ಸೆಲ್ಫಿಗೆ ಒಪ್ಪುವ ಒಪ್ಪೋ F3 ಸ್ಮಾರ್ಟ್‌ಫೋನ್ 'ಕಾಸಿಗೆ ತಕ್ಕ ಕಜ್ಜಾಯ': ನೀವೇ ನೋಡಿ..!!
ಸ್ಮಾರ್ಟ್‌ಫೋನ್‌ಗಳು ಫೋಟೋ ತೆಗೆದುಕೊಳ್ಳಲು ಬಳಕೆಯಾಗುತ್ತಿರುವ ಹಿನ್ನಲೆಯಲ್ಲಿ ಅದರಲ್ಲೂ ಸೆಲ್ಪೀ ತೆಗೆಯಲು ಬಳಕೆಯಾಗುತ್ತಿರುವ ಹಿನ್ನಲೆಯಲ್ಲಿ ಒಪ್ಪೋ ಸೆಲ್ಫಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ.
ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಒಪ್ಪೋ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಹೂಡಿಕೆಯನ್ನು ಮಾಡಿದ್ದು, ಭಾರತೀಯರ ನರನಾಡಿಯನ್ನು ಅರಿತುಕೊಂಡು ಅವರ ಅವಶ್ಯಕತೆಗೆ ತಕ್ಕಂತೆ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ನಿರತವಾಗಿದೆ. ಇತ್ತೀಚಿನ ದಿನದಲ್ಲಿ ಸ್ಮಾರ್ಟ್‌ಫೋನ್‌ಗಳು ಫೋಟೋ ತೆಗೆದುಕೊಳ್ಳಲು ಬಳಕೆಯಾಗುತ್ತಿರುವ ಹಿನ್ನಲೆಯಲ್ಲಿ ಅದರಲ್ಲೂ ಸೆಲ್ಪೀ ತೆಗೆಯಲು ಬಳಕೆಯಾಗುತ್ತಿರುವ ಕಾರಣ ಒಪ್ಪೋ ಸೆಲ್ಫಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಸದ್ಯ ಒಪ್ಪೋ F3 ಎಂಬ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಫೋನನ್ನು ಸೆಲ್ಪಿ ಏಕ್ಸ್‌ಪರ್ಟ್ ಎಂದು ಕರೆದಿರುವ ಒಪ್ಪೋ ಈ ಫೋನಿನ ಮುಂಭಾಗದಲ್ಲಿ ಸೆಲ್ಫಿಗಾಗಿಯೇ ಡ್ಯುಯಲ್ ಕ್ಯಾಮೆರಾವನ್ನು ನೀಡಿದೆ. ಸದ್ಯ ಟ್ರೆಂಡ್ ಕ್ರಿಯೇಟ್ ಮಾಡಿರುವ ಈ ಫೋನಿನ ವಿಶೇಷತೆಗಳೇನು ಎಂಬುದನ್ನು ಈ ಮುಂದಿನಂತೆ ನೊಡುವ.


ಮುಂಭಾದಲ್ಲೇ ಡ್ಯುಯಲ್ ಕ್ಯಾಮೆರಾ..!!
ಮೊದಲೇ ಹೇಳಿದಂತೆ ಒಪ್ಪೋ F3 ಸೆಲ್ಫಿ ಏಕ್ಸ್‌ಪರ್ಟ್ ಆಗಿದ್ದು, ಇದಕ್ಕಾಗಿಯೇ ಈ ಫೋನಿನ ಮುಂಭಾಗದಲ್ಲಿ ಎರಡು ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಒಂದು 16MP ಕ್ಯಾಮೆರಾ ಆಗಿದ್ದು, ಮತ್ತೊಂದು 13MP ಕ್ಯಾಮೆರಾವಾಗಿದೆ. ಮುಂಭಾಗದಲ್ಲಿ ವೈಡ್ ಆಂಗಲ್ ಲೆನ್ಸ್‌ಗಳನ್ನು ಅಳವಡಿಸಲಾಗಿದ್ದು, ಇದು ಗ್ರೂಪ್ ಸೆಲ್ಫಿಗಳನ್ನು ತೆಗೆದುಕೊಳ್ಳಲು ಸಹಾಯಕಾರಿಯಾಗಿದೆ. ಇದು ನಾರ್ಮಲ್ ಸೆಲ್ಫಿಗಿಂತಲೂ ಡೊಡ್ಡದಾಗಿ ಉತ್ತಮವಾಗಿರಲಿದೆ.

