Subscribe to Gizbot

4,999 ರೂ.ಗೆ ಡ್ಯುಯಲ್ ರಿಯರ್ ಕ್ಯಾಮೆರಾದ ಸ್ಮಾರ್ಟ್‌ಫೋನ್!!

Written By:

ಭಾರತದ ಮೊಬೈಲ್ ತಯಾರಕ ಕಂಪೆನಿ 'ಎಂ-ಟೆಕ್' ಅತ್ಯಂತ ಕಡಿಮೆ ಬೆಲೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿರುವ 4G ಸಪೋರ್ಟೆಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡಿದೆ. 'ಎಂ-ಟೆಕ್ ಫೋಟೊ 3' ಎಂಬ ಹೆಸರಿನಡಿಯಲ್ಲಿ ಶೀಘ್ರವೇ ಡ್ಯುಯಲ್ ಡಿಯರ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಪರಿಚಯಿಸುವುದಾಗಿ ಕಂಪೆನಿ ತಿಳಿಸಿದೆ.!!

4,999 ರೂ.ಗೆ ಡ್ಯುಯಲ್ ರಿಯರ್ ಕ್ಯಾಮೆರಾದ ಸ್ಮಾರ್ಟ್‌ಫೋನ್!!

ಡ್ಯುಯಲ್ ರಿಯರ್ ಕ್ಯಾಮೆರಾ ಜೊತೆಗೆ 5 ಇಂಚಿನ ಡಿಸ್‌ಪ್ಲೇ, ಆಂಡ್ರಾಯ್ಡ್ ನೌಗಾಟ್‌ನಂತ ಫೀಸರ್ಚ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಬೆಲೆ ಕೇವಲ 4,999 ರೂಪಾಯಿಗಳಾಗಿವೆ. ಹಾಗಾದರೆ, ಎಂ-ಟೆಕ್ ಫೋಟೊ 3 ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು? ಖರೀದಿಸಲು ಯೋಗ್ಯವೇ? ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಎಂ-ಟೆಕ್ ಫೋಟೊ 3 ಸ್ಮಾರ್ಟ್‌ಫೋನ್ FVWGA ರೆಸಲ್ಯೂಶನ್‌ ಇರುವ 5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಫಿಂಗರ್‌ಪ್ರಿಂಟ್ ಫೀಚರ್ ಆಯ್ಕೆಯನ್ನು ಹೊಂದಿಲ್ಲದ ಈ ಸ್ಮಾರ್ಟ್‌ಫೋನ್ ವಿನ್ಯಾಸದಲ್ಲಿ ಶಿಯೋಮಿ ರೆಡ್‌ ಮಿ 4A ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು.!!

ಡ್ಯುಯಲ್ ರಿಯರ್ ಕ್ಯಾಮೆರಾ!!

ಡ್ಯುಯಲ್ ರಿಯರ್ ಕ್ಯಾಮೆರಾ!!

ಅತ್ಯಂತ ಕಡಿಮೆ ಬೆಲೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿರಲಿರುವ "ಎಂ-ಟೆಕ್ ಫೋಟೊ 3" ಸ್ಮಾರ್ಟ್‌ಫೋನಿನಲ್ಲಿ 0.3MPಯ ಎರಡು ರಿಯರ್ ಕ್ಯಾಮೆರಾ ಹಾಗೂ 0.3MP ಸೆಲ್ಫಿ ಕ್ಯಾಮೆರಾವನ್ನು ನೀಡುತ್ತಿರುವುದಾಗಿ ಎಂ-ಟೆಕ್ ಕಂಪೆನಿ ಹೇಳಿಕೊಂಡಿದೆ.!!

ಪ್ರೊಸೆಸರ್ ಮತ್ತು RAM?

ಪ್ರೊಸೆಸರ್ ಮತ್ತು RAM?

1.3GHz ಕ್ವಾಡ್-ಕೋರ್ ಪ್ರೊಸೆಸರ್, 1GB RAM ಮತ್ತು 8GB ಮೆಮೊರಿಯಲ್ಲಿ 'ಎಂ-ಟೆಕ್ ಫೋಟೊ 3' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಫೋನ್ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಮೂಲಕ 32GB ವರೆಗೂ ವಿಸ್ತರಿಸಬಹುದಾ ಆಯ್ಕೆ ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ.!

ಇತರೆ ಫೀಚರ್ಸ್ ಏನು?

ಇತರೆ ಫೀಚರ್ಸ್ ಏನು?

ಆಂಡ್ರಾಯ್ಡ್ ನೌಗಾಟ್‌ನಲ್ಲಿ ಕಾರ್ಯನಿರ್ವಹಿಸುವ ಎಂ-ಟೆಕ್ ಫೋಟೊ 3 ಸ್ಮಾರ್ಟ್‌ಫೋನ್ 7 ಗಂಟೆಗಳ ಟಾಕ್‌ಟೈಮ್ ಶಕ್ತಿಯ 2400mAH ಬ್ಯಾಟರಿ, 4G ಎಲ್‌ಟಿಇ ವೋಲ್ಟ್, ಬ್ಲೂಟೂತ್, ಯುಎಸ್‌ಬಿ ಪೋರ್ಟ್‌ನಂತ ಇತರೆ ಫೀಚರ್ಸ್‌ಗಳನ್ನು ಹೊಂದಿದೆ.!!

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!
 ಖರೀದಿಸಲು ಯೋಗ್ಯವೇ?

ಖರೀದಿಸಲು ಯೋಗ್ಯವೇ?

4500 ರೂಪಾಯಿ ಬೆಲೆಯನ್ನು ಹೊಂದಿರುವ 'ಎಂ-ಟೆಕ್ ಫೋಟೊ 3' ಸ್ಮಾರ್ಟ್‌ಫೋನ್ ಕಡಿಮೆ ಬೆಲೆಯ ಡ್ಯುಯಲ್ ಕ್ಯಾಮೆರಾ ಫೋನ್ ಆಗಿರಬಹುದು.! ಆದರೆ, ಇತರೆ ಎಲ್ಲಾ ಫೀಚರ್ಸ್ ಕೂಡ ಕಡಿಮೆ ಇರುವ ಈ ಫೋನ್ ಅನ್ನು 2018ನೇ ವರ್ಷದಲ್ಲಿಯೂ ಖರೀದಿಸುವವರು ಯಾರು ಎಂದು ಕಂಪೆನಿಯನ್ನೇ ಕೇಳಬೇಕು.!!

ಓದಿರಿ:ಬೆಂಗಳೂರಿನಲ್ಲಿ ಮೊದಲ ಫಾಸ್ಟ್‌ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ!!..ಚಾರ್ಜಿಂಗ್ ದರ ಎಷ್ಟು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Indian smartphone brand M-tech today announced the cheapest dual camera smartphone in the country. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot