ವಿಶ್ವದ ಮೊದಲ ಡ್ಯುಯಲ್ ಸ್ಕ್ರೀನ್ ವೊಟಾಫೋನ್ ಸ್ಮಾರ್ಟ್‌ಫೋನ್ ಬಿಡುಗಡೆ
ವಿಶ್ವದ ಮೊದಲ ಹಿಂದುಗಡೆ ಮತ್ತು ಮುಂದುಗಡೆ ಸ್ಕ್ರೀನ್ ಹೊಂದಿರುವ ವೊಟಾ ಕಂಪೆನಿಯ ಡ್ಯುಯಲ್ ಸ್ಕ್ರೀನ್ ಸ್ಮಾರ್ಟ್‌ಫೋನ್ ರಷ್ಯಾದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ.
ಸ್ಮಾರ್ಟ್‌ಫೋನ್ ಮುಂದುಗಡೆ 4.3 ಇಂಚಿನ ಕೆಪಾಸಿಟಿವ್ ಎಲ್‌ಸಿಡಿ ಸ್ಕ್ರೀನ್ ಹೊಂದಿದ್ದರೆ,ಹಿಂದುಗಡೆ 4.3 ಇಂಚಿನ ಎಲೆಕ್ಟ್ರಾನಿಕ್ ಪೇಪರ್ ಸ್ಕ್ರೀನ್ ಹೊಂದಿದೆ. ಹಿಂದುಗಡೆ ಸ್ಕ್ರೀನ್‌ನಲ್ಲಿ ಇ-ಬುಕ್‌ಗಳನ್ನು ಓದಬಹುದಾಗಿದೆ. ಸ್ಮಾರ್ಟ್‌ಫೋನ್ 133.6 x 67 x 9.99 ಮಿ.ಮೀ ಗಾತ್ರ,146 ಗ್ರಾಂ ತೂಕವನ್ನು ಹೊಂದಿದ್ದು 1800mAh ಬ್ಯಾಟರಿಯನ್ನು ಹೊಂದಿದೆ.
ಇಲ್ಲಿವರೆಗೂ ಎರಡು ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನ್‌ನ್ನು ಯಾವ ಕಂಪೆನಿ ಬಿಡುಗಡೆ ಮಾಡಿರಲಿಲ್ಲ. ವೊಟಾ ಕಂಪೆನಿ ಈ ಹಿಂದೆ ಕ್ರಿಸ್ಮಸ್ ಒಳಗಡೆ ಈ ಡ್ಯುಯಲ್ ಸ್ಕ್ರೀನ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತೇವೆ ಎಂದು ಹೇಳಿತ್ತು.ಆದರಂತೆ ಈ ಸ್ಮಾರ್ಟ್‌ಫೋನನ್ನು ಕಂಪೆನಿ ಬಿಡುಗಡೆ ಮಾಡಿದ್ದು ಆರಂಭದಲ್ಲಿ ರಷ್ಯಾ ಆಸ್ಟ್ರೀಯಾ,ಫ್ರಾನ್ಸ್,ಸ್ಪೈನ್,ಜರ್ಮನಿಯಲ್ಲಿ ಲಭ್ಯವಾಗಲಿದೆ. ಕಂಪೆನಿ ಈ ಸ್ಮಾರ್ಟ್‌ಫೋನಿಗೆ 600 ಡಾಲರ್(ಅಂದಾಜು 37 ಸಾವಿರ ರೂ.)ನಿಗದಿ ಮಾಡಿದೆ.2014 ಆರಂಭದಲ್ಲಿ ಯುರೋಪ್ ಅಮೆರಿಕದ 20 ದೇಶಗಳ ಮಾರುಕಟ್ಟೆಗೆ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ.
ಎಕ್ಸಲರೋಮೀಟರ್,ಕಂಪಾಸ್,ಗೈರೋಸ್ಕೋಪ್,ಪ್ರಾಕ್ಸಿಮಿಟಿ ಸೆನ್ಸರ್,ಲೈಟ್ ಸೆನ್ಸರ್,ವಿಶೇಷ ವೊಟಾಫೋನ್ ಗೆಶ್ಚರ್ ಮತ್ತು ಪುಟ್2ಬ್ಯಾಕ್ ಅಪ್‌ಗಳನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.
ವೊಟಾಫೋನ್
ವಿಶೇಷತೆ:
ಸಿಂಗಲ್ ಸಿಮ್
ಮುಂದುಗಡೆ 4.3 ಇಂಚಿನ ಎಚ್‌ಡಿ ಎಲ್‌ಸಿಡಿ ಸ್ಕ್ರೀನ್(720x1280 ಪಿಕ್ಸೆಲ್)
ಹಿಂದುಗಡೆ 4.3 ಇಂಚಿನ ಎಲೆಕ್ಟ್ರಾನಿಕ್ ಪೇಪರ್ ಸ್ಕ್ರೀನ್(360x640 ಪಿಕ್ಸೆಲ್)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್ ಓಎಸ್
1.7 GHz ಡ್ಯುಯಲ್ ಕೋರ್ ಕ್ರೈಟ್ ಪ್ರೊಸೆಸರ್
2GB ರ್‍ಯಾಮ್
32GB ಆಂತರಿಕ ಮೆಮೊರಿ
ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 13 ಎಂಪಿ ಹಿಂದುಗಡೆ ಕ್ಯಾಮೆರಾ
1 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್,ಎಲ್‌ಟಿಇ
1800mAh ಬ್ಯಾಟರಿ
ಮುಂದಿನ ಪುಟದಲ್ಲಿ ಈ ಸ್ಮಾರ್ಟ್‌ಫೋನ್ ಹೇಗಿದೆ ಮತ್ತು ಇದರಲ್ಲಿ ಬಳಸಿರುವ ತಂತ್ರಜ್ಞಾನವನ್ನು ತೋರಿಸುವ ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ವೊಟಾಫೋನ್ ಸ್ಮಾರ್ಟ್‌ಫೋನಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ
#1
ಡಿಸ್ಪ್ಲೇ ತಂತ್ರಜ್ಞಾನದ ವಿಡಿಯೋ ವೀಕ್ಷಿಸಿ
#2
ಎಲೆಕ್ಟ್ರಾನಿಕ್ ಪೇಪರ್ ಡಿಸ್ಪ್ಲೇ
#3
ಬ್ಯಾಟರಿ
#4
ಇ ಬುಕ್ ಓದುವುದು ಹೀಗೆ


Click it and Unblock the Notifications





