ಇಂದಿನಿಂದ Oppo K14 5G ಫೋನ್ ಸೇಲ್: 7,000mAh ಬ್ಯಾಟರಿ ಮತ್ತು 120Hz ಡಿಸ್‌ಪ್ಲೇ!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ Oppo K14 5G ಸ್ಮಾರ್ಟ್‌ಫೋನ್ ಇತ್ತೀಚೆಗೆ ಅಧಿಕೃತವಾಗಿ ಅನಾವರಣಗೊಂಡಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಇಂದು (ಮಾರ್ಚ್ 20) ಮೊದಲ ಬಾರಿಗೆ ಮಾರಾಟಕ್ಕೆ ಲಭ್ಯವಾಗಿದೆ. ಇಂದು Oppo ಕಂಪೆನಿಯ ಅಧಿಕೃತ ಘೋಷಣೆಯಂತೆ, Oppo K14 5G ಫೋನ್ ಅನ್ನು ಫ್ಲಿಪ್‌ಕಾರ್ಟ್ ಹಾಗೂ Oppo ಇಂಡಿಯಾ ಆನ್‌ಲೈನ್ ಸ್ಟೋರ್‌ನಲ್ಲಿ ಖರೀದಿಸಬಹುದಾಗಿದೆ. ಜೊತೆಗೆ ಆರಂಭಿಕ ಆಫರ್ ರೂಪದಲ್ಲಿ ಗ್ರಾಹಕರಿಗೆ ₹1,000 ತಕ್ಷಣದ ರಿಯಾಯಿತಿಯನ್ನು ಸಹ ನೀಡಲಾಗಿದೆ.
Oppo K14 5G : ಬೆಲೆ ಮತ್ತು ವೈಶಿಷ್ಟ್ಯಗಳು
ಭಾರತದಲ್ಲಿ Oppo K14 5G ಫೋನ್ ಮೂಲ 6GB RAM ಮತ್ತು 128GB ಸ್ಟೋರೇಜ್ ಮಾದರಿಯು ಬೆಲೆ ₹17,999ರಿಂದ ಆರಂಭವಾಗುತ್ತದೆ. ಸ್ವಲ್ಪ ಹೆಚ್ಚಿನ 6GB RAM + 256GB ಸ್ಟೋರೇಜ್ ಆಯ್ಕೆಯ ಬೆಲೆ ₹19,999 ಆಗಿದ್ದು, 8GB RAM + 256GB ಸ್ಟೋರೇಜ್ ಹೊಂದಿದ ಟಾಪ್ ವೇರಿಯಂಟ್ ₹21,999ಕ್ಕೆ ಲಭ್ಯವಿದೆ. ಆದರೆ, ಬಿಡುಗಡೆಯಾಗಿ ಕೊಡುಗೆಯಾಗಿ HDFC, ICICI ಮತ್ತು SBI ಬ್ಯಾಂಕ್ ಕಾರ್ಡ್‌ಗಳ ಮೂಲಕ ಗ್ರಾಹಕರು ₹1,000 ತಕ್ಷಣದ ರಿಯಾಯಿತಿ ಮತ್ತು ಮೂರು ತಿಂಗಳವರೆಗೆ ಬಡ್ಡಿರಹಿತ EMI ಆಯ್ಕೆಯನ್ನು ಪಡೆಯಬಹುದು.

Oppo K14 5G : ಪ್ರಮುಖ ವೈಶಿಷ್ಟ್ಯಗಳು
Oppo K14 5G ಫೋನ್ 6.75 ಇಂಚಿನ HD+ LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೆಯು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್, 83% DCI-P3 ಕಲರ್ ಗ್ಯಾಮಟ್ ಮತ್ತು 100% sRGB ಕವರೆಜ್ ನೀಡುತ್ತದೆ. ಜೊತೆಗೆ 1,125 ನಿಟ್ಸ್ ಪೀಕ್ ಬ್ರೈಟ್ನೆಸ್ ಬೆಂಬಲ ಮತ್ತು 256ppi ಪಿಕ್ಸೆಲ್ ಡೆನ್ಸಿಟಿ ಕೂಡ ಇದರಲ್ಲಿ ಲಭ್ಯವಿದೆ.
ಕಾರ್ಯಕ್ಷಮತೆಗಾಗಿ, ಈ ಫೋನ್ MediaTek Dimensity 6300 ಆಕ್ಟಾ-ಕೋರ್ ಪ್ರೊಸೆಸರ್ ಮತ್ತು Mali-G57 MC2 GPU ಹೊಂದಿದೆ. ಗರಿಷ್ಠ 8GB LPDDR4x RAM ಮತ್ತು 256GB UFS 2.2 ಸ್ಟೋರೇಜ್ ಸಪೋರ್ಟ್ ನೀಡಲಾಗಿದೆ. ಡ್ಯುಯಲ್ ನ್ಯಾನೋ SIM ಸಪೋರ್ಟ್ ಮಾಡುವ ಈ ಫೋನ್ Android 15 ಆಧಾರಿತ ColorOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಫೋಟೋಗ್ರಫಿ ವಿಭಾಗದಲ್ಲಿ, ಈ ಫೋನಿನ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ (f/1.8) ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ (f/2.4) ಮೋನೋಕ್ರೋಮ್ ಸೆನ್ಸಾರ್ ಹೊಂದಿದ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಇದೆ. ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ (f/2.0) ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಫೋನಿನಲ್ಲಿ 1080p ರೆಸಲ್ಯೂಶನ್‌ನಲ್ಲಿ 60fps ವರೆಗೆ ವೀಡಿಯೊ ಚಿತ್ರೀಕರಣ ಸಾಧ್ಯವಾಗಲಿದೆ.

ಬ್ಯಾಟರಿ ವಿಚಾರದಲ್ಲಿ, ಈ ಫೋನ್ ದೊಡ್ಡ 7,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವುದು ವಿಶೇಷ. ಇದು 45W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G LTE, Wi-Fi 5, Bluetooth 5.4, USB Type-C ಪೋರ್ಟ್ ಸೇರಿದಂತೆ BeiDou, GPS, GLONASS, Galileo ಮತ್ತು QZSS ನ್ಯಾವಿಗೇಶನ್ ಸಪೋರ್ಟ್ ಇದೆ.
ಇತರೆ ವೈಶಿಷ್ಟ್ಯಗಳಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, ಆಂಬಿಯಂಟ್ ಲೈಟ್ ಸೆನ್ಸಾರ್, ಇ-ಕಂಪಾಸ್ ಮತ್ತು ಆಕ್ಸಿಲರೋಮೀಟರ್ ಸೇರಿವೆ. ಜೊತೆಗೆ, IP66, IP68 ಮತ್ತು IP69 ರೇಟಿಂಗ್‌ಗಳೊಂದಿಗೆ ಧೂಳು ಮತ್ತು ನೀರಿನ ವಿರುದ್ಧ ಉತ್ತಮ ರಕ್ಷಣೆ ಒದಗಿಸುತ್ತದೆ. ಫೋನ್ ಗಾತ್ರ 166.6x78.5x8.6mm ಆಗಿದ್ದು, ತೂಕ ಸುಮಾರು 216 ಗ್ರಾಂ ಇದೆ.
ಗ್ರಾಹಕರು ಇಂದಿನಿಂದ Icy Blue, Prism Violet ಮತ್ತು Prism White ಮೂರು ಬಣ್ಣಗಳಲ್ಲಿ Oppo K14 5G ಫೋನ್ ಅನ್ನು ಖರೀದಿಸಬಹುದು. ಮಧ್ಯಮ ಬೆಲೆಯ ವಿಭಾಗದಲ್ಲಿ ದೊಡ್ಡ ಬ್ಯಾಟರಿ, ವೇಗವಾದ ಚಾರ್ಜಿಂಗ್ ಮತ್ತು ಸಮಕಾಲೀನ ಫೀಚರ್‌ಗಳನ್ನು ಹುಡುಕುತ್ತಿರುವ ಗ್ರಾಹಕರಿಗೆ ಗಮನ ಸೆಳೆಯುವ ಹೊಸ ಆಯ್ಕೆಯಾಗಿ ಈ ಸ್ಮಾರ್ಟ್‌ಫೋನ್ ಆಗಮನವಾದಂತಿದೆ.


Click it and Unblock the Notifications








