2019ಕ್ಕೆ ಬರಲಿದೆ ಮೊದಲ ನೋಕಿಯಾ 5ಜಿ ಸ್ಮಾರ್ಟ್ ಫೋನ್!

|

ಸದ್ಯ 5ಜಿ ಮೊಬೈಲ್ ಇಂಡಸ್ಟ್ರಿಯಲ್ಲಿ ಒಂದು ಕ್ರಾಂತಿಯನ್ನು ಸೃಷ್ಟಿ ಮಾಡುತ್ತಿದೆ ಮತ್ತು ಪ್ರತಿಯೊಂದು ಮೊಬೈಲ್ ಕಂಪೆನಿಯು ಕೂಡ ಮುಂದಿನ ಜನರೇಷನ್ನಿನ ಮೊಬೈಲ್ ನೆಟ್ ವರ್ಕ್ ಬಗ್ಗೆ ಹೆಚ್ಚಿನ ಪ್ರಯತ್ನವನ್ನು ಮಾಡುತ್ತಿದೆ. ಹಾಂಗ್ ಕಾಂಗ್ ನಲ್ಲಿ ನಡೆಯುತ್ತಿರುವ 4ಜಿ/5ಜಿ ಕಾನ್ಫರೆನ್ಸ್ ನಲ್ಲಿ, ಮುಂದಿನ ವರ್ಷ 5ಜಿ ನೆಟ್ ವರ್ಕ್ ಬೆಂಬಲಿತ ಮೊಬೈಲ್ ಫೋನ್ ಗಳನ್ನು ಬಿಡುಗಡೆಗೊಳಿಸಲು ತಯಾರು ಮಾಡುತ್ತಿರುವ ಕೆಲವು ಮೊಬೈಲ್ ಬ್ರ್ಯಾಂಡ್ ಗಳ ಬಗ್ಗೆ ಫಸ್ಟ್ ಲುಕ್ ನ್ನು ನೋಡಲು ಅವಕಾಶ ಸಿಕ್ಕಿದೆ.ಹೆಚ್ಎಂಡಿ ಗ್ಲೋಬಲ್ ಕೂಡ ಅವುಗಳಲ್ಲಿ ಒಂದಾಗಿದ್ದು ಅದರ ಲಿಸ್ಟ್ ನಲ್ಲಿ ಆಸೂಸ್, ಓಪ್ಪೋ ಒನ್ ಪ್ಲಸ್, ಸೋನಿ ಸೇರಿದಂತೆ ಹಲವು ಇತರೆ ಮೊಬೈಲ್ ಕಂಪೆನಿಗಳು ಸೇರಿವೆ. ಅಂದರೆ 2019 ರಲ್ಲಿ ಮೊದಲ ನೋಕಿಯಾ 5ಜಿ ಫೋನ್ ಜಗತ್ತಿಗೆ ಬಿಡುಗಡೆಗೊಳ್ಳಲಿದೆ.

2019ಕ್ಕೆ ಬರಲಿದೆ ಮೊದಲ ನೋಕಿಯಾ 5ಜಿ ಸ್ಮಾರ್ಟ್ ಫೋನ್!

ಅಂತರ್ಜಾಲ ಜಗತ್ತಿನ ಬದಲಾವಣೆ:
ಕ್ವಾಲ್ಕಂ ನ ಅಧ್ಯಕ್ಷರಾಗಿರುವ ಕ್ರಿಸ್ಟಾನಿಯೋ ಅಮಾನೇ ಅವರು ಕಾನ್ಫರೆನ್ಸ್ ನಲ್ಲಿ 5ಜಿ ಫೋನ್ ಗಳು 2019 ರ ಕಮರ್ಷಿಯಲ್ ಮಾರುಕಟ್ಟ ಆಗಿರುತ್ತದೆ ಎಂದು ತಿಳಿಸಿದ್ದು, 5ಜಿ ತಂತ್ರಜ್ಞಾನವು ಯಾವುದೇ ಸಮಯದಲ್ಲೇ , ಯಾವುದೇ ವಿಚಾರದ ಜೊತೆಗೆ ಕನೆಕ್ಟ್ ಆಗುವುದಕ್ಕೆ 2019 ರಲ್ಲಿ 5ಜಿ ನೆರವಾಗಲಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಸದ್ಯ ಅಂತರ್ಜಾಲ ಜಗತ್ತಿನಲ್ಲಿ ನಡೆಯುತ್ತಿರುವುದಕ್ಕಿಂತ ಹೆಚ್ಚಿನದ್ದನ್ನು ಮುಂದಿನ ದಿನಗಳಲ್ಲಿ ಬರುವ 5ಜಿ ನೆಟ್ ವರ್ಕ್ ಮಾಡಲಿದೆ. ಹೆಚ್ ಎಂಡಿ 5ಜಿ ಬೆಂಬಲಿತ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸುವ ಮೊದಲ ಬ್ರ್ಯಾಂಡ್ ಕಂಪೆನಿ ಆಗಿರಲಿದೆ.

