ಬಿಟ್ ಕಾಯಿನ್ ವ್ಯವಹಾರಕ್ಕಾಗಿಯೇ ಡಿಸೈನ್ ಮಾಡಿದ ವಿಶ್ವದ ಫಸ್ಟ್ ಸ್ಮಾರ್ಟ್‌ಫೋನ್..!
ಮಾರುಕಟ್ಟೆಯಲ್ಲಿ ಬಿಟ್ ಕಾಯಿನ್ ಹವಾ ಹೆಚ್ಚುಗುತ್ತಿರುವ ಸಂದರ್ಭದಲ್ಲಿ ಮಾರುಕಟ್ಟೆಗೆ ಬ್ಲಾಕ್ ಚೈನ್ ವ್ಯವಸ್ಥೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್‌ವೊಂದು ಲಾಂಚ್ ಆಗಿದೆ. ಮೊಬೈಲ್ ಮೂಲಕವೇ ಕ್ರಿಪ್ಟೋಕರೆಸ್ಸಿ ವ್ಯವಹಾರವನ್ನು ನಡೆಸುವವರಿಗೆ ಸ್ವಿಡ್ಜರ್ಲ್ಯಾಂಡ್ ಮೂಲದ ಸ್ಟಾರ್ಟ್ಆಪ್ ಸಿರಿನ್ ಲ್ಯಾಬ್ ಕಂಪನಿಯೂ ಫೀನಿ ಎನ್ನುವ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ವಿಶ್ವದ ಮೊದಲ ಬ್ಲಾಕ್ ಚೈನ್ ವ್ಯವಸ್ಥೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಕ್ರಿಪ್ಟೋಕರೆಸ್ಸಿ ಹವಾ ಜೋರಾಗಿದ್ದು, ಅದರಲ್ಲಿಯೂ ಬಿಟ್ ಕಾಯಿನ್ ವ್ಯವಹಾರ ಭಾರತ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಅಧಿಕೃತವಾಗಿ ಅಲ್ಲದಿದ್ದರೂ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಈ ಬ್ಲಾಕ್ ಚೈನ್ ವ್ಯವಹಾರವನ್ನು ಸುರಕ್ಷಿತವಾಗಿ ನಡೆಸುವ ಸಲುವಾಗಿಯೇ ಅತ್ಯಂತ ಸುರಕ್ಷಿತ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಫೀನಿ ಸ್ಮಾರ್ಟ್‌ಫೋನ್ ಪಾತ್ರವಾಗಿದೆ. ಇದು ಬಳಕೆದಾರರಿಗೆ ಸುರಕ್ಷಿತ ವ್ಯವಹಾರಕ್ಕೆ ಸಹಾಯ ಮಾಡಲಿದೆ.

6 ಇಂಚಿನ ಡಿಸ್‌ಪ್ಲೇ:
ಫೀನಿ ಸ್ಮಾರ್ಟ್‌ಫೋನಿನಲ್ಲಿ 6 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 18:9 ಅನುಪಾತದ ಡಿಸ್‌ಪ್ಲೇಯನ್ನು ಹೊಂದಿದ್ದು, ಬಳಕೆದಾರರಿಗೆ ಉತ್ತಮ ಗುಣಮಟ್ಟದ ಸಿನಿಮಾ ಮತ್ತು ಗೇಮ್ ವೀಕ್ಷಣೆಗೆ ಸಹಾಯ ಮಾಡಲಿದೆ. ಅಲ್ಲದೇ ಮೇಲ್ಭಾಗದಲ್ಲಿ ಡಿಸ್ ಪ್ಲೇ ನೋಚ್ ಅನ್ನು ಕಾಣಬಹುದಾಗಿದೆ.

ಆಂಡ್ರಾಯ್ಡ್ 8.1 ಒರಿಯೋ:
ಇದಲ್ಲದೇ ಫೀನಿ ಸ್ಮಾರ್ಟ್‌ಫೋನಿನಲ್ಲಿ ಆಂಡ್ರಾಯ್ಡ್ 8.1 ಒರಿಯೋವನ್ನು ಕಾಣಬಹುದಾಗಿದ್ದು, ಇದರೊಂದಿಗೆ ಸಿರಿನ್ OS ಅನ್ನು ನೀಡಲಾಗಿದೆ. ಈ OS ಬಳಕೆದಾರರಿಗೆ ಸೂಕ್ತವಾದ ಸುರಕ್ಷತೆಯನ್ನು ನೀಡಲಿದೆ ಎನ್ನಲಾಗಿದೆ.

ವೇಗದ ಪ್ರೋಸೆಸರ್:
ಫೀನಿ ಸ್ಮಾರ್ಟ್‌ಫೋನಿನಲ್ಲಿ ವೇಗದ ಕಾರ್ಯಚರಣೆಗಾಗಿಯೇ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದಲ್ಲದೇ ಆಡ್ರಿನೋ 630 GPUವನ್ನು ಹೆಚ್ಚನ ಗ್ರಾಫಿಕ್ಸ್ ಗೇಮ್‌ಗಳನ್ನು ಆಡುವ ಸಲುವಾಗಿ ನೀಡಲಾಗಿದೆ.


6GB RAM-128GB ಇಂಟರ್ನಲ್ ಮೆಮೊರಿ:
ಫೀನಿ ಸ್ಮಾರ್ಟ್‌ಫೋನಿನಲ್ಲಿ 6GB RAM ಅನ್ನು ನೀಡಲಾಗಿದೆ. ಇದರೊಂದಿಗೆ ಹೆಚ್ಚಿನ ಪ್ರಮಾಣದ ಡೇಟಾವನ್ನು ಸೇವೆ ಮಾಡಿಕೊಳ್ಳುವ ಸಲುವಾಗಿ 128GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಹಾಗಾಗಿ ಹೆಚ್ಚುವರಿ ಡೇಟಾದ ಅವಶ್ಯಕತೆ ಇರುವುದಿಲ್ಲ.

ಉತ್ತಮ ಕ್ಯಾಮೆರಾ:
ಇದಲ್ಲದೇ ಫೀನಿ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12MP ಕ್ಯಾಮೆರಾವನ್ನು ನೀಡಲಾಗಿದ್ದು, ಇದರೊಂದಿಗೆ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಬಳಕೆದಾರರಿಗೆ ಹೆಚ್ಚಿನ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯವನ್ನು ಮಾಡಲಿದೆ. ಇದಲ್ಲದೇ 3000mAh ಬ್ಯಾಟರಿಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ. ಅಲ್ಲದೇ ವೇಗದ ಚಾರ್ಜಿಂಗ್ ಸೇವೆಯೂ ಇದರಲ್ಲಿದೆ.


Click it and Unblock the Notifications