ಈ ಫೋನಿನ ವಿನ್ಯಾಸವೂ ಅದ್ಬುತವಾಗಿದೆ:
ಕೇವಲ ಸೆಲ್ಪೀ ಮಾತ್ರವಲ್ಲ, ಒಪ್ಪೋ F3 ಫೋನಿನ ವಿನ್ಯಾಸ ಸಹ ಉತ್ತಮವಾಗಿದ್ದು, ನೋಡಲು ಮತ್ತು ಕೈನಲ್ಲಿ ಹಿಡಿದುಕೊಂಡ ಸಂದರ್ಭದಲ್ಲಿಯೂ ರಾಯಲ್ ಆಗಿ ಕಾಣಿಸಲಿದೆ. ಮೆಟಾಲಿಕ್ ಬಾಡಿ ಹೊಂದಿದ್ದು, ಪೋನ್ ಬಳಸುತ್ತಿರುವ ಸಂದರ್ಭದಲ್ಲಿ ಕೈ ಜಾರಿ ಕೆಳಗೆ ಬಿಳುವ ಸಾಧ್ಯತೆ ಕಡಿಮೆ ಇದೆ. ಇದಲ್ಲದೇ 5.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದಕ್ಕೆ ಗೊರಿಲ್ಲ ಗ್ಲಾಸ್ 5 ಸುರಕ್ಷತೆಯನ್ನು ಒದಗಿಸಲಾಗಿದೆ.

ಸ್ಮಾರ್ಟ್ ಫಿಂಗರ್ ಪ್ರಿಂಟ್ ಸ್ಕ್ಯಾನರ್:
ಒಪ್ಪೋ F3 ಸ್ಮಾರ್ಟ್‌ಪೋನಿನಲ್ಲಿ ಅಳವಡಿಸಿರುವ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸ್ಮಾರ್ಟ್ ಆಗಿದ್ದು, ಇದು ಹೋಮ್ ಬಟನ್‌ನಂತೆ ಕಾರ್ಯನಿರ್ವಹಿಸಲಿದ್ದು, ಸಾಲಿಡ್ ಫಿಂಗರ್ ಪ್ರಿಂಡ್ ರೀಡರ್ ಇದರಲ್ಲಿದೆ. ವೇಗವಾಗಿ ಕಾರ್ಯನಿರ್ವಹಿಸಲಿದೆ.

ಉತ್ತಮ ಡಿಸ್‌ಪ್ಲೇ:
ಒಪ್ಪೋ F3 ಸ್ಮಾರ್ಟ್‌ಪೋನಿನಲ್ಲಿ 5.5 ಇಂಚಿನ full HD IPS ಮಲ್ಟಿ ಟಚ್ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ವಿಡಿಯೋ ಪ್ಲೇ ಮಾಡುವುದಕ್ಕೇ, ಗೇಮ್ ಆಡುವುದಕ್ಕೆ ಹೇಳಿ ಮಾಡಿಸಿದಂತಿದೆ. ಗೇಮಿಂಗ್ ಸಂದರ್ಭದಲ್ಲಿ ಉಪಯೋಗವಾಗುವಂತೆ ಐ ಪ್ರೋಟೆಕ್ಷನ್ ಅಳವಿಡಿಸಲಾಗಿದೆ. ಗೊರಿಲ್ಲ ಗ್ಲಾಸ್ 5 ಸುರಕ್ಷತೆಯನ್ನು ಇದು ಹೊಂದಿದೆ.

ಆಕ್ಟಾ ಕೋರ್ ಪ್ರೋಸೆಸರ್, 4GB RAM:
ಒಪ್ಪೋ F3 ಸ್ಮಾರ್ಟ್‌ಪೋನಿನಲ್ಲಿ ಆಕ್ಟಾ ಕೋರ್ ಮಿಡಿಯಾ ಟೆಕ್ ಪ್ರೋಸೆಸರ್, 4GB RAM ಅಳವಡಿಸಲಾಗಿದ್ದು, ಇದು ಫೋನಿನ ವೇಗವನ್ನು ಅತೀಯಾಗಿಸಲಿದೆ. ಒಂದೇ ಸಮಯದಲ್ಲಿ ಹಲವು ಆಪ್‌ಗಳನ್ನು ಉಪಯೋಗಿಸಿದರು ಫೋನ್ ಹ್ಯಾಂಗ್ ಆಗುವುದಿಲ್ಲ ಎನ್ನಲಾಗಿದೆ. 64 GB ಇಂಟರ್ನಲ್ ಮೆಮೊರಿ ಇದ್ದು, ಮೆಮೊರಿ ಕಾರ್ಟ್ ಹಾಕುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.


Click it and Unblock the Notifications