ಬಿಡುಗಡೆಗೊಳ್ಳಲಿದೆ ಎರಡು 5ಜಿ ಫೋನ್ ಗಳು:
ಮೊದಲ 5ಜಿ ನೋಕಿಯಾ ಫೋನ್ 2019 ರಲ್ಲಿ ಕನಿಷ್ಟ ಎರಡು 5ಜಿ ಫ್ಲಾಗ್ ಶಿಪ್ ಫೋನ್ ನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ. 2019 ರ ಮೊದಲಾರ್ಧದಲ್ಲಿ 5ಜಿ ಬೆಂಬಲಿತ ಒನ್ ಪ್ಲಸ್ ಫೋನ್ ಬರಲಿದೆ ಎಂದು ಕಂಪೆನಿಯ ಕೋ-ಫೌಂಡರ್ ಆಗಿರುವ ಚಾರ್ಲ್ ಪೈ ಕಾನ್ಫರೆನ್ಸ್ ನಲ್ಲಿ ತಿಳಿಸಿದ್ದಾರೆ. ಹೆಚ್ ಎಂಡಿ ಯಿಂದ ಬರುವ ಮತ್ತೊಂದು ಫ್ಲಾಗ್ ಶಿಪ್ ನೋಕಿಯಾ 9 ಆಗಿರುವ ಸಾಧ್ಯತೆ ಇದೆ.

ಅನುಮಾನಕ್ಕೆ ಪುಷ್ಠಿ ನೀಡಿದ ಪ್ರಕಟಣೆಗಳು:
ಹೆಚ್ಎಂಡಿ ನೋಕಿಯಾ ಸ್ಮಾರ್ಟ್ ಫೋನ್ ಗಳು ಈ ವರ್ಷದ ಫ್ಲಾಗ್ ಶಿಪ್ ಬಗ್ಗೆ ಇನ್ನಷ್ಟೇ ಪ್ರಕಟಣೆ ಮಾಡಬೇಕಿದೆ ಆದರೆ ಕಂಪೆನಿಯು ಇದರ ಬಿಡುಗಡೆಯನ್ನು ನಿಧಾನ ಮಾಡುತ್ತಿದೆ ಎಂಬ ವರದಿಯೂ ಕೇಳಿಬರುತ್ತಿದೆ. ನೋಕಿಯಾ 9 ಪೆಂಟಾ ಲೆನ್ಸ್ ಕ್ಯಾಮರಾ ಸಿಸ್ಟಮ್ ಗಳನ್ನು ಒಳಗೊಂಡಿರುವ ವಿಶ್ವದ ಮೊದಲ ಫೋನ್ ಗಳಾಗಿದೆ. ಇದೇ ಹೆಚ್ಎಂಡಿ ಗ್ಲೋಬಲ್ ಬಿಡುಗಡೆಗೊಳಿಸುವ ವಿಶ್ವದ ಮೊದಲ 5ಜಿ ನೋಕಿಯಾ ಫೋನ್ ಆಗಿರಲಿದೆ ಎಂಬ ಊಹೆಯು ಇತ್ತೀಚಿನ ಪ್ರಕಟಣೆಯಿಂದ ತಿಳಿದುಬರುತ್ತಿದೆ.

Best Mobiles in India

English summary
The Nokia 9 is tipped to be the world's first phone with a penta-lens camera system, and it could also be HMD's first 5G smartphone. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X