Home
ಮೊಬೈಲ್

'ಬಿಗ್ ಬಿಲಿಯನ್ ಡೇಸ್' ಇತಿಹಾಸದ ಆಫರ್!...'ನೋಕಿಯಾ 6.1 ಪ್ಲಸ್' ಬೆಲೆ ಭಾರೀ ಇಳಿಕೆ!!

ಈ ಬಾರಿಯ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಯಾವ ಸ್ಮಾರ್ಟ್‌ಫೋನ್ ಬೆಲೆ ಭಾರೀ ಇಳಿಕೆಯಾಗಿದೆ?, ಯಾವ ಸ್ಮಾರ್ಟ್‌ಫೋನ್ ಬೆಸ್ಟ್? ಯಾವ ಸ್ಮಾರ್ಟ್‌ಪೋನ್ ಖರೀದಿಸುವುದು?, ಎಂಬ ಹಲವು ಪ್ರಶ್ನೆಗಳು ನಿಮಗಿವೆಯೇ?. ಹಾಗಾದರೆ, ಚಿಂತಿಸಬೇಡಿ. ನೋಕಿಯಾದ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ 'ನೋಕಿಯಾ 6.1 ಪ್ಲಸ್' ನಿಮ್ಮ ನೆಚ್ಚಿನ ಆಯ್ಕೆಯ ಸ್ಮಾರ್ಟ್‌ಫೋನ್ ಆಗಬಹುದು.!

ಹೌದು, ಚೀನಾದ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡುವ ಬೆಲೆ ಮತ್ತು ಗುಣಮಟ್ಟದಲ್ಲಿ ಇದೇ ಮೊದಲ ಬಾರಿಗೆ ನೋಕಿಯಾ ಸ್ಮಾರ್ಟ್‌ಪೋನ್ ಒಂದು ಗ್ರಾಹಕರ ಕೈಸೇರುತ್ತಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೆ ಅಧಿಪತ್ಯ ಸಾಧಿಸಲು ಮುಂದಾಗಿರುವ ನೋಕಿಯಾ ಕಂಪೆನಿಯ 'ನೋಕಿಯಾ 6.1 ಪ್ಲಸ್' ಸ್ಮಾರ್ಟ್‌ಫೋನ್ ಖರೀದಿಗೆ 2000 ಡಿಸ್ಕೌಂಟ್, 1500 ಕ್ಯಾಶ್‌ಬ್ಯಾಕ್ ಹಾಗೂ 11,700ರೂ.ಗಳವರೆಗೂ ಎಕ್ಸ್‌ಚೇಂಜ್ ಆಫರ್ ಅನ್ನು ನೀಡಲಾಗಿದೆ.

'ಬಿಗ್ ಬಿಲಿಯನ್ ಡೇಸ್' ಇತಿಹಾಸದ ಆಫರ್!..'ನೋಕಿಯಾ 6.1 ಪ್ಲಸ್' ಬೆಲೆ ಭಾರೀ ಇಳಿಕೆ!

16,999 ರೂಪಾಯಿಗಳಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ 'ನೋಕಿಯಾ 6.1 ಪ್ಲಸ್' ಸ್ಮಾರ್ಟ್‌ಫೋನ್ ಬೆಲೆ ಈಗ 14,999 ರೂಪಾಯಿಗಳಿಗೆ ಇಳಿಕೆಯಾಗಿದ್ದು, 2000 ಡಿಸ್ಕೌಂಟ್, 1500 ಕ್ಯಾಶ್‌ಬ್ಯಾಕ್ ಹಾಗೂ 11,700ರೂ.ಗಳವರೆಗೂ ಎಕ್ಸ್‌ಚೇಂಜ್ ಆಫರ್‌ಗಳು ಸೇರಿ ಕೇವಲ 3,299 ರೂ. ಪಾವತಿಸಿ ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದೆ. ಹಾಗಾದರೆ, ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಏನೆಲ್ಲಾ ಕಾರಣಗಳಿವೆ ಎಂಬ ಮಾಹಿತಿಗಳನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ಮತ್ತು ಡಿಸೈನ್!

ಡಿಸ್‌ಪ್ಲೇ ಮತ್ತು ಡಿಸೈನ್!

ಅತ್ಯಾಕರ್ಷಕ ವಿನ್ಯಾಸದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿರುವ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ 19: 9 ಆಕಾರ ಅನುಪಾತದ 5.84 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. 1080 x 2280 ಸಾಮರ್ಥ್ಯದ ಡಿಸ್‌ಪ್ಲೇ ಇದಾಗಿದೆ. ಇನ್ನು ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಐಫೋನ್ 10 ಮಾದರಿಯ ನೋಚ್ ಡಿಸ್‌ಪ್ಲೇಯನ್ನು ಹೊಂದಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಮೊದಲೇ ಹೇಳಿದಂತೆ ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ 4+64 GB ವೆರಿಯಂಟ್ ಮಾದರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಆಂಡ್ರಾಯ್ಡ್ ಒನ್ ಸಪೋರ್ಟ್ ಕ್ವಾಲ್ಕಂ ಕಂಪೆನಿಯ ಸ್ನ್ಯಾಪ್‌ಡ್ರಾಗನ್ 636 ಎಸ್‌ಒಸಿ ಪ್ರೊಸೆಸರ್ ಹೊಂದಿರುವ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓರಿಯೋದಲ್ಲಿ ಕಾರ್ಯನಿರ್ವಹಣೆ ನೀಡಲಿದೆ. ಎಸ್‌ಡಿ ಕಾರ್ಡ್ ಸಹಾಯದಿಂದ ಸ್ಮಾರ್ಟ್‌ಫೋನ್ ಮೆಮೊರಿಯನ್ನು 400GB ಹೆಚ್ಚಿಸಿಕೊಳ್ಳಬಹುದಾದ ಆಯ್ಕೆ ಸಹ ಲಭ್ಯವಿದೆ.

ಕ್ಯಾಮೆರಾ ಸಾಮರ್ಥ್ಯ?

ಕ್ಯಾಮೆರಾ ಸಾಮರ್ಥ್ಯ?

ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದ್ದು, ಎಫ್ / 2.0 ಅಪಾರ್ಚರ್ ಮತ್ತು 1-ಮೈಕ್ರಾನ್ ಪಿಕ್ಸೆಲ್ಗಳಲ್ಲಿ 16-ಮೆಗಾಪಿಕ್ಸೆಲ್ ಮತ್ತು 5-ಮೆಗಾಪಿಕ್ಸೆಲ್ ಮೊನೊಕ್ರೋಮ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 2.0 ಅಪಾರ್ಚರ್ ಮತ್ತು 1ಮೈಕ್ರಾನ್ ಪಿಕ್ಸೆಲ್ ಸೆನ್ಸಾರ್‌ನೊಂದಿಗೆ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಸ್ಮಾರ್ಟ್‌ಫೋನಿನಲ್ಲಿ ನೋಡಬಹುದಾಗಿದೆ.

ಬ್ಯಾಟರಿ ಸಾಮರ್ಥ್ಯ ಎಷ್ಟು?

ಬ್ಯಾಟರಿ ಸಾಮರ್ಥ್ಯ ಎಷ್ಟು?

ನೋಕಿಯಾ 6.1 ಪ್ಲಸ್ ಸ್ಮಾರ್ಟ್‌ಪೋನ್ 3060mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಅಲ್ಲದೇ, ಸ್ಮಾರ್ಟ್‌ಫೋನ್‌ 18W ಚಾರ್ಜರ್ ಸಹಾಯದಿಂದ ಕೇವಲ 30 ನಿಮಿಷಗಳಲ್ಲಿ 50 ಪರ್ಸೆಂಟ್ ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು 3.5MM ಹೆಡ್‌ಪೋನ್ ಜಾಕ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

4G ವೋಲ್ಟ್, ಬ್ಲೂಟೂತ್ V5.0, 2.3 ಕರ್ವರ್ ಗ್ಲಾಸ್ 3 ಸ್ಕ್ರೀನ್ ಪ್ರೊಟೆಕ್ಷನ್ ಹೊಂದಿರುವ ಸ್ಮಾರ್ಟ್‌ಫೋನ್, ಅಕ್ಸೆಲೆರೊಮೀಟರ್, ಸುತ್ತುವರಿದ ಬೆಳಕಿನ ಸಂವೇದಕ, ಡಿಜಿಟಲ್ ದಿಕ್ಸೂಚಿ, ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕಗಳನ್ನು ಹೊಂದಿದೆ. ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಫೇಸ್‌ಲಾಕ್ ಫೀಚರ್ ಅನ್ನು ಒಳಗೊಂಡಿರುವುದು ವಿಶೆಷತೆಯಾಗಿದೆ.

Best Mobiles in India

English summary
To start with, the Nokia 6.1 Plus has received a flat discount of Rs. 2,601 bringing down the price to Rs. 14,999. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+