ಕುರಾನ್ ಕೇಳಬಹುದು ಹೊಸ ಎನ್ಮಾಕ್ ಮೊಬೈಲ್ ನಿಂದ

Posted By: Staff
ಕುರಾನ್ ಕೇಳಬಹುದು ಹೊಸ ಎನ್ಮಾಕ್ ಮೊಬೈಲ್ ನಿಂದ

ಟಾಲ್ ಮಾಲ್. ಕಾಂ ಮತ್ತು ಎನ್ಮಾಕ್ ಕಂಪನಿ ಜಂಟಿಯಾಗಿ ನೂತನ ಕುರಾನ್ ಮೊಬೈಲ್ ಫೋನನ್ನು ಪರಿಚಯಿಸಿದೆ. ಆನ್ ಲೈನ್ ಪೋರ್ಟಲ್ ಟಾಲ್ ಮಾಲ್ .ಕಾಂ ಮತ್ತು ಮಲೇಶಿಯಾದ ಎನ್ಮಾಕ್ ಕಂಪನಿ ಮುಸ್ಲಿಂ ಜನತೆಗೆಂದೇ ವಿಶೇಷವಾಗಿ ಈ ಎನ್ಮಾಕ್ ಕುರಾನ್ ಮೊಬೈಲನ್ನು ಪರಿಚಯಿಸಿದೆ.

ಎನ್ಮಾಕ್ ಕುರಾನ್ ಮೊಬೈಲ್ ಫೋನ್ ನಲ್ಲಿ ಕುರಾನ್ ವಾಚನವನ್ನು ಕೇಳಬಹುದಾಗಿರುವುದು ವಿಶೇಷವಾಗಿದೆ. ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಪವಿತ್ರ ಕುರಾನ್ ವಾಚನವನ್ನು ಕೇಳಲು ಮೊಬೈಲ್ ಸಹಾಯ ಮಾಡಲಿದೆ. ಅದರಲ್ಲೂ ಪ್ರಯಾಣ ಮಾಡುವಾಗ ಹೆಚ್ಚು ಉಪಯುಕ್ತ. ಐದು ಪ್ರಸಿದ್ಧ ವಾಚಕರ ಧ್ವನಿಯಲ್ಲಿ ಕುರಾನ್ ಪ್ರವಚನವನ್ನು ಕೇಳಬಹುದಾಗಿದ್ದು, ಪ್ರವಚನ 29 ಭಾಷೆಗಳಲ್ಲಿರುವುದರಿಂದ ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬಹುದು.

ಮುಸ್ಲಿಮರಿಗೆ ಹೆಚ್ಚು ಸಹಾಯಕ್ಕೆ ಬರಲಿರುವ ಈ ಮೊಬೈಲಿನಲ್ಲಿ ಪ್ರಮುಖ ಇಸ್ಲಾಮಿಕ್ ದಿನಾಂಕ, ಪ್ರಾರ್ಥನಾ ಸಮಯ ಮತ್ತು ಇನ್ನಿತರ ಮುಖ್ಯ ವಿಚಾರಗಳನ್ನು ನೀಡಲಾಗಿರುತ್ತೆ.

ಡ್ಯೂಯಲ್ ಸಿಮ್ ಆಯ್ಕೆಯಿರುವ ಈ ಮೊಬೈಲಿನ ಕೀಪ್ಯಾಡ್ ನಲ್ಲಿ ಅರೇಬಿಕ್ ಅಕ್ಷರಗಳನ್ನು ನೀಡಲಾಗಿದೆ. ಬ್ಯಾಟರಿ ಬ್ಯಾಕಪ್ ಅತ್ಯುನ್ನತವಾಗಿದ್ದು, 150 ನಿಮಿಷ ಟಾಕ್ ಟೈಂ ಮತ್ತು 4 ದಿನಗಳ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.

ಈ ಎನ್ಮಾಕ್ ಕುರಾನ್ ಮೊಬೈಲಲ್ಲಿ ಎಫ್ ಎಂ ರೇಡಿಯೋ, ಮೀಡಿಯಾ ಪ್ಲೇಯರ್,  ಕ್ಯಾಮೆರಾ ಕೂಡ ಇದೆ. 2.0 ಇಂಚಿನ ಡಿಸ್ಪ್ಲೇ ಹೊಂದಿದ್ದು,  170 x 220 ಪಿಕ್ಸಲ್ ರೆಸೊಲ್ಯೂಷನ್ ಹೊಂದಿದೆ. ಮೆಮೊರಿ ವಿಸ್ತರಣೆಗೆ ಅವಕಾಶವೂ ನೀಡಲಾಗಿದೆ.

ಮಲೇಶಿಯಾ, ದುಬೈ ಮತ್ತು ಇನ್ನಿತರ ಸ್ಥಳಗಳಲ್ಲಿ ಬಿಡುಗಡೆಯಾಗಿರುವ ಈ ಎನ್ಮಾಕ್ ಮೊಬೈಲ್ ಬೆಲೆ ಸದ್ಯದಲ್ಲೇ ತಿಳಿದುಬರಲಿದ್ದು, ಕಡಿಮೆ ಬೆಲೆಗೆ ಲಭ್ಯವಿರುವುದಾಗಿ ತಿಳಿದುಬಂದಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot