ಶಿಯೋಮಿ MI A1ನಲ್ಲಿ ಆಂಡ್ರಾಯ್ಡ್ 8.1 ಓರಿಯೋ ಅಪ್‌ಡೇಟ್ ಇನ್ಸ್ಟಾಲ್ ಮಾಡಬೇಡಿ..!
ಮೊಬೈಲ್ ಬಗ್ಗೆ ಎಷ್ಟು ತಿಳಿದುಕೊಂಡ್ರೂ ಸಾಕಾಗುವುದಿಲ್ಲ. ಹೊಸದಾಗಿ ಏನೋ ಅಪ್ ಡೇಟ್ ಬಂತು ಅಂತ ಅಪ್ ಡೇಟ್ ಆದ್ರೆ ಮೊಬೈಲ್ ಹ್ಯಾಂಗ್ ಆಗೋಕೆ ಪ್ರಾರಂಭವಾಗುತ್ತೆ. ಇದೇನಪ್ಪಾ ಅಂತ ಚಿಂತಿಸಿ ಸರಿ ಮಾಡ್ಕೊಳ್ಳೋ ಹೊತ್ತಿಗೆ ಮೊಬೈಲೇ ಹೊಗೆ ಹಾಕಿಸಿಕೊಂಡಿರುತ್ತೆ.
ಇಂತಹ ಅನುಭವ ಅದೆಷ್ಟು ಜನರಿಗೆ ಆಗಿಲ್ಲ ಹೇಳಿ. ಈಗಲೂ ಹಾಗೆ ಒಂದು ಅಪ್ ಡೇಟ್ ಬಂದಿದೆ. ಹಾಗಂತ ಅದನ್ನು ನೀವು ಮಾಡೋಕೆ ಹೋದ್ರೆ ನಿಮಗೆ ಸಮಸ್ಯೆ ಕಟ್ಟಿಟ್ಟ ಬುತ್ತಿಯಂತೆ. ಅದ್ಯಾವುದು? ಏನು ಸಮಾಚಾರ ಎಲ್ಲಾ ತಿಳಿದುಕೊಳ್ಳಬೇಕು ಅಂದ್ರೆ ಈ ಲೇಖನವನ್ನು ಸಂಪೂರ್ಣವಾಗಿ ಓದಬೇಕು. ಹಾಗಾಗಿ ಮುಂದೆ ಓದಿ.

MIUI ಬದಲಾಗಿ ಸ್ಟಾಕ್ ಆಂಡ್ರಾಯ್ಡ್ ನಲ್ಲಿ ರನ್ ಆಗುವ ಚೀನಾ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಶಿಯೋಮಿಯ ಮೊದ ಸ್ಮಾರ್ಟ್ ಫೋನ್ ಶಿಯೋಮಿ ಎಂಐ ಎ 1 ಅಂತಿಯಾಗಿ ಹೊಸ ಸಾಫ್ಟ್ ವೇರ್ ಅಪ್ ಡೇಟ್ ನ್ನು ಪಡೆದಿದೆ ಮತ್ತು ಅದು ಆಂಡ್ರಾಯ್ಡ್ 8 ಓರಿಯೋದಿಂದ ಆಂಡ್ರಾಯ್ಡ್ 8.1 ಓರಿಯೋ ಗೆ ಅಪ್ ಡೇಟ್ ಆಗಲಿದೆ. ಈ ಡಿವೈಸ್ ಆಂಡ್ರಾಯ್ಡ್ ನಗಾಟ್ ನಲ್ಲಿ ಬಿಡುಗಡೆಗೊಂಡಿತ್ತು ಮತ್ತು 2017 ಡಿಸೆಂಬರ್ ನಲ್ಲಿ ಆಂಡ್ರಾಯ್ಡ್ 8 ಓರಿಯೋ ಗೆ ಅಪ್ ಡೇಟ್ ಆಗಿತ್ತು.
ಆಂಡ್ರಾಯ್ಡ್ 8.1 ಅಪ್ ಡೇಟ್ ನ್ನು ಇನ್ಸ್ಟಾಲ್ ಮಾಡಬೇಡಿ..
ಅಂತೂ ಹಳೆ ಮೊಬೈಲ್ ಅಪ್ ಡೇಟ್ ಆಗ್ತಿದೆ. ಇನ್ನಷ್ಟು ಅಪ್ಲಿಕೇಷನ್ ಡೌನ್ ಲೋಡ್ ಮಾಡೋಕೆ ಸುಲಭವಾಗಬಹುದು. ಮೊಬೈಲ್ ಫಾಸ್ಟ್ ಆಗಿ ವರ್ಕ್ ಆಗ್ಬಹುದು ಅನ್ನೋ ಆಸೆಯಲ್ಲಿ ಶಿಯೋಮಿ ಎಂಐ ಎ 1 ನ ಈ ಅಪ್ ಡೇಟ್ ನ್ನು ಸ್ವೀಕರಿಸಿ ಬಿಡಬೇಡಿ.
ನಿಮ್ಮ ಶಿಯೋಮಿ ಎಂಐ ಎ1 ಮೊಬೈಲ್ ನ್ನು ಆಂಡ್ರಾಯ್ಡ್ 8.1 ಓರಿಯೋಗೆ ಅಪ್ ಡೇಟ್ ಮಾಡಿಕೊಳ್ಳಬೇಡಿ. ಯಾಕೆಂದರೆ ಈಗಾಗಲೇ ಹಲವು ಬಳಕೆದಾರರು ಇದನ್ನು ಮಾಡಿ ಸಮಸ್ಯೆಗೆ ಸಿಲುಕಿದ್ದಾರೆ. ಹೌದು ಅವರ ಟೆಕ್ಸ್ಟ್ ಮೆಸೇಜ್ ಗಳೆಲ್ಲವೂ ಅಪ್ ಡೇಟ್ ಆದ ಮರುಕ್ಷಣವೇ ಡಿಲೀಟ್ ಆಗಿ ಹೋಗಿದೆಯಂತೆ.

ಇದನ್ನು ಹೊರತು ಪಡಿಸಿ ಈ ಅಪ್ ಡೇಟ್ ನಲ್ಲಿ ಹಲವು ವೈಶಿಷ್ಟ್ಯತೆಗಳೂ ಸೇರಿಕೊಂಡಿವೆ. ಹೊಸ ಪವರ್ ಮೆನುಗಳಿದ್ದು ಪಿಕ್ಸಲ್ 2 ಫೋನ್ ನಲ್ಲಿರುವಂತೆ ಹಲವು ವಿಶೇಷತೆಗಳನ್ನು ಸೇರಿಸಲಾಗಿದೆ., ಇದೊಂದು ದೊಡ್ಡ ಅಪ್ ಡೇಟ್ ಆಗಿದ್ದು 1.2 ಜಿಬಿ ಇದೆ. ನಿಮ್ಮ ಟೆಕ್ಸ್ಟ್ ಮೆಸೇಜ್ ಗಳನ್ನು ಡಿಲೀಟ್ ಮಾಡಿಕೊಳ್ಳಲು ನೀವು ತಯಾರಿದ್ದರೆ,ಖಂಡಿತ ಈ ಅಪ್ ಡೇಟ್ ಮಾಡಿಕೊಳ್ಳಬಹುದು ಯಾಕೆಂದರೆ ಉಳಿದ ಎಲ್ಲಾ ವೈಶಿಷ್ಟ್ಯತೆಗಳೂ ಕೂಡ ಫೋನಿನಲ್ಲಿ ಅಧ್ಬುತವಾಗಿ ಕಾರ್ಯ ನಿರ್ವಹಿಸಲಿವೆಯಂತೆ.
ವೈಶಿಷ್ಟ್ಯತೆಗಳು:
ಈ ಸ್ಮಾರ್ಟ್ ಫೋನ್ ಡುಯಲ್ ಲೆನ್ಸ್ ಕ್ಯಾಮರಾ ಹೊಂದಿದೆ ಶಿಯೋಮಿ ಎಂಐ 6 ನಂತೆಯೇ ಇದೆ. ಎರಡರಲ್ಲಿ ಒಂದು ಟೆಲಿಫೋಟೋ ಲೆನ್ಸ್ ಹೊಂದಿದ್ದು f/2.6 ದ್ಯುತಿರಂಧ್ರ ಹೊಂದಿದೆ ಮತ್ತು ಮತ್ತೊಂದು ವೈಡ್ ಆಂಗಲ್ ಲೆನ್ಸ್ ಆಗಿದ್ದು f/2.2 ದ್ಯುತಿರಂಧ್ರವನ್ನು ಹೊಂದಿದೆ.
ಈ ಸ್ಮಾರ್ಟ್ ಫೋನ್ 5.5-ಇಂಚಿನ ಫುಲ್ ಹೆಚ್ ಡಿ ಸ್ಕ್ರೀನ್ ಮತ್ತು ಸ್ನ್ಯಾಪ್ ಡ್ರ್ಯಾಗನ್ 625 ಚಿಪ್ ಸೆಟ್ ನ್ನು ಒಳಗೊಂಡಿದೆ. ಶಿಯೋಮಿ ಉದಾರವಾಗಿ ಸಂಯೋಜಿಸಲ್ಪಟ್ಟ 4ಜಿಬಿ RAM ನ್ನು ಹೊಂದಿದ್ದು ಮಲ್ಟಿಟಾಸ್ಕಿಂಗ್ ಗೆ ಅನುವು ಮಾಡಿಕೊಡಲಿದೆ. ಇದರಲ್ಲಿ 64ಜಿಬಿ ಇಂಟರ್ನಲ್ ಸ್ಟೋರೇಜ್ ಇದ್ದು ಅದನ್ನು 128ಜಿಬಿ ವರೆಗೂ ಹಿಗ್ಗಿಸಿಕೊಳ್ಳಬಹುದಾದ ಅವಕಾಶವಿದೆ.
ಶಿಯೋಮಿಯ ಪ್ರಸಿದ್ಧ ರೆಡ್ಮಿ ಸಿರೀಸ್ ಗಳಂತೆ ಎಂಐ ಎ1 ದೊಡ್ಡ ಬ್ಯಾಟರಿಯನ್ನು ಹೊಂದಿಲ್ಲ. ಇದು ಡ್ಯುಯೆಲ್-ಲೆನ್ಸ್ ಕ್ಯಾಮರಾ ಮತ್ತು 5.5-ಇಂಚಿನ ಪೂರ್ಣ ಎಚ್ ಡಿ ಪರದೆಯನ್ನು ಬೆಂಬಲಿಸುವ ಸಾಧಾರಣ 3,080 ಎಮ್ಎಎಚ್ ಬ್ಯಾಟರಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತದೆ. ಕನೆಕ್ಟಿವಿಟಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಹೇಳುವುದಾದರೆ 4ಜಿ VoLTE, ವೈ-ಫೈ, ಬ್ಲೂಟೂತ್, ಟೈಪ್ ಸಿ ಪೋರ್ಟ್ ಮತ್ತು 3.5ಎಂಎಂ ಆಡಿಯೋ ಜಾಕ್ ನ್ನು ಇದು ಹೊಂದಿದೆ.
ಮನೆಯ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಆಪರೇಟ್ ಮಾಡಲು ರಿಮೋಟ್ ಅಡ್ಜೆಸ್ಟ್ ಮೆಂಟ್ ಮಾಡಿಕೊಳ್ಳುವ ಅವಕಾಶವನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಕಲ್ಪಿಸಿಕೊಡಲಾಗಿದೆ.ಇದರಲ್ಲಿ 3.5 ಎಂಎಂ ಹೆಡ್ ಫೋನ್ ಜಾಕ್ ಇರಲಿದೆ ಮತ್ತು ಆಡಿಯೋ ಡಿಎಸಿ ಹೊಂದಿದ್ದು, ಉತ್ತಮವಾದ ಧ್ವನಿಯನ್ನು ಹೆಡ್ ಫೋನ್ ಜ್ಯಾಕ್ ಮೂಲಕ ಪಡೆಯಲು ಅನುವು ಮಾಡಿಕೊಡುತ್ತದೆ.


Click it and Unblock the Notifications








