ವೈಮ್ಯಾಕ್ಸ್ ನ ಪ್ರಥಮ ಮೊಬೈಲ್ ಈ 7ಜಿ ಮಿರಾಕಲ್

Posted By:
ವೈಮ್ಯಾಕ್ಸ್ ನ ಪ್ರಥಮ ಮೊಬೈಲ್ ಈ 7ಜಿ ಮಿರಾಕಲ್

ತೈವಾನ್ ನ ಗ್ಲೋಬಲ್ ಮೊಬೈಲ್ ಕಾರ್ಪೋರೇಷನ್ ಮೈಕ್ರೊವೇವ್ ಸಾಧನಗಳ ತಯಾರಿಯಲ್ಲಿ ಹೆಸರುವಾಸಿಯಾದ ಕಂಪನಿ. ಈ ಕಂಪನಿ ಇದೀಗ ಮೊದಲ ಬಾರಿಗೆ ಡ್ಯಯೆಲ್ ಫೋನ್ ಅನ್ನು ತಯಾರಿಸಿದೆ. ಇದನ್ನು ಬಳಸಿ 3ಜಿ ಅಥವಾ ವೈಮ್ಯಾಕ್ಸ್ ಅನ್ನು ಆಪರೇಟ್ ಮಾಡಬಹುದು ಇದರ ಹೆಸರನ್ನು 7ಜಿ ಮಿರಾಕಲ್ ಎಂದು ಕರೆಯಲಾಗಿದೆ.

ಈ ಫೋನ್ ಅನ್ನು ಗ್ಲೋಬಲ್ ಮೊಬೈಲ್ ಕಾರ್ಪೋರೇಷನ್ ಬ್ರಾಂಡ್ ನ ಅಡಿಯಲ್ಲಿಯೆ ಮಾರಾಟ ಮಾಡಲಾಗುವುದು. ಇದರಲ್ಲಿ ಮೀಡಿಯಾ ಟೆಕ್ 3ಜಿ ಮತ್ತು 4ಜಿ ಒಂದೇ ರೀತಿ ಕೆಲಸ ಮಾಡುತ್ತದೆ. ಸಮರ್ಥವಾಗಿರುವ ಚಿಪ್ ಸೆಟ್ ಮತ್ತು 3ಡಿ ಗ್ರಾಫಿಕ್ ಆಕ್ಸಿಲೇಟರ್ ಸೇರಿ ಇದನ್ನು ಒಂದು ಅತ್ಯುತ್ತಮವಾದ ಮಾಧ್ಯಮವನ್ನಾಗಿಸಿದೆ. ಇದರ 4.1 ಇಂಚಿನ ಸ್ಕ್ರೀನ್ ಕೂಡ ಗುಣಮಟ್ಟವಾಗಿದೆ. ಇದಷ್ಟೆ ಅಲ್ಲದೆ 7ಜಿ ಮಿರಾಕಲ್ ಮುಖ್ಯವಾಗಿ ಈ ಕೆಳಗಿನ ಲಕ್ಷಣವನ್ನು ಹೊಂದಿವೆ.

* AU ಆಪಟ್ರೋನಿಕ್ ಡಿಸ್ ಪ್ಲೇ ಪೇನಲ್

* ಲಾರ್ಗನ್ ಪ್ರಿಸೆಸನ್ ಕಂ. ಕೆಮೆರಾ ಲೆನ್ಸ್

* ಆಂಡ್ರಾಯ್ಡ್ 2.3 ಆಪರೇಟಿಂಗ್ ಸಿಸ್ಟಮ್

* 4.1 ಟಚ್ ಸ್ಕ್ರೀನ್

* GL 3D ಗ್ರಾಫಿಕ್ ಆಕ್ಸಿಲೇಟರ್

ಜೆಮ್ ಟೆಕ್ ಟೆಕ್ನೋಲಜಿ ಕಂ.ಲಿ. ತಂತ್ರಜ್ಞಾನವನ್ನು ಇದರ ತಯಾರಿಕೆಯಲ್ಲಿ ಬಳಸಲಾಗಿದೆ. 2012ರಲ್ಲಿ ಈ ಮೊಬೈಲ್ ಅಧಿಕ ಬೇಡಿಕೆಯನ್ನು ಗಳಿಸಬೇಕೆಂದು ಈ ಕಂಪನಿ ಅದಕ್ಕೆ ಬೇಕಾದ ಪ್ರಚಾರ ಕಾರ್ಯವನ್ನು ಕೂಡ ಮಾಡುತ್ತಿದೆ. ಅಲ್ಲದೆ ಇದರ TD-LTE ವ್ಯಾಪ್ತಿಯನ್ನು ಕೂಡ ವಿಸ್ತರಿಸುವ ಯೋಜನೆಯನ್ನು ಹೊಂದಿದೆ.

7ಜಿ ಮಿರಾಕಲ್ ಬೆಲೆಯನ್ನು ಕಂಪನಿ ಇನ್ನಷ್ಟೆ ಘೋಷಿಸಬೇಕಾಗಿದೆ, ಆದರೆ ಈ ಮೊಬೈಲ್ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ ಎಂಬ ಸುದ್ಧಿ ಕೇಳಿ ಬರುತ್ತಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot