಎಸ್25 ಅಲ್ಟ್ರಾ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಕ್ಯಾಮೆರಾಗಳೊಂದಿಗೆ ತೀವ್ರ ಸ್ಪರ್ಧೆ ನೀಡಲಿದೆ. ಅದರಲ್ಲೂ ಫೈಂಡ್ X9 ಪ್ರೊ 200MP ಪೆರಿಸ್ಕೋಪ್ ಲೆನ್ಸ್‌ನೊಂದಿಗೆ ಗ್ಯಾಲಕ್ಸಿ ಎಸ್25 ಅಲ್ಟ್ರಾ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ನ 3x-5x ಆಪ್ಟಿಕಲ್ ಝೂಮ್ ಕ್ಯಾಮೆರಾಗಳಿಗಿಂತ ಉತ್ತಮ ಜೂಮ್ ಸಾಮರ್ಥ್ಯವನ್ನು ನೀಡುವ ನಿರೀಕ್ಷೆಯಿದೆ. ಕಾರ್ಯಕ್ಷಮತೆಯಲ್ಲಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಅಲ್ಟ್ರಾ (Samsung Galaxy S25 Ultra) ಮತ್ತು ಐಫೋನ್ 17 ಪ್ರೋ ಮ್ಯಾಕ್ಸ್ (iPhone 17 Pro Max) ನಂತಹ ಫೋನ್‌ಗಳೊಂದಿಗೆ ಸ್ಪರ್ಧಿಸಲಿದೆ.
ಇನ್ನು ನಾವು ಈಗಾಗಲೇ ತಿಳಿದಿರುವಂತೆ, Oppo Find X9 ಸರಣಿಯು ಬ್ರೈಟ್ ರೆಡ್, ವೆಲ್ವೆಟ್ ಟೈಟಾನಿಯಂ, ಫ್ರಾಸ್ಟ್ ವೈಟ್ ಮತ್ತು ಮಿಸ್ಟ್ ಬ್ಲ್ಯಾಕ್ (ಪ್ರೊ ಮಾದರಿಗೆ ಮಿಸ್ಟ್ ಬ್ಲ್ಯಾಕ್ ಇರುವುದಿಲ್ಲ) ಬಣ್ಣಗಳಲ್ಲಿ ಲಭ್ಯವಿರಲಿದೆ. ಒಟ್ಟಾರೆಯಾಗಿ, Find X9 ಸರಣಿಯು ಅತ್ಯಾಧುನಿಕ ಚಿಪ್‌ಸೆಟ್, ಬೃಹತ್ ಬ್ಯಾಟರಿ ಮತ್ತು ಅತ್ಯುನ್ನತ ಕ್ಯಾಮೆರಾ ತಂತ್ರಜ್ಞಾನದೊಂದಿಗೆ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ. ಇದು ಆಪಲ್ ಮತ್ತು ಸ್ಯಾಮ್‌ಸಂಗ್‌ನ ಪ್ರಾಬಲ್ಯವಿರುವ ಫ್ಲ್ಯಾಗ್‌ಶಿಪ್ ವಿಭಾಗದಲ್ಲಿ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳಿವೆ.


Click it and Unblock the Notifications








