ಫ್ಲಿಪ್ ಕಾರ್ಟ್ ನಲ್ಲಿ ಆಪಲ್ ಡೇಸ್ ಸೇಲ್: ಐಫೋನ್ ಗಳಿಗೆ ಆಕರ್ಷಕ ರಿಯಾಯಿತಿ
ಆಪಲ್ ಫೋನ್ ಗಳು ಕಡಿಮೆ ಬೆಲೆಗೆ ಲಭ್ಯವಾಗುತ್ತಿದ್ದು ಫ್ಲಿಪ್ ಕಾರ್ಟಿನ “ಆಪಲ್ ಡೇಸ್” ಸೇಲ್ ಗೆ ಧನ್ಯವಾದ ಹೇಳಲೇಬೇಕು. ಜನವರಿ 8 ರಿಂದ ಮಾರಾಟ ಆರಂಭವಾಗಿದ್ದು ಜನವರಿ 11 ರ ವರೆಗೆ ನಡೆಯಲಿದೆ. ದುಬಾರಿ ಬೆಲೆಯ ಐಫೋನ್ ಗಳನ್ನು ಗ್ರಾಹಕರು ನಿರೀಕ್ಷೆಯೂ ಮಾಡದ ಬೆಲೆಯಲ್ಲಿ ಖರೀದಿಸುವುದಕ್ಕೆ ಇದೀಗ ಸುವರ್ಣಾವಕಾಶ.

ನಾವಿಲ್ಲಿ ಸದ್ಯ ಲಭ್ಯವಾಗುತ್ತಿರುವ ರಿಯಾಯಿತಿ ಬೆಲೆಯ ಕೆಲವು ಐಫೋನ್ ಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಈ ಪಟ್ಟಿಯನ್ನು ಗಮನಿಸಿ ನೀವು ಖರೀದಿಸಬೇಕಾಗಿರುವ ಫೋನಿನ ಆಯ್ಕೆಯನ್ನು ಮಾಡಿಕೊಳ್ಳಬಹುದು.ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ಅನಿಯಮಿತ 5% ಕ್ಯಾಷ್ ಬ್ಯಾಕ್,ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ಬಳಸಿದರೆ ಹೆಚ್ಚುವರಿ 5% ರಿಯಾಯಿತಿ, ಹೆಚ್ಚುವರಿ ಡಿಸ್ಕೌಂಟ್ ಗಳು, ಎಕ್ಸ್ ಚೇಂಜ್ ಆಫರ್ ಗಳು ಮತ್ತು ಕ್ಯಾಷ್ ಬ್ಯಾಕ್ ಆಫರ್ ಗಳು ಈ ಸೇಲ್ ನಲ್ಲಿ ಲಭ್ಯವಿದೆ. ಸ್ಮಾರ್ಟ್ ಫೋನ್ ಗಳಿಗೆ ಒಂದು ವರ್ಷದ ವಾರೆಂಟಿ ಮತ್ತು ಆಕ್ಸಸರೀಸ್ ಗಳಿಗೆ 6 ತಿಂಗಳ ವಾರೆಂಟಿಯು ಲಭ್ಯವಾಗಲಿದೆ.

ಆಪಲ್ ಐಫೋನ್ 7
24,999 ರುಪಾಯಿ ಬೆಲೆಗೆ ಈ ಹ್ಯಾಂಡ್ ಸೆಟ್ ಲಭ್ಯವಗುತ್ತಿದ್ದು 16% ರಿಯಾಯಿತಿ ಸಿಗುತ್ತಿದೆ.ಹೆಚ್ಚುವರಿಯಾಗಿ 4,901 ರುಪಾಯಿ ರಿಯಾಯಿತಿಯನ್ನು ನೀವು ಈ ಫೋನಿಗೆ ಪಡೆದುಕೊಳ್ಳಬಹುದು. ಇದು ನೂತನ iOS 13 out-of-the-box ನಲ್ಲಿ ರನ್ ಆಗುತ್ತದೆ.

