ಫ್ಲಿಪ್ ಕಾರ್ಟ್ ಬೊನಾನ್ಜಾ ಸೇಲ್ ನಲ್ಲಿ ನಿಮ್ಮ ನೆಚ್ಚಿನ ಫೋನ್ ಖರೀದಿಸುವ ಅವಕಾಶ
ಫ್ಲಿಪ್ ಕಾರ್ಟ್ ಮೊಬೈಲ್ ಬೊನಾನ್ಜ ಇನ್ನೋನು ಆರಂಭವಾಗುತ್ತಿದೆ. ಪ್ರತಿ ಬಾರಿಯೂ ಕೂಡ ಈ ಸೇಲ್ ನಲ್ಲಿ ಹಲವು ಆಫರ್ ಗಳನ್ನು ಫ್ಲಿಪ್ ಕಾರ್ಟ್ ನೀಡುತ್ತದೆ. ಕೈಗೆಟುಕುವ ಬೆಲೆಯಲ್ಲಿ ಡಿವೈಸ್ ಗಳನ್ನು ಖರೀದಿಸುವ ಅವಕಾಶ ಈ ಸೇಲ್ ನಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ. ನಿಮ್ಮ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಗೆ ಉಡುಗೊರೆ ಕೊಡುವುವುದಕ್ಕೆ ಈ ಸೇಲ್ ನಲ್ಲಿ ಉತ್ತಮ ಅವಕಾಶವಿದೆ.

5% ಅನಿಯಮಿತ ಕ್ಯಾಷ್ ಬ್ಯಾಕ್ ಆಫರ್ ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಲಭ್ಯವಾಗುತ್ತದೆ. ಹೆಚ್ಚುವರಿ 5% ರಿಯಾಯಿತಿಯು ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ಸಿಗುತ್ತದೆ. ಹೆಚ್ಚುವರಿ ಎಕ್ಸ್ ಚೇಂಜ್ ಆಫರ್ ಗಳು ಮತ್ತು ಕ್ಯಾಷ್ ಬ್ಯಾಕ್ ಆಫರ್ ಗಳು, ಹೆಚ್ಚುವರಿ ರಿಯಾಯಿತಿಗಳು ಮತ್ತು ಇತ್ಯಾದಿ ಸೌಲಭ್ಯ ಲಭ್ಯವಾಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50
28% ರಿಯಾಯಿತಿಯಲ್ಲಿ ಅಂದರೆ 14,990 ರುಪಾಯಿ ಬೆಲೆಗೆ ಈ ಫೋನ್ ಸಿಗುತ್ತದೆ. ಇದರಲ್ಲಿ 25MP ಟ್ರಿಪಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್, FHD+ಡಿಸ್ಪ್ಲೇ ಮತ್ತು 4000mAh ಲೀಥಿಯಂ ಬ್ಯಾಟರಿ ಸೌಲಭ್ಯವಿದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ಈ ಫೋನ್ ಖರೀದಿಸಬಹುದಾಗಿದ್ದು 1,250 ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ಖರೀದಿಸಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್
6GB RAM ಮತ್ತು 64GB ROM ವ್ಯವಸ್ಥೆಯ ಫೋನ್ 29,999 ರುಪಾಯಿ ಬೆಲೆಗೆ ಖರೀದಿಸಬಹುದಾಗಿದೆ ಮತ್ತು ಹೆಚ್ಚುವರಿ ರಿಯಾಯಿತಿಗಳು ಕೂಡ ಲಭ್ಯವಾಗುತ್ತದೆ. ಈ ಫೋನಿನ ಪ್ರಮುಖ ಹೈಲೆಟ್ ಅಂದರೆ 6.2-ಇಂಚಿನ ಕ್ವಾಡ್ HD+ ಡಿಸ್ಪ್ಲೇ, 8MP ಮುಂಭಾಗದ ಕ್ಯಾಮರಾ ಮತ್ತು 3500mAh ಬ್ಯಾಟರಿ ಕೆಪಾಸಿಟಿ ಇದರಲ್ಲಿದೆ.

ವಿವೋ ಝಡ್1 ಪ್ರೋ
6GB RAM ಮತ್ತು 64GB ROM ವ್ಯವಸ್ಥೆಯ ಈ ಫೋನ್ ನ್ನು 13,990 ರುಪಾಯಿ ಬೆಲೆಗೆ ಖರೀದಿಸಬಹುದು. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಇಎಂಐ ಟ್ರಾನ್ಸ್ಯಾಕ್ಷನ್ ನಲ್ಲಿ 1,500 ರುಪಾಯಿ ವರೆಗಿನ ಇನ್ಸೆಂಟ್ ರಿಯಾಯಿತಿ ಸಿಗುತ್ತದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 712 AIE ಪ್ರೊಸೆಸರ್ ಮತ್ತು 5,000mAh ಬ್ಯಾಟರಿ ವ್ಯವಸ್ಥೆ ಇದರಲ್ಲಿ ಇದೆ.

ಹಾನರ್ 9ಎಕ್ಸ್
48MP ಟ್ರಿಪಲ್ ಹಿಂಭಾಗದ ಕ್ಯಾಮರಾಗಳು, 4000mAh ನ ಬ್ಯಾಟರಿ ಮತ್ತು Kirin 710F ಪ್ರೊಸೆಸರ್ ವ್ಯವಸ್ಥೆ ಇದರಲ್ಲಿದೆ. 13,999 ರುಪಾಯಿ ಬೆಲೆಗೆ ನೀವಿದನ್ನು ಖರೀದಿಸಬಹುದು. 1,167 ರುಪಾಯಿ ಮಾಸಿಕ ಪಾವತಿ ಮಾಡುವ ಮೂಲಕ ಕೂಡ ಈ ಫೋನ್ ಖರೀದಿಸುವ ಅವಕಾಶವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9
ಈ ಫೋನಿನಲ್ಲಿ 12MP ಹಿಂಭಾಗದ ಕ್ಯಾಮರಾ ಮತ್ತು 8MP ಮುಂಭಾಗದ ಕ್ಯಾಮರಾ ವ್ಯವಸ್ಥೆ ಲಭ್ಯವಿದೆ. 3000mAh ಬ್ಯಾಟರಿ ವ್ಯವಸ್ಥೆ ಇದರಲ್ಲಿದೆ.2,250 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ಈ ಫೋನ್ ಖರೀದಿಸಬಹುದು.

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಎಂ1
ಈ ಫೋನ್ 4000mAh ನ ಬ್ಯಾಟರಿ ಬ್ಯಾಕ್ ಅಪ್ ವ್ಯವಸ್ಥೆಯನ್ನು ಹೊಂದಿದೆ ಮತ್ತು 13MP ಹಿಂಭಾಗದ ಕ್ಯಾಮರಾವನ್ನು ಇದು ಹೊಂದಿದೆ. 37% ರಿಯಾಯಿತಿಯಲ್ಲಿ ಅಂದರೆ 5,999 ರುಪಾಯಿ ಬೆಲೆಗೆ ನೀವು ಈ ಫೋನ್ ಖರೀದಿಸಬಹುದು. ಪ್ರತಿ ತಿಂಗಳು 500 ರುಪಾಯಿ ಪಾವತಿ ಮಾಡುವ ಮೂಲಕ ಮಾಸಿಕ ಇಎಂಐ ಆಯ್ಕೆಯಲ್ಲಿಯೂ ಕೂಡ ಈ ಫೋನ್ ಖರೀದಿಸಬಹುದು.

ಒಪ್ಪೋ ರೆನೋ 10ಎಕ್ಸ್ ಝೂಮ್
ಆಯ್ಕೆಯ ಈ ಫೋನ್ ನ್ನು 36,990 ರುಪಾಯಿ ಬೆಲೆಗೆ ಖರೀದಿಸಬಹುದು. 3,083 ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ಈ ಫೋನ್ ಖರೀದಿಸಬಹುದು. ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇದರಲ್ಲಿದ್ದು, 16MP ಮುಂಭಾಗದ ಕ್ಯಾಮರಾ ಮತ್ತು 6.6-ಇಂಚಿನ ಡಿಸ್ಪ್ಲೇ ವ್ಯವಸ್ಥೆ ಇದರಲ್ಲಿದೆ.

ಒಪ್ಪೋ ಎ5 2020
12,990 ರುಪಾಯಿ ಬೆಲೆಗೆ ನೀವು ಈ ಫೋನ್ ಖರೀದಿಸಬಹುದು. 611 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ EMI ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದು. ಕ್ವಾಡ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇದರಲ್ಲಿದೆ. 6.5-ಇಂಚಿನ ಡಿಸ್ಪ್ಲೇ ಮತ್ತು 5000mAh ಬ್ಯಾಟರಿ ಕೆಪಾಸಿಟಿ ಇದ್ದು ರಿವರ್ಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಇದು ಹೊಂದಿದೆ.

ಒಪ್ಪೋ ಕೆ1
