Home
ಮೊಬೈಲ್

ವಯಸ್ಸಾದವರಿಗೆಂದೇ ವಿಶೇಷ ಎಂಪೋರಿಯಾ ಫೋನ್

By Super
ವಯಸ್ಸಾದವರಿಗೆಂದೇ ವಿಶೇಷ ಎಂಪೋರಿಯಾ ಫೋನ್

ಮೊಬೈಲ್ ತಯಾರಿಕೆಯಲ್ಲಿ ಮುಂಬರುತ್ತಿರುವ ಎಂಪೊರಿಯಾ ಕಂಪನಿ ಇದೀಗ ಎಂಪೋರಿಯಾ RL1 ಎಂಬ ಮೊಬೈಲನ್ನು ಪರಿಚಯಿಸಿದೆ. ವಯಸ್ಸಾದವರ ಅಗತ್ಯತೆ, ಅವಶ್ಯಕತೆಗಳನ್ನು ಉದ್ದೇಶವಾಗಿಟ್ಟುಕೊಂಡೇ ಈ ಮೊಬೈಲನ್ನು ಪರಿಚಯಿಸಿರುವುದಾಗಿ ಕಂಪನಿ ತಿಳಿಸಿದೆ.

ವಿನ್ಯಾಸದಲ್ಲೂ ಉತ್ತಮವಾಗಿದ್ದು, ವಯಸ್ಕರಿಗೆ ತಕ್ಕಂತೆ ಹಲವು ಆಯ್ಕೆಗಳನ್ನು ಈ ಮೊಬೈಲ್ ನೀಡಲಿದೆ. ವಯಸ್ಸಾದವರಿಗೆ ಕೀಪ್ಯಾಡ್ ಸುಲಭವಾಗಿ ಕಾಣುವಂತೆ ಹಾಗೂ ಸಲೀಸಾಗಿ ಟೈಪ್ ಮಾಡುವಂತೆ ಮೊಬೈಲಿನ ಕೀಪ್ಯಾಡನ್ನು ವಿನ್ಯಾಸಗೊಳಿಸಲಾಗಿದೆ.

ಇನ್ನಿತರ ಸಾಧನಗಳಿಗೆ ಹೋಲಿಸಿದರೆ ಈ ಮೊಬೈಲ್ ನಲ್ಲಿ ನಂಬರ್ ಗಳನ್ನು ಸಹ ತುಂಬಾ ದೊಡ್ಡದಾಗಿ ಕೊಡಲಾಗಿದ್ದು, ವಯಸ್ಸಾದವರಿಗೆ ಹೆಚ್ಚು ಸಹಕಾರಿಯಾಗಲಿದೆ. ಅವರವರ ಅನುಗುಣಕ್ಕೆ ತಕ್ಕಂತೆ ಸ್ಕ್ರೀನ್ ನಲ್ಲಿ ಅಕ್ಷರಗಳನ್ನೂ ಹೊಂದಿಸಿಕೊಳ್ಳುವ ಅವಕಾಶ ನೀಡಲಾಗಿದೆ.

ಎಂಪೋರಿಯಾ RL1 ಮೊಬೈಲ್ OLED ಡಿಸ್ಪ್ಲೇ ಹೊಂದಿದ್ದು, LED ಫ್ಲಾಶ್ ಲೈಟನ್ನು ನೀಡಲಾಗಿದೆ. ಇದರ ಸ್ಕ್ರೀನ್ ಅಳತೆ ಕೇವಲ 1.8 ಇಂಚಿದ್ದರೂ ಇದರಲ್ಲಿ ದೊಡ್ಡ ಅಕ್ಷರಗಳ ಆಯ್ಕೆಯಿರುವುದರಿಂದ ತೊಂದರೆಯಿಲ್ಲ.

ಮೊಬೈಲ್ ನಲ್ಲಿನ ಇನ್ನೊಂದು ವಿಶೇಷ ಅಂಶವೆಂದರೆ ಬ್ಯಾಟರಿ. ಈ ಮೊಬೈಲ್ ನ ಬ್ಯಾಟರಿ ಬ್ಯಾಕಪ್ ಉತ್ತಮವಾಗಿದ್ದು, ಆಗಾಗ್ಗೆ ಚಾರ್ಜ್ ಮಾಡುವ ಅಗತ್ಯವಿಲ್ಲ, ಇದರ ಸ್ಟ್ಯಾಂಡ್ ಬೈ ಟೈಂ 8 ದಿನವಿದ್ದು, ಟಾಕ್ ಟೈಂ 180 ನಿಮಿಷ ಎನ್ನಲಾಗಿದೆ.

ಈ ಎಂಪೋರಿಯಾ RL1 ಬೆಲೆ ಕುರಿತು ಸದ್ಯಕ್ಕೆ ಕಂಪನಿ ಅಧೀಕೃತವಾಗಿ ಘೋಷಿಸಿಲ್ಲ. ಆದರೆ ಹೊರದೇಶದಲ್ಲಿ ಇದರ ಬೆಲೆ $60 ಇದ್ದು, ಭಾರತದಲ್ಲಿ ಬೆಲೆಯ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+