ಆಂಡ್ರಾಯ್ಡ್ ಹರಿಕಾರನ 'ಎಸೆನ್ಶಿಯಲ್' ಫೋನ್ ಬೆಲೆ ಇದೀಗ ಕೇವಲ 499$ ಡಾಲರ್!!
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹರಿಕಾರ ಆಂಡಿ ರೂಬಿನ್ ತನ್ನ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಸೀಮಿತ ಅವಧಿಗೆ ಭಾರೀ ಕಡಿತಗೊಳಿಸಿದ್ದಾರೆ.! ಇದೀಗ 'ಎಸೆನ್ಶಿಯಲ್' ಫೋನ್ ಆಪಲ್ 6 ಬೆಲೆಯಲ್ಲಿ ಲಭ್ಯವಿದೆ.!!
'ಎಸೆನ್ಶಿಯಲ್' ಎಂಬ ಹೊಸ ಮೊಬೈಲ್ ಕಂಪೆನಿ ಸ್ಥಾಪಿಸಿ ಗೂಗಲ್ ಮತ್ತು ಆಪಲ್ ಕಂಪೆನಿಗಳಿಗೆ ಸೆಡ್ಡು ಹೊಡೆಯುತ್ತಿರುವ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹರಿಕಾರ ಆಂಡಿ ರೂಬಿನ್ ತನ್ನ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಸೀಮಿತ ಅವಧಿಗೆ ಭಾರೀ ಕಡಿತಗೊಳಿಸಿದ್ದಾರೆ.! ಇದೀಗ 'ಎಸೆನ್ಶಿಯಲ್' ಫೋನ್ ಆಪಲ್ 6 ಬೆಲೆಯಲ್ಲಿ ಲಭ್ಯವಿದೆ.!!
ಐಫೋನ್, ಗೂಗಲ್ ಪಿಕ್ಸೆಲ್‌ಗೆ ಸ್ಪರ್ಧೆ ಕೊಡುವಂತಹ, ಅತ್ಯಾಧುನಿಕ ಸೌಲಭ್ಯಗಳುಳ್ಳ ಹೈಎಂಡ್ 'ಎಸೆನ್ಶಿಯಲ್' ಫೋನ್ ಬೆಲೆ ಇಲ್ಲಿಯವರಗೂ $699 (45,000)ಡಾಲರ್‌ಗಳಿದ್ದು, ಬೆಲೆ ಕಡಿತದ ನಂತರ ಫೋನ್ ಬೆಲೆ $499 ಡಾಲರ್‌ಗಳಿಗೆ ಇಳಿದಿದೆ. ಹಾಗಾದರೆ, ಫೋನ್ ಹೇಗಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್.!!
ಐಫೋನ್, ಗೂಗಲ್ ಪಿಕ್ಸೆಲ್‌ಗೆ ಸ್ಪರ್ಧೆ ನಿಡುತ್ತಿರುವ 'ಎಸೆನ್ಶಿಯಲ್' ಫೋನ್ 5.7 ಇಂಚಿನ 1312x2560 ಪಿಕ್ಸೆಲ್ ಬಿಗ್ ಡಿಸ್‌ಪ್ಲೇ ಹೊಂದಿದೆ. ಇನ್ನು 1.9GHz ಆಕ್ಟ-ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 835 ಪ್ರೊಸೆಸರ್ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ.!!

RAM ಮತ್ತು ಆಂತರಿಕ ಮೆಮೊರಿ!!
'ಎಸೆನ್ಶಿಯಲ್' ಫೋನ್ 4GB RAM ಮತ್ತು 128GB ಆಂತರಿಕ ಮೆಮೊರಿ ಹೊಂದಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಮೆಮೊರಿಯನ್ನು ಹೆಚ್ಚಿಸುವ ಅವಕಾಶ ಸ್ಮಾರ್ಟ್‌ಫೋನ್‌ನಲ್ಲಿದೆ.!!

ಕ್ಯಾಮೆರಾ ಹೇಗಿದೆ?
ಗುಣಮಟ್ಟದ ಕ್ಯಾಮೆರಾಗಳನ್ನು ಹೊಂದಿರುವ 'ಎಸೆನ್ಶಿಯಲ್' 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಹಾಗೂ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಮೆಗಾಪಿಕ್ಸೆಲ್ ಲೆಕ್ಕದಲ್ಲಿ ಫೋನ್ ಕ್ಯಾಮೆರಾದ ಶಕ್ತಿ ಕಡಿಮೆ ಇದೆ ಎನಿಸಿದರೂ ಕ್ಯಾಮೆರಾದ ಗುಣಮಟ್ಟ ಅತ್ಯುತ್ತಮವಾಗಿದೆ.

ಬ್ಯಾಟರಿ ಶಕ್ತಿ ಎಷ್ಟು?
ಐಫೋನ್ ಮತ್ತು ಸ್ಯಾಮ್‌ಸಂಗ್ ಫೋನ್‌ಗಳಿಗಿಂತ ಹೆಚ್ಚು ಬ್ಯಾಟರಿ ಹೊತ್ತು ಬರುತ್ತಿರುವ ಹೈ ಎಂಡ್ ಸ್ಮಾರ್ಟ್‌ಫೋನ್ ಈ 'ಎಸೆನ್ಶಿಯಲ್'.!! 3040mAH ನಾನ್ ರಿಮೂವೆಬೆಲ್ ಬ್ಯಾಟರಿ ಸ್ಮಾರ್ಟ್‌ಫೋನ್‌ನಲ್ಲಿದೆ.!!


ಇತರ ಫೀಚರ್ಸ್ ಏನಿವೆ?
ಒಂದು ಹೈ ಎಂಡ್ ಫೋನ್ ಹೊಂದಿರಬೇಕಾದ ಎಲ್ಲಾ ಫೀಚರ್ಸ್ ಸಹ 'ಎಸೆನ್ಶಿಯಲ್ ಸ್ಮಾರ್ಟ್‌ಫೋನ್‌ನಲ್ಲಿದೆ. ನ್ಯಾನೊ ಸಿಂಗ್ಲ್ ಸಿಮ್, ಯುಎಸ್‌ಬಿ ಒಟಿಜಿ, ಲೈಟನಿಂಗ್ ಫಾಸ್ಟರ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹಾಗೂ ಇನ್ನಿತರ ಪೀಚರ್ಸ್ ಸ್ಮಾರ್ಟ್‌ಫೋನ್‌ನಲ್ಲಿವೆ.!!


Click it and Unblock the Notifications








