Smartphones: ಭಾರತದಲ್ಲಿ ಈ ವಾರ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳಿವು ! ಬೆಲೆ, ಲಭ್ಯತೆ ಮಾಹಿತಿ ತಿಳಿಯಿರಿ
ಮಾರುಕಟ್ಟೆಯಲ್ಲಿ ವಿವಿಧ ಸಂಸ್ಥೆಯ ಹಲವು ಬಗೆಯ ಸಮಾರ್ಟ್‌ಫೋನ್‌ಗಳು (Smartphones) ಪ್ರತೀ ತಿಂಗಳು ಲಾಂಚ್ ಆಗುತ್ತಲೇ ಇರುತ್ತವೆ ಪ್ರತೀ ಮೊಬೈಲ್ ಸಂಸ್ಥೆಯೂ ತನ್ನದೇ ಆದ ವಿಭಿನ್ನ ಫೀಚರ್ಸ್ ಜೊತೆಗೆ ಅಪ್ಡೇಟೆಡ್ ಸರಣಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದು ನಿರಂತರ ಪ್ರಕ್ರಿಯೆಯಾಗಿದೆ.
ನಾವು ಈ ತಿಂಗಳಿನಲ್ಲಿ ಈಗಾಗಲೇ ಗೂಗಲ್ ಪಿಕ್ಸೆಲ್ 8a, ರಿಯಲ್‌ಮಿ GT 6T, ಪೋಕೋ F6 5G ಮತ್ತು ಇನ್ಫಿನಿಟಿ GT 20 Pro ವರೆಗಿನ ಹಲವಾರು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿರುವುದನ್ನು ಗಮನಿಸಿದ್ದೇವೆ. ಆದರೂ ಈ ತಿಂಗಳಿನಲ್ಲಿ ಬಿಡುಗಡೆಯಾಗುವ ಮೊಬೈಲ್‌ಗಳ ಸರಣಿ ಇಲ್ಲಿಗೆ ನಿಂತಿಲ್ಲ, ಈ ತಿಂಗಳಿನ ಅಂತ್ಯದಲ್ಲಿ ಅಂದರೆ ಈ ವಾರ ಬಿಡುಗಡೆಯಾಗಲಿರುವ ಕೆಲವು ಪ್ರಮುಖ ಮೊಬೈಲ್ ಕುರಿತಾದ ಮಾಹಿತಿ ಇಲ್ಲಿದೆ.

ಈ ವಾರದಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಮೊಬೈಲ್‌ಗಳ ಸರಣಿಯನ್ನು ನೋಡುವುದಾದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G (Samsung Galaxy F55 5G), ರಿಯಲ್‌ಮಿ ನಾರ್ಜೋ N65 5G (Realme Narzo N65 5G), ಮೋಟೋ G04s (Moto G04s) ಈ ವಾರ ಬಿಡುಗಡೆಯಾಗಲಿರುವ ಪ್ರಮುಖ ಮೊಬೈಲ್‌ಗಳಾಗಿವೆ.
ಭಾರತದಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಮಾಹಿತಿ:
ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G: ಇದೇ ಮೇ 27ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ, ಇದು ಸ್ನಾಪ್‌ಡ್ರಾಗನ್ 7 Gen 1 SoC ಜೊತೆಗೆ 8GB RAM ಮತ್ತು 256GB ಸ್ಟೋರೆಜ್ ಸಾಮರ್ಥ್ಯ ಹೊಂದಿದ್ದು. ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ ಅವಕಾಶವನ್ನು ಕೂಡ ನೀಡಲಾಗಿದೆ. ಇನ್ನು ಈ ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ ಫುಲ್ ಹೆಚ್‌ಡಿ + ಅಮೋಲ್ಡ್ (AMOLED) ಡಿಸ್‌ಪ್ಲೇ ಹೊಂದಿರಲಿದೆ. ಈ ಫೋನಿ 30,000 ರೂ. ಆರಂಭಿಕ ಬೆಲೆ ಹೊಂದಿರಲಿದೆ ಎಂದು ಸಂಸ್ಥೆ ತಿಳಿಸಿದೆ.
ರಿಯಲ್‌ಮಿ ನಾರ್ಜೋ N65 5G: ಮೇ 28 ರಂದು ಮಧ್ಯಾಹ್ನ 12 ಗಂಟೆಗೆ ಈ ಮೊಬೈಲ್ ಲಾಂಚ್ ಆಗಲಿದ್ದು, ಇದು ಈ ಸಂಸ್ಥೆ ಬಿಡುಗಡೆ ಮಾಡಲಿರುವ ಅತ್ಯಂತ ಕಡಿಮೆ ಬೆಲೆಯ 5G ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿರಲಿದೆ ಎಂದು ಊಹಿಸಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ಗಳು ಈಗಾಗಲೆ ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 5G ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಈ ಫೋನ್ ಧೂಳಿನಿಂದ ರಕ್ಷಣೆ ಪಡೆಯಲು IP54 ರೇಟಿಂಗ್ ತಂತ್ರಜ್ಞಾನ ಹೊಂದಿರಲಿದೆ ಎಂದು ತಿಳಿದು ಬಂದಿದೆ.
ಮೋಟೋ G04s: ಮೇ 30 ರಂದು ಮೊಟೊರೊಲಾ ಸಂಸ್ಥೆಯು ತನ್ನ ಮೋಟೋ G04s ಮೊಬೈಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದ್ದು, ಅಲ್ಲಿ ಮೀಸಲಾದ ಮೈಕ್ರೋಸೈಟ್‌ನಲ್ಲಿ ಈಗಾಗಲೇ ಲೈವ್ ನೀಡಲಾಗಿದೆ. ಮುಂದೆ ಬರಲಿರುವ ಈ ಫೋನ್‌ನ ಬೆಲೆ 10,000 ರೂ. ಗಳಿಗಿಂತ ಕಡಿಮೆ ಇರುವ ನಿರೀಕ್ಷೆ ಇದೆ. ಜೊತೆಗೆ ಈ ಮೊಬೈಲ್ 5,000mAh ಬ್ಯಾಟರಿ ಜೊತೆಗೆ 102 ಗಂಟೆಗಳ ನಿರಂತ ಸಂಗೀತ ಕೇಳುವ ಹಾಗೂ 20 ಗಂಟೆಗಳ ವಿಡಿಯೋ ವೀಕ್ಷಿಸುವಷ್ಟು ಗುಣಮಟ್ಟದ ಬ್ಯಾಟರಿ ಸೌಲಭ್ಯ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.
ಇದರ ಜೊತೆಗೆ ವಿವೋ ಸಂಸ್ಥೆ ಕೂಡ ಮೇ 30 ರಂದು ಚೀನಾದಲ್ಲಿ ವಿವೋ S19 ಸರಣಿಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆದರೆ ಸದ್ಯಕ್ಕೆ ಈ ಮೊಬೈಲ್‌ನ ಜಾಗತಿಕ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ.


Click it and Unblock the Notifications








