Subscribe to Gizbot

ಎಲ್‌ಜಿ ಉತ್ಪಾದಿತ ಮೊದಲ ಆಂಡ್ರಾಯ್ಡ್ ಸಿಲ್ವರ್ ಡಿವೈಸ್

Written By:

ಎಲ್‌ಜಿ ಉತ್ಪಾದಿತ ಸಿಲ್ವರ್ ಡಿವೈಸ್ ಮೊಟ್ಟ ಮೊದಲ ಬಾರಿಗೆ ಮಾರುಕಟ್ಟೆಗೆ ಬರುತ್ತಿದೆ. ನೆಕ್ಸಸ್ 6 ಆಗಿ ಇದು ನಿಮ್ಮ ಕೈ ಸೇರುವ ಕಾಲ ಹತ್ತಿರದಲ್ಲಿದೆ. ಗೂಗಲ್ ಕೂಡ ತನ್ನ ಈ ಮಾದರಿ ವಿನ್ಯಾಸದ ಸೆಟ್ ಅನ್ನು ಫೆಬ್ರವರಿ 2015 ಕ್ಕೆ ಸ್ಥಾಪಿಸುವ ನಿಟ್ಟಿನಲ್ಲಿದೆ.

ಟ್ವಿಟ್ಟರ್‌ನಲ್ಲಿ ದೊರಕಿರುವ ಮಾಹಿತಿಯಂತೆ ಗೂಗಲ್ ಈ ಸಿಲ್ವರ್ ಕೋಟೆಡ್ ಫೋನ್‌ಗಳನ್ನು ಮಾರುಕಟ್ಟೆಗೆ ತರುತ್ತಿದ್ದು ಮುಂದಿನ ನೆಕ್ಸಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಮಾದರಿಯ ವಿನ್ಯಾಸಗಳನ್ನು ನಿಮಗೆ ಕಾಣಬಹುದಾಗಿದೆ. ಇದು ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್‌ಗಳನ್ನು ಬಳಸಿದ್ದು 810 SoC ಇದರಲ್ಲಿದೆ. ಯುಎಸ್‌ನಲ್ಲಿ ಈ ಮಾದರಿಯ ಫೋನ್‌ಗಳು ಈಗಾಗಲೇ ಬೇಡಿಕೆಯಲ್ಲಿದ್ದು ಭಾರತಕ್ಕೂ ಇದು ಸದ್ಯವೇ ಪ್ರವೇಶಿಸಲಿದೆ.

ಎಲ್‌ಜಿ ಉತ್ಪಾದಿತ ಮೊದಲ ಆಂಡ್ರಾಯ್ಡ್ ಸಿಲ್ವರ್ ಡಿವೈಸ್

ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಈ ರೀತಿಯ ಬದಲಾವಣೆಗಳು ಏನು ಜಾದೂವನ್ನು ಮಾಡಲಿದೆ ಎಂಬುದು ನಮಗೆ ತಿಳಿದಿಲ್ಲ. ಆದರೆ ಈ ರೀತಿಯ ಆಕರ್ಷಕ ವಿನ್ಯಾಸದ ಫೋನ್‌ಗಳು ಗ್ರಾಹಕರ ಮನಮುಟ್ಟವುದು ಖಂಡಿತ ಎಂಬುದು ಗೂಗಲ್ ನಂಬಿಕೆಯಾಗಿದೆ. ಈ ಸಿಲ್ವರ್ ಕೋಟ್ ಉಳ್ಳ ಫೋನ್‌ಗಳು ಮುಂದಿನ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದ್ದು ನಿಮ್ಮ ಮನವನ್ನು ಮುಟ್ಟಲಿದೆ.

ಈ ವಿಚಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಗಿಜ್‌ಬ್ಯಾಟ್‌ ಅನ್ನು ಓದುತ್ತಿರಿ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot