ಅಪ್ಪಿತಪ್ಪಿಯೂ ಸ್ಮಾರ್ಟ್‌ಫೋನ್‌ನಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ..!

|

ಸ್ಮಾರ್ಟ್ ಫೋನ್ ಗಳು ನಾವು ಕೈನಿಂದ ಕೆಳಗೆ ಇಡುವ ಸಾಧ್ಯತೆಯೇ ಕಡಿಮೆ, ಬೆಳಗಿನಿಂದ ರಾತ್ರಿಯ ವರೆಗೂ ಬಿಡದೆ ಬಳಸುವ ವಸ್ತುಗಳಲ್ಲಿ ಮೊಬೈಲ್ ಒಂದಾಗಿದೆ. ಇದರಿಂದಾಗಿ ಮೊಬೈಲ್ ನಮ್ಮ ಜೀವನದ ಅವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಈ ಹಿನ್ನಲೆಯಲ್ಲಿ ನೀವು ಮೊಬೈಲ್‌ಗಳಲ್ಲಿ ಮಾಡಲೇ ಬಾರದಾದ ಕೆಲಸಗಳ ಕುರಿತ ಮಾಹಿತಿಯೂ ಮುಂದಿದೆ.

ಅಪ್ಪಿತಪ್ಪಿಯೂ ಸ್ಮಾರ್ಟ್‌ಫೋನ್‌ನಲ್ಲಿ ಈ ಕೆಲಸಗಳನ್ನು  ಮಾಡಲೇಬೇಡಿ..!

ಫೋನಿನಲ್ಲೇ ದಿನದಲ್ಲಿ ಸಾಕಷ್ಟು ಕಾಲ ಕಳೆಯುವವರು ಇಂದು ನಮ್ಮ ನಿಮ್ಮ ನಡುವೆ ಕಾಣಸಿಗುತ್ತಾರೆ. ಸ್ಮಾರ್ಟ್ ಫೋನ್ ಬಳಕೆಯಿಂದಾಗಿ ಸಹಾಯವಾಗುವ ಮಾದರಿಯಲ್ಲಿ ತೊಂದರೆಯೂ ಇರಲಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್ ಫೋಮಿನಲ್ಲಿ ಮಾಡಲೇ ಬಾರದು ಎನ್ನುವ ಕಾರ್ಯಗಳ ಮಾಹಿತಿ ಇಲ್ಲಿದೆ.

ಬೇರೆ ಬೇರೆ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ:

ಬೇರೆ ಬೇರೆ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ:

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ಲೇ ಸ್ಟೋರಿನಲ್ಲಿ ದೊರೆಯುವ ಆಪ್‌ಗಳು ಬಿಟ್ಟು ಇತರೆ ಯಾವುದೇ APK ಇಲ್ಲವೇ ಮೂಲಗಳಿಂದ ಆಪ್‌ಗಳನ್ನು ಡೌನ್‌ಲೋಡ್ ಮಾಡಿಬೇಡಿ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ಗೆ ತೊಂದರೆ ಯಾಗುವ ಸಾಧ್ಯತೆ ಹೆಚ್ಚಾಗಿರಲಿದೆ. ಪ್ಲೇ ಸ್ಟೋರ್ ನಲ್ಲಿ ದೊರೆಯುವ ಅಪ್ಲಿಕೇಶನ್ ಸೇಫ್ ಮತ್ತು ಸೆಕ್ಯೂರ್ ಆಗಿರಲಿದೆ. ಆದರೆ ವೆಬ್ ಸೈಟ್ ಮೂಲಕ ಡೌನ್‌ಲೋಡ್ ಮಾಡಿದ ಸಂದರ್ಭದಲ್ಲಿ ಡೇಟಾ ಕದಿಯುವ ಆಪ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗಲಿದೆ.

ಚಾರ್ಜ್ ವೇಳೆ ಬಳಸುವುದು ಬೇಡ:

ಚಾರ್ಜ್ ವೇಳೆ ಬಳಸುವುದು ಬೇಡ:

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡುವ ಸಂದರ್ಭದಲ್ಲಿ ಅದನ್ನು ಬಳಸದೆ ಇರುವುದು ಒಳ್ಳೆಯದು. ಈ ಸಂದರ್ಭದಲ್ಲಿ ಹೆಡ್‌ ಫೋನ್ ಬಳಕೆ ಮಾಡಿ ಹಾಡು ಕೇಳುವುದು, ಇಲ್ಲವೇ ಫೋನಿನಲ್ಲಿ ಮಾತನಾಡುವ ಸಾಹಸವನ್ನು ಯಾವುದೇ ಕಾರಣಕ್ಕೂ ಮಾಡಬೇಡಿರಿ. ಚಾರ್ಜಿಂಗ್ ಆಗುತ್ತಿರುವ ವೇಳೆ ವಿದ್ಯುತ್ತಿನ ವ್ಯತ್ಯಾಸದಿಂದ ಶಾರ್ಟ್ ಆದರೆ ಪ್ರಾಣಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರಲಿದೆ.

ಪಕ್ಕದಲ್ಲಿಟ್ಟು ಮಲುಗುವುದು:

ಪಕ್ಕದಲ್ಲಿಟ್ಟು ಮಲುಗುವುದು:

ಇಂದಿನ ದಿನದಲ್ಲಿ ರಾತ್ರಿ ನಿದ್ದೆ ಮಾಡುವ ವರೆಗೂ ಸ್ಮಾರ್ಟ್‌ಫೋನ್‌ನನ್ನು ಬಳಕೆ ಮಾಡುವುದನ್ನು ಕಾಣಬಹುದಾಗಿದೆ. ಆದರೆ ಇದು ಉತ್ತಮ ಅಭ್ಯಾಸವಲ್ಲ, ಅಲ್ಲದೇ ಮಲುಗವ ಸಂದರ್ಭದಲ್ಲಿಯೂ ಅದನ್ನು ಪಕ್ಕದಲ್ಲಿ ಇಟ್ಟು ಕೊಳ್ಳುವುದು ಉತ್ತಮವಲ್ಲ, ಸ್ಮಾರ್ಟ್‌ಫೋನ್ ಅನ್ನು ನಿಮ್ಮ ಪಕ್ಕದಲ್ಲಿ ಇಟ್ಟು ಕೊಂಡು ಮಲಗುವುದರಿಂದ ನಿಮ್ಮ ನಿದ್ರೆಯೂ ಹಾಳಾಗುವುದಲ್ಲದೇ ಮೆದುಳಿನ ಮೇಲೆ ಗಾಢ ಪರಿಣಾಮ ಬೀರಲಿದೆ.

ಹೆಚ್ಚು ಚಾರ್ಜ್ ಬೇಡ:

ಹೆಚ್ಚು ಚಾರ್ಜ್ ಬೇಡ:

ಸ್ಮಾರ್ಟ್ ಫೋನ್‌ಗಳನ್ನು ಹೆಚ್ಚಿನ ಸಮಯ ಚಾರ್ಜ್ ಮಾಡುವುದು ಉತ್ತಮವಲ್ಲ. ಮೊಬೈಲ್ ಸಂಪೂರ್ಣವಾಗಿ ಚಾರ್ಜ್ ಆದ ಬಳಿಕ ಕೂಡಲೇ ಚಾರ್ಜಿಂಗ್ ನಿಂದ ತೆಗೆಯುವುದು ಉತ್ತಮ. ಹೆಚ್ಚು ಸಮಯ ಚಾರ್ಜ್ ಮಾಡುತ್ತಲೇ ಇದ್ದರೆ ಬ್ಯಾಟರಿಯ ಮೇಲೆ ಪರಿಣಾಮ ಬೀರುತ್ತದೆ.

ಜೇಬಿನಲ್ಲಿ ಇಡಬೇಡಿ:

ಜೇಬಿನಲ್ಲಿ ಇಡಬೇಡಿ:

ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸಂದರ್ಭದಲ್ಲಿ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ತರಂಗಗಳನ್ನು ಹೊರಸುಸುತ್ತವೆ ಎನ್ನಲಾಗಿದ್ದು, ಅದರಲ್ಲಿಯೂ ಎದೆಯ ಹತ್ತಿರ ಬಳಿ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು. ಇದರಿಂದ ಹೃದಯ ಸಂಬಂಧಿ ತೊಂದರೆಗಳು ಹೆಚ್ಚಾಗುವ ಸಾಧ್ಯತೆಯೂ ಹೆಚ್ಚಾಗಿದೆ. ಇದರಿಂದ ಜೇಬಿನಲ್ಲಿ ಫೋನ್‌ಗಳನ್ನು ಬಳಕೆ ಮಾಡುವುದು ಉತ್ತಮವಲ್ಲ.

ಬೇರೆ ಚಾರ್ಜರ್ ಬೇಡ:

ಬೇರೆ ಚಾರ್ಜರ್ ಬೇಡ:

ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ದೊರೆಯುವ ಚಾರ್ಜರ್ ಮಾತ್ರವೇ ಬಳಕೆ ಮಾಡಿಕೊಳ್ಳುವುದು ಉತ್ತಮ. ಇದನ್ನು ಬಿಟ್ಟು, ಕಡಿಮೆ ಬೆಲೆಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಕಳಪೆ ಗುಣಮಟ್ಟದ ಚಾರ್ಜರ್ ಬಳಕೆ ಮಾಡಿದರೆ ಸ್ಮಾರ್ಟ್‌ಫೋನಿಗೆ ತೊಂದರೆಯಾಗುವ ಸಾಧ್ಯತೆ ಇದೆ.

Best Mobiles in India

English summary
don't do this in mobile, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X