Subscribe to Gizbot

ಈಸಿ ಕ್ಯಾಬ್ಸ್ ಕಾರ್ ಬುಕ್ ನ ಮೊಬೈಲ್ App

Posted By: Varun
ಈಸಿ ಕ್ಯಾಬ್ಸ್ ಕಾರ್ ಬುಕ್ ನ ಮೊಬೈಲ್ App

ಸಾಮಾನ್ಯವಾಗಿ ಏರ್ಪೋರ್ಟ್ ಗೆ ಹೋಗಲು, ಇಲ್ಲವೆ ದೂರದ ಸ್ಥಳಗಳಿಗೆ ಹೋಗಲು ಬ್ರಾಂಡೆಡ್ ಟ್ಯಾಕ್ಸಿಗಳಾದ ಮೇರು, ಈಸಿ ಕ್ಯಾಬ್ ಮುಂತಾದ ಕ್ಯಾಬ್ ಸರ್ವೀಸ್ ಪಡೆದುಕೊಳ್ಳುತ್ತೀರಾ ಅಲ್ಲವೆ.

ಈಗ ನೀವು ಈಸಿ ಕ್ಯಾಬ್ ಅನ್ನು ಬುಕ್ ಮಾಡಿದ್ದರೆ ಅದನ್ನು ಟ್ರಾಕ್ ಮಾಡುವುದು ಸುಲಭ ಸಾಧ್ಯವಾಗಿದೆಈಸಿ ಕ್ಯಾಬ್ಸ್ ಆಪ್ ಮೂಲಕ. ಈ ಆಪ್ ಮೂಲಕ ನೀವು ಈಸಿ ಕ್ಯಾಬ್ ಅನ್ನು ಬುಕ್ ಮಾಡಿದ ಕೂಡಲೇ ಕ್ಯಾಬ್ ನ ಲೋಕೇಶನ್ ಅನ್ನು ಅಪ್ಡೇಟ್ ಮಾಡುತ್ತದೆ ಹಾಗು ಯಾವ ಸಮಯಕ್ಕೆ ಪಿಕ್ ಅಪ್ ಪಾಯಿಂಟ್ ಗೆ ಬರುತ್ತದೆ ಎಂದೂ ತಿಳಿಸುತ್ತದೆ.

ನೀವು ಪದೇ ಪದೇ ಫೋನ್ ಮಾಡಿ ಕೇಳುವ ಅಗತ್ಯ ಬರುವುದಿಲ್ಲ. ಇದಷ್ಟೇ ಅಲ್ಲದೆ ಅಕಸ್ಮಾತ್ ನೀವು ಹೋಗುವ ದಾರಿಯಲ್ಲಿ ಟ್ರಾಫಿಕ್ ಜಾಮ್ ಆದರೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಸಹಾಯಮಾಡಲು ನಿಮ್ಮ ನಗರದ ಟ್ರಾಫಿಕ್ ಪರಿಸ್ಥಿತಿಯ ಬಗ್ಗೆಯೂ ಮಾಹಿತಿ ನೀಡುತ್ತದೆ. ಸದ್ಯಕ್ಕೆ ಬೆಂಗಳೂರು, ದೆಹಲಿ, ಮುಂಬೈ ಹಾಗು ಹೈದರಾಬಾದ್ ಗ್ರಾಹಕರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ.

ಈಗಾಗಲೇ 50 ಸಾವಿರ ಡೌನ್ಲೋಡ್ ಅನ್ನು ಕಂಡಿರುವ ಈ ಆಪ್, ಆಂಡ್ರಾಯ್ಡ್, ಆಪಲ್ ನ ಐಒಎಸ್, ನೋಕಿಯಾದ ಸಿಮ್ಬಿಯನ್ ಹಾಗು ಬ್ಲಾಕ್ ಬೆರಿ ಫೋನುಗಳಿಗೆ ಲಭ್ಯವಿದ್ದು ನೀವು ಡೌನ್ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot