ಹೊಸ ಆಪರೇಟಿಂಗ್ ಸಿಸ್ಟಮ್ ನ ಬ್ಲ್ಯಾಕ್ ಬೆರಿ ಮೊಬೈಲ್

Posted By:
ಹೊಸ ಆಪರೇಟಿಂಗ್ ಸಿಸ್ಟಮ್ ನ ಬ್ಲ್ಯಾಕ್ ಬೆರಿ ಮೊಬೈಲ್

ಬ್ಲ್ಯಾಕ್ ಬೆರಿ ಮೊಬೈಲ್ ಗಳು ಅದರದೆ ಆದ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಈ ಕಂಪನಿಯು ಇದರ ಆಪರೇಟಿಂಗ್ ಸಿಸ್ಟಮ್ ಮತ್ತಷ್ಟು ಕಾರ್ಯ ದಕ್ಷತೆಯನ್ನು ಹೊಂದಲು ಸಾಕಷ್ಟು ಮಾರ್ಪಾಡುಗಳನ್ನು ತಂದಿದೆ. ಅಭಿವೃದ್ಧಿ ಪಡಿಸಿದ ಹೊಸ ಆಯಾಮವನ್ನು 2012 ರ ಆರಂಭದಲ್ಲಿಯೆ ಬಿಡುಗಡೆ ಮಾಡಲಿದ್ದು ಇದನ್ನು ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ಗಳಲ್ಲಿ ಬಳಸಬಹುದು.

ಈ ಹೊಸ ಫ್ಲಾಟ್ ಫಾಮ್ ಅನ್ನು ಬ್ಲ್ಯಾಕ್ ಬೆರಿ 10 ಎಂದು ಕರೆಯಲಾಗಿದ್ದು ಇದನ್ನು ಮೊದಲು BBX ಎಂದು ಕರೆಯಲಾಗಿದೆ. ಈ ಆಪರೇಟಿಂಗ್ ಸಿಸ್ಟಮ್ ನಲ್ಲಿ ಬ್ಲ್ಯಾಕ್ ಬೆರಿ ಮೊಬೈಲ್ ನೆಟ್ ವರ್ಕಿಂಗ್ ಸರ್ವೀಸ್, ಕ್ಲೌಡ್ ಸರ್ವೀಸ್ ಮುಂತಾದ ಸೌಲಭ್ಯಗಳನ್ನು ನೀಡಲಾಗಿದೆ. ಬ್ಲ್ಯಾಕ್ ಬೆರಿ ಸಾಧನವನ್ನು ಹೊರೆತು ಪಡಿಸಿ ಇದುವರೆಗೆ ಬೇರೆ ಯಾವುದೇ ಸಾಧನದಲ್ಲಿ ಈ ಆಪರೇಟಿಂಗ್ ಸಿಸ್ಟಮ್ ಬಳಸಿಲ್ಲ.

ಇದರಲ್ಲಿರುವ ಪ್ರಮುಖ ಅಂಶವೆಂದರೆ ಕಂಪನಿಯವರು ಇದನ್ನು ಬಳಸಲು ಯಾವುದೆ ರಿಜಿಸ್ಟ್ರೇಷನ್ ಅಥವಾ ಫೀಸ್ ಅನ್ನು ಈ ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಅಭಿವೃದ್ಧಿ ಪಡಿಸಲು ನೀಡಬೇಕಾಗಿಲ್ಲ.ಬ್ಲ್ಯಾಕ್ ಬೆರಿ ಮಿಲಿಯನ್ ಹೆಸರಿನ ಮೊಬೈಲ್ ಫೋನ್ ಮಾರುಕಟ್ಟೆಗೆ ಬರಲಿದ್ದು ಇದರಲ್ಲಿ ಈ ಹೊಸ ಆಪರೇಟಿಂಗ್ ಸಿಸ್ಟಮ್ ಬಳಸಲಾಗುತ್ತದೆ.

ಮುಂದಿನ ವರ್ಷ ಬರಲಿರುವ ಈ ಬ್ಲ್ಯಾಕ್ ಬೆರಿ ಮೊಬೈಲ್ ಈ ಕೆಲಗಿನ ಲಕ್ಷಣಗಳನ್ನು ಹೊಂದಿದೆ.

* ಸ್ಲೈಡರ್ ಡಿಸೈನ್

* QWERTY ಕೀಪ್ಯಾಡ್

* ದೊಡ್ಡದಾದ ಡಿಸ್ ಪ್ಲೇ

* ಅಧಿಕ ಪಿಕ್ಸಲ್ ಸಾಮರ್ಥ್ಯ ಮತ್ತು ಅಧಿಕ ಗುಣಮಟ್ಟದ ಡಿಸ್ ಪ್ಲೇ

ಇದರ ಡಿಸ್ ಪ್ಲೇ ಗುಣಮಟ್ಟವು ಇತರ ಸ್ಮಾರ್ಟ್ ಫೋನ್ ಗಳ ಡಿಸ್ ಪ್ಲೇ ಗುಣಮಟ್ಟಕ್ಕಿಂತ ಉತ್ತಮವಾಗಿದೆ. ಇದರ ಪಿಕ್ಸಲ್ ಸಾಮರ್ಥ್ಯವು ರೆಟಿನಾದ ಪಿಕ್ಸಲ್ ಸಾಮರ್ಥ್ಯಕ್ಕಿಂತ ಅಧಿಕವಾಗಿದೆ ಎಂಬ ಗಾಳಿ ಸುದ್ಧಿಯು ಕೇಳಿಬರುತ್ತಿದೆ.

2012ರಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಈ ಮೊಬೈಲ್ ನ ಮಾರುಕಟ್ಟೆ ಬೆಲೆಯ ಬಗ್ಗೆ ಇನ್ನು ತಿಳಿದು ಬಂದಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot