Home
ಮೊಬೈಲ್

Flipkart BBD ಹೊಸ ಆಫರ್: ಕೇವಲ ₹5,000 ಕ್ಕೆ iPhone 16 Pro ಬುಕ್ ಮಾಡಿ!

ನೀವು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಹೊಸ ಐಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಇಲ್ಲೊಂದು ವಿಶೇಷ ಅವಕಾಶವಿದೆ. ಸಾಮಾನ್ಯವಾಗಿ, ಹೆಚ್ಚು ಬೇಡಿಕೆಯಿರುವ ಫೋನ್‌ಗಳು ಸೇಲ್ ಶುರುವಾದ ಕೆಲವೇ ನಿಮಿಷಗಳಲ್ಲಿ ಖಾಲಿಯಾಗುತ್ತವೆ. ಇದನ್ನು ತಪ್ಪಿಸಲು, ಫ್ಲಿಪ್‌ಕಾರ್ಟ್ ಈ ಬಾರಿ ಹೊಸದಾಗಿ "ಪ್ರೊ-ರಿಸರ್ವ್ ಪಾಸ್" (Pro-Reserve Pass) ಎಂಬ ಆಯ್ಕೆಯನ್ನು ಪರಿಚಯಿಸಿದೆ. ಇದರ ಸಾಹಯದಿಂದ, ನೀವು ಈಗ ಕೇವಲ 5,000 ಪಾವತಿಸಿ ಐಫೋನ್ 16 ಪ್ರೊ ಸರಣಿ ಫೋನ್‌ಗಳನ್ನು ಬುಕ್ ಮಾಡಬಹುದು.! ಈ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

ಏನಿದು ಪ್ರೊ-ರಿಸರ್ವ್ ಪಾಸ್?
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಹೊಸದಾಗಿ ಪ್ರೊ-ರಿಸರ್ವ್ ಪಾಸ್ಅನ್ನು ಪರಿಚಯಿಸಲಾಗಿದೆ. ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಮಾದರಿಗಳನ್ನು ಕಡಿಮೆ ಬೆಲೆಗೆ ಮೊದಲೇ ಬುಕ್ ಮಾಡಿಕೊಳ್ಳಲು ಇರುವ ಒಂದು ವಿಶೇಷ ಅವಕಾಶ ಎಂದು ತಿಳಿಸಲಾಗಿದೆ. ಇದನ್ನು ಸುಲಭವಾಗಿ ಅರ್ಥವಾಗುವಂತೆ ನೋಡುವುದಾದರೆ, ಸಿನಿಮಾ ಅಥವಾ ರೈಲ್ವೇ ಟಿಕೆಟ್‌ಗಳನ್ನು ಮೊದಲೇ ಬುಕ್ ಮಾಡಿ ಹೇಗೆ ನಿಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತೀರೋ, ಅದೇ ರೀತಿ ಈ ಪಾಸ್ ಕೂಡ ಐಫೋನ್ ಖರೀದಿಸುವ ನಿಮ್ಮ ಅವಕಾಶವನ್ನು ಭದ್ರಪಡಿಸುತ್ತದೆ. ಇದರ ಮೂಲಕ ನೀವು ಸೇಲ್ ಶುರುವಾಗುವ ಮೊದಲೇ ಕಡಿಮೆ ಬೆಲೆಯನ್ನು ಖಚಿತಪಡಿಸಿಕೊಳ್ಳಬಹುದು.

ಪ್ರೊ-ರಿಸರ್ವ್ ಪಾಸ್ ಹೇಗೆ ಕೆಲಸ ಮಾಡುತ್ತದೆ?
₹5,000 ಪಾವತಿಸಿ: ಈ ಪಾಸ್ ಪಡೆಯಲು ನೀವು ಕೇವಲ ₹5,000 ಪಾವತಿಸಬೇಕು. ಈ ಮೊತ್ತವನ್ನು ನಂತರ ಫೋನ್ ಖರೀದಿಸುವಾಗ ಅಂತಿಮ ಬೆಲೆಯಿಂದ ಕಡಿತಗೊಳಿಸಲಾಗುತ್ತದೆ.
ಅರ್ಲಿ ಆಕ್ಸೆಸ್ (Early Access): ಈ ಪಾಸ್ ಇರುವವರಿಗೆ ಸೇಲ್ ಆರಂಭವಾದ ಮೊದಲ 24 ಗಂಟೆಗಳ ಕಾಲ ಫೋನ್ ಖರೀದಿಸಲು ವಿಶೇಷ ಅವಕಾಶ ಸಿಗುತ್ತದೆ. ಇದರಿಂದ ನೀವು ಜನದಟ್ಟಣೆ ಮತ್ತು ಸ್ಟಾಕ್ ಖಾಲಿಯಾಗುವ ಆತಂಕವಿಲ್ಲದೆ ಸುಲಭವಾಗಿ ಫೋನ್ ಖರೀದಿಸಬಹುದು.
ಫ್ಲಿಪ್‌ಕಾರ್ಟ್ ಹೇಳಿರುವಂತೆ, ಐಫೋನ್ 16 ಪ್ರೊ ಮಾದರಿಯ ಬೆಲೆ ಸೇಲ್‌ನಲ್ಲಿ ₹69,999ರಿಂದ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಮಾದರಿಯ ಬೆಲೆ ₹89,999ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಬೆಲೆಯಿಂದ ನೀವು ಮೊದಲೇ ಪಾವತಿಸಿದ ₹5,000 ಕಡಿತವಾಗುತ್ತದೆ.

Flipkart BBD ಹೊಸ ಆಫರ್: ಕೇವಲ ₹5,000 ಕ್ಕೆ iPhone 16 Pro ಬುಕ್ ಮಾಡಿ!

ಪ್ರೊ-ರಿಸರ್ವ್ ಪಾಸ್ ಯಾರಿಗೆ ಸೂಕ್ತ?
ಈ ಪಾಸ್, ಖಂಡಿತವಾಗಿಯೂ ಹೊಸ ಐಫೋನ್ 16 ಪ್ರೊ ಸರಣಿಯನ್ನು ಖರೀದಿಸಲು ನಿರ್ಧರಿಸಿದವರಿಗೆ ಒಂದು ಉತ್ತಮ ಅವಕಾಶ. ಏಕೆಂದರೆ,
ಬೇಡಿಕೆಯಿರುವ ಫೋನ್‌ಗಳು: ಪ್ರೊ ಮಾದರಿಗಳು ಸಾಮಾನ್ಯವಾಗಿ ಸೇಲ್ ಶುರುವಾದ ಕೆಲವೇ ನಿಮಿಷಗಳಲ್ಲಿ ಮಾರಾಟವಾಗುತ್ತವೆ. ಈ ಪಾಸ್ ನಿಮ್ಮ ಖರೀದಿಯನ್ನು ಖಚಿತಪಡಿಸುತ್ತದೆ.
ಬೆಲೆ ಲಾಕ್: ಸೇಲ್ ಸಮಯದಲ್ಲಿ ಬೆಲೆಗಳು ಬದಲಾಗಬಹುದು ಅಥವಾ ಸ್ಟಾಕ್ ಖಾಲಿಯಾಗಬಹುದು. ಈ ಪಾಸ್‌ನಿಂದ ನೀವು ಆಕರ್ಷಕ ಬೆಲೆಯನ್ನು ಮೊದಲೇ ಲಾಕ್ ಮಾಡಿಕೊಳ್ಳಬಹುದು.
ಒಂದು ಪಾಸ್, ಒಂದು ಫೋನ್: ಪ್ರತಿ ಗ್ರಾಹಕರೂ ಕೇವಲ ಒಂದು ಪಾಸ್ ಮಾತ್ರ ಪಡೆಯಬಹುದು, ಮತ್ತು ಇದು ಕೇವಲ ಒಂದು ಫೋನ್ ಖರೀದಿಗೆ ಮಾತ್ರ ಅನ್ವಯಿಸುತ್ತದೆ.

ಗಮನಿಸಿ:
ಹಣ ಹಿಂತಿರುಗಿಸಲಾಗುವುದಿಲ್ಲ: ಒಮ್ಮೆ ನೀವು ಪಾಸ್ ಖರೀದಿಸಿದ ನಂತರ ಅದನ್ನು ರದ್ದುಗೊಳಿಸಲು ಅಥವಾ ಹಣ ಹಿಂತಿರುಗಿಸಲು ಸಾಧ್ಯವಿಲ್ಲ. ಆದ್ದರಿಂದ, ಖರೀದಿಸುವ ಮೊದಲು ಸರಿಯಾಗಿ ಯೋಚಿಸಿ.
24 ಗಂಟೆಗಳ ಕಾಲಾವಕಾಶ: ಈ ಪಾಸ್‌ನ ಲಾಭವನ್ನು ಪಡೆಯಲು ಸೇಲ್ ಆರಂಭವಾದ ಮೊದಲ 24 ಗಂಟೆಗಳಲ್ಲಿ ಫೋನ್ ಖರೀದಿಸಬೇಕು.
ಹೊಸ ಐಫೋನ್ 16 ಪ್ರೊ ಖರೀದಿಸಲು ಬಯಸುವವರಿಗೆ ಈ ಪ್ರೊ-ರಿಸರ್ವ್ ಪಾಸ್ ನಿಜವಾಗಿಯೂ ಒಂದು ಉತ್ತಮ ವ್ಯವಸ್ಥೆಯಾಗಿದ್ದು, ಫೋನ್‌ಗಾಗಿ ನೀವು ಸೇಲ್ ದಿನದಂದು ಎದುರಿಸುವ ಗೊಂದಲ ಮತ್ತು ಆತಂಕವನ್ನು ತಪ್ಪಿಸುತ್ತದೆ.

ಮೂಲ ಮಾಹಿತಿ

Best Mobiles in India

English summary
Flipkart Big Billion Days Exclusive: Pre-Book iPhone 16 Pro & Pro Max for ₹5,000 Now: all The details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+