ಈಗಲೇ ಇಂತಹ ಫೋನ್ ಒಂದು ಬರಲಿದೆ ಎಂದು ಮೊಬೈಲ್ ಜಗತ್ತು ಊಹಿಸಿರಲಿಲ್ಲ!!

|

5G ತಂತ್ರಜ್ಞಾನ ಮತ್ತು ಫೋಲ್ಡೇಬಲ್ ಡಿಸ್​ಪ್ಲೇ ಹೊಂದಿರುವ ಸ್ಮಾರ್ಟ್​ಫೋನ್‌ಗಳ ಬಿಡುಗಡೆ ಮೂಲಕ ವಿಶ್ವ ಮೊಬೈಲ್ ಪ್ರಿಯರನ್ನು ಸೆಳೆದಿದ್ದ 2019ನೇ ವಿಶ್ವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಅಚ್ಚರಿಯ ಸ್ಮಾರ್ಟ್‌ಫೋನ್ ಒಂದು ಬಿಡುಗಡೆಯಾಗಿದೆ. 4000mAh, 5000mAh ಸಾಮರ್ಥ್ಯ ಬ್ಯಾಟರಿಗಳ ಸ್ಮಾರ್ಟ್‌ಫೋನ್‌ಗಳೇ ಹೆಚ್ಚಿರುವ ಈ ಸಮಯದಲ್ಲಿ ಮೊಬೈಲ್ ಕಂಪೆನಿಯೊಂದು 18,000mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆಗೊಳಿಸಿದೆ.

ಹೌದು, ಮೊಬೈಲ್​ ಪ್ರಿಯರನ್ನು ಅಚ್ಚರಿಗೆ ದೂಡಿರುವ ಎನರ್ಜೈಸರ್ ಎಂಬ ಮೊಬೈಲ್ ಕಂಪೆನಿಯು ಇದೇ ಮೊದಲ ಬಾರಿಗೆ 18,000mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಎನರ್ಜೈಸರ್ ಮೊಬೈಲ್ ಕಂಪೆನಿಯೇ ಹೇಳುವಂತೆ, ಬರೋಬ್ಬರಿ 50 ದಿನಗಳ ಸ್ಮಾರ್ಟ್​ಫೋನ್​ ಸ್ಟ್ಯಾಡ್ ​ಬೈ ಬ್ಯಾಟರಿ ಸಾಮರ್ಥ್ಯ ಹೊಂದಿರುವ ನೂತನ ಸ್ಮಾರ್ಟ್‌ಪೋನ್ ಇದಾಗಿದ್ದು, ಈ ಸ್ಮಾರ್ಟ್‌ಫೋನ್‌ಗೆ 'ಎನರ್ಜೈಸರ್ P18K' ಎಂದು ಹೆಸರಿಡಲಾಗಿದೆ.

ಈಗಲೇ ಇಂತಹ ಫೋನ್ ಒಂದು ಬರಲಿದೆ ಎಂದು ಮೊಬೈಲ್ ಜಗತ್ತು ಊಹಿಸಿರಲಿಲ್ಲ!!

ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ಸ್ಮಾರ್ಟ್​ಫೋನ್​ಗಳಿಗಿಂತ ಹೆಚ್ಚಿನ ಬ್ಯಾಟರಿ ಬ್ಯಾಕ್​ಅಪ್​ ಹೊಂದಿರುವ ಈ ಸ್ಮಾರ್ಟ್‌ಫೋನ್‌ ತಯಾರಿಕೆಯಲ್ಲಿ ಫ್ರೆಂಚ್​ ಮೂಲದ ಎನರ್ಜೈಸರ್ ಮೊಬೈಲ್ ಕಂಪೆನಿ ಭಾರೀ ತಂತ್ರಜ್ಞಾನವನ್ನು ತಂದಿರುವುದಾಗಿ ಹೇಳಿಕೊಂಡಿದೆ. ಹಾಗಾದರೆ, ಮೊಬೈಲ್​ ಪ್ರಿಯರನ್ನು ಅಚ್ಚರಿಗೆ ದೂಡಿರುವ 18,000mAh ಬ್ಯಾಟರಿ ಸಾಮರ್ಥ್ಯದ 'ಎನರ್ಜೈಸರ್ P18K' ಸ್ಮಾರ್ಟ್‌ಫೋನ್ ಹೇಗಿದೆ?, ಸ್ಮಾರ್ಟ್‌ಪೋನ್ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ತಲೆತಿರುಗಿಸುವ ಬ್ಯಾಟರಿ ಸಾಮರ್ಥ್ಯ

ತಲೆತಿರುಗಿಸುವ ಬ್ಯಾಟರಿ ಸಾಮರ್ಥ್ಯ

ಎನರ್ಜೈಸರ್ ಕಂಪೆನಿ ಬಿಡುಗಡೆ ಮಾಡಿರುವ 'ಎನರ್ಜೈಸರ್ P18K' ಸ್ಮಾರ್ಟ್‌ಫೋನ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 2 ದಿನಗಳವರೆಗೆ ಆನ್​ಲೈನ್ ಸ್ಟ್ರೀಮಿಂಗ್ ವಿಡಿಯೋವನ್ನು ವೀಕ್ಷಿಸಬಹುದಾಗಿದೆ. ಅಷ್ಟೇ ಅಲ್ಲದೆ ಈ ನೂತನ ಸ್ಮಾರ್ಟ್​ಫೋನ್​ ಸ್ಟ್ಯಾಡ್ ​ಬೈ ಬ್ಯಾಟರಿ ಸಾಮರ್ಥ್ಯ ಬರೋಬ್ಬರಿ 50 ದಿನಗಳು ಎಂದು ಎನರ್ಜೈಸರ್ ಕಂಪೆನಿಯೇ ಹೇಳಿಕೊಂಡಿದೆ.

ಪಾಪ್​ ಅಪ್ ಡ್ಯುಯೆಲ್ ಸೆಲ್ಫಿ ಕ್ಯಾಮೆರಾ

ಪಾಪ್​ ಅಪ್ ಡ್ಯುಯೆಲ್ ಸೆಲ್ಫಿ ಕ್ಯಾಮೆರಾ

ಎನರ್ಜೈಸರ್ P18K' ಸ್ಮಾರ್ಟ್‌ಫೋನ್ ವಿಶೇಷತೆ ಬ್ಯಾಟರಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ, ಎನರ್ಜೈಸರ್ P18K' ಸ್ಮಾರ್ಟ್‌ಫೋನ್ ಪಾಪ್​ ಅಪ್ ಡ್ಯುಯೆಲ್ ಸೆಲ್ಫಿ ( 18MP (16+2MP)) ಕ್ಯಾಮೆರಾಗಳನ್ನು ಹೊಂದುವ ಮೂಲಕ ಆಶ್ಚರ್ಯಮೂಡಿಸಿದೆ. ಹಾಗೆಯೇ ಮೊಬೈಲ್​ನ ಹಿಂಬದಿಯಲ್ಲಿ 16MP+ 5MP+2MP ಮೂರು ಕ್ಯಾಮೆರಾಗಳಿರುವುದು ಮತ್ತೊಂದು ವಿಶೇಷ.

 ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ಆಕರ್ಷಕವಾಗಿರುವಂತೆ ವಿನ್ಯಾಸಗೊಂಡಿರುವ 'ಎನರ್ಜೈಸರ್ P18K' ಫೋನ್ ಡಿಸ್‌ಪ್ಲೇ ನೋಚ್ ಹೊಂದಿಲ್ಲದಿರುವುದನ್ನು ನೋಡಬಹುದುದಾಗಿದೆ. ಪಾಪ್‌ ಅಪ್ ಕ್ಯಾಮೆರಾ ಸೆಟ್‌ ಅಪ್ ಕ್ಯಾಮೆರಾ ಹೊಂದಿರುವುದರಿಂದ ಬಹುತೇಕ ಪೂರ್ಣ ಪ್ರಮಾಣದ ಸ್ಕ್ರೀನ್ ಹೊಂದಿದಂತಿದೆ. 3.5 ಎಂಎಂ ಆಡಿಯೋ ಜಾಕ್ ಇಲ್ಲದ ಈ ಪೋನ್ ಡಿಸ್‌ಪ್ಲೇ 6.2 ಇಂಚಿನದ್ದಾಗಿದೆ.

ಪ್ರೊಸೆಸರ್ ಮತ್ತು RAM

ಪ್ರೊಸೆಸರ್ ಮತ್ತು RAM

ಎನರ್ಜೈಸರ್ P18K ಸ್ಮಾರ್ಟ್​ಫೋನ್ ಮೀಡಿಯಾ ಟೆಕ್ ಹೆಲಿಯೊ ಪಿ70 SOC ಪ್ರೊಸೆಸರ್​ ಹೊಂದಿದೆ ಎಂದು ಎನರ್ಜೈಸರ್ ಕಂಪೆನಿ ತಿಳಿಸಿದೆ.ಇತ್ತೀಚಿನ ಆಂಡ್ರಾಯ್ಡ್ 9 ಪೈ ಒಎಸ್ ಮೂಲಕ ರನ್ ಆಗಲಿರುವ ಸ್ಮಾರ್ಟ್‌ಫೋನಿನಲ್ಲಿ 6GB RAM ಮತ್ತು 128GB ಶೇಖರಣಾ ಸಾಮರ್ಥ್ಯವನ್ನು ನೀಡಲಾಗಿದ್ದು, ಫೋನಿನ ಮೆಮೊರಿ ವಿಸ್ತರಣೆ ಬಗ್ಗೆ ಮಾತ್ರ ಮಾಹಿತಿ ನೀಡಿಲ್ಲ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

18,000mAh ಬ್ಯಾಟರಿ ಸಾಮರ್ಥ್ಯ, ಪಾಪ್​ ಅಪ್ ಡ್ಯುಯೆಲ್ ಸೆಲ್ಫಿ ಕ್ಯಾಮೆರಾಗಳ ಜೊತೆಗೆ 6.2-ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಮತ್ತು ಫೇಸ್‌ ಅನ್‌ಲಾಕ್ ವೈಶಿಷ್ಟ್ಯತೆಗಳ ಬಗ್ಗೆ ಮಾತ್ರ ಈ ವರೆಗೂ ಮಾಹಿತಿ ಸಿಕ್ಕಿದೆ. ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುವ ಈ ಸ್ಮಾರ್ಟ್‌ಪೋನ್ ಪೂರ್ತಿ ಚಾರ್ಜ್ ಆಗಲು ತೆಗೆದುಕೊಳ್ಳುವ ಸಮಯ ಸಂಪೂರ್ಣ 8 ಗಂಟೆಗಳು ಮಾತ್ರ.!

Best Mobiles in India

English summary
told you MWC 2019 would be a show where things got weird, but even I didn’t anticipate a company being wild enough to build a phone with an 18,000mAh battery. Energizer P18K to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X