Home
ಮೊಬೈಲ್

ಮಿಡ್‌ರೇಂಜ್ ಫ್ಲಾಗ್‌ಶಿಪ್ OnePlus 15R ವಿನ್ಯಾಸ ಹೇಗಿದೆ ಗೊತ್ತಾ?..ಇಲ್ಲಿ ನೋಡಿ!

ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ OnePlus 15R ಫೋನ್‌ ಕುರಿತು ಹಲವಾರು ಲೀಕ್‌ಗಳು ಮತ್ತು ಊಹಾಪೋಹಗಳು ಹರಿದಾಡುತ್ತಿವೆ. OnePlus ಈ OnePlus 15R ಫೋನ್‌ ಬಿಡುಗಡೆ ಕುರಿತು ಟೀಸರ್ ಅನ್ನು ಅನ್ನು ಬಿಡುಗಡೆ ಮಾಡಿದೆ. ಇದರಿಂದ OnePlus 15R ಎಂಬ ಮಿಡ್‌ರೇಂಜ್ ಫ್ಲಾಗ್‌ಶಿಪ್ ಆಗಿ ಶೀಘ್ರದಲ್ಲೇ ಲಾಂಚ್ ಆಗುವ ಸೂಚನೆ ಸ್ಪಷ್ಟವಾಗಿದೆ. ಇದೀಗ, ಈ ಮುಂಬರುವ ಫೋನ್ ಹೇಗಿರಬಹುದು ಎಂಬುದರ ಕುರಿತ ಮಾಹಿತಿ ಹೊರಬಿದ್ದಿದೆ. ಕಾರಣ, ಚೀನಾದಲ್ಲಿ OnePlus Ace 6T ಹೆಸರಿನಲ್ಲಿ ಮೊದಲು ಬಿಡುಗಡೆಯಾಗುತ್ತಿರುವ ಈ ಫೋನ್‌ನ ವಿನ್ಯಾಸ ರೆಂಡರ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಹಾಗಾದರೆ, ಮುಂಬರುವ OnePlus 15R(Ace 6T/15R) ಸ್ಮಾರ್ಟ್‌ಫೋನ್ ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿ.

ಜನಪ್ರಿಯ ಟಿಪ್‌ಸ್ಟರ್ ಇವಾನ್ ಬ್ಲಾಸ್ ಅವರು X ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿರುವ OnePlus Ace 6T ರೆಂಡರ್‌ಗಳು ಕೆಲವು ಪ್ರಮುಖ ವಿನ್ಯಾಸ ವಿವರಗಳನ್ನು ತೋರಿಸುತ್ತವೆ. ಈ ಫೋನ್‌ ಫ್ಲಾಟ್ ಫ್ರೆಮ್ ವಿನ್ಯಾಸದೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಇದು OnePlus 15 ಅನ್ನು ಹೋಲುತ್ತದೆ. ಹಿಂಭಾಗದಲ್ಲಿ LED ಫ್ಲ್ಯಾಶ್‌ ಸಹಿತ ಕ್ಯಾಪ್ಸ್ಯೂಲ್ ಆಕಾರದ ಕ್ಯಾಮೆರಾ ಮಾಡ್ಯೂಲ್ ನೀಡಲಾಗಿದೆ. ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾಿಗಾಗಿ ಮಧ್ಯದಲ್ಲಿ ಪಂಚ್-ಹೋಲ್ ಕಟ್‌ಔಟ್ ಮತ್ತು ಸ್ಲಿಮ್ ಬೆಜೆಲ್‌ಗಳು ಕಾಣಿಸುತ್ತವೆ.ರೆಂಡರ್‌ಗಳ ಪ್ರಕಾರ, ಫೋನ್‌ನ ಎಡಭಾಗದಲ್ಲಿ ಮೀಸಲಾದ "ಆಲರ್ಟ್ ಸ್ಲೈಡರ್" ಇರುತ್ತದೆ, ವಾಲ್ಯೂಮ್ ಬಟನ್‌ಗಳು ಮತ್ತು ಪವರ್ ಕೀ ಬಲಭಾಗದಲ್ಲಿ ಇರಿಸಲಾಗಿದೆ. ಜೊತೆಗೆ, ಈ ಹ್ಯಾಂಡ್‌ಸೆಟ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಬಹುದು ಎಂಬುದನ್ನೂ ರೆಂಡರ್‌ಗಳು ಸೂಚಿಸುತ್ತವೆ.

ಗಮನಿಸುವುದಾದರೆ, OnePlus 15R ಸ್ಮಾರ್ಟ್‌ಫೋನ್ ಫೋನ್ ಮೊದಲು OnePlus Ace 6T ಹೆಸರಿನಲ್ಲಿ ಲಾಂಚ್ ಆಗಿ ನಂತರ ಭಾರತಕ್ಕೆ ಬರಲಿದೆ ಎಂದು ಪ್ರಮುಖ ಟೆಕ್ ವರದಿಗಳು ಹೇಳಿವೆ. ಮುಂಬರುವ ಸ್ಮಾರ್ಟ್‌ಫೋನ್ ಕುರಿತು ಕಂಪನಿಯು ಇನ್ನೂ ಯಾವುದೇ ವಿವರಗಳನ್ನು ಬಹಿರಂಗಪಡಿಸದಿದ್ದರೂ, X ನಲ್ಲಿ ಜನಪ್ರಿಯ ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಅವರು OnePlus 15R ಭಾರತ ಸೇರಿದಂತೆ ಜಾಗತಿಕವಾಗಿ OnePlus Ace 6T ಅನಾವರಣಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಮಾಹಿತಿಯನ್ನು ಹಲವಾರು ವರದಿಗಳು ಪ್ರಕಟಿಸಿವೆ.

OnePlus 15R(Ace 6T/15R): ಅಧಿಕೃತ ಮತ್ತು ನಿರೀಕ್ಷಿತ ವೈಶಿಷ್ಟ್ಯಗಳು
OnePlus ಚೀನಾ ಅಧ್ಯಕ್ಷ ಲಿ ಜೀ ಈಗಾಗಲೇ ಬಹಿರಂಗಪಡಿಸಿರುವಂತೆ, Ace 6T/15R ವಿಶ್ವದಲ್ಲೇ ಮೊದಲ ಬಾರಿ Snapdragon 8 Gen 5 (non-Elite) ಚಿಪ್‌ನ್ನು ಬಳಸಲಿರುವ ಸ್ಮಾರ್ಟ್‌ಫೋನ್ ಆಗಲಿದೆ. ಇದು ಕ್ವಾಲ್ಕಾಮ್‌ನ ಮುಂದಿನ ಫ್ಲ್ಯಾಗ್‌ಶಿಪ್ ಚಿಪ್‌ನ ಎಲೈಟ್ ಅಲ್ಲದ ರೂಪಾಂತರವಾಗಿದ್ದು,ಈ ಚಿಪ್‌ನಲ್ಲಿ ವಿಶೇಷ ಗೇಮಿಂಗ್ ಕರ್ನಲ್ ಇದ್ದು, 165Hz ರಿಫ್ರೆಶ್ ರೇಟ್‌ನಲ್ಲಿ ನೆಪ್ಪಿಲ್ಲದ ಗೇಮಿಂಗ್ ಅನುಭವ ನೀಡುವುದಾಗಿ ತಿಳಿಸಲಾಗಿದೆ. ಜೊತೆಗೆ Genshin Impact ಜನಪ್ರಿಯ ಆಟಕ್ಕೆ OnePlus ವಿಶೇಷ 165Hz ಅಪ್ಟಿಮೈಸೇಶನ್ ಕೂಡ ಮಾಡಿರುವ ಸಾಧ್ಯತೆ ಇದೆ. ಇದನ್ನು OnePlus ನೊಂದಿಗೆ ಸಹ-ಅಭಿವೃದ್ಧಿಪಡಿಸಲಾಗಿದೆ ಎಂದು ವರದಿಯಾಗಿದೆ.

ಮಿಡ್‌ರೇಂಜ್ ಫ್ಲಾಗ್‌ಶಿಪ್ OnePlus 15R ವಿನ್ಯಾಸ ಹೇಗಿದೆ ಗೊತ್ತಾ?..ಇಲ್ಲಿ ನೋಡಿ!

ಡಿಸ್ಪ್ಲೇ ಮತ್ತು ವಿನ್ಯಾಸದ ವಿಭಾಗದಲ್ಲಿ,OnePlus ಈ ವರ್ಷ ಬಳಸುತ್ತಿರುವ ಸ್ಕ್ವಿರ್ಕಲ್ ಕ್ಯಾಮೆರಾ ಐಲ್ಯಾಂಡ್ ವಿನ್ಯಾಸವು ಈ Ace 6T/15R ಫೋನ್‌ಗೂ ಬರಬಹುದಾಗಿದೆ. ಮುಂದೆ 165Hz ರಿಫ್ರೆಶ್ ರೇಟ್ ಹೊಂದಿರುವ ಡಿಸ್ಪ್ಲೇ ಅನ್ನು ಕಂಪನಿ ಈಗಾಗಲೇ ದೃಢಪಡಿಸಿದೆ. ಚೀನಾ ಲೀಕ್ಸ್ ಪ್ರಕಾರ, ಈ ಫೋನ್‌ನಲ್ಲಿ 6.7-ಇಂಚು 1.5K OLED ಸ್ಕ್ರೀನ್ ಬರಬಹುದು. ಕಾರ್ಯಕ್ಷಮೆತಾಗಿ, Snapdragon 8 Gen 5 ಜೊತೆಗೆ 16GB LPDDR5x Ultra RAM ಮತ್ತು 1TB UFS 4.1 ಸ್ಟೋರೇಜ್ ವರೆಗೆ ಆಯ್ಕೆ ಸಿಗಲಿದೆ ಎಂದು ಗಾಸಿಪ್ ಇದೆ. Oಚಿಪ್‌ಸೆಟ್ ಸ್ವತಃ 3nm TSMC ಪ್ರಕ್ರಿಯೆಯಲ್ಲಿ ಓರಿಯಾನ್ CPU ಕೋರ್‌ಗಳನ್ನು ಬಳಸುತ್ತದೆ ಎಂದು ನಂಬಲಾಗಿದೆ, ಇದನ್ನು 2+6 ಕ್ಲಸ್ಟರ್‌ನಲ್ಲಿ ಜೋಡಿಸಲಾಗಿದೆ ಮತ್ತು ಗ್ರಾಫಿಕ್ಸ್‌ಗಾಗಿ ಅಡ್ರಿನೊ 840 GPU ಅನ್ನು ಹೊಂದಿದೆ.

ಈ Ace 6T/15R ಸ್ಮಾರ್ಟ್‌ಫೋನ್‌ನ ದೊಡ್ಡ ಹೈಲೈಟ್ ಎಂದರೆ 8,000mAh ಬ್ಯಾಟರಿ. OnePlus ಫೋನ್‌ಗಳಲ್ಲಿ ಇದುವರೆಗಿನ ಅತಿ ದೊಡ್ಡ ಬ್ಯಾಟರಿ ಇದೇ ಆಗಬಹುದು. ಜೊತೆಗೆ 100W ಚಾರ್ಜಿಂಗ್ ಇದ್ದರೆ, ವೇಗ ಮತ್ತು ಬ್ಯಾಕಪ್ ಎರಡನ್ನೂ ನಿರಾಳವಾಗಿ ನಿರೀಕ್ಷಿಸಬಹುದು. ಚೀನಾ ಮಾದರಿಯಲ್ಲಿ ColorOS 16 ಇರಬಹುದು, ಆದರೆ ಭಾರತದಲ್ಲಿ OxygenOS + Android 16 ಬರಲಿದೆ ಎನ್ನಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ, ಸೋರಿಕೆಗಳು 50-ಮೆಗಾಪಿಕ್ಸೆಲ್ + 8-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಸೆಟಪ್ ಮತ್ತು 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸೂಚಿಸುತ್ತವೆ, ಇದು ಒನ್‌ಪ್ಲಸ್ ಈ ಫೋನ್ ಅನ್ನು ಕ್ಯಾಮೆರಾ-ಭಾರೀ ಫ್ಲ್ಯಾಗ್‌ಶಿಪ್‌ಗಿಂತ ಕಾರ್ಯಕ್ಷಮತೆ-ಮೊದಲ ಸಾಧನವಾಗಿ ಇರಿಸುತ್ತಿದೆ ಎಂದು ಸ್ಪಷ್ಟಪಡಿಸುತ್ತದೆ.

OnePlus 15R(Ace 6T/15R): ಭಾರತದಲ್ಲಿ ನಿರೀಕ್ಷಿತ ಬೆಲೆ
OnePlus Ace 6T ಈಗಾಗಲೇ JD, Tmall ಮತ್ತು Oppo Store ನಂತಹ ಪ್ರಮುಖ ಚೀನೀ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರೀ-ಬುಕ್ ಮಾಡಲು ಲಭ್ಯವಾಗಿದ್ದು, ಅಧಿಕೃತ ಬಿಡುಗಡೆಯು ಹತ್ತಿರದಲ್ಲಿರುವುದನ್ನು ಸೂಚಿಸುತ್ತದೆ ಮತ್ತು ನಂತರ ಭಾರತ ಲಾಂಚ್ ಕೂಡ ತಕ್ಷಣ ನಡೆಯುವ ನಿರೀಕ್ಷೆ. ಗಮನಿಸುವುದಾದರೆ, ಭಾರತದಲಲ್ಇ ಕಳೆದ OnePlus 12R ₹39,999 ರಿಂದ ಮತ್ತು 13R ₹42,999 ರಿಂದ ಆರಂಭವಾಗಿತ್ತು. OnePlus ಪ್ರತೀ ವರ್ಷ ಸುಮಾರು ₹3,000ರಷ್ಟು ಬೆಲೆ ಹೆಚ್ಚಿಸುತ್ತಿರುವುದರಿಂದ, OnePlus 15R ಬೆಲೆ ₹45,000 ಒಳಗೆ ಇರುವ ಸಾಧ್ಯತೆ ಹೆಚ್ಚಿದೆ.

Best Mobiles in India

English summary
The OnePlus Ace 6T(OnePlus 15R/Ace 6T) renders, shared by tipster Evan Blass on X, showcase several key design elements. The device sports a flat-frame design reminiscent of the OnePlus 15. On the back, it features a capsule-shaped camera module accompanied by an LED flash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+