Home
ಮೊಬೈಲ್

ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದರೆ ಈ ತಪ್ಪುಗಳನ್ನು ಮಾಡಬೇಡಿ!

ಆಂಡ್ರಾಯ್ಡ್ ಫೋನಿನ ಸುರಕ್ಷತೆಯ ದೃಷ್ಟಿಯಲ್ಲಿ ಮತ್ತು ಹೆಚ್ಚು ಸಮಯ ಬಾಳಿಕೆ ಬರಲು ನಾವು ಮಾಡಬಾರದ ಕೆಲವು ತಪ್ಪುಗಳನ್ನು ಗುರುತಿಸಿ ಇಲ್ಲಿ ಪ್ರಸ್ತುತಪಡಿಸಲಾಗಿದೆ.

By Tejaswini P G

ನಾವೆಲ್ಲರೂ ನಮ್ಮ ಆಂಡ್ರಾಯ್ಡ್ ಫೋನ್ ಅನ್ನು ಹಲವಾರು ಕೆಲಸಗಳನ್ನು ನಿರ್ವಹಿಸಲು ಬಳಸುತ್ತೇವೆ.ಇದಕ್ಕಾಗಿ ಆಂಡ್ರಾಯ್ಡ್ ಫೋನ್ ಅನ್ನು ಸರಿಯಾಗಿ ಬಳಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಈ ಲೇಖನದಲ್ಲಿ ನಾವು ಆಂಡ್ರಾಯ್ಡ್ ಫೋನ್ ಬಳಕೆದಾರರು ಹೆಚ್ಚಾಗಿ ಮಾಡುವ ತಪ್ಪುಗಳನ್ನು ಸಂಪಾದಿಸಿದ್ದೇವೆ. ಈ ತಪ್ಪುಗಳನ್ನು ತಿಳಿದು, ಅವುಗಳನ್ನು ಮಾಡದೇ ಫೋನಿನ ಬಾಳಿಕೆಯನ್ನು ಹೆಚ್ಚಿಸಿ!

ಆಪ್ಗಳನ್ನು ವಿಶ್ವಾಸಾರ್ಹವಲ್ಲದ ಮೂಲಗಳಿಂದ ಇನ್ಸ್ಟಾಲ್ ಮಾಡುವುದು

ಆಪ್ಗಳನ್ನು ವಿಶ್ವಾಸಾರ್ಹವಲ್ಲದ ಮೂಲಗಳಿಂದ ಇನ್ಸ್ಟಾಲ್ ಮಾಡುವುದು

ಹಣ ಪಾವತಿಸಿ ಬಳಸಬೇಕಾದ ಆಪ್ಗಳನ್ನು ಉಚಿತವಾಗಿ ಬಳಸುವ ಆಸೆಯಿಂದ ಎಷ್ಟೋ ಬಾರಿ ಜನರು ಅದರ apkಗಳನ್ನು ವಿಶ್ವಾಸಾರ್ಹವಲ್ಲದ ಮೂಲಗಳಿಂದ ಇನ್ಸ್ಟಾಲ್ ಮಾಡುತ್ತಾರೆ.ಇದು ಕಾನೂನು ಬಾಹಿರ ಮಾತ್ರವಲ್ಲದೆ, ಇದರೊಂದಿಗೆ ಕೆಲವು ಅಪಾಯಕಾರಿ ಕೋಡ್ ನಿಮ್ಮ ಫೋನ್ ಅನ್ನು ಸೇರುವ ಮೂಲಕ ನಿಮ್ಮ ಫೋನ್ ಗೆ ಧಕ್ಕೆಯುಂಟು ಮಾಡಬಹುದು. ಅಲ್ಲದೆ ನಿಮ್ಮ ಡೇಟಾವನ್ನು ಲೀಕ್ ಕೂಡ ಮಾಡಬಹುದು.ಹಾಗಾಗಿ ಆಪ್ ಅನ್ನು ಯಾವಾಗಲೂ ಪ್ಲೇ ಸ್ಟೋರ್ ನಿಂದಲೇ ಇನ್ಸ್ಟಾಲ್ ಮಾಡಿ!

ರೀಸೆಂಟ್ ಆಪ್ಸ್ ಮೆನುವಿನಿಂದ ಆಪ್ಗಳನ್ನು ನಿಲ್ಲಿಸುವುದು

ರೀಸೆಂಟ್ ಆಪ್ಸ್ ಮೆನುವಿನಿಂದ ಆಪ್ಗಳನ್ನು ನಿಲ್ಲಿಸುವುದು

ಒಂದಷ್ಟು ರ್ಯಾಮ್ ಅನ್ನು ಬಿಡುವಾಗಿಸುವ ಉದ್ದೇಶದಿಂದ 'ರೀಸೆಂಟ್ ಆಪ್ಸ್ ಮೆನು'ವಿನಿಂದ ಆಪ್ಗಳನ್ನು ನಿಲ್ಲಿಸುವ ತಪ್ಪನ್ನು ಬಹುತೇಕ ಎಲ್ಲರೂ ಮಾಡಿರುತ್ತೇವೆ. ಆಂಡ್ರಾಯ್ಡ್ ಗೆ ಅದರದ್ದೇ ಆದ ರ್ಯಾಮ್ ಮ್ಯಾನೇಜ್ಮೆಂಟ್ ಫೀಚರ್ ಇದ್ದು ನಿಮ್ಮ ಡಿವೈಸ್ನಲ್ಲಿ ಯಾವಾಗ ರ್ಯಾಮ್ ಬಿಡುವಾಗಿಸಬೇಕು ಎಂದು ನಿರ್ಧರಿಸುವ ಬುದ್ಧಿಮತ್ತೆ ಅದಕ್ಕಿದೆ. ನಾವು ಆಪ್ಗಳನ್ನು ನಿಲ್ಲಿಸುವ ಮೂಲಕ, ಅದನ್ನು ಮತ್ತೆ ಪ್ರಾರಂಭಿಸಲು ಪ್ರಾಸೆಸರ್, ಬ್ಯಾಟರಿ ಮತ್ತು ಡೇಟಾದ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತೇವೆ. ಇದರಿಂದ ನಮ್ಮ ಡಿವೈಸ್ ಗೆ ಉಪಯೋಗಕ್ಕಿಂತ ಅಪಾಯವೇ ಹೆಚ್ಚು!

ಆಂಟಿವೈರಸ್ ಸಾಫ್ಟ್ವೇರ್ ಬಳಸುವುದು

ಆಂಟಿವೈರಸ್ ಸಾಫ್ಟ್ವೇರ್ ಬಳಸುವುದು

ಹೊಸ ಫೋನ್ ಖರೀದಿಸಿದೊಡನೆ ಅದನ್ನು ರಕ್ಷಿಸುವ ಸಲುವಾಗಿ ಆಂಟಿವೈರಸ್ ಇನ್ಸ್ಟಾಲ್ ಮಾಡುವುದು ನಮ್ಮ ಅಭ್ಯಾಸ. ಆದರೆ ಇದರಿಂದ ಫೋನಿನ ಪ್ರಾಸೆಸರ್ ಮತ್ತು ಬ್ಯಾಟರಿಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.ಯಾವಾಗಲೂ ಪ್ಲೇ ಸ್ಟೋರ್ ಮತ್ತು ಇತರ ವಿಶ್ವಾಸಾರ ಮೂಲಗಳಿಂದಷ್ಟೇ ಆಪ್, ಗೇಮ್ ಮತ್ತು ಮೀಡಿಯಾ ಡೌನ್ಲೋಡ್ ಮಾಡಿದರೆ ಆಂಟಿವೈರಸ್ ನ ಅಗತ್ಯವೇ ಇರುವುದಿಲ್ಲ.

ಬ್ಯಾಟರಿ ಸೇವರ್ ಬಳಕೆ

ಬ್ಯಾಟರಿ ಸೇವರ್ ಬಳಕೆ

ಫೋನಿನ ಬ್ಯಾಟರಿಯನ್ನು ಬೆಳಗಿನಿಂದ ರಾತ್ರಿಯವರೆಗೆ ಉಳಿಸಿಕೊಳ್ಳುವ ಸಲುವಾಗಿ ಬ್ಯಾಟರಿ ಸೇವರ್ ಬಳಸುವವರು ಹಲಾವರು ಮಂದಿ.ಬ್ಯಾಟರಿ ಸೇವರ್ ಹೇಗೆ ಕಾರ್ಯನಿರ್ವಹಿಸುತ್ತದೆ ಗೊತ್ತೇ? ಇತ್ತೀಚೆಗೆ ಬಳಸಿದ ಆಪ್ಗಳನ್ನು ನಿಲ್ಲಿಸುವುದು, ವೈಫೈ, ಮೊಬೈಲ್ ಡೇಟಾ ಬಂದ್ ಮಾಡುವುದು ಇತ್ಯಾದಿಗಳ ಮೂಲಕ ಇದು ಕೆಲಸ ಮಾಡುತ್ತದೆ. ಇದನ್ನು ನೀವೇ ಒಂದರೆಡು ಕ್ಲಿಕ್ ಗಳ ಮೂಲಕ ಬ್ಯಾಟರಿ ಸೇವರ್ ಸಹಾಯ ಇಲ್ಲದೇ ಮಾಡಬಹುದು. ಇದಕ್ಕಾಗಿ ಬ್ಯಾಟರಿ ಸೇವರ್ ಬಳಸಿದರೆ ನಿಮ್ಮ ಪೋನಿನ ಮೇಲೆ ಒತ್ತಡ ಹೆಚ್ಚಲಿದೆ.

