+375 ನಂಬರಿನ ಮಿಸ್ಡ್ ಕಾಲ್ ಬಂದರೆ ಹುಷಾರ್!

Posted By: Varun
+375 ನಂಬರಿನ ಮಿಸ್ಡ್ ಕಾಲ್ ಬಂದರೆ ಹುಷಾರ್!

ನಿಮಗೇನಾದರೂ 375 ನಂಬರ್ ನಿಂದ ಮಿಸ್ಸಡ್ ಕಾಲ್ ಫೋನ್ ಬಂದರೆ ದಯವಿಟ್ಟು ಕರೆಗೆ ಉತ್ತರ ಕೊಡಬೇಡಿ ಎಂಬ ಎಚ್ಚರಿಕೆ ಮೆಸೇಜ್ ಗಳು ಇಂಟರ್ನೆಟ್ ತುಂಬೆಲ್ಲಾ ಹರಡುತ್ತಿದೆ.

ಈ ನಂಬರ್ ಅಂತರ್ ರಾಷ್ಟ್ರೀಯ ಕೊಡ್ ಆಗಿದ್ದು, ಬೆಲಾರಸ್ ದೇಶಕ್ಕೆ ಸೇರಿದ ಈಕೊಡ್ ನಿಂದ ಮಿಸ್ಡ್ ಕಾಲ್ ಬಂದು ಪುನಃ ನೀವೇನಾದರೂ ಕರೆ ಮಾಡಿದರೆ 30$ -40$ ವರೆಗೂ ಕರೆನ್ಸಿಯಿಂದ ಕಡಿತವಾಗಿರುವ ಉದಾಹರಣೆಗಳು ಬೆಳಕಿಗೆ ಬಂದಿವೆ ಎಂದು ಮಿಡ್ ಡೇ ಪತ್ರಿಕೆ ವರದಿ ಮಾಡಿದೆ.

ಇದರ ಬಗ್ಗೆ ಏರ್ಟೆಲ್ ಕಂಪನಿಯ ಅಧಿಕಾರಿಗಳನ್ನು ಕೇಳಿದಾಗ ಸುದ್ದಿಯನ್ನು ಖಚಿತಪಡಿಸಿದ ಅವರು, ಭಾರತದ ಎಲ್ಲಾ ಮೊಬೈಲ್ ಗ್ರಾಹಕರಿಗೂ ಇದರ ಬಗ್ಗೆ ಎಚ್ಚರದಿಂದ ಇರಬೇಕೆಂದು ಸೂಚಿಸಿದ್ದಾರೆ. ಇದಷ್ಟೇ ಅಲ್ಲದೆ, +92 ಇಲ್ಲವೆ +375 ಇಂದ ಬರುವ ಮಿಸ್ಸಡ್ ಕಾಲ್ ಗೆ ಮತ್ತೆ ಫೋನ್ ಮಾಡಿದರೆ ನಿಮಗೆ ಬಹುಮಾನ ಬಂದಿದೆ ಹಾಗು ಲಾಟರಿ ಗೆದ್ದಿದ್ದೀರ ಎಂದು ನಂಬಿಸಿ, ಈ ಬಹುಮಾನವನ್ನು ಪಡೆಯಲು ಕಮಿಷನ್ ಕೊಡಬೇಕು ಎಂದು ಹಣ ಕೀಳುವ ಕೆಲಸವೂ ನಡೆಯುತ್ತಂತೆ. ಹಾಗಾಗಿ ನಿಮಗೆ ಈ ಕರೆ ಬಂದರೆ ದಯವಿಟ್ಟು ಉತ್ತರಿಸಬೇಡಿ ಹಾಗು ಮಿಸ್ಡ್ ಕಾಲ್ ಬಂದರೆ ದಯವಿಟ್ಟು ಫೋನ್ ಮಾಡಬೇಡಿ.

ಈ ರೀತಿಯ ಅಂತರಾಷ್ಟ್ರೀಯ ಹಣ ಬೋಳಿಸುವ ಕರೆಗಳುಇದೇ ಮೊದಲೇನಲ್ಲ.ಇದೇ ವರ್ಷದ ಜನವರಿ ತಿಂಗಳಲ್ಲಿ BSNL ನ ಕರ್ನಾಟಕ ಹಾಗು ತಮಿಳುನಾಡು ಗ್ರಾಹಕರಿಗೆ 263xxxx ಹಾಗು +960xxxxx. ನಿಂದ ಮಿಸ್ಡ್ ಕಾಲ್ ಗಳು ಬಂದು, ಅಪ್ಪಿ ತಪ್ಪಿ ಫೋನ್ ಮಾಡಿದವರಿಗೆ ಪ್ರತಿ ನಿಮಿಷಕ್ಕೆ 50 ರೂಪಾಯಿ ಕಡಿತಗೊಂಡಿದ್ದ ಉದಾಹರಣೆಗಳೂ ಇವೆ.

ಇನ್ನು ವೊಡಾಫೋನ್ ಗ್ರಾಹಕರಿಗೂ ಇದೆ ರೀತಿಯ ಕಾಟ ಕೊಟ್ಟಿದ್ದ ನಂಬರ್, +22455xxxxx. ಏರ್ಟೆಲ್ ಗ್ರಾಹಕರಿಗೂ +92 ನಿಂದ ಕರೆಗಳು ಬಂದು ಬಹಳ ಗ್ರಾಹಕರು ಹಣವನ್ನು ಕಳೆದುಕೊಳ್ಳುವ ಹಾಗೆ ಆಗಿತ್ತು.

ಒಟ್ಟಾರೆ ದಿನಕ್ಕೊಂದು ಮೊಬೈಲ್ ಫ್ರಾಡ್ ಗಳು ವರದಿಯಾಗುತ್ತಿದ್ದು, ಕರೆ ಮಾಡುವಾಗ ಹಾಗು ಕರೆ ತೆಗೆದುಕೊಳ್ಳುವಾಗ ಹುಷಾರಾಗಿರುವುದು ಒಳಿತು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot