ಫಿಫಾ ವರ್ಲ್ಡ್‌ಕಪ್ ರಂಗು ಹೆಚ್ಚಿಸಲಿರುವ 5 ಬೆಸ್ಟ್ ಆಂಡ್ರಾಯ್ಡ್ ಆಪ್

Written By:

ನಮ್ಮ ಹಲವಾರು ವರ್ಷಗಳ ಕನಸು ನನಸಾಗಿ ವಿಶ್ವವೆಲ್ಲಾ ಒಂದೇ ಒಂದು ಮಾಧ್ಯಮದ ಮೇಲೆ ತಮ್ಮ ಕಣ್ಣು ನೆಡುವ ಕಾಲ ಬಂದಾಯಿತು. ಹೌದು ಫಿಫಾ ವರ್ಲ್ಡ್‌ಕಪ್ ಆರಂಭಕ್ಕೆ ಇನ್ನು ಕ್ಷಣಗಣನೆ ಮಾತ್ರ.

ಈ ಬಾರಿಯ 20 ನೇ ಫಿಫಾ ವಲ್ಡ್‌ಕಪ್ ಬ್ರೆಜಿಲ್‌ನಲ್ಲಿ ಆರಂಭಗೊಳ್ಳಲಿದೆ. ಜೂನ್ 12 ರಿಂದ 13 ರವರೆಗೆ ನಡೆಯಲಿರುವ ಈ ಪಂದ್ಯಾವಳಿ ಫುಟ್ಬಾಲ್ ಪ್ರೇಮಿಗಳಿಗೆ ತಸದೌತಣವನ್ನೇ ಉಣಬಡಿಸಲಿದೆ. ಎರಡನೆಯ ಬಾರಿಗೆ ಬ್ರೆಜಿಲ್ ಈ ಪಂದ್ಯವನ್ನು ಹೋಸ್ಟ್ ಮಾಡುತ್ತಿದ್ದು ಈ ಆಟವು 1950 ರಲ್ಲಿ ಪ್ರಾರಂಭಗೊಂಡಿತ್ತು.

ವಿಶ್ವ ಚಾಂಪಿಯನ್ ತಂಡಗಳು ಈ ಬಾರಿಯ ಫುಟ್ಬಾಲ್ ಪಂದ್ಯಾಟದಲ್ಲಿ ಪಾಲ್ಗೊಳ್ಳುತ್ತಿದ್ದು ಆಟದ ನಶೆಯನ್ನು ಇನ್ನಷ್ಟು ಏರಿಸಲಿದೆ. ಸ್ಪೇನ್ ಈಗಾಗಲೇ ಪ್ರಸ್ತುತ ಚಾಂಪಿಯನ್ ಸ್ಥಾನದಲ್ಲಿದ್ದು, ನೆದರ್‌ಲ್ಯಾಂಡ್ ಅನ್ನು 1-0 ಅಂತರದಲ್ಲಿ ಸೋಲಿಸಿತ್ತು.

ಆಫೀಸಿನ ಜಂಜಾಟದಲ್ಲಿ ಕೆಲವೊಮ್ಮೆ ನೀವು ಪಂದ್ಯಾಟದ ಕೆಲವೊಂದು ಮುಖ್ಯವಾದ ಗೋಲುಗಳನ್ನು ತಪ್ಪಿಸಿಕೊಂಡಿರಬಹುದು. ಆ ಸಮಯದಲ್ಲಿ ನಿಮ್ಮ ಸಹಾಯಕ್ಕೆ ಬರುವುದು ಮೊಬೈಲ್. ಹೌದು ಮೊಬೈಲ್‌ನಲ್ಲೂ ನೀವು ಆಟದ ಕೆಲವೊಂದು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು ಯಾವುದೇ ಶೋಟ್ ಅನ್ನು ಕೂಡ ಮಿಸ್ ಮಾಡದೇ ನಿಮಗೆ ಫುಟ್ಬಾಲ್ ಆಟವನ್ನು ವೀಕ್ಷಿಸಬಹುದು.

ಹಾಗಿದ್ದರೆ ಆ ಅಪ್ಲಿಕೇಶನ್‌ಗಳು ಯಾವುವು ಎಂಬುದು ನಿಮ್ಮ ಕುತೂಹಲವಾಗಿದ್ದರೆ ಅದನ್ನು ತಣಿಸುವ ಜವಬ್ದಾರಿ ನಮ್ಮದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫಿಫಾ ವರ್ಲ್ಡ್‌ಕಪ್ 2014 ಬ್ರೆಜಿಲ್: ESPN FC Soccer & World Cup

#1

ಐಓಎಸ್ ಮತ್ತು ಆಂಡ್ರಾಯ್ಡ್ ಬೆಂಬಲಿತ ಫೋನ್‌ಗಳಿಗೆ ESPN ಅಪ್ಲಿಕೇಶನ್ ಲಭ್ಯವಿದ್ದು ಇದನ್ನು ಫುಟ್ಬಾಲ್‌ಗಾಗಿ ಮರುವಿನ್ಯಾಸಗೊಳಿಸಿ ಮರುಸ್ಥಾಪಿಸಲಾಗಿದೆ. ನಿಮ್ಮ ಮೆಚ್ಚಿನ ತಂಡವನ್ನು ಇದರಲ್ಲಿ ನಿಮಗೆ ಸೆಟ್ ಮಾಡಬಹುದಾಗಿದ್ದು ತಂಡದ ಕುರಿತಾದ ಪ್ರತಿಯೊಂದು ಸುದ್ದಿ ಕೂಡ ನಿಮ್ಮನ್ನು ತಲುಪುತ್ತದೆ.

ಫಿಫಾ ವರ್ಲ್ಡ್‌ಕಪ್ 2014 ಬ್ರೆಜಿಲ್: BBC Sport

#2

ಬಿಬಿಸಿ ಕೂಡ ತನ್ನ ಅಪ್ಲಿಕೇಶನ್ ಅನ್ನು ಫಿಫಾಕ್ಕಾಗಿ ಅಪ್‌ಗ್ರೇಡ್ ಮಾಡಿದ್ದು ನಿಜಕ್ಕೂ ಇದು ಸಂತೋಷಕರವಾದ ಸುದ್ದಿಯಾಗಿದೆ. ತಮ್ಮ ತಂಡದ ಬಗೆಗಿನ ಪ್ರತಿಯೊಂದು ರೋಮಾಂಚಕ ಸುದ್ದಿಯನ್ನು ಈ ಆಪ್ ಮುಖಾಂತರ ಫುಟ್ಬಾಲ್ ಪ್ರೇಮಿಗಳು ತಮ್ಮ ಫೋನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಆಂಡ್ರಾಯ್ಡ್ ಮತ್ತು ಐಓಎಸ್‌ಗಳಿಗೆ ಈ ಅಪ್ಲಿಕೇಶನ್ ಲಭ್ಯವಿದೆ.

ಫಿಫಾ ವರ್ಲ್ಡ್‌ಕಪ್ 2014 ಬ್ರೆಜಿಲ್: Official FIFA ಅಪ್ಲಿಕೇಶನ್

#3

ನೀವು ಈ ವರ್ಷದ ಅನ್‌ಅಫಿಶೀಯಲ್ ಎಂದೇ ಖ್ಯಾತಿವೆತ್ತಿರುವ ಆಪ್ ಕುರಿತು ಹೆಚ್ಚು ಕಾಳಜಿಯನ್ನು ವಹಿಸಿದ್ದೀರೆಂದರೆ Official FIFA ಅಪ್ಲಿಕೇಶನ್ ಅನ್ನು ನಿಮಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಲ್ಲವೇ? ಇದು ನಿಮ್ಮ ಫುಟ್ಬಾಲ್ ಹುಚ್ಚಿಗೆ ಒಳ್ಳೆಯ ಜೋಡಿಯಾಗಿದೆ.

ಆಂಡ್ರಾಯ್ಡ್ ಮತ್ತು ಐಓಎಸ್‌ಗಳಿಗೆ ಈ ಅಪ್ಲಿಕೇಶನ್ ಲಭ್ಯವಿದೆ

ಫಿಫಾ ವರ್ಲ್ಡ್‌ಕಪ್ 2014 ಬ್ರೆಜಿಲ್: SecondMic

#4

ನೀವು ಕೇಳಲು ಇಷ್ಟಪಡದೇ ಇರುವ ಅದೇ ಕಮೆಂಟ್ರಿಯನ್ನು ಕಮಂಟ್ರೇಟರ್‌ನಿಂದ ಕೇಳಿ ಕೇಳಿ ನಿಮಗೆ ಬೇಜಾರಾಗಿದೆಯೇ? ಹಾಗಿದ್ದರೆ ನಿಮ್ಮ ಬೇಸರವನ್ನು ನೀಗಿಸಲು ಸಹಕಾರಿಯಾಗಿದೆ ಈ SecondMic ಅಪ್ಲಿಕೇಶನ್. ಫಾರ್ಮ್್ನಲ್ಲಿರುವ ಆಟಗಾರರು, ಪ್ಲೇಯರ್‌ಗಳು, ನುರಿತರು ಹೀಗೆ ಪಂದ್ಯಾವಳಿಯಾದ್ಯಂತ ಈ ಆಪ್ ನಿಮ್ಮ ಆಸಕ್ತಿಯನ್ನು ಹಸಿಯಾಗಿರಿಸುತ್ತದೆ. ಐಓಎಸ್ ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ.

ಫಿಫಾ ವರ್ಲ್ಡ್‌ಕಪ್ 2014 ಬ್ರೆಜಿಲ್: FootballAlbum

#5

ನಿಮ್ಮ ಆಂಡ್ರಾಯ್ಡ್ ಮತ್ತು ಐಓಎಸ್‌ಗಳಿಗೆ ಲಭ್ಯವಿರುವ FootballAlbum ಫುಟ್ಬಾಲ್ ಅನ್ನು ಆಧರಿಸಿ ಮಾಹಿತಿಯನ್ನೊದಗಿಸುವ ಅಪ್ಲಿಕೇಶನ್ ಆಗಿದೆ. ನಿಮ್ಮನ್ನು ಈ ಅಪ್ಲಿಕೇಶನ್ ಅಂತರಾಷ್ಟ್ರೀಯ ಫುಟ್ಬಾಲ್ ಸ್ಟಿಕ್ಕರ್‌ನ್ನಾಗಿ ಕೂಡ ಮಾರ್ಪಡಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot