ಕೇವಲ 10 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವ 5G ಮೊಬೈಲ್‌ಗಳಿವು!: ಕೈಗೆಟುಕುವ ಬೆಲೆ, ಬೊಂಬಾಟ್ ಫೀಚರ್ಸ್
ನಾವು ಮೊಬೈಲ್(Smartphones) ಖರೀದಿಸುವಾಗ ಫೀಚರ್‌ಗಳ(Features) ಬಗ್ಗೆ ಹೆಚ್ಚು ಗಮನಹರಿಸುತ್ತೇವೆ. ಉತ್ತಮ ಕ್ಯಾಮೆರಾ(Camera) , ಬ್ಯಾಟರಿ(Battery) ಬ್ಯಾಕಪ್, OS ಶಕ್ತಿಶಾಲಿಯಾಗಿರಬೇಕು ಇತ್ಯಾದಿಗಳನ್ನು ನೋಡುತ್ತೇವೆ. ಇದಲ್ಲದೇ, ಈ ಸ್ಮಾರ್ಟ್‌ಫೋನ್ ಬೇಗನೆ ಚಾರ್ಜ್ ಆಗುತ್ತಾ? ಅನ್ನೋ ಡೌಟ್ ಇರುತ್ತೆ. ದುಬಾರಿ ಹಣ ತೆತ್ತು ಸ್ಪೀಡಾಗಿ ಚಾರ್ಜ್ ಆಗುವ ಫೋನ್‌ನನ್ನೇ(Fast Charging Phones) ಖರೀದಿಸುತ್ತೇವೆ. ಅಂತವರು ಈ ಸುದ್ದಿ ಓದಲೇಬೇಕು.
ಬಹುತೇಕರಿಗೆ, ಯಾವ ಮೊಬೈಲ್ ಬೇಗ ಚಾರ್ಜ್ ಆಗಬಲ್ಲದು. ಸ್ಮಾರ್ಟ್‌ಫೋನ್ ಖರೀದಿಸುವಾಗ ಯಾವ ಫೀಚರ್ ಬಗ್ಗೆ ಗಮನಹರಿಸಬೇಕು ಎಂಬ ಐಡಿಯಾ ಇಲ್ಲ. ಇದೀಗ, ಗಂಟೆಗಟ್ಟಲೆ ಮೊಬೈಲ್ ಚಾರ್ಜ್ ಮಾಡುವ ಅಗತ್ಯವಿಲ್ಲ. ಅಂತಹ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮಗಾಗಿ, ನಾವು ಸ್ಪೀಡ್ ಆಗಿ ಚಾರ್ಜ್ ಆಗುವ ಮೊಬೈಲ್‌ಗಳ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ. ಮುಂದೆ ಓದಿ.

ಈ ಮೊಬೈಲ್‌ಗಳು ಕೇವಲ 10 ರಿಂದ 19 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತವೆ. ವಾವ್ ಈ ರೀತಿಯ ಮೊಬೈಲ್‌ಗಳು ಇವೆಯೇ? ಹೌದು, 10 ನಿಮಿಷಗಳಲ್ಲಿ ಫೋನ್‌ಗಳು ಶೂನ್ಯದಿಂದ 100% ವರೆಗೆ ಚಾರ್ಜ್ ಆಗುತ್ತವೆ. ಈ ಪೈಕಿ ನಾವು 120w ವೇಗದ ಚಾರ್ಜಿಂಗ್ ಹೊಂದಿರುವ ಟಾಪ್ ಮೊಬೈಲ್‌ಗಳೂ, ಅವುಗಳ ಬೆಲೆ, ಕ್ಯಾಮೆರಾ, ಸ್ಟೋರೇಜ್ ಇತ್ಯಾದಿಗಳ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತೇವೆ. ಆ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ ನೋಡಿ.
Redmi Note 13 Pro+: ಇದು 5000 mAh ಬ್ಯಾಟರಿ ಹೊಂದಿದ್ದು, 120w ಹೈಪರ್‌ಚಾರ್ಜ್‌ನಿಂದ ಬೆಂಬಲಿತವಾಗಿದೆ. ಈ ಮೊಬೈಲ್ ಕೇವಲ 19 ನಿಮಿಷಗಳಲ್ಲಿ ಶೂನ್ಯದಿಂದ 100% ವರೆಗೆ ಚಾರ್ಜ್ ಆಗುತ್ತದೆ. ಇದು 8GB RAM ಹಾಗೂ 256GB ಸ್ಟೋರೇಜ್ ಹೊಂದಿದೆ. 200-ಮೆಗಾಪಿಕ್ಸೆಲ್ ಕ್ಯಾಮೆರಾ, ಜಲನಿರೋಧಕ ಫೀಚರ್ ಮತ್ತು 120 Hz ರಿಫ್ರೆಶ್ ರೇಟ್‌ನೊಂದಿಗೆ 3D ಕರ್ವ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದರ ಬೆಲೆ 30,999 ರೂಪಾಯಿ. ಅಮೇಜಾನ್‌ನಲ್ಲಿ ಈ ಮೊಬೈಲ್ ಮೇಲೆ 3,000 ಕ್ಯಾಶ್‌ಬ್ಯಾಕ್ ಪಡೆಯಬಹುದು.
Motorola Edge 50 Pro: ಇದು 125W ಟರ್ಬೊ ಪವರ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. Flipkartನಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ 35,999 ರೂಪಾಯಿ. ಈ ಫೋನ್ ಮೇಲೆ ನೀವು ಕ್ಯಾಶ್‌ಬ್ಯಾಕ್ ಪಡೆಯಬಹುದು.ಈ ಫೋನ್ 144 Hz ರೇಟಿಂಗ್‌ನೊಂದಿಗೆ 6.7-ಇಂಚಿನ 1.5 POLED ಕರ್ವ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಗುಣಮಟ್ಟದ ಕ್ಯಾಮೆರಾ ಸೆಟಪ್ ಸಹ ಹೊಂದಿದ್ದು, AIನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಈ ಮೊಬೈಲ್ 12GB RAM, 256GB ಸ್ಟೋರೇಜ್ ಹೊಂದಿದೆ.
IQOO Neo 9 Pro: ಈ IQOO Neo 9 Pro ಮೊಬೈಲ್ 129W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಲಭ್ಯವಿದೆ. ಇದು 5160mAh ಬ್ಯಾಟರಿ ಹೊಂದಿದೆ. ಈ ಫೋನ್ ಶಕ್ತಿಯುತ ಪ್ರೊಸೆಸರ್, ಗುಣಮಟ್ಟದ ಕ್ಯಾಮೆರಾ ಸೆಟಪ್ ಮತ್ತು ಶಕ್ತಿಯುತ ಪ್ರೊಸೆಸರ್ ಹೊಂದಿದೆ. 6.78-ಇಂಚಿನ LTPO AMOLED ಡಿಸ್ಪ್ಲೇ ಹಾಗೂ 144 Hz ರಿಫ್ರೆಶ್ ರೇಟ್ ಹೊಂದಿದೆ. 8GB ಸ್ಟೋರೇಜ್ ಮೊಬೈಲ್ ದರ 34,999 ರೂ. ಇದೆ.
IQOO 12 G5: ಇದು 120W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. 5000mAh ಬ್ಯಾಟರಿ ಲಭ್ಯವಿದೆ. 12GB RAM, 256GB ಸ್ಟೋರೇಜ್‌ನಲ್ಲಿ ಈ ಮೊಬೈಲ್ ಲಭ್ಯವಿದೆ. Amazonನಲ್ಲಿ 52,999 ರೂ.ಗೆ ಈ ಮೊಬೈಲ್ ಖರೀದಿಸಬಹುದು. ಇದು 6.78 ಇಂಚಿನ LTPO AMOLED ಡಿಸ್ಪ್ಲೇ ಹಾಗೂ 144Hz ರಿಫ್ರೆಶ್ ರೇಟ್ ಹೊಂದಿದೆ. ಇದು ಉತ್ತಮ ಕ್ಯಾಮೆರಾ ಸೆಟಪ್ ಮತ್ತು ಶಕ್ತಿಶಾಲಿ ಪ್ರೊಸೆಸರ್ ಅನ್ನು ಹೊಂದಿದೆ.
iQOO Neo 7 Pro 5G: ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ಇದು ವೇಗದ ಚಾರ್ಜಿಂಗ್‌ಗಾಗಿ 120W ಫ್ಲಾಶ್ ಚಾರ್ಜ್ ಅನ್ನು ಬೆಂಬಲಿಸುತ್ತದೆ. ಈ ಮೊಬೈಲ್ ಸಂಪೂರ್ಣವಾಗಿ ಚಾರ್ಜ್ ಆಗಲು ಕೇವಲ 25 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. 8GB RAM, 128GB ಹೊಂದಿರು ಮೊಬೈಲ್ ಲಭ್ಯವಿದೆ. ಅಮೆಜಾನ್‌ನಲ್ಲಿ 29,999 ರೂ.ಗೆ ಈ ಮೊಬೈಲ್ ಖರೀದಿಸಬಹುದು.


Click it and Unblock the Notifications








