Home
ಮೊಬೈಲ್

ಹಬ್ಬದ ವೇಳೆ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೊಂದು ದಾಖಲೆ!

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ 2025ರ ಮೂರನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಸ್ವಲ್ಪ ಬೆಳವಣಿಗೆಯನ್ನು ಕಂಡಿದೆ. ಈ ಅವಧಿಯಲ್ಲಿ ದೇಶದ ಸ್ಮಾರ್ಟ್‌ಫೋನ್ ಸಾಗಣೆಗಳು ಕಳೆದ ವರ್ಷದ ಅದೇ ಅವಧಿಯ ಹೋಲಿಕೆಯಲ್ಲಿ 5 ಶೇಕಡಾ ಹೆಚ್ಚಳವಾಗಿದೆ. ಈ ಬೆಳವಣಿಗೆಯ ಮುಖ್ಯ ಕಾರಣವಾಗಿದ್ದು, ₹30,000 ಕ್ಕಿಂತ ಮೇಲಿನ ಪ್ರೀಮಿಯಂ ಫೋನ್‌ಗಳ ಮೇಲಿನ ಬೇಡಿಕೆ ಎಂದು ಪ್ರಖ್ಯಾತ ಕೌಂಟರ್ಪಾಯಿಂಟ್ ರಿಸರ್ಚ್ (Counterpoint Research) ಪ್ರಕಟಿಸಿರುವ ತಾಜಾ ವರದಿಯು ತಿಳಿಸಿದೆ. ಈ ವರದಿಯು ದೇಶದ ಮೊಬೈಲ್ ಮಾರುಕಟ್ಟೆಯಲ್ಲಿನ ಹೊಸ ದಿಕ್ಕನ್ನು ಗುರುತಿಸಿದೆ.!

ಹೌದು, ಕೌಂಟರ್ಪಾಯಿಂಟ್‌ನ ಮಂತ್ಲಿ ಇಂಡಿಯಾ ಸ್ಮಾರ್ಟ್‌ಫೋನ್ ಟ್ರ್ಯಾಕರ್ ವರದಿಯ ಪ್ರಕಾರ, ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ವಾರ್ಷಿಕ ಶೇಕಡಾ 5 ರಷ್ಟು ಮತ್ತು ಮೌಲ್ಯದ ಪ್ರಕಾರ 18 ಶೇಕಡಾ ಏರಿಕೆ ಕಂಡಿದೆ. ಇದು ಇದುವರೆಗಿನ ದಾಖಲೆ ಮಟ್ಟದ ತ್ರೈಮಾಸಿಕ ಬೆಳವಣಿಗೆ ಎಂದು ಹೇಳಿದೆ. ಈ ಹಬ್ಬದ ಸೀಸನ್ನ ಸುಲಭ EMI ಆಯ್ಕೆಗಳು ಮತ್ತು ಕಡಿಮೆ ಬಡ್ಡಿದರಗಳು ಗ್ರಾಹಕರನ್ನು ಹೊಸ ಫೋನ್ ಖರೀದಿಗೆ ಪ್ರೇರೇಪಿಸಿವೆ. ಆಪಲ್ ತನ್ನ ಮಾರುಕಟ್ಟೆ ಹಂಚಿಕೆಯನ್ನು ಶೇ.7 ರಿಂದ ಶೇ.9 ಕ್ಕೆ ಹೆಚ್ಚಿಸಿಕೊಂಡು, ಮೊದಲ ಬಾರಿಗೆ ಟಾಪ್ 5 OEM (Original Equipment Manufacturer) ಪಟ್ಟಿಗೆ ಸೇರಿದೆ.

ಈ ವರದಯು ಹೇಳಿರುವಂತೆ, ಪ್ರಸ್ತುತ ದೇಶದಲ್ಲಿ ಮೌಲ್ಯದ ಪ್ರಕಾರ ಪ್ರಕಾರ ಆಪಲ್ ಮಾರುಕಟ್ಟೆ ಹಂಚಿಕೆಯು ಈಗ 28 ಶೇಕಡಕ್ಕೆ ತಲುಪಿದೆ.ಸ್ಯಾಮ್ಸಂಗ್ ಕಂಪೆನಿಯು 23 ಶೇಕಡಾ ಮೌಲ್ಯ ಹಂಚಿಕೆಯಿಂದ ಎರಡನೇ ಸ್ಥಾನದಲ್ಲಿದೆ. ಆಪಲ್‌ನ ಕಳೆದ ವರ್ಷದ iPhone 16 ಮತ್ತು iPhone 15 ಸರಣಿಗಳು ಇನ್ನೂ ಬಲವಾದ ಮಾರಾಟವನ್ನು ಮುಂದುವರೆಸುತ್ತಿದ್ದು, ಹೊಸ iPhone 17 ಸರಣಿಯು ಆರಂಭಿಕ ಹಂತದಲ್ಲೇ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇತ್ತ ಸ್ಯಾಮ್ಸಂಗ್ನ Galaxy S ಸರಣಿ, AI ವೈಶಿಷ್ಟ್ಯಗಳನ್ನೊಳಗೊಂಡ Galaxy A ಸರಣಿ, ಹಾಗೂ ಹೊಸ Galaxy Z Fold 7 ಮಾದರಿಗಳು ಉತ್ತಮ ಮಾರಾಟ ಕಂಡಿವೆ.

ಹಬ್ಬದ ವೇಳೆ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೊಂದು ದಾಖಲೆ!

ಈ ವರದಿಯು iQOO ಮತ್ತು Vivo ಕಂಪೆನಿಗಳು ವೇಗದ ಬೆಳವಣಿಗೆ ಸಾಧಿಸುತ್ತಿರುವುದನ್ನು ಗುರುತಿಸಿದೆ. Vivo ಉಪಬ್ರಾಂಡ್ iQOO 2025ರ Q3 ನಲ್ಲಿ 54 ಶೇಕಡಾ ವಾರ್ಷಿಕ ಬೆಳವಣಿಗೆ ಸಾಧಿಸಿದೆ. ಗೇಮಿಂಗ್‌ಕೇಂದ್ರೀಕೃತ ಉತ್ಪನ್ನಗಳ ವಿಸ್ತರಣೆಯು ಇದಕ್ಕೆ ನೆರವಾಗಿದೆ. Vivo ಸ್ವತಃ 20 ಶೇಕಡಾ ಹಂಚಿಕೆಯನ್ನು ಕಾಯ್ದುಕೊಂಡಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ ಸಮತೋಲನದಿಂದ ಲಾಭ ಪಡೆದಿದೆ. ಮೋಟೊರೊಲಾ (Motorola) ತನ್ನ G ಮತ್ತು Edge ಸರಣಿಯ ಯಶಸ್ಸಿನಿಂದ 53 ಶೇಕಡಾ ವೃದ್ಧಿ ದಾಖಲಿಸಿದೆ. ಫೀಚರ್ ಫೋನ್ ವಿಭಾಗದಲ್ಲಿ ಇಟೆಲ್ (Itel) ತನ್ನ ಮುನ್ನಡೆಯನ್ನು ಮುಂದುವರೆಸಿದೆ.

ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಹೆಚ್ಚು ಗುರಿಯಾಗದ್ದ ₹10,000 ಒಳಗಿನ ವಿಭಾಗದಲ್ಲಿ ಈಗ ಭಾರತೀಯ ಬ್ರ್ಯಾಂಡ್ ಲಾವಾ (Lava) ಶೇ 135 ಶೇಕಡಾ ಬೆಳವಣಿಗೆ ಕಂಡು ದೇಶೀಯ ಮಾರುಕಟ್ಟೆಯಲ್ಲಿ ಗಮನಸೆಳೆಯುತ್ತಿದೆ. ಲಾವಾ ಕಂಪೆನಿಯು ₹15,000 ಒಳಗಿನ ವಿಭಾಗದಲ್ಲಿಯೂ ಸಹ ಎರಡನೇ ಸ್ಥಾನವನ್ನು ಗಳಿಸಿದೆ. ದೇಶದಲ್ಲಿ ಚಿಪ್ ವಿಭಾಗದಲ್ಲಿ ವಿಭಾಗದಲ್ಲಿ ಮೀಡಿಯಾಟೆಕ್ (MediaTek) 46 ಶೇಕಡಾ ಹಂಚಿಕೆಯೊಂದಿಗೆ ಮುಂಚೂಣಿಯಲ್ಲಿದ್ದು, ಕ್ವಾಲ್ಕಾಮ್ (Qualcomm) 29 ಶೇಕಡಾ ಹಂಚಿಕೆಯಿಂದ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಬಹುತೇಕ ಕಂಪೆನಿಗಳು ಮೀಡಿಯಾಟೆಕ್ ಬಳಕೆಯಲ್ಲಿವೆ.

ಒಟ್ಟಾರೆಯಾಗಿ, ಕೌಂಟರ್ಪಾಯಿಂಟ್ ರಿಸರ್ಚ್ ವರದಿಯು ಪ್ರಕಟಿಸಿರುವ 2025ರ ಮೂರನೇ ತ್ರೈಮಾಸಿಕವು ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಹೊಸ ದಿಕ್ಕನ್ನು ತೋರಿಸಿದೆ ಎನ್ನಬಹುದು. ಈ ವರದಿಯಿಂದ ನಾವು, ದೇಶದ ಗ್ರಾಹಕರು ಈಗ ಬೆಲೆಯಿಗಿಂತ ಮೌಲ್ಯ ಮತ್ತು ತಂತ್ರಜ್ಞಾನವನ್ನು ಹೆಚ್ಚು ಮಹತ್ವ ನೀಡುತ್ತಿದ್ದಾರೆ ಎಂಬುದನ್ನು ಗಮನಿಸಬಹುದು. ಪ್ರೀಮಿಯಂ ಫೋನ್‌ಗಳತ್ತ ಬೆಳೆಯುತ್ತಿರುವ ಈ ಬೇಡಿಕೆ, ಭಾರತದ ಮಾರುಕಟ್ಟೆಯನ್ನು ಮೌಲ್ಯ ಆಧಾರಿತ ಸಾಧನಗಳನ್ನು ಪ್ರೇರೇಪಿಸುತ್ತಿದೆ. ಇದು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಪೈಪೋಟಿ ಉಂಟುಮಾಡುವ ವೇದಿಕೆಯನ್ನು ಸೃಷ್ಠಿಸುತ್ತಿರಬಹುದು.

Best Mobiles in India

English summary
According to Counterpoint's Monthly India Smartphone Tracker report, the smartphone market in India grew by 5 percent year-on-year and 18 percent in value terms. This is the highest quarterly growth ever. Easy EMI options and low interest rates this festive season have encouraged consumers to buy new phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+