2016ರಲ್ಲಿ ಸುದ್ದಿ ಮಾಡಿದ ಡುಯಲ್ ಕ್ಯಾಮೆರಾ, ಮಾಡ್ಯುಲಾರ್ ಸ್ಮಾರ್ಟ್ ಫೋನ್ ವಿನ್ಯಾಸಗಳು.

|

ಸ್ಮಾರ್ಟ್ ಫೋನ್ ಲೋಕದಲ್ಲಿ 2016ರ ವರುಷ ಪ್ರಮುಖವಾದುದು ಎಂದರದು ಅತಿಶಯೋಕ್ತಿಯೇನಲ್ಲ. ವಿವಿಧ ಕಂಪನಿಗಳಿಗೆ ಈ ವರುಷ ವಿವಿಧ ಅನುಭವಗಳನ್ನು ನೀಡಿದೆ. ಹುವಾಯಿಯಂತಹ ಕಂಪನಿಗಳಿಗೆ ಇದು ಅತ್ಯುತ್ತಮ ವರುಷವಾಗಿತ್ತು, ಅವರ ಉತ್ಪನ್ನಗಳ ಮಾರಾಟ ಹೆಚ್ಚಿತ್ತು, ಸ್ಯಾಮ್ಸಂಗ್ ನಂತಹ ಕಂಪನಿಗಳಿಗೆ ಇದು ಅತಿ ಕೆಟ್ಟ ವರುಷಗಳಲ್ಲೊಂದು.

2016ರಲ್ಲಿ ಸುದ್ದಿ ಮಾಡಿದ ಡುಯಲ್ ಕ್ಯಾಮೆರಾ, ಮಾಡ್ಯುಲಾರ್ ಸ್ಮಾರ್ಟ್ ಫೋನ್ ವಿನ್ಯಾ

ವರುಷದ ವಿವಿಧ ತಿಂಗಳುಗಳಲ್ಲಿ ವಿವಿಧ ಕಂಪನಿಗಳ ಸಾಧನೆಯಲ್ಲಿ ವ್ಯತ್ಯಾಸಗಳಿದ್ದರೂ ವಿವಿಧ ಉತ್ಪಾದಕರ ನಡುವೆ ಹಲವಾರು ಸಾಮ್ಯತೆಗಳೂ ಇವೆ. ಇವುಗಳಲ್ಲಿ ಹಲವು ಸಾಮ್ಯತೆಗಳು ಸ್ಪಷ್ಟವಾಗಿವೆ ಮತ್ತು ಸ್ಮಾರ್ಟ್‍ ಫೋನ್ ತಯಾರಿಸುವ ಕಂಪನಿಗಳೆಲ್ಲವೂ ಇವುಗಳನ್ನು ಅಳವಡಿಸಿಕೊಂಡಿವೆ.

ಓದಿರಿ: ಏರ್‌ಟೆಲ್‌ನಿಂದ 12 ತಿಂಗಳ ಫ್ರೀ ಡೇಟಾ ಪಡೆಯುವುದು ಹೇಗೆ? ಕಂಪ್ಲೀಟ್ ಡೀಟೆಲ್ಸ್!!!

ಸ್ಮಾರ್ಟ್ ಫೋನ್ ಮಾರುಕಟ್ಟೆ ಅತಿ ವೇಗವಾಗಿ ವಿಕಸಿತಗೊಳ್ಳುತ್ತಿದೆ, 2016ರಲ್ಲಿ ಹಲವಾರು ಪ್ರಮುಖ ಬದಲಾವಣೆಗಳಾದವು, ಎಲ್ಲವೂ ಯಶ ಕಾಣಲಿಲ್ಲ ಎನ್ನುವುದೂ ಸತ್ಯ. ಹಲವು ಬದಲಾವಣೆಗಳು ಹೊಸ ಟ್ರೆಂಡ್ ಅನ್ನೇ ಹುಟ್ಟು ಹಾಕಿದವು ಮತ್ತು ಪ್ರತಿಯೊಬ್ಬ ಉತ್ಪಾದಕನೂ ಈಗದನ್ನು ಅಳವಡಿಸಿಕೊಳ್ಳಬಯಸುತ್ತಾರೆ. 2016ರಲ್ಲಿ ಕಂಡಂತಹ ಅಂತಹ ಕೆಲವು ಪ್ರಮುಖ ಬದಲಾವಣೆಗಳನ್ನು ಇಲ್ಲಿ ನೋಡೋಣ.

