Home
ಮೊಬೈಲ್

ಫ್ಲಿಪ್‌ಕಾರ್ಟ್‌ನಲ್ಲಿ ಆಸುಸ್ 'ಮ್ಯಾಕ್ಸ್ ಪ್ರೊ ಎಂ1' ಫೋನ್ ಖರೀದಿಗೆ ಕ್ಯೂ!!

By Bhaskar N J

ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ಪೈಪೋಟಿ ನೀಡುತ್ತಿರುವ ಆಸುಸ್ 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1' ಸ್ಮಾರ್ಟ್‌ಫೋನ್ ಮೇಲೆ ಫ್ಲಿಪ್‌ಕಾರ್ಟ್ ಭರ್ಜರಿ ಆಫರ್ ಘೋಷಿಸಿದೆ. ಶಿಯೋಮಿ ರೆಡ್‌ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನಿಗೂ ಹೆಚ್ಚು ಫೀಚರ್ಸ್ ಹೊಂದಿರುವ ಆಸುಸ್ ಕಂಪೆನಿಯ ಸ್ಮಾರ್ಟ್‌ಫೋನ್ ಈಗ ಭಾರತೀಯರ ಗಮನವನ್ನು ಸೆಳೆಯುತ್ತಿದೆ.

ಫ್ಲಿಪ್‌ಕಾರ್ಟ್ ತನ್ನ ಬಿಗ್ ಶಾಪಿಂಗ್ ಡೇಸ್ ಪ್ರಚಾರ ಮಾರಾಟದ ಅಂಗವಾಗಿ, ಆಸುಸ್ 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1' ಸ್ಮಾರ್ಟ್‌ಫೋನ್ ಮೇಲೆ 10 ಸಾವಿರ ರೂಪಾಯಿಗಳವರೆಗೂ ಎಕ್ಸ್‌ಚೇಂಜ್ ಆಫರ್ ನೀಡಿದೆ. ಜೊತೆಗೆ ಎಸ್‌ಬಿಐ ಬ್ಯಾಂಕ್ ಗ್ರಾಹಕರಿಗೆ 10 ಪರ್ಸೆಂಟ್ ಡಿಸ್ಕೌಂಟ್ಸ್ ಹಾಗೂ 3200 ರೂಪಾಯಿಗಳ ವೊಡಾಫೋನ್ ಆಫರ್ ಸಹ ನೀಡಿ ಗಮನ ಸೆಳೆದಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಆಸುಸ್ 'ಮ್ಯಾಕ್ಸ್ ಪ್ರೊ ಎಂ1' ಫೋನ್ ಖರೀದಿಗೆ ಕ್ಯೂ!!

10,999 (3GB+32GB), 12,999 (4GB+64GB) ಮತ್ತು 14,999 ರೂಪಾಯಿಗಳ ಬೆಲೆಯಲ್ಲಿ ಲಭ್ಯವಿರುವ ಈ ಪೋನ್ ಈಗ ಭರ್ಜರಿ ಸೇಲ್ ಕಾಣುತ್ತಿದ್ದು, ಹಾಗಾದರೆ, ಆಸುಸ್ 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1' ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ಭರ್ಜರಿ ಮಾರಾಟವಾಗುತ್ತಿರಲು ಕಾರಣಗಳೇನು ಎನ್ನುವ ಮಾಹಿತಿಗಳನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ!

ಡಿಸ್‌ಪ್ಲೇ ಮತ್ತು ವಿನ್ಯಾಸ!

'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1' ಸ್ಮಾರ್ಟ್‌ಫೋನ್ 18:9 ಅನುಪಾತದ 6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. 2,160x1,080 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವುದು ಡಿಸ್‌ಪ್ಲೇಯ ಪ್ರಮುಖ ವಿಶೇಷವಾಗಿದೆ. ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿರುವ ಫೋನ್ ವಿನ್ಯಾಸ ಅತ್ಯುತ್ತಮವಾಗಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ 1 ಸ್ಮಾರ್ಟ್‌ಫೋನ್ ಪ್ರಬಲ ಸ್ನಾಪ್ಡ್ರಾಗನ್ 636 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ, ಇದು ರೆಡ್‌ ಮಿ ನೋಟ್ 5 ಫೋನಿನಲ್ಲಿ ಬಳಸಲಾಗಿರುವ ಸ್ನಾಪ್ಡ್ರಾಗನ್ 625 ಆಕ್ಟಾ-ಕೋರ್ ಪ್ರೊಸೆಸರ್ಗಿಂತ ವೇಗವಾಗಿದೆ. 3GB+32GB, 4GB+64GB ಮತ್ತು 6GB RAM+64GB ಮೆಮೊರಿಯ ಮೂರು ವೆರಿಯಂಟ್‌ಗಳಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.

ಡ್ಯುಯಲ್ ಕ್ಯಾಮೆರಾ!

ಡ್ಯುಯಲ್ ಕ್ಯಾಮೆರಾ!

'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ 1 ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಓಮ್ನಿವಿಷನ್ ಸಂವೇದಕ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಆಳ ಸಂವೇದಕ ಕ್ಯಾಮೆರಾವನ್ನು ಹೊಂದಿದೆ. ಹಿಂಬಾಗದ 5 ಮೆಗಾಪಿಕ್ಸೆಲ್ ಕ್ಯಾಮೆರಾ ಬೊಕೆ ಚಿತ್ರಗಳನ್ನು ತೆಗೆಯಲು ಹೊಂದುತ್ತದೆ.! 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಹೆಚ್‌ಡಿಆರ್, 9 ಫಿಲ್ಟರ್, ಬ್ಯೂಟಿ ಶಾಟ್, 9 ಸೀನ್ಸ್ ಮೂಡ್ ಮತ್ತು ಬೊಕೆ ಮೂಡ್ ತಂತ್ರಜ್ಞಾನಗಳು ಕ್ಯಾಮೆರಾ ಅಂದವನ್ನು ಹೆಚ್ಚಿಸಿವೆ.

5000mAh ಬ್ಯಾಟರಿ ಕ್ಯಾಪಾಸಿಟಿ!

5000mAh ಬ್ಯಾಟರಿ ಕ್ಯಾಪಾಸಿಟಿ!

35 ದಿಗಳು ಸ್ಟಾಂಡ್ ಬೈ ಕೆಪಾಸಿಟಿ ಇರುವಂತಹ 5000mAh ಕ್ಯಾಪಾಸಿಟಿ ಹೊಂದಿರುವ ಬ್ಯಾಟರಿಯನ್ನು 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ 1 ಸ್ಮಾರ್ಟ್‌ಫೋನ್ ಹೊಂದಿದೆ. 3.0 ಕ್ವಿಕ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುವ ಈ ಫೋನ್ 28 ಗಂಟೆಗಳ ಕಾಲ 28 ಗಂಟೆಗಳ ನಿರಂತರ ವೈಫೈ ವೆಬ್‌ ಬ್ರೌಸಿಂಗ್ ಮತ್ತು 199 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಸಾಮರ್ಥ್ಯವನ್ನು ಹೊಂದಿದೆ ಎಂದು ಆಸುಸ್ ಕಂಪೆನಿ ಹೇಳಿಕೊಂಡಿದೆ.

ಇತರೆ ಏನೆಲ್ಲಾ ಪೀಚರ್ಸ್?

ಇತರೆ ಏನೆಲ್ಲಾ ಪೀಚರ್ಸ್?

5-ಮ್ಯಾಗ್ನೆಟ್ ಧ್ವನಿವರ್ಧಕ, 1080p ಎಫ್‌ಹೆಚ್‌ಡಿ ವಿಡಿಯೋ ರೆಕಾರ್ಡಿಂಗ್, 802.11 b / g / n 2.4GHz WLAN , ಬ್ಲೂಟೂತ್ 4.2, Wi-Fi ಡೈರೆಕ್ಟ್ ಮತ್ತು ಆಂಡ್ರಾಯ್ಡ್ ಓರಿಯೊ 8.0 ಫೀಚರ್ಸ್‌ಗಳನ್ನು 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ 1 ಸ್ಮಾರ್ಟ್‌ಫೋನ್ ಹೊಂದಿದೆ. ಇನ್ನು 3GB+32GB, 4GB+64GB ಮತ್ತು 6GB RAM+64GB ಮೆಮೊರಿಯ ಮೂರು ವೆರಿಯಂಟ್‌ಗಳ ಸ್ಮಾರ್ಟ್‌ಪೋನ್ ಬೆಲೆಗಳು ಕ್ರಮವಾಗಿ, 10,999 (3GB+32GB), 12,999 (4GB+64GB) ಮತ್ತು 14,999 (6GB+64GB) ರೂಪಾಯಿಗಳಾಗಿವೆ.

ಫ್ಲಿಪ್‌ಕಾರ್ಟ್ ಆಫರ್!

ಫ್ಲಿಪ್‌ಕಾರ್ಟ್ ಆಫರ್!

ಆಸುಸ್ 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1' ಸ್ಮಾರ್ಟ್‌ಫೋನ್ ಮೇಲೆ 10 ಸಾವಿರ ರೂಪಾಯಿಗಳವರೆಗೂ ಎಕ್ಸ್‌ಚೇಂಜ್ ಆಫರ್ ಅನ್ನು ಫ್ಲಿಪ್‌ಕಾರ್ಟ್ ನೀಡಿದೆ. ಎಸ್‌ಬಿಐ ಬ್ಯಾಂಕ್ ಗ್ರಾಹಕರಿಗೆ 10 ಪರ್ಸೆಂಟ್ ಡಿಸ್ಕೌಂಟ್ಸ್ ಹಾಗೂ 3200 ರೂಪಾಯಿಗಳ ವೊಡಾಫೋನ್ ಆಫರ್ ಸ್ಮಾರ್ಟ್‌ಪೋನ್ ಜೊತೆಯಲ್ಲಿ ಲಭ್ಯವಿರುವುದರಿಂದ ಪೋನ್ ಖರೀದಿಗೆ ಜನರು ಹಾತೊರೆಯುತ್ತಿದ್ದಾರೆ.

Best Mobiles in India

English summary
Flipkart is offering up to Rs 10,000 discount on Asus ZenFone Max Pro M1, a phone that starts at Rs 10,999. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+