Home
ಮೊಬೈಲ್

ಹಾನರ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್‌..! ಖರೀದಿಸಲು ರೆಡಿಯಾಗಿ..!

ಭಾರತದಲ್ಲಿ ಹಬ್ಬದ ಸೀಸನ್‌ ಪ್ರಾರಂಭವಾಗಿದೆ. ಅದರಂತೆ ಆನ್‌ಲೈನ್‌ ವ್ಯವಹಾರಗಳು ಕೂಡ ಚುರುಕಾಗಿವೆ. ಎಲೆಕ್ಟ್ರಾನಿಕ್‌ ಉತ್ಪನ್ನಗಳ ಮೇಲೆ 2018ರ ಅತ್ಯುತ್ತಮ ಆಫರ್‌ಗಳನ್ನು ಪಡೆಯಲು ಈ ಹಬ್ಬದ ಋತು ಹೇಳಿ ಮಾಡಿಸಿದಂತಿದೆ. ಅದರಂತೆ ಫ್ಲಿಪ್‌ಕಾರ್ಟ್‌ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಿಗ್‌ ಬಿಲಿಯನ್‌ ಡೇ ಸೇಲ್‌ನ್ನು ನಾಳೆಯಿಂದ ಆರಂಭಿಸಲಿದೆ. ಇ ಕಾಮರ್ಸ್‌ ಪೋರ್ಟಾಲ್‌ ಅನೇಕ ಎಲೆಕ್ಟ್ರಾನಿಕ್‌ ಬ್ರಾಂಡ್‌ಗಳ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಭಾರೀ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿದೆ.

ಆದರೆ, IDC Q2 2018ರ ವರದಿ ಪ್ರಕಾರ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್‌ ಬ್ರಾಂಡ್‌ ಆಗಿರುವ ಹಾನರ್‌ ಸ್ಮಾರ್ಟ್‌ಫೋನ್‌ಗಳ ಮೇಲಿನ ಆಫರ್‌ಗಳು ನಿಮ್ಮನ್ನು ನಿಜವಾಗಿಯೂ ಗಮನ ಸೆಳೆಯುತ್ತವೆ. ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇ ಸೇಲ್‌ನ 5ನೇ ಆವೃತ್ತಿ ನಾಳೆಯಿಂದ ಆರಂಭವಾಗುತ್ತಿದೆ. ಸ್ಮಾರ್ಟ್‌ಫೋನ್‌ಗಳ ಮೇಲಿನ ಸೇಲ್‌ ಅಕ್ಟೋಬರ್ 11ರಿಂದ 14ರವರೆಗೆ 4 ದಿನಗಳ ಕಾಲ ನಡೆಯಲಿದ್ದು, ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ಲಭ್ಯವಾಗಲಿದೆ. ಅದರಂತೆ, ಹಾನರ್‌ ಕಂಪನಿಯು ಕೂಡ ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್ ಮತ್ತು ಆಫರ್‌ಗಳನ್ನು ಘೋಷಿಸಿದೆ.

ಹಾನರ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್‌..! ಖರೀದಿಸಲು ರೆಡಿಯಾಗಿ..!

ಈ ಹಬ್ಬದ ಋತುವಿನಲ್ಲಿ ಫ್ಲಿಪ್‌ಕಾರ್ಟ್‌ ಜತೆಗೂಡಿ 1 ಮಿಲಿಯನ್ ಡಿವೈಸ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಹಾನರ್ ಹೊಂದಿದ್ದು, ಗ್ರಾಹಕರು ಸಾರ್ವಕಾಲಿಕ ಅತ್ಯುತ್ತಮ ಸ್ಮಾರ್ಟ್‌ಫೋನ್ ಒಪ್ಪಂದಗಳನ್ನು ಪಡೆಯಬಹುದಾಗಿದೆ. ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇ ಸೇಲ್‌ನಲ್ಲಿ ಹಾನರ್‌ನ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳ ಮೇಲಿರುವ ರಿಯಾಯಿತಿ ಮತ್ತು ಆಫರ್‌ಗಳನ್ನು ನೋಡಿದರೆ ನೀವು ಬೆರಗಾಗುವುದು ಖಂಡಿತ. ಆಗಿದ್ದರೆ, ಇದೇ 11ಕ್ಕೆ ಹಾನರ್‌ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ರೆಡಿಯಾಗಿರಿ..

ಹಾನರ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್‌..! ಖರೀದಿಸಲು ರೆಡಿಯಾಗಿ..!

ಸೂಪರ್‌ ಸ್ಟಾರ್‌ ಹಾನರ್‌ 9N

ಅತ್ಯುತ್ತಮ ಡೀಲ್‌ಗಳಿಂದಲೇ ನಾವು ಆರಂಭಿಸುವುದಾದರೆ ಹಾನರ್‌ 9N ಸ್ಮಾರ್ಟ್‌ಫೋನ್‌ ಮೇಲೆ ಸೂಪರ್‌ ಸ್ಟಾರ್‌ ಆಫರ್‌ ಲಭ್ಯವಿದೆ. ಮಿಡ್‌ ರೆಂಜ್‌ ಕಿಲ್ಲರ್ ಆಗಿರುವ ಹಾನರ್ 9N ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇ ಸೇಲ್‌ನಲ್ಲಿ ₹ 2000 ಕಡಿತಗೊಂಡು ಮಾರಾಟವಾಗಲಿದೆ. ಈ ಡಿಸ್ಕೌಂಟ್‌ 3GB+32GB ಮತ್ತು 4GB+64GB ಎರಡು ಆವೃತ್ತಿಗಳಿಗೂ ಲಭ್ಯವಿದೆ. ಅದರಂತೆ, ಹಾನರ್‌ 9 ಲೈಟ್‌ ಸ್ಮಾರ್ಟ್‌ಫೋನ್‌ನ 3GB ಆವೃತ್ತಿ ಕೇವಲ ₹ 9,999 ಹಾಗೂ 4GB ಆವೃತ್ತಿ ₹ 11,999ಗೆ ಖರೀದಿಸಬಹುದಾಗಿದ್ದು, 4GB ಆವೃತ್ತಿ ಮೇಲೆ ₹ 3000ದವರೆಗೂ ಎಕ್ಸ್‌ಚೆಂಜ್‌ ಆಫರ್‌ ಪಡೆಯಬಹುದಾಗಿದೆ.

ಹಾನರ್‌ 9N ಖರೀದಿಯೊಂದಿಗೆ ಗ್ರಾಹಕರು ಶೇ. 50ರಷ್ಟು ಗ್ಯಾರಂಟಿ ಮರುಖರೀದಿ ಮೌಲ್ಯವನ್ನು ಸಹ ಪಡೆಯಲಿದ್ದಾರೆ. ಗಮನಿಸಬೇಕಾದ ಅಂಶವೇನೆಂದರೆ, ಹಾನರ್ 9N ಮಾರುಕಟ್ಟೆಯಲ್ಲಿ ಅತ್ಯುತ್ತಮ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಆಗಿದೆ. ಇದು ಕೇವಲ ಪರಿಪೂರ್ಣತೆಯನ್ನು ಹೊಂದದೆ, ಅತ್ಯುತ್ತಮ ವೀಕ್ಷಣೆ ಅನುಭವಕ್ಕಾಗಿ 19:9 ಆಸ್ಪೆಕ್ಟ್‌ ರೇಷಿಯೋ ಮತ್ತು 79% ಸ್ಕ್ರೀನ್-ಟು-ಬಾಡಿ ರೇಷಿಯೋ ಹೊಂದಿದ್ದು, ಕನಿಷ್ಟ ನೋಚ್‌ ಹೊಂದಿದ್ದು, ಕೈಗೆಟಕುವ ಬೆಲೆಯಲ್ಲಿ ದೊರೆಯುವ ಸ್ಮಾರ್ಟ್‌ಫೋನ್‌ ಆಗಿದೆ.

ಹಾನರ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್‌..! ಖರೀದಿಸಲು ರೆಡಿಯಾಗಿ..!

ಹಾನರ್‌ 10 ಮೇಲೆ ಭಾರೀ ರಿಯಾಯಿತಿ

2018ರಲ್ಲಿ ನಾವು ಪರಿಶೀಲಿಸಿದ ಅತ್ಯುತ್ತಮ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಹಾನರ್‌ 10 ಒಂದಾಗಿದೆ. ಹಾನರ್‌ 10 ಸ್ಮಾರ್ಟ್‌ಫೋನ್‌ ₹ 32,999ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್‌ ಆಗಿತ್ತು. ಮತ್ತು ಅದರ ಬೆಲೆ ವಿಭಾಗದಲ್ಲಿ ಉತ್ತಮ ಮೌಲ್ಯವನ್ನು ಗ್ರಾಹಕರಿಗೆ ನೀಡಿತ್ತು. ಅದರಲ್ಲೂ ವಿಶೇಷವಾಗಿ ಪೋಟೋಗ್ರಾಫಿ ಉತ್ಸಾಹಿಗಳಿಗೆ ಬೆಸ್ಟ್‌ ಸ್ಮಾರ್ಟ್‌ಫೋನ್‌ ಆಗಿತ್ತು. ಆದರೆ, ನೀವು ಈ ಹಬ್ಬದ ಋತುವಿನಲ್ಲಿ ಹಾನರ್‌ 10 ಸ್ಮಾರ್ಟ್‌ಫೋನ್‌ನ್ನು ಭಾರೀ ರಿಯಾಯಿತಿಯೊಂದಿಗೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಹೌದು, ಜಾಗತಿಕವಾಗಿ ಉತ್ತಮ ಮಾರಾಟ ಕಂಡ ಸ್ಮಾರ್ಟ್‌ಫೋನ್‌ ಆಗಿರುವ ಹಾನರ್ 10 ಮೊದಲ ಬಾರಿಗೆ ₹ 8,000 ರಿಯಾಯಿತಿಯನ್ನು ನೀಡುತ್ತಿದ್ದು, ಅಂತಿಮವಾಗಿ ₹ 24,999ಕ್ಕೆ ನಿಮಗೆ ದೊರೆಯುತ್ತದೆ. ಅದಲ್ಲದೇ, ಹಾನರ್ 10 ಖರೀದಿಯಲ್ಲಿ ಗ್ರಾಹಕರು ಶೇ. 50ರಷ್ಟು ಮರುಖರೀದಿ ಮೌಲ್ಯವನ್ನು ಪಡೆಯಬಹುದು.

ಹಾನರ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್‌..! ಖರೀದಿಸಲು ರೆಡಿಯಾಗಿ..!

ಹಾನರ್‌ 9 ಲೈಟ್ ಹಾಗೂ ಹಾನರ್‌ 9i ಮೇಲೂ ಭಾರೀ ಆಫರ್‌

ಹಾನರ್‌ 9 ಲೈಟ್ ಹಾಗೂ ಹಾನರ್‌ 9i ಸ್ಮಾರ್ಟ್‌ಫೋನ್‌ಗಳ ಮೇಲೂ ಹಾನರ್‌ ಹಬ್ಬದ ಆಫರ್‌ಗಳನ್ನು ನೀಡಿದೆ. ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇ ಸೇಲ್‌ನಲ್ಲಿ ಹಾನರ್‌ 9 ಲೈಟ್‌ (3GB+32GB) ಆವೃತ್ತಿ ಮೂಲ ಬೆಲೆಯಲ್ಲಿ ₹1000 ಖಡಿತವಾಗಿ ₹ 9,999ಗೆ ದೊರೆಯುತ್ತಿದೆ. ಅಷ್ಟೇ ಅಲ್ಲದೇ 3 ದಿನದ ಸೇಲ್‌ನಲ್ಲಿ ಹಾನರ್‌ 9 ಲೈಟ್‌ 4GB+32GB ಆವೃತ್ತಿಯ ಮೇಲೆ ₹3,000 ದವರೆಗೂ ಎಕ್ಸ್‌ಚೆಂಜ್‌ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ₹14,999ಕ್ಕೆ ಮಾರಾಟವಾಗುತ್ತಿದೆ. ಹಾನರ್‌ 9i ಸ್ಮಾರ್ಟ್‌ಫೋನ್‌ ಮೇಲಿನ ಆಫರ್‌ಗಳನ್ನು ಗಮನಿಸಿದರೆ ₹2000 ರಿಯಾಯಿತಿ ದೊರೆಯಲಿದೆ. ಇದರಿಂದ ₹14,999 ಇದ್ದ ಬೆಲೆ ₹12,999ಕ್ಕೆ ಇಳಿದಿದೆ. ಗ್ರಾಹಕರು ಖರೀದಿಸಬಹುದಾದ ಆಯ್ಕೆಯನ್ನು ಹಾನರ್‌ ನೀಡಿದೆ.

ಹಾನರ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್‌..! ಖರೀದಿಸಲು ರೆಡಿಯಾಗಿ..!

ಹಾನರ್‌ 7A ಮೇಲೆ ಆಕರ್ಷಕ ಡಿಸ್ಕೌಂಟ್‌

ಕೈಗೆಟಕುವ ದರದಲ್ಲಿ ಉತ್ತಮವಾಗಿ ಮಾರಾಟ ಕಾಣುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾದ ಹಾನರ್‌ 7A ಆಕರ್ಷಕ ಆಫರ್‌ನಲ್ಲಿ ದೊರೆಯುತ್ತಿದ್ದು, ಕೇವಲ ₹ 7,999ಕ್ಕೆ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್ ಡೇ ಸೇಲ್‌ನಲ್ಲಿ ಖರೀದಿಸಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ₹ 8,999ಕ್ಕೆ ಹಾನರ್‌ 7A ಲಾಂಚ್‌ ಆಗಿತ್ತು. ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರುವ ಬಜೆಟ್‌ ಸ್ಮಾರ್ಟ್‌ಫೋನ್‌ ಆಗಿಯೂ ಹಾನರ್ 7A ಹೊರ ಹೊಮ್ಮಿದೆ. ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 8.0 ಒರಿಯೋ ಬೆಂಬಲಿತ EMUI 8.0ದಿಂದ ಕಾರ್ಯನಿರ್ವಹಿಸಲಿದ್ದು, ಸ್ಪೋರ್ಟ್ಸ್ 5.7 ಇಂಚಿನ HD+ (720x1440 ಪಿಕ್ಸೆಲ್ಸ್‌) IPS LCD ಡಿಸ್‌ಪ್ಲೇಯನ್ನು 18:9 ಆಸ್ಪೆಕ್ಟ್‌ ರೇಷಿಯೋದಲ್ಲಿ ಹೊಂದಿದೆ. ಅದಲ್ಲದೇ ಒಕ್ಟಾ ಕೋರ್‌ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ 430 ಪ್ರೊಸೆಸರ್‌ ಹೊಂದಿದ್ದು, 3GB RAM ಹೊಂದಿದೆ.

