ಸ್ಯಾಮ್ ಸಂಗ್ ನಿಂದ ಇಂಟಲ್ ಸ್ಮಾರ್ಟ್ ಫೋನ್ ಬರಲಿದೆಯೆ?

ಸ್ಯಾಮ್ ಸಂಗ್ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಿದೆಯೆ? ಹಾಗಂತ ಸುದ್ಧಿಗಳು ಕೇಳಿಬರುತ್ತಿವೆ. ಆದರೆ ಇದರ ಬಗ್ಗೆ ಕಂಪನಿಯಿಂದ ಅಧಿಕೃತವಾದ ಮಾಹಿತಿ ದೊರಕಿಲ್ಲ, ಆದರೂ ಸ್ಯಾಮ್ ಸಂಗ್ ಹೊಸ ಸ್ಮಾರ್ಟ್ ಫೋನ್ ತರಲಿದೆಯೆಂದೂ ಅದರ ಹೆಸರು ಇಂಟಲ್ ಇನ್ ಸೈಡ್ ಸ್ಮಾರ್ಟ್ ಫೋನ್ ಎಂದು ಹೇಳಲಾಗುತ್ತಿದೆ.
ಈ ಇಂಟಲ್ ಸ್ಮಾರ್ಟ್ ಫೋನ್ ನಲ್ಲಿ ಆಂಡ್ರಾಯ್ಡ್ ನ ಹೊಸ ಆಯಾಮ ;ಐಸ್ ಕ್ರೀಮ್ ಸ್ಯಾಂಡ್ ವಿಚ್ 'ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮೊಬೈಲ್ ಮುಂದಿನ ವರ್ಷದ ಮಧ್ಯೆದಲ್ಲಿ ಬಿಡುಗಡೆಯಾಗಲಿದ್ದು, ಈ ಮೊಬೈಲ್ ಗಳ ಬಗ್ಗೆ ಕೇಳಿ ಬರುತ್ತಿರುವ ಸುದ್ಧಿಯಿಂದ ಮೊಬೈಲ್ ಮಾರುಕಟ್ಟೆ ಇದರತ್ತ ಕುತೂಹಲದಿಂದ ನೋಡುವಂತೆ ಆಗಿದೆ.
ಇಂಟಲ್ ಸಿ ಇ ಓ ಹೇಳಿರುವ ಪ್ರಕಾರ ಮೊಬೈಲ್ ಮಾರುಕಟ್ಟೆಯಲ್ಲಿ ಇಂಟಲ್ ಅಷ್ಟೇನು ಖ್ಯಾತಿ ಹೊಂದಿಲ್ಲ ಎಂದು ಎಂದು ನಿರ್ಲಕ್ಷ್ಯಯಿಂದ ನೋಡುವವರಿಗೆ ಬರಲಿರುವ ಇಂಟಲ್ ಹೊಸ ಸ್ಮಾರ್ಟ್ ಫೋನ್ ತಕ್ಕ ಉತ್ತರ ನೀಡಲಿದೆ ಅಂದಿರುವುದು ಈ ಹೊಸ ಮೊಬೈಲ್ ಬರಲಿದೆ ಎಂಬ ಸುದ್ಧಿಗೆ ಮತ್ತಷ್ಟು ಪುಷ್ಠಿ ನೀಡುವಂತೆ ಇದೆ.
ಈ ಕಂಪನಿಯು ಚಿಪ್ ತಯಾರಿಕೆಯಲ್ಲಿ ಬಳಸುತ್ತಿದ್ದ ಪ್ರೊಸೆಸರ್ ಅನ್ನು 32 nmಗಿಂತ ಕಡಿಮೆ ಮಾಡುವ ಅಭಿಪ್ರಾಯವನ್ನು ಹೊಂದಿದೆ. ಮುಂದಿನ ವರ್ಷ ಕಂಪನಿ 22 nm ಪ್ರೊಸೆಸರ್ ಉತ್ಪತ್ತಿ ಮಾಡುವ ಯೋಜನೆಯಲ್ಲಿದೆ.
ಈಗ ಸ್ಯಾಮ್ ಸಂಗ್ ಮತ್ತು ಇಂಟಲ್ ಜೊತೆ ಸೇರಿ ಹೊಸ ಸ್ಮಾರ್ಟ್ ಫೋನ್ ತಂದರೆ ಅದು ಮಾರುಕಟ್ಟೆಯಲ್ಲಿ ಅತಿ ಬೇಗನೆ ತನ್ನ ಛಾಪು ಉಂಟು ಮಾಡುವಲ್ಲಿ ಯಾವುದೆ ಸಂಶಯವಿಲ್ಲ. ಈ ಮೊಬೈಲ್ ನ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇನ್ನೂ ಸ್ವಲ್ಪ ಕಾಲ ಕಾಯಬೇಕಾಗಿದೆ.


Click it and Unblock the Notifications








