ಫ್ಲಿಪ್ ಕಾರ್ಟ್ ನಲ್ಲಿ ಎಂಐ ಫೋನ್ ಖರೀದಿಸುವುದಕ್ಕೆ ಉತ್ತಮ ಸಮಯ ಬಂದಿದೆ

By Gizbot Bureau
|

ಫ್ಲಿಪ್ ಕಾರ್ಟಿನ ಎಂಐ ಫ್ಯಾನ್ ಸೇಲಿನಲ್ಲಿ ಶಿಯೋಮಿ ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿಯನ್ನು ನೀಡಲಾಗುತ್ತದೆ.ಅಂತಹ ಕೆಲವು ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. 2019 ರಲ್ಲಿ ಮತ್ತೊಮ್ಮೆ ಶಿಯೋಮಿ ಭಾರತದಲ್ಲಿ ಅತೀ ಹೆಚ್ಚು ಮಾರಾಟ ಕಾಣುವ ಸ್ಮಾರ್ಟ್ ಫೋನ್ ಸಂಸ್ಥೆಯಾಗಿ ಬೆಳೆದು ನಿಂತಿದೆ. ತನ್ನ ಸ್ಮಾರ್ಟ್ ಫೋನ್ ಗಳಿಂದ ಗ್ರಾಹಕರು ಬೇರೆ ಕಡೆಗೆ ತೆರಳದಂತೆ ನೋಡಿಕೊಳ್ಳುವಲ್ಲಿ ಶಿಯೋಮಿ ಯಶಸ್ವಿಯಾಗಿದೆ. ಗ್ರಾಹಕರಿಗೆ ರಿಯಾಯಿತಿ ಬೆಲೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಸಂಸ್ಥೆ ಪ್ರಕಟಿಸಿದೆ.

ಫ್ಲಿಪ್ ಕಾರ್ಟ್

ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಶಿಯೋಮಿ ಫೋನ್ ಖರೀದಿಸದರೆ 5% ಅನಿಯಮಿತ ಕ್ಯಾಷ್ ಬ್ಯಾಕ್ ಸಿಗುತ್ತದೆ.ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ಹೆಚ್ಚುವರಿ 5% ರಿಯಾಯಿತಿ,ದೊಡ್ಡ ದೊಡ್ಡ ಎಕ್ಸ್ ಚೇಂಜ್ ಆಫರ್ ಗಳು, ವಿಶೇಷ ಬೆಲೆಯ ಕೆಟಗರಿಯಲ್ಲಿ ಹೆಚ್ಚುವರಿ ರಿಯಾಯಿತಿಗಳು, ವಾರೆಂಟಿ ಸೇವೆಗಳು ಸೇರಿದಂತೆ ಹಲವು ಆಫರ್ ಗಳು ಲಭ್ಯವಿದೆ.

ರೆಡ್ಮಿ ನೋಟ್ 8

ರೆಡ್ಮಿ ನೋಟ್ 8

ಈ ಸ್ಮಾರ್ಟ್ ಫೋನಿನ 4GB RAM ಮತ್ತು 64GB ROM ಆಯ್ಕೆಯ ಫೋನ್ 11,959 ರುಪಾಯಿ ಬೆಲೆಗೆ ಸಿಗುತ್ತದೆ. ಇದು ಮೂನ್ ಲೈಟ್ ವೈಟ್, ನೆಪ್ಚೂನ್ ಬ್ಲೂ ಮತ್ತು ಸ್ಪೇಸ್ ಬ್ಲಾಕ್ ಬಣ್ಣಗಳ ಆವೃತ್ತಿಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ನ್ನು ನೀವು ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದಾಗಿದ್ದು ಆರಂಭಿಕ 563 ರುಪಾಯಿ ಪ್ರತಿ ತಿಂಗಳ ಪಾವತಿ ಮಾಡಿ ಕೊಂಡುಕೊಳ್ಳಬಹುದು.

ರೆಡ್ಮಿ ಕೆ20

ರೆಡ್ಮಿ ಕೆ20

ಈ ಡಿವೈಸ್ ಖರೀದಿಸುವ ಮೂಲಕ ಹೆಚ್ಚುವರಿ 3,000 ರುಪಾಯಿ ರಿಯಾಯಿತಿ ಪಡೆದುಕೊಳ್ಳಬಹುದು.ಇದರ ಬೆಲೆ 19,999 ರುಪಾಯಿಗಳಾಗಿದ್ದು ಜೊತೆಗೆ 13% ರಿಯಾಯಿತಿ ಲಭ್ಯವಿದೆ. 13,850 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ಕೂಡ ಸಿಗುತ್ತದೆ.ಫುಲ್ HD+ ಡಿಸ್ಪ್ಲೇ, ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಮತ್ತು 4,000mAh ಬ್ಯಾಟರಿಯನ್ನು ಇದು ಹೊಂದಿದೆ.

ರೆಡ್ಮಿ ಕೆ20 ಪ್ರೋ

ರೆಡ್ಮಿ ಕೆ20 ಪ್ರೋ

6GB RAM ಮತ್ತು 128GB ROM ಆಯ್ಕೆಯ ಫೋನಿಗೆ 24,999 ರುಪಾಯಿಗಳು. ಕಾರ್ಬನ್ ಬ್ಲಾಕ್, ಫ್ಲೇಮ್ ರೆಡ್, ಗ್ಲಾಸಿಯರ್ ಬ್ಲೂ ಮತ್ತು ಪರ್ಲ್ ವೈಟ್ ಬಣ್ಣಗಳ ಆಯ್ಕೆಯಲ್ಲಿ ಈ ಫೋನ್ ಲಭ್ಯವಿದೆ. ಇದರ ಪ್ರಮುಖ ವೈಶಿಷ್ಟ್ಯತೆಯೆಂದರೆ 48MP + 13MP + 8MP ಹಿಂಭಾಗದ ಕ್ಯಾಮರಾ ಸೆಟ್ ಅಪ್, 20MP ಸೆಲ್ಫೀ ಸೆನ್ಸರ್, 4,000mAh ಬ್ಯಾಟರಿ ಮತ್ತು ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್ ನ್ನು ಒಳಗೊಂಡಿದೆ.

ರೆಡ್ಮಿ ನೋಟ್ 7

ರೆಡ್ಮಿ ನೋಟ್ 7

ಈ ಹ್ಯಾಂಡ್ ಸೆಟ್ ಹೆಚ್ಚುವರಿ 3,000 ರುಪಾಯಿ ರಿಯಾಯಿತಿಯಲ್ಲಿ ಲಭ್ಯವಿದೆ. ಇದನ್ನು ಸ್ಟ್ಯಾಂಡರ್ಡ್ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದು. 9,999 ರುಪಾಯಿ ಬೆಲೆಗೆ ಸಿಗುತ್ತದೆ. ಒನಿಕ್ಸ್ ಬ್ಲಾಕ್, ರೂಬಿ ರೆಡ್, ಮತ್ತು ಶೇಫಿಯರ್ ಬ್ಲೂ ಬಣ್ಣದ ಆವೃತ್ತಿಗಳಲ್ಲಿ ಸಿಗುತ್ತದೆ.

ರೆಡ್ಮಿ 8

ರೆಡ್ಮಿ 8

4GB RAM ಮತ್ತು 64GB ROM ವೇರಿಯಂಟ್ ನ ಈ ಸ್ಮಾರ್ಟ್ ಫೋನ್ ನ್ನು ಆರಂಭಿಕ ಇಎಂಐ ಪ್ರತಿ ತಿಂಗಳು 667 ಪಾವತಿ ಮಾಡುವ ಮೂಲಕ ಖರೀದಿಸಬಹುದು. ಒಂದು ವರ್ಷದ ವಾರೆಂಟಿ ಈ ಫೋನಿಗೆ ಲಭ್ಯವಾಗುತ್ತದೆ. ಹೆಚ್ಚುವರಿಯಾಗಿ 3,000 ರಿಯಾಯಿತಿ ಸಿಗುತ್ತದೆ.

ರೆಡ್ಮಿ8ಎ

ರೆಡ್ಮಿ8ಎ

3GB RAM ಮತ್ತು 32GB ROM ಆಯ್ಕೆಯ ಈ ಫೋನ್ 6,999 ರುಪಾಯಿ ಬೆಲೆಗೆ ಸಿಗುತ್ತದೆ. ಮಿಡ್ ನೈಟ್ ಬ್ಲಾಕ್, ಓಷಿಯನ್ ಬ್ಲೂ ಮತ್ತು ಸನ್ ಸೆಟ್ ರೆಡ್ ಬಣ್ಣಗಳ ಆಯ್ಕೆಯಲ್ಲಿ ಈ ಫೋನ್ ಲಭ್ಯವಾಗುತ್ತದೆ. 584 ರುಪಾಯಿ ಪ್ರತಿ ತಿಂಗಳು ಪಾವತಿಸುವ ಆರಂಭಿಕ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದು. ಇದರಲ್ಲಿ 5,000mAh ಬ್ಯಾಟರಿ ವ್ಯವಸ್ಥೆ ಇದೆ.

ರೆಡ್ಮಿ ನೋಟ್ 7ಎಸ್

ರೆಡ್ಮಿ ನೋಟ್ 7ಎಸ್

834 ರುಪಾಯಿ ಮಾಸಿಕ ಪಾವತಿ ಮಾಡುವ ಮೂಲಕ ಇಎಂಐ ಆಯ್ಕೆಯಲ್ಲಿ ಈ ಫೋನ್ ನ್ನು ಖರೀದಿಸಬಹುದು. ಸ್ಟ್ಯಾಂಡರ್ಡ್ ಇಎಂಐ ಆಯ್ಕೆಯೂ ಕೂಡ ಲಭ್ಯವಿದೆ. 9,700 ರುಪಾಯಿ ವರೆಗೆ ಈ ಪೋನಿಗೆ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಾಗುತ್ತದೆ. 48MP ಪ್ರೈಮರಿ ಹಿಂಭಾಗದ ಕ್ಯಾಮರಾವಿದ್ದು ಅತ್ಯಂತ ಶ್ರೀಮಂತವಾಗಿರುವ ಇಮೇಜ್ ಕ್ವಾಲಿಟಿಯನ್ನು ಇದು ಒದಗಿಸುತ್ತದೆ.

ರೆಡ್ಮಿ 7ಎ

ರೆಡ್ಮಿ 7ಎ

ಈ ಹ್ಯಾಂಡ್ ಸೆಟ್ಟಿಗೆ 5,400 ರುಪಾಯಿಯ ಎಕ್ಸ್ ಚೇಂಜ್ ಆಫರ್ ಲಭ್ಯವಾಗುತ್ತದೆ. 5,499 ರುಪಾಯಿ ಬೆಲೆಯನ್ನು 2GB RAM ಮತ್ತು 32GB ROM ವ್ಯವಸ್ಥೆಯ ಫೋನಿಗೆ ನಿಗದಿಗೊಳಿಸಲಾಗಿದೆ. ಮಾಸಿಕ 459 ರುಪಾಯಿ ಪಾವತಿ ಮಾಡುವ ಮೂಲಕ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿ ಮಾಡಬಹುದು. ಅತ್ಯಂತ ಕಡಿಮೆ ಬೆಲೆಯ ಫೋನ್ ಆಗದ್ದರೂ ಕೂಡ ಇದರಲ್ಲಿ 4,000mAh ನ ಬ್ಯಾಟರಿ ವ್ಯವಸ್ಥೆ ಇದೆ.

ರೆಡ್ಮಿ ಗೋ

ರೆಡ್ಮಿ ಗೋ

1GB RAM ಮತ್ತು 16GB ROM ಆಯ್ಕೆಯ ಫೋನ್ 25% ರಿಯಾಯಿತಿಯಲ್ಲಿ ಅಂದರೆ 4,499 ರುಪಾಯಿ ಬೆಲೆಗೆ ಲಭ್ಯವಿದೆ.

ಇದರ ಪ್ರಮುಖ ವೈಶಿಷ್ಟ್ಯತೆಯೆಂದರೆ 8MP ಪ್ರೈಮರಿ ಸೆನ್ಸರ್, 5MP ಸೆಲ್ಫೀ ಸೆನ್ಸರ್, 3,000 mAh ನ ಬ್ಯಾಟರಿ ಮತ್ತು HD ಡಿಸ್ಪ್ಲೇ ವ್ಯವಸ್ಥೆ ಇದೆ. ಫ್ಲಿಪ್ ಕಾರ್ಟ್ ನಲ್ಲಿ ಈ ಹ್ಯಾಂಡ್ ಸೆಟ್ ಖರೀದಿಸುವ ಮೂಲಕ ನೀವು ಹೆಚ್ಚುವರಿಯಾಗಿ 1,500 ರುಪಾಯಿ ರಿಯಾಯಿತಿ ಪಡೆದುಕೊಳ್ಳಬಹುದು.

ರೆಡ್ಮಿ ನೋಟ್ 6 ಪ್ರೋ

ರೆಡ್ಮಿ ನೋಟ್ 6 ಪ್ರೋ

38% ರಿಯಾಯಿತಿಯಲ್ಲಿ ಅಂದರೆ 10,999 ರುಪಾಯಿ ಬೆಲೆಗೆ ಈ ಫೋನ್ ಲಭ್ಯವಿದೆ. ಇದರಲ್ಲಿ 6GB RAM, 64GB ROM, FHD+ ಡಿಸ್ಪ್ಲೇ, ಡುಯಲ್ ಹಿಂಭಾಗದ ಮತ್ತು ಮುಂಭಾಗದ ಕ್ಯಾಮರಾ ವ್ಯವಸ್ಥೆ ಮತ್ತು 4,000mAh ಬ್ಯಾಟರಿ ಸೌಲಭ್ಯವಿದೆ.

ಎಂಐ ಎ3

ಎಂಐ ಎ3

6GB RAM, 128GB ROM, HD+ ಡಿಸ್ಪ್ಲೇ ವ್ಯವಸ್ಥೆಯೊಂದಿಗೆ ಈ ಹ್ಯಾಂಡ್ ಸೆಟ್ ಲಭ್ಯವಾಗುತ್ತದೆ. 48MP ಟ್ರಿಪಲ್ ಕ್ಯಾಮರಾ ವ್ಯವಸ್ಥೆ ಮತ್ತು 4,030mAh ನ ಬ್ಯಾಟರಿ ಇದರಲ್ಲಿದೆ. 15,499 ರುಪಾಯಿ ಬೆಲೆಗೆ ಅಂದರೆ 11% ರಿಯಾಯಿತಿಯಲ್ಲಿ ಈ ಫೋನ್ ಸಿಗುತ್ತದೆ. ಹೆಚ್ಚುವರಿಯಾಗಿ 2,000 ರುಪಾಯಿ ರಿಯಾಯಿತಿಯನ್ನು ನೀವು ಇದಕ್ಕೆ ಪಡೆದುಕೊಳ್ಳುವ ಅವಕಾಶವಿದೆ.

Best Mobiles in India

English summary
Flipkart's Mi Fan sales include Xiaomi smartphones that will be available at greater discounts. Some of these phones have been listed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X