Home
ಮೊಬೈಲ್

ಒಂದೇ ದಿನದಲ್ಲಿ ವಿಶ್ವದೆಲ್ಲೆಡೆ ಹೆಸರಾಯ್ತು ನೂತನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!!

ಸ್ಪೇನ್‌ನ 'ಡೂಗಿ' ಎಂಬ ಮೊಬೈಲ್ ಕಂಪೆನಿಯ ನೂತನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಒಂದು ಮೊಬೈಲ್ ಲೋಕದಲ್ಲಿ ತಲ್ಲಣ ಮೂಡಿಸಿದೆ.!

By Bhaskar N J

ಕೆಲವೊಂದು ಮೊಬೈಲ್ ಕಂಪೆನಿಗಳು ಹೊಸದೊಂದು ಸ್ಮಾರ್ಟ್‌ಫೋನ್ ಪರಿಚಯಿಸಿ ಒಂದೇ ದಿನದಲ್ಲಿ ಹೆಸರಾಗಿರುವ ಉದಾಹರಣೆಗಳು ಸಾಕಷ್ಟಿವೆ. ಅಂತಹುಗಳ ಸಾಲಿಗೆ ಸ್ಪೇನ್ ಮೂಲದ ಮೊಬೈಲ್ ಕಂಪೆನಿಯೊಂದು ಸೇರಿಕೊಂಡಿದೆ.! ಸ್ಪೇನ್‌ನ 'ಡೂಗಿ' ಎಂಬ ಮೊಬೈಲ್ ಕಂಪೆನಿಯ ನೂತನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಒಂದು ಮೊಬೈಲ್ ಲೋಕದಲ್ಲಿ ತಲ್ಲಣ ಮೂಡಿಸಿದೆ.!!

ಹೌದು, ಆಪಲ್ 10 ಸ್ಮಾರ್ಟ್‌ಫೋನ್ ವಿನ್ಯಾಸದಲ್ಲಿ ಹೊರಬಂದಿರುವ "ಡೂಗಿ ವಿ (Doogee)" ಎಂಬ ಸ್ಮಾರ್ಟ್‌ಫೋನ್ 2018ರ ಎಲೆಕ್ಟ್ರಾನಿಕ್ ಶೋನಲ್ಲಿ ಬಿಡುಗಡೆಯಾಗಲಿದ್ದು, ಫೀಚರ್‌ಗಳಿಂದ ಜನಪ್ರಿಯವಾಗಿದೆ.! ಹಾಗಾದರೆ, ಡೂಗಿ ವಿ ಸ್ಮಾರ್ಟ್‌ಫೋನ್ ಹೊಂದಿರುವ ಫೀಚರ್‌ಗಳು ಯಾವುವು ಮತ್ತು ವಿಶೆಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

"ಡೂಗಿ ವಿ" ಸ್ಮಾರ್ಟ್‌ಫೋನ್!!

ಹೊಸದಾಗಿ ವಿಶ್ವ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ರೆಡಿಯಾಗುತ್ತಿರುವ ಡೂಗಿ ಕಂಪೆನಿ "ಡೂಗಿ ವಿ" ಸ್ಮಾರ್ಟ್‌ಫೋನ್ ಬಗ್ಗೆ ತನ್ನ ಅಫಿಷಿಯಲ್ ಯೂಟ್ಯೂಬ್ ಪೇಜ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದೆ.! ಡೂಗಿ ವಿ ಸ್ಮಾರ್ಟ್‌ಫೋನ್ ವಿನ್ಯಾಸದಿಂದಲೇ ಈ ವಿಡಿಯೋ ಕ್ಷಣ ಮಾತ್ರದಲ್ಲಿ ವೈರೆಲ್ ಆಗಿದೆ.!!

ಆಪಲ್ 10 ವಿನ್ಯಾಸ.!!

ಆಪಲ್ 10 ವಿನ್ಯಾಸ.!!

ಆಪಲ್ 10 ಸ್ಮಾರ್ಟ್‌ಫೋನ್ ಎಡ್ಜ್ ಟು ಎಡ್ಜ್ ಸ್ಕ್ರೀನ್‌ನಂತೆ "ಡೂಗಿ ವಿ" ಸ್ಮಾರ್ಟ್‌ಫೋನ್ ಸಹ ಎಡ್ಜ್ ಟು ಎಡ್ಜ್ ಸ್ಕ್ರೀನ್ ಸ್ಕ್ರೀನ್ ಹೊಂದಿದೆ. ಮೊದಲೇ ಹೇಳಿದಂತೆ ಆಪಲ್ 10 ಸ್ಮಾರ್ಟ್‌ಫೋನ್‌ ವಿನ್ಯಾಸ ಹೊಂದಿರುವುದರಿಂದಲೇ ಡೂಗಿ ವಿ ಸ್ಮಾರ್ಟ್‌ಫೋನ್ ಕ್ಷಣಮಾತ್ರದಲ್ಲಿ ಜನಪ್ರಿಯವಾಗಿದೆ.!!