ನಕಲಿ ಆಪ್ ಇನ್ಸ್ಟಾಲ್ ಮಾಡುವುದು

ನಕಲಿ ಆಪ್ ಇನ್ಸ್ಟಾಲ್ ಮಾಡುವುದು

ನಿಮ್ಮ ಫೋನಿನಲ್ಲಿ ಫಾಸ್ಟ್ ಚಾರ್ಜಿಂಗ್ ಫೀಚರ್, ಫಿಂಗರ್ ಪ್ರಿಂಟ್ ಫೀಚರ್ ಇಲ್ಲದಿದ್ದರೂ ಅದನ್ನು ಮಾಡುವುದಾಗಿ ಹೇಳಿಕೊಳ್ಳುವ ಆಪ್ಗಳು ಪ್ಲೇಸ್ಟೋರ್ನಲ್ಲಿ ಸಿಗಬಹುದು. ನಿಮ್ಮ ಜಾಣ್ಮೆಯನ್ನು ಬಳಸಿ, ಇಂತಹ ನಕಲಿ ಆಪ್ಗಳನ್ನು ನಂಬದಿರಿ.ಈ ಆಪ್ಗಳು ನಿಮ್ಮ ಫೋನಿನ ಮೇಲೆ ಒತ್ತಡ ಹೆಚ್ಚಿಸುವುದಲ್ಲದೆ, ಫೋನ್ ಅನ್ನು ಹಾಳುಗೆಡವಲೂ ಬಹುದು.

ಕ್ಯಾಶ್ ಮೆಮೋರಿಯನ್ನು ತೆರವುಗೊಳಿಸುವುದು

ಕ್ಯಾಶ್ ಮೆಮೋರಿಯನ್ನು ತೆರವುಗೊಳಿಸುವುದು

ಹೆಚ್ಚಿನ ಸ್ಟೋರೇಜ್ ಮೆಮೋರಿ ಗಳಿಸುವುದಕ್ಕಾಗಿ ಕ್ಯಾಶ್ ಮೆಮೋರಿ ತೆರವುಗೋಳಿಸಲೆಂದೇ ಹೆಚ್ಚಿನವರು ಆಪ್ಗಳನ್ನು ಬಳಸುತ್ತಾರೆ.ಇಂತಹ ಸಿ-ಕ್ಲೀನರ್,ಬಿ-ಕ್ಲೀನರ್ ಮೊದಲಾದ ಆಪ್ಗಳನ್ನು ಇನ್ಸ್ಟಾಲ್ ಮಾಡಿದ ಮೇಲೆ ಪೊರಕೆಯೊಂದು ಬಂದು ಕ್ಯಾಶ್ ಮೆಮೋರಿಯಿಂದ ಡೇಟಾ ಅಳಿಸುತ್ತದೆ. ಹೀಗೆ ಮಾಡುವುದರಿಂದ ಮೊಬೈಲ್ನಲ್ಲಿರುವ ಆಪ್ಗಳಿಗೆ ಸಂಬಂಧಿಸಿದ ಡೇಟಾ ಅಳಿಸಿಹೋಗುತ್ತದೆ. ಇದರಿಂದ ಫೋನಿನ ಮೇಲೆ ಒತ್ತಡ ಹೆಚ್ಚುತ್ತದೆ. ಒಂದುವೇಳೆ ಸ್ಟೋರೇಜ್ ತುಂಬಿತೆಂದರೆ ಈ ಆಪ್ಗಳನ್ನು ಇನ್ಸ್ಟಾಲ್ ಮಾಡುವ ಬದಲು ಸೆಟ್ಟಿಂಗ್ಸ್ನಲ್ಲಿ ಕ್ಯಾಶ್ ಮೆಮೋರಿ ತೆರವುಗೊಳಿಸಿ.

ನಕಲಿ ಸಂದೇಶ ನಂಬುವುದು

ನಕಲಿ ಸಂದೇಶ ನಂಬುವುದು

ಸಾಮಾಜಿಕ ಜಾಲತಾಣದಲ್ಲಿ ಯಾವುದೋ ಆಪ್ ಇನ್ಸ್ಟಾಲ್ ಮಾಡಿದರೆ ಇಂತಿಷ್ಟು ಹಣ ಸಿಗುತ್ತದೆ ಮುಂತಾದ ಸಂದೇಶಗಳು ಹರಿದಾಡುತ್ತಲೇ ಇರುತ್ತದೆ. ಇದನ್ನು ನಂಬಿ ಅಂತಹ ಆಪ್ಗಳನ್ನು ಇನ್ಸ್ಟಾಲ್ ಮಾಡಿದರೆ ಅಪಾಯ ಖಂಡಿತ. ಈ ಆಪ್ಗಳಿಂದ ಯಾವದೇ ಉಪಯೋಗವಿಲ್ಲದಿದ್ದರೂ ಡೇಟಾ ಲೀಕ್ ಆಗುವಂತಹ ಅಪಾಯಗಳಂತೂ ಖಂಡಿತ ಇರುತ್ತದೆ.

ತಿಳಿಯದೇ ಮೊಬೈಲ್ 'ರೂಟ್' ಮಾಡುವುದು

ತಿಳಿಯದೇ ಮೊಬೈಲ್ 'ರೂಟ್' ಮಾಡುವುದು

ಹಲವರು ಫೋನಿನ ಫೀಚರ್ ಮತ್ತು ಪರ್ಫಾರ್ಮೆನ್ಸ್ ಹೆಚ್ಚಿಸುವ ಆತುರದಲ್ಲಿ ಫೋನ್ ರೂಟ್ ಮಾಡುತ್ತಾರೆ. ರೂಟಿಂಗ್ ಅಂದರೇನು, ಅದರ ಪರಿಣಾಮಗಳೇನು ಎಂದು ಅರಿಯದೇ , ಅದರ ಕುರಿತಾಗಿ ಸಂಪೂರ್ಣ ಜ್ಞಾನವಿಲ್ಲದೇ ರೂಟ್ ಮಾಡಿದರೆ ಫೋನಿಗೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು.

ಆಪ್ ಅನುಮತಿಗಳನ್ನು ನಿರ್ಲಕ್ಷಿಸುವುದು

ಆಪ್ ಅನುಮತಿಗಳನ್ನು ನಿರ್ಲಕ್ಷಿಸುವುದು

ಆಂಡ್ರಾಯ್ಡ್ ನ ಹೊಸ ಆವೃತ್ತಿಯಲ್ಲಿ ಪ್ರತಿಯೊಂದು ಆಪ್ ಗೆ ಅನುಮತಿಗಳನ್ನು ಖುದ್ದಾಗಿ ನಾವೇ ಸೆಟ್ ಮಾಡಬಹುದು.ಉದಾಹರಣೆಗೆ ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಕಳಿಸಬೇಕಿದ್ದರೆ ವಾಟ್ಸಾಪ್ ಮೈಕ್ ಸೇವೆಯನ್ನು ಪಡೆಯಲು ನಮ್ಮ ಅನುಮತಿ ಪಡೆಯಬೇಕು.ಆದರೆ ಕೆಲವೊಮ್ಮೆ ಕೆಲವು ಆಪ್ಗಳು ಅಗತ್ಯವಿಲ್ಲದ ಅನುಮತಿಗಳನ್ನು ಪಡೆಯಲು ಪ್ರಯತ್ನಿಸುತ್ತದೆ.ಒಂದು ವೇಳೆ ಫ್ಲ್ಯಾಶ್ಲೈಟ್ ಆಪ್ GPS ಅನುಮತಿ ಕೇಳಿದರೆ ಸಂಶಯಾಸ್ಪದವೆನಿಸುತ್ತದೆ.ಹಾಗಾಗಿ ಆಪ್ಗಳಿಗೆ ಅನುಮತಿಗಳನ್ನು ನೀಡುವಾಗ ಎಚ್ಚರವಹಿಸಿ ಅಗತ್ಯ ಅನುಮತಿಗಳನ್ನಷ್ಟೇ ನೀಡಬೇಕು

ಫೋನ್ ರೀಸ್ಟಾರ್ಟ್ ಮಾಡದೇ ಇರುವುದು

ಫೋನ್ ರೀಸ್ಟಾರ್ಟ್ ಮಾಡದೇ ಇರುವುದು

ನಾವು ಎಷ್ಟೋ ಬಾರಿ ತುಂಬಾ ದಿನಗಳವರೆಗೆ ಫೋನ್ ರೀಸ್ಟಾರ್ಟ್ ಮಾಡದೇ ಸತತವಾಗಿ ಬಳಸುತ್ತಿರುತ್ತೇವೆ. ಇದರಿಂದಾಗಿ ಬಹಳ ಡೇಟಾ ಮೆಮೋರಿಯಲ್ಲಿ ಪೇರಿಸಿದಂತಾಗುತ್ತದೆ. ಹೀಗಾಗಿ ಫೋನ್ ಅನ್ನು ಆಗಾಗ ರೀಸ್ಟಾರ್ಟ್ ಮಾಡುತ್ತಿರಬೇಕು.

Best Mobiles in India

English summary
There are many things you should avoid doing on your smartphone. Here are the top 10 things.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+