2012ಕ್ಕೆ ಎಂಟ್ರಿ ನೀಡಲಿದೆ ಮೀಝು ಹ್ಯಾಂಡ್ ಸೆಟ್

Posted By: Staff
2012ಕ್ಕೆ ಎಂಟ್ರಿ ನೀಡಲಿದೆ ಮೀಝು ಹ್ಯಾಂಡ್ ಸೆಟ್

ಅಮೆರಿಕ ಮತ್ತು ಇನ್ನಿತರ ಐರೋಪ್ಯ ದೇಶಗಳ ಮೊಬೈಲ್ ತಯಾರಕರ ಪ್ರತಿ ಸ್ಪರ್ಧೆಯಾಗಿ ಚೈನಾ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಲ್ಯಾಪ್ ಟಾಪ್ ಮತ್ತು ಅನೇಕ ಎಲೆಕ್ಟ್ರಾನಿಕ್ ಸಾಧನಗಳನ್ನು ಹೊರತಂದಿದೆ. ಇದೀಗ ಚೈನಾದ ಮೊಬೈಲ್ ತಯಾರಕರು ಮೀಝು MX ಎಂಬ ವಿನೂತನ ಸ್ಮಾರ್ಟ್ ಫೋನನ್ನು 2012ಕ್ಕೆ ಪರಿಚಯಿಸಲಿದ್ದಾರೆ.

ಈ MX ಡ್ಯೂಯಲ್ ಕೋರ್ ಸ್ಮಾರ್ಟ್ ಫೋನ್ ಆಗಿದ್ದು, ಜನವರಿ 1 2012 ಕ್ಕೆ ಬಿಡುಗಡೆಗೊಳ್ಳಲಿದೆ. ಈ ನೂತನ ಸ್ಮಾರ್ಟ್ ಫೋನ್ ಇನ್ನಿತರ ಚೈನಾ ಫೋನ್ ಗಳಿಗಿಂತ ವಿಶೇಷ ವಿನ್ಯಾಸ ಪಡೆದುಕೊಂಡಿದೆ. .41 ಇಂಚಿನಷ್ಟು ತೆಳ್ಳಗೆ ವಿನ್ಯಾಸಗೊಂಡಿರುವ ಈ ಮೊಬೈಲ್ ಪೆಂಟಾ ಬ್ಯಾಂಡ್ 3ಜಿ ಸಂಪರ್ಕವನ್ನು ಹೊಂದಿರುವುದು ವಿಶೇಷ. HSPA+ ಬೆಂಬಲಿತವಾಗಿರುವ ಮೊಬೈಲಲ್ಲಿ ಮೈಕ್ರೊ ಸಿಮ್ ಜೊತೆ USB host ಮತ್ತು MHL-HDMI ಕೂಡ ನೀಡಲಾಗಿದೆ.

ಡ್ಯೂಯಲ್ ಕೋರ್ 1.4GHz ಸ್ಯಾಮ್ ಸಂಗ್ ಎಕ್ಸಿನೋಸ್ 4210 SoC ಪ್ರೊಸೆಸರ್ ಹೊಂದಿರುವ ಮೀಝು ಹ್ಯಾಂಡ್ ಸೆಟ್ ಗೂಗಲ್ ಆಂಡ್ರಾಯ್ಡ್ 2.3.5 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ನಿಂದ ಕಾರ್ಯ ನಿವರ್ವಹಿಸಲಿದೆ. 2012ಕ್ಕೆ ಈ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ಐಸ್ ಕ್ರೀಂ ಸ್ಯಾಂಡ್ ವಿಚ್ ಗೆ ಪರಿಷ್ಕ್ರತಗೊಳ್ಳುವುದೆಂದೂ ತಿಳಿದುಬಂದಿದೆ.

ಮೀಝು MX ಹ್ಯಾಂಡ್ ಸೆಟ್ ವಿಶೇಷತೆ:

* 4 ಇಂಚಿನ ಡಿಸ್ಪ್ಲೇ, AVS 960x640 ಪಿಕ್ಸಲ್ ರೆಸೊಲ್ಯೂಷ್

* 8 ಮೆಗಾ ಪಿಕ್ಸಲ್ ಕ್ಯಾಮೆರಾ

* 1080p ವಿಡಿಯೋ ರೆಕಾರ್ಡಿಂಗ್

* LED ಫ್ಲಾಶ್

* 292ppi ಪಿಕ್ಸಲ್ ಡೆನ್ಸಿಟಿ

* 16 ಜಿಬಿ ಆಂತರಿಕ ಮೆಮೊರಿ

ಮೊಬೈಲಿನಲ್ಲಿ ನಾಯ್ಸ್ ಕ್ಯಾನ್ಸಲೇಶನ್ ಗೆಂದು ಸೆಕೆಂಡರಿ ಮೈಕ್ರೊಫೋನ್ ಕೂಡ ನೀಡಲಾಗಿದೆ. ಚೈನಾದಲ್ಲಿ ಮೊದಲು ಬಿಡುಗಡೆಗೊಳ್ಳಲಿರುವ ಈ ವೀಝ್ ಹ್ಯಾಂಡ್ ಸೆಟ್ 20, 000 ರಿಂದ 25,000 ರುಗೆ ದೊರೆಯಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot