ಫ್ಲಿಪ್‌ಕಾರ್ಟ್‌ನಲ್ಲಿ ₹ 29,999ಕ್ಕೆ ಸಿಗಲಿದೆ ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8..!
ಮಾರುಕಟ್ಟೆಯಲ್ಲಿ ಕಳೆದ ವರ್ಚ ಲಾಂಚ್ ಆಗಿದ್ದ ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ಮೇಲೆ ಖರೀದಿದಾರರಿಗೆ ಫ್ಲಿಪ್ಲಾರ್ಟ್ ಹೆಚ್ಚಿನ ಪ್ರಮಾಣದ ಆಫರ್ ಅನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ಮೇಲೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಅದ್ದೂರಿ ಆಫರ್ ಅನ್ನು ಕಾಣಬಹುದಾಗಿದೆ. ಸುಮಾರು 20000 ಗಳಷ್ಟು ಕಡಿತವನ್ನು ಕಾಣಬಹುದಾಗಿದೆ. ರೂ.29990ಕ್ಕೆ ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ಖರೀದಿ ಮಾಡಬಹುದಾಗಿದೆ.

ಈ ಮಾದರಿಯಲ್ಲಿ ದೊಡ್ಡ ಮಟ್ಟದ ಆಫರ್ ಅನ್ನು ನೀಡುವ ಕಾರಣವಿದ್ದು, ಅಮೆಜಾನ್ ತನ್ನ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ರೂ.29999ಕ್ಕೆ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಅನ್ನು ಮಾರಾಟ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ಅನ್ನು ರೂ.29990ಕ್ಕೆ ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ ಮಾಡಲು ಮುಂದಾಗಿದೆ. ಈ ಮೂಲಕ ಒನ್ ಪ್ಲಸ್ ಮತ್ತು ಅಮೆಜಾನ್ ಗೆ ಸೆಡ್ಡು ಹೊಡೆಯಲು ಮುಂದಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಒನ್ ಪ್ಲಸ್ ಬೇಡಿಕೆಯೂ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳನ್ನು ಸ್ಯಾಮ್ ಸಂಗ್ ಲಾಂಚ್ ಮಾಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ತನ್ನ ಹಳೇಯ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಮಾಡುತ್ತಿದೆ. ಒಟ್ಟಿನಲ್ಲಿ ಟಾಪ್ ಎಂಡ್ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಇದು ಸುಸಂದರ್ಭ ಎನ್ನಲಾಗಿದೆ. ನೀವು ಸ್ಯಾಮ್ ಸಂಗ್ ಕೊಳ್ಳುವ ಪ್ಲಾನ್ ಮಾಡುತ್ತಿದ್ದರೆ ಇದೊಂದು ಒಳ್ಳೆಯ ಅವಕಾಶವಾಗಲಿದೆ.

ಇಲ್ಲದೇ ನೀವು ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ನೊಂದಿಗೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಆನ್ 6 ಸ್ಮಾರ್ಟ್ ಫೋನ್ ಬೆಲೆ ರೂ.11990 ಆಗಿದ್ದು, ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ ಜೆ3 ಪ್ರೋ ಸ್ಮಾರ್ಟ್ ಫೋನ್ ರೂ,6190 ದೊರೆಯುತ್ತಿದೆ. ಇಲ್ಲದೇ ಗ್ಯಾಲೆಕ್ಸಿ ಆನ್ ನೆಕ್ಸ್ ರೂ.11990ಕ್ಕೆ ಮಾರಾಟವಾಗಲಿದೆ. ಇದಲ್ಲದೇ ಇನ್ನು ಹಲವು ಸ್ಮಾರ್ಟ್ ಪೋನ್ ಗಳ ಮೇಲೆ ನೀವು ಆಫರ್ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಒಮ್ಮೆ ಫ್ಲಿಪ್ ಕಾರ್ಟ್ ಗೆ ಭೇಟಿ ನೀಡಿ.


Click it and Unblock the Notifications