ಹಾನರ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್‌..! ಖರೀದಿಸಲು ರೆಡಿಯಾಗಿ..!

ಈಗ ಮತ್ತಷ್ಟು ಕೈಗೆಟಕುವ ದರದಲ್ಲಿ ಹಾನರ್‌ 7S

ಭಾರತದಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ₹ 6,999ಕ್ಕೆ ಲಾಂಚ್‌ ಆಗಿದ್ದ ಹಾನರ್‌ 7S ಸ್ಮಾರ್ಟ್‌ಫೋನ್‌ ಈಗ ಇನ್ನಷ್ಟು ಕೈಗೆಟಕುವ ದರದಲ್ಲಿ ಸಿಗುತ್ತಿದ್ದು, ₹ 6,499ಕ್ಕೆ ಲಭ್ಯವಿದೆ.
ಸ್ಪೋರ್ಟ್ಸ್ 5.4 ಇಂಚಿನ HD+ (1440x720 ಪಿಕ್ಸೆಲ್ಸ್‌) 18:9 ಆಸ್ಪೆಕ್ಟ್‌ ರೇಷಿಯೋದಲ್ಲಿ ಡಿಸ್‌ಪ್ಲೇಯನ್ನು ಹೊಂದಿದೆ. ಶೇ.85ರಷ್ಟು ಸ್ಕ್ರೀನ್‌ ಟು ಬಾಡಿ ರೇಷಿಯೋ ಹೊಂದಿದ್ದು, ಒಂದೇ ಕೈಯಲ್ಲಿ ಹ್ಯಾಂಡ್‌ಸೆಟ್‌ನ್ನು ಸುಲಭವಾಗಿ ಬಳಸಬಹುದು.

ಹಾನರ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್‌..! ಖರೀದಿಸಲು ರೆಡಿಯಾಗಿ..!

ಹಾನರ್‌ನಿಂದ ಹೆಚ್ಚುವರಿ ಆಫರ್‌ಗಳು ಕೂಡ ಇವೆ

ಆಫರ್‌ಗಳ ಪಟ್ಟಿ ಇನ್ನು ಮುಗಿದಿಲ್ಲ. ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇ ಸೇಲ್‌ನಲ್ಲಿ ಹಾನರ್‌ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದರೆ, ಮೂಲಬೆಲೆಯಲ್ಲಿನ ಡಿಸ್ಕೌಂಟ್‌ ಜತೆಗೆ ಕೆಲವು ಹೆಚ್ಚುವರಿ ಆಫರ್‌ಗಳನ್ನು ಗ್ರಾಹಕರು ಪಡೆಯಬಹುದು. HDFC ಬ್ಯಾಂಕ್‌ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಂದ ಸ್ಮಾರ್ಟ್‌ಫೋನ್‌ ಖರೀದಿಸಿದೆ ಶೇ.10ರಷ್ಟು ತ್ವರಿತ ರಿಯಾಯಿತಿ ಸಿಗುತ್ತದೆ. ಅದಲ್ಲದೇ ಬಜಾಜ್ ಫಿನ್‌ಸರ್ವ್‌ ಕಾರ್ಡ್‌ಗಳ ಮೇಲೆ no-cost EMI ಆಫರ್‌ ಲಭ್ಯವಿದೆ. ಅಷ್ಟೇ ಅಲ್ಲದೇ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇ ಸೇಲ್‌ನಲ್ಲಿ ಖರೀದಿಸುವ ಹಾನರ್‌ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಸಂಪೂರ್ಣ ಮೊಬೈಲ್‌ ಪ್ರೊಟೆಕ್ಷನ್‌ ಪ್ಲಾನ್‌ನ್ನು ₹199ಯಿಂದ ಪಡೆಯಬಹುದು. ಆಗಿದ್ರೇ ಇನ್ಯಾಕೆ ತಡ ಹಾನರ್‌ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ರೆಡಿಯಾಗಿ.

Best Mobiles in India

English summary
Exciting deals on Honor smartphones that you cannot afford to miss. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+