ಸ್ಕ್ರೀನ್‌ನಲ್ಲಿ ಫಿಂಗರ್‌ಪ್ರಿಂಟ್!!

ಸ್ಕ್ರೀನ್‌ನಲ್ಲಿ ಫಿಂಗರ್‌ಪ್ರಿಂಟ್!!

''ಡೂಗಿ ವಿ" ಸ್ಮಾರ್ಟ್‌ಫೋನ್ ಅಷ್ಟು ಜನಪ್ರಿಯವಾಗಲು ಮತ್ತೊಂದು ಕಾರಣ ಡೂಗಿ ಸ್ಮಾರ್ಟ್‌ಫೋನ್ ಸ್ಕ್ರೀನ್‌ನಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿರುವುದು.!! ಇತ್ತೀಚಿಗೆ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸುತ್ತಿರುವ ಸ್ಕ್ರೀನ್‌ನಲ್ಲಿನ ಫಿಂಗರ್‌ಪ್ರಿಂಟ್ ಆಯ್ಕೆ ತರುತ್ತಿರುವ ಮೊದಲ ಸ್ಮಾರ್ಟ್‌ಫೋನ್ ಇದು ಎಂದು ಹೇಳಲಾಗಿದೆ.!!

ಫ್ಲೆಕ್ಸಿಬಲ್ ಡಿಸ್‌ಪ್ಲೇ?

ಫ್ಲೆಕ್ಸಿಬಲ್ ಡಿಸ್‌ಪ್ಲೇ?

2018ರ ಎಲೆಕ್ಟ್ರಾನಿಕ್ ಶೋನಲ್ಲಿ ಬಿಡುಗಡೆಯಾಗಲಿರುವ ''ಡೂಗಿ ವಿ" ಸ್ಮಾರ್ಟ್‌ಫೋನ್ ಫ್ಲೆಕ್ಸಿಬಲ್ ಡಿಸ್‌ಪ್ಲೇ ಹೊಂದಿದೆ ಎಂದು ಡೂಗಿ ಕಂಪೆನಿ ಹೇಳಿಕೊಂಡಿದೆ.! ಆದರೆ, ಫ್ಲೆಕ್ಸಿಬಲ್ ಡಿಸ್‌ಪ್ಲೇ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಡೂಗಿ ಕಂಪೆನಿ ಮಾಹಿತಿ ನೀಡಿಲ್ಲ.!!

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

6.2 ಇಂಚ್ ಡಿಸ್‌ಪ್ಲೇ, 6GB RAM, 21 ಮೆಗಾಪಿಕ್ಸೆಲ್‌ನ ಎರಡು ರಿಯರ್ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾದಂತಹ ಫೀಚರ್‌ಗಳನ್ನು ಡೂಗಿ ವಿ ಸ್ಮಾರ್ಟ್‌ಫೋನ್ ಹೊಂದಿದೆ ಎಂದು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಡೂಗಿ ಕಂಪೆನಿಯಿಂದ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.!!

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಬೆಲೆ ಎಷ್ಟಿರಬಹುದು?

ಬೆಲೆ ಎಷ್ಟಿರಬಹುದು?

ಮಾಧ್ಯಮಗಳು ವರದಿ ಮಾಡಿರುವಂತೆ ಈ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಮಾರುಕಟ್ಟೆಗೆ ಕಾಲಿಡಲಿರುವ ಡೂಗಿ ವಿ ಸ್ಮಾರ್ಟ್‌ಫೋನ್ ಬೆಲೆ 300 ರಿಂದ 350 ಡಾಲರ್‌ಗಳಾಗಿರಲಿದೆ ಎಂದು ಹೇಳಿವೆ.! ರೂಪಾಯಿಗಳ ಲೆಕ್ಕಾಚಾರದಲ್ಲಿ 19 ಸಾವಿರದಿಂದ 22 ಸಾವಿರ ರೂಪಾಯಿಗಳು ಎನ್ನಬಹುದು.!!

Best Mobiles in India

English summary
Ever heard of smartphone brand name Doogee? Well, you will probably hear the name from today as the Spain-based company. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+