ಆಪಲ್ ಐಫೋನ್ 8
ಈ ಐಫೋನ್ ಗ್ಲಾಸ್ ಡಿಸೈನ್ ನ್ನು ಹೊಂದಿದ್ದು ಟಚ್ ಐಡಿ ಹೊಂದಿದೆ. ರೆಟಿನಾ ಹೆಚ್ ಡಿ ಡಿಸ್ಪ್ಲೇ, ಎ11 ಬಯೋನಿಕ್ ಚಿಪ್ ಸೆಟ್ ಮತ್ತು 64GB ROM ನ್ನು ಒಳಗೊಂಡಿದೆ. ಈ ಡಿವೈಸ್ ಖರೀದಿಸುವಿಕೆಯಲ್ಲಿ ಎಕ್ಸ್ ಚೇಂಜ್ ಆಫರ್ ಲಭ್ಯವಿದ್ದು 11,850 ರುಪಾಯಿವರೆಗೆ ರಿಯಾಯಿತಿ ಪಡೆದುಕೊಳ್ಳಬಹುದು.

ಆಪಲ್ ಐಫೋನ್ 6ಎಸ್
ಈ ಸ್ಮಾರ್ಟ್ ಫೋನ್ ಎ9 64 ಬಿಟ್ ಪ್ರೊಸೆಸರ್ ನ್ನು ಹೊಂದಿದೆ. ಎಂ9 ಮೋಷನ್ ಕೋ ಪ್ರೊಸೆಸರ್ ನಿಂದ ಎಂಬೆಡೆಡ್ ಆಗಿರುತ್ತದೆ. ಇಎಂಐ ಆಯ್ಕೆಯಲ್ಲಿ ನೀವು ಈ ಡಿವೈಸ್ ನ್ನು ಖರೀದಿಸುವ ಅವಕಾಶವಿದ್ದು ಮಾಸಿಕ 2,000 ರುಪಾಯಿ ಪಾವತಿ ಮಾಡಿ ಕೊಂಡುಕೊಳ್ಳಬಹುದು.

ಆಪಲ್ ಐಫೋನ್ 11
ಈ ಹ್ಯಾಂಡ್ ಸೆಟ್ ನ್ನು ಹೆಚ್ ಡಿಎಫ್ ಸಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವುದಾದರೆ 6,000 ರುಪಾಯಿವರೆಗೆ ಇನ್ಸೆಂಟ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಇಎಂಐ ಆಯ್ಕೆಯಲ್ಲಿಯೂ ಖರೀದಿಸಬಹುದಾಗಿದ್ದು ಮಾಸಿಕ 10,817 ರುಪಾಯಿ ಪಾವತಿ ಮಾಡಿ ಕೊಂಡುಕೊಳ್ಳಬಹುದು.

ಆಪಲ್ ಐಫೋನ್ 11 ಪ್ರೋ
ಈ ಸೇಲ್ ನಲ್ಲಿ ಲಭ್ಯವಿರುವ ಮತ್ತೊಂದು ಹೊಸ ಐಫೋನ್ ಎಂದರೆ ಆಪಲ್ ಐಫೋನ್ 11 ಪ್ರೋ. ಇದರ ಬೆಲೆ 99,900 ರುಪಾಯಿಗಳು. ಹೆಚ್ ಡಿಎಫ್ ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪ್ರಿಪೇಯ್ಡ್ ವ್ಯವಹಾರ ನಡೆಸಿದರೆ ಈ ಫೋನಿನ ಖರೀದಿಯಲ್ಲಿ 6,000 ರುಪಾಯಿ ರಿಯಾಯಿತಿಯನ್ನು ಪಡೆದುಕೊಳ್ಳಬಹುದು.

ಆಪಲ್ ಐಫೋನ್ 11 ಪ್ರೋ ಮ್ಯಾಕ್ಸ್
ಐಫೋನ್ 11 ಸರಣಿಯ ಟಾಪ್ ವೇರಿಯಂಟ್ ಆಗಿರುವ 64ಜಿಬಿ ROM ವ್ಯವಸ್ಥೆಯ ಫೋನ್ 1,09,900 ಬೆಲೆಗೆ ಲಭ್ಯವಿದೆ. ಇದರಲ್ಲಿ 6.5-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಇದ್ದು ಇದೇ ಮೊದಲ ಬಾರಿಗೆ ಈ ಫೋನಿನಲ್ಲಿ ಆಪಲ್ ಸಂಸ್ಥೆ ಈ ಡಿಸ್ಪ್ಲೇಯನ್ನು ಬಳಕೆ ಮಾಡಿದೆ. ಈ ಫೋನಿನಲ್ಲಿರುವ ಮತ್ತೊಂದು ಬೆಸ್ಟ್ ಫೀಚರ್ ಎಂದರೆ ಟ್ರಿಪಲ್ ಹಿಂಭಾಗದ ಸೆನ್ಸರ್ ಜೊತೆಗೆ ನೂತನವಾಗಿರುವ ಕೆಲವು ಫೀಚರ್ ಗಳು.

ಆಪಲ್ ಐಫೋನ್ ಎಕ್ಸ್ಎಸ್
ಫ್ಲಿಪ್ ಕಾರ್ಟ್ ನಲ್ಲಿ 11,850 ರುಪಾಯಿವರೆಗೆ ಈ ಫೋನಿಗೆ ಎಖ್ಸ್ ಚೇಂಜ್ ಆಫರ್ ನ್ನು ಮತ್ತು 26,901 ರುಪಾಯಿವರೆಗೆ ಹ್ಯಾಂಡ್ ಸೆಟ್ಟಿಗೆ ಹೆಚ್ಚುವರಿ ರಿಯಾಯಿತಿಯನ್ನು ಈ ಸೇಲ್ ನಲ್ಲಿ ನೀಡುತ್ತಿದೆ. ಇದು ಎ12 ಬಯೋನಿಕ್ ಚಿಪ್ ಸೆಟ್ ಮತ್ತು ಸೂಪರ್ ರೆಟಿನಾ ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ.

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್
ಈ ಹ್ಯಾಂಡ್ ಸೆಟ್ಟಿಗೆ 44,901 ರುಪಾಯಿವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಫ್ಲಿಪ್ ಕಾರ್ಟ್ ನೀಡುತ್ತಿದೆ. ಇದರಲ್ಲಿ ಸೂಪರ್ ರೆಟಿನಾ ಡಿಸ್ಪ್ಲೇ ವ್ಯವಸ್ಥೆ ಇದ್ದು 12MP + 12MP ಹಿಂಭಾಗದ ಕ್ಯಾಮರಾಗಳು,ಎ12 ಬಯನೋನಿಕ್ ಚಿಪ್ ಸೆಟ್ ಮತ್ತು iOS 13 ನಲ್ಲಿ ಇದು ರನ್ ಆಗುತ್ತದೆ.

ಆಪಲ್ ಐಫೋನ್ ಎಕ್ಸ್ಆರ್
ಈ ಸ್ಮಾರ್ಟ್ ಫೋನ್ ಕೆಂಪು, ಕಪ್ಪು, ನೀಲಿ, ಕೋರಲ್, ಬಿಳಿ ಮತ್ತು ಹಳದಿ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದರಲ್ಲಿ 7MP ಮುಂಭಾಗದ ಕ್ಯಾಮರಾ, 12MP ಹಿಂಭಾಗದ ಕ್ಯಾಮರಾ, 6.1-ಇಂಚಿನ ಡಿಸ್ಪ್ಲೇ ಮತ್ತು iOS 13 ಗೆ ಕಂಪ್ಯಾಟಿಬಲ್ ಆಗಿದೆ.


Click it and Unblock the Notifications








