ವಾವ್! ಇಂಟಲ್ ಚಿಪ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ

|
ವಾವ್! ಇಂಟಲ್ ಚಿಪ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ

ಸ್ವಲ್ಪ ತಿಂಗಳ ಹಿಂದೆ ಇಂಟಲ್ ಕಂಪನಿಯು ಬೃಹತ್ತ್ ಮೊಬೈಲ್ ತಯಾರಿಕರ ಜೊತೆ ಸೇರಿ ಇಂಟಲ್ ಚಿಪ್ ಹೊಂದಿರುವ ಸ್ಮಾರ್ಟ್ ಫೋನ್ ಗಳನ್ನು ತರುವ ಪ್ರಯತ್ನದಲ್ಲಿದೆ. ಸ್ವಲ್ಪ ಕಾಲದ ಹಿಂದೆ ಬಂದಂತಹ ಇಂಟಲ್ ಚಿಪ್ ಮೊಬೈಲ್ ಮಾರುಕಟ್ಟೆಯಲ್ಲಿ ಉತ್ತಮವಾದ ಬೇಡಿಕೆಯನ್ನು ಗಳಿಸಿತ್ತು. ಆದರೆ ಆಂಡ್ರಾಯ್ಡ್ ಬಂದಾಗ ಇಂಟಲ್ ಚಿಪ್ ಮೊಬೈಲ್ ಮಂಕಾಗ ತೊಡಗಿತ್ತು.

ಈಗ ಮತ್ತೊಮ್ಮೆ ಆಡ್ರಾಯ್ಡ್ ಜೊತೆ ಇಂಟಲ್ ಚಿಪ್ ಹೊಂದಿರುವಂತಹ ಮೊಬೈಲ್ ಮಾರುಕಟ್ಟೆಗೆ ಬರುತ್ತಿದೆ. ಈ ಮೊಬೈಲ್ ಗುಣಲಕ್ಷಣಗಳ ಬಗ್ಗೆ ವಿವರವಾಗಿ ತಿಳಿಯಬೇಕೆಂದರೆ ಇನ್ನೂ ಕೆಲವು ತಿಂಗಳು ಕಾಯಬೇಕಾಗಿದೆ.ತಾಂತ್ರಿಕ ವಿಮರ್ಶಕರ ಪ್ರಕಾರ ಇದೊಂದು ಅತ್ಯುತ್ತಮವಾದ ತಂತ್ರಜ್ಞಾನವನ್ನು ಹೊಂದಿರುವ ಮೊಬೈಲ್ ಆಗಿದೆ. ಈ ಮೊಬೈಲ್ ಗುಣಮಟ್ಟದಲ್ಲಿ ಐಫೋನ್ ಮೊಬೈಲ್ ಗೆ ಸರಿಯಾಗಿದೆ ಎಂಬ ಸುದ್ಧಿ ಕೂಡ ಕೇಳಿ ಬರುತ್ತಿದೆ.

ಇದರ ತಾಂತ್ರಿಕತೆಯನ್ನು ಪರಿಶೀಲನೆ ಮಾಡಿದ ತಾಂತ್ರಿಕ ವಿಮರ್ಶಕರು ಇದರ ಕಾರ್ಯ ವೈಖರಿ ಅದ್ಭುತವಾಗಿದೆ, ಆದ್ದರಿಂದ ಈ ಮೊಬೈಲ್ ಗೆ ಉತ್ತಮ ಪ್ರತಿಕ್ರಿಯೆ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಮೊಬೈಲ್ ಫೋನ್ 2012ರ ಮಧ್ಯದಲ್ಲಿ ಮಾರುಕಟ್ಟೆಯಲ್ಲಿ ಬರುವ ಸಾಧ್ಯತೆ ಇದ್ದು ಈ ಮೊಬೈಲ್ ಬಗ್ಗೆ ಈಗಾಗಲೆ ಮಾರುಕಟ್ಟೆಯಲ್ಲಿ ಕುತೂಹಲ ಕೆರಳಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X