ಯೂರೋ 2012 ಫುಟ್ಬಾಲ್ ಗೆ ಆಂಡ್ರಾಯ್ಡ್ App

By Varun
|
ಯೂರೋ 2012 ಫುಟ್ಬಾಲ್ ಗೆ ಆಂಡ್ರಾಯ್ಡ್ App

ಇವತ್ತಿನಿಂದ ಐಪಿಎಲ್ 2012 ರ ಪ್ಲೇ ಆಫ್ ಹಂತ ಶುರು ಆಗುತ್ತದೆ. ಇನ್ನೇನು ಮೇ 27ರ ನಂತರ ಕ್ರಿಕೆಟ್ ಪ್ರೇಮಿಗಳ ಹಬ್ಬ ಮುಗಿಯುತ್ತದೆ. ಆದರೆ ಕ್ರೀಡಾ ಪ್ರೇಮಿಗಳಿಗೆ ಈ ವರ್ಷ ಪೂರಾ ಒಂದರ ನಂತರ ಒಂದು ಮಹತ್ವದ ಆಟಗಳು ನಡೆಯಲಿವೆ.

ಮುಂದಿನ ತಿಂಗಳು, ವಿಶ್ವದ ಅತ್ಯಂತ ಕ್ರೇಜಿ ಆಟವಾದ ಫುಟ್ಬಾಲ್ ನ ಯೂರೋ ಕಪ್ 2012 (ಯುರೋಪ್ ದೇಶಗಳು ಸೆಣೆಸಾಡುವಕಪ್ ) ನಡೆಯಲಿದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಆಟದಲ್ಲಿ ಸೈನಿಕರಂತೆ ಹೋರಾಡುವ ಪ್ರತಿಯೊಬ್ಬ ಆಟಗಾರನೂತನ್ನ ದೇಶದ ಪ್ರತಿಯೊಂದು ಪ್ರಜೆಯಲ್ಲಿ ದೇಶಾಭಿಮಾನದ ಕಿಚ್ಚನ್ನು ಹತ್ತಿಸುತ್ತಾನೆ.

ಮನೆಯಲ್ಲಿ, ಆಫೀಸಿನಲ್ಲಿ ಎಲ್ಲೇ ಇದ್ದರೂ ಯೂರೋ 2012 ಫುಟ್ಬಾಲ್ ಆಟದ ಮಾಹಿತಿ ತಿಳಿದುಕೊಳ್ಳಲು, ನಿಮ್ಮ ಫೆವರಿಟ್ ಆಟಗಾರನು ಹೊಡೆದಗೋಲ್ ನ ಮಾಹಿತಿ ತಿಳಿದುಕೊಳ್ಳಲು ನಿಮಗೆ ಆಂಡ್ರಾಯ್ಡ್ App ಇದ್ದರೆ ಇನ್ನೂ ಚೆನ್ನಾಗಿರುತ್ತೆ ಅಲ್ಲವೆ ?

ಹಾಗಿದ್ದರೆ ನಿಮ್ಮ ಸ್ಮಾರ್ಟ್ ಫೋನ್ ಮೂಲಕ ಈ vubooo ಹೆಸರಿನಉಚಿತ App ಅನ್ನು ಡೌನ್ಲೋಡ್ ಮಾಡಿಕೊಂಡುಗೋಲ್ ವಿವರ ಪಡೆದುಕೊಳ್ಳುವುದರ ಜೊತೆಗೆ ಮ್ಯಾಚ್ ಬಗೆಗಿನ ನಿಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಲು ಅನುವುಮಾಡಿಕೊಡುತ್ತದೆ.

ಈ App ಅನ್ನು ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ ಯೂರೋ 2012

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X