ಡುಯಲ್ ಕ್ಯಾಮೆರ.

ಡುಯಲ್ ಕ್ಯಾಮೆರ.

ಹೆಚ್ಚುಕಡಿಮೆ ಪ್ರತಿಯೊಬ್ಬ ಉತ್ಪಾದಕರೂ ತಮ್ಮ ಸ್ಮಾರ್ಟ್ ಫೋನುಗಳಲ್ಲಿ ಡುಯಲ್ ಕ್ಯಾಮೆರ ಇರಿಸುವುದರ ಬಗ್ಗೆ ಒಪ್ಪಿದಂತೆ ತೋರುತ್ತದೆ. ಒಂದೇ ಸಂವೇದಕ ಇರುವುದಕ್ಕಿಂತ ಎರಡು ಕ್ಯಾಮೆರಾಗಳನ್ನು ಇಡುವುದು ಒಳ್ಳೆಯದು ಎಂದವರಿಗೆ ಅನ್ನಿಸಿದೆ. ಆ್ಯಪಲ್, ಸ್ಯಾಮ್ಸಂಗ್ ನಂತಹ ಕಂಪನಿಗಳು ತಮ್ಮ ದುಬಾರಿ ಫೋನುಗಳಲ್ಲಿ ಈ ಸೌಕರ್ಯ ನೀಡುತ್ತಿದ್ದಾರೆ. ಈ ಬದಲಾವಣೆಗೆ ಸಹಕಾರಿಯಾಗುವಂತೆ ಚಿಪ್ ತಯಾರಿಸುವ ಕಂಪನಿಗಳು ಡುಯಲ್ ಕ್ಯಾಮೆರಾ ತಂತ್ರಜ್ಞಾನವನ್ನು ಬೆಂಬಲಿಸುವ ಸುಧಾರಿತ ಚಿಪ್ ಅನ್ನು ತಯಾರಿಸುತ್ತಿದ್ದಾರೆ.

ಡುಯಲ್ ಕ್ಯಾಮೆರಾ ಸಂವೇದಕ ಕೆಲಸ ನಿರ್ವಹಿಸುವ ರೀತಿ ಒಂದೊಂದು ಕಂಪನಿಯಲ್ಲಿ ಒಂದೊಂದು ರೀತಿಯಿದೆ ಎನ್ನುವುದನ್ನು ಓದುಗರು ನೆನಪಿನಲ್ಲಿಡಬೇಕು. ಐಫೋನ್ 7 ಪ್ಲಸ್ ನಲ್ಲಿ ಎರಡನೆಯ ಕ್ಯಾಮೆರಾದಲ್ಲಿ 2ಎಕ್ಸ್ ಝೂಮ್ ಸೌಕರ್ಯವಿದೆ. ಮತ್ತೊಂದೆಡೆ ಹುವಾಯಿ ಪಿ9ನಲ್ಲಿ ಎರಡನೆಯ ಕ್ಯಾಮೆರ ಮತ್ತಷ್ಟು ಬೆಳಕನ್ನು ಒಳಗೆಳೆದುಕೊಳ್ಳಲು ಸಹಕಾರಿಯಾಗಿದೆ. ಕಡಿಮೆ ಬೆಲೆಯ ಡುಯಲ್ ಕ್ಯಾಮೆರಾ ಇರುವ ಸ್ಮಾರ್ಟ್ ಫೋನುಗಳಲ್ಲಿ ಎರಡನೆಯ ಕ್ಯಾಮೆರಾವನ್ನು ಆಳವನ್ನು ನಿರ್ಧರಿಸಲು ಉಪಯೋಗಿಸಲಾಗುತ್ತದೆ, ಹಿಂಬದಿ ಮತ್ತು ಮುಂಬದಿಯಲ್ಲಿರುವ ವಸ್ತುಗಳನ್ನು ಬೇರ್ಪಡಿಸಿ ಕಲಾತ್ಮಕವಾದ ಫೋಕಸ್ ಪಡೆಯಲು ಇದು ಸಹಕಾರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾಡ್ಯುಲಾರ್ ಸ್ಮಾರ್ಟ್ ಫೋನ್ ವಿನ್ಯಾಸ.

ಮಾಡ್ಯುಲಾರ್ ಸ್ಮಾರ್ಟ್ ಫೋನ್ ವಿನ್ಯಾಸ.

ಗೂಗಲ್ ಕೆಲವು ವರುಷಗಳ ಹಿಂದೆ ಪ್ರಾಜೆಕ್ಟ್ ಆರಾ ಅನ್ನು ಪ್ರಾರಂಭಿಸಿದಾಗಿನಿಂದ ಕೆಲವೊಂದು ಹಿನ್ನಡೆ ಅನುಭವಿಸಿತು, ಮಾಡ್ಯುಲಾರ್ ಸ್ಮಾರ್ಟ್ ಫೋನನ್ನು ಅದು ಹೊರತರಲಾಗಲೇ ಇಲ್ಲ. ಆದರೆ, ದಕ್ಷಿಣ ಕೊರಿಯಾದ ಟೆಕ್ ದೈತ್ಯ ಎಲ್.ಜಿ ತನ್ನ ಎಲ್.ಜಿ ಜಿ5 ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ಮೂಲಕ ಇದನ್ನು ಸಾಧ್ಯವಾಗಿಸಿತು.

ಎಲ್.ಜಿ ಜಿ5ನಲ್ಲಿ ಮಾಡ್ಯುಲಾರ್ ವಿನ್ಯಾಸವಿದೆ, ಬ್ಯಾಟರಿ, ಕ್ಯಾಮೆರಾ ಇತ್ಯಾದಿಗಳನ್ನು ಅಗತ್ಯಕ್ಕನುಗುಣವಾಗಿ ಅದಲುಬದಲಿಸಿಕೊಳ್ಳಬಹುದು. ಮೆಟಾಲಿಕ್ ಫೋನ್ ಆಗಿದ್ದರೂ ಸಹಿತ ಇದರಲ್ಲಿ ತೆಗೆಯಬಲ್ಲಂತಹ ಬ್ಯಾಟರಿ ಇದೆ. ಜೊತೆಗೆ ಅನೇಕ ಹೆಚ್ಚುವರಿ ಸಾಧನಗಳನ್ನು ಖರೀದಿಸಿ ಬಳಕೆಯ ಅನುಭವವನ್ನು ಹೆಚ್ಚಿಸಿಕೊಳ್ಳಬಹುದು.

ಎಲ್.ಜಿ ನಂತರ ಲಿನೊವೊ ಒಡೆತನದ ಮೊಟೊರೊಲಾ ಕೂಡ ಮೊಟೊ ಮೊಡ್ಸ್ ಇರುವ ಮೊಟೊ ಝಡ್ ಸರಣಿಯ ಸ್ಮಾರ್ಟ್ ಫೋನುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. ಮೊಟೊ ಮೊಡ್ಸ್ ಅನ್ನು ಫೋನಿನ ಹಿಂಬದಿಗೆ ಸಿಕ್ಕಿಸಿ ಧ್ವನಿಯನ್ನು ಹೆಚ್ಚಿಸಬಹುದು, ಆಪ್ಟಿಕಲ್ ಝೂಮ್ ಪಡೆಯಬಹುದು, ಬ್ಯಾಟರಿ ಆಯಸ್ಸನ್ನು ಹೆಚ್ಚಿಸಿಕೊಳ್ಳಬಹುದು.

ಟೈಪ್ ಸಿ ಆಡಿಯೋ.

ಟೈಪ್ ಸಿ ಆಡಿಯೋ.

ಆಡಿಯೋ ಜಾಕ್ ಅನುಕೂಲಕರವಾಗಿಲ್ಲ ಎಂದು ಸ್ಮಾರ್ಟ್ ಫೋನ್ ತಯಾರಕರಿಗೆ ಅನ್ನಿಸಲಾರಂಭಿಸಿತು. ಹಲವು ವರುಷಗಳಿಂದ ಯು.ಎಸ್.ಬಿ ಟೈಪ್ ಸಿ ಇದೆಯಾದರೂ ಅದು ಮುಖ್ಯವಾಹಿನಿಗೆ ಬಂದಿದ್ದು ಇತ್ತೀಚೆಗೆ. ಯು.ಎಸ್.ಬಿ ಟೈಪ್ ಸಿ ಪೋರ್ಟ್ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಆಡಿಯೋ ಜಾಕ್ ಗೆ ಮತ್ತೊಂದು ಪೋರ್ಟ್ ಇರುವುದು ಅವಶ್ಯಕವಲ್ಲ ಎಂದು ಸ್ಮಾರ್ಟ್ ಫೋನ್ ತಯಾರಕರಿಗೆ ಅನ್ನಿಸಲಾರಂಭಿಸಿದೆ. ಆ್ಯಪಲ್, ಮೊಟೊರೊಲ, ಹೆಚ್.ಟಿ.ಸಿಯಂತಹ ಉತ್ಪಾದಕರು ಆಡಿಯೋ ಜ್ಯಾಕ್ ಇಲ್ಲದ ಫೋನುಗಳನ್ನು ತಯಾರಿಸಲಾರಂಭಿಸಿವೆ. 2017ರಲ್ಲಿ ಬಹುತೇಕ ತಯಾರಕರು ಇದನ್ನು ಅನುಸರಿಸುವ ನಿರೀಕ್ಷೆ ಇದೆ.

ಬೆಝೆಲ್ ಲೆಸ್ ಪರದೆ.

ಬೆಝೆಲ್ ಲೆಸ್ ಪರದೆ.

2016ರಲ್ಲಿ ಬೆಝೆಲ್ ಲೆಸ್ ಪರದೆ ಖ್ಯಾತವಾಗತೊಡಗಿತು. ಬಹುತೇಕ ಸ್ಮಾರ್ಟ್ ಫೋನ್ ತಯಾರಕರು ಬೆಝೆಲ್ ಲೆಸ್ ಅಥವಾ ಕಡಿಮೆ ಬೆಝೆಲ್ ಇರುವ ಸ್ಮಾರ್ಟ್ ಫೋನುಗಳನ್ನು ತಯಾರಿಸಲು ಪ್ರಾರಂಭಿಸಿದ್ದಾರೆ. ಶಿಯೋಮಿ ಎಂಐ ಮಿಕ್ಸ್ ಬೆಝೆಲ್ ಲೆಸ್ ಪರದೆಯ ಫೋನಿಗೊಂದು ಉದಾಹರಣೆ. ಈ ಫೋನುಗಳಲ್ಲಿ ಸ್ಕ್ರೀನ್ ಟು ಬಾಡಿ ರೇಷಿಯೋ ಹೆಚ್ಚಿರುತ್ತದೆ. ನೋಡಲು ಆಕರ್ಷಕವಾಗಿರುವ ಈ ಫೋನುಗಳಲ್ಲಿ ದೊಡ್ಡ ಪರದೆಯಿರುತ್ತದೆ. 2017ರಲ್ಲಿ ಈ ರೀತಿಯ ಇನ್ನೂ ಹೆಚ್ಚಿನ ಫೋನುಗಳು ಬಿಡುಗಡೆಯಾಗಲಿವೆ ಎಂದು ನಾವು ನಿರೀಕ್ಷಿಸಬಹುದು.

ಸ್ಟಾಕ್ ಸಾಫ್ಟ್ ವೇರ್.

ಸ್ಟಾಕ್ ಸಾಫ್ಟ್ ವೇರ್.

ಈಚಿನ ದಿನಗಳಲ್ಲಿ, ಬಹುತೇಕ ಸ್ಮಾರ್ಟ್ ಫೋನ್ ತಯಾರಕರು ಆ್ಯಂಡ್ರಾಯ್ಡ್ ಅನ್ನು ಬದಲಿಸದೇ ನೀಡುತ್ತಿದ್ದಾರೆ, ಕಡಿಮೆ ಪ್ರಮಾಣದ ಬ್ಲೋಟ್ ವೇರುಗಳನ್ನು ನೀಡುತ್ತಿದ್ದಾರೆ. ಇದಕ್ಕಿರುವ ಕಾರಣ ದಕ್ಷ ಹಾಗೂ ವೇಗದ ಬಳಕೆಯ ಅನುಭವವನ್ನು ನೀಡುವುದು. ಉದಾಹರಣೆಗೆ ಹೆಚ್.ಟಿ.ಸಿ ಬ್ಲೋಟ್ ವೇರುಗಳಿದ್ದ ಸೆನ್ಸ್ ಯುಐ ಬದಲಿಗೆ ಪ್ಯೂರ್ ಯು.ಐ ಅನ್ನು ಪರಿಚಯಿಸಿದೆ. ಕೂಲ್ ಪ್ಯಾಡ್ ಮತ್ತು ಇನ್ನೂ ಕೆಲವರು ಸ್ಟಾಕ್ ಆ್ಯಂಡ್ರಾಯ್ಡ್ ಆಯ್ಕೆಗಳನ್ನು ಪರೀಕ್ಷಿಸುತ್ತಿದ್ದಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
These are some smartphone trends that we saw in 2016. Read more to know about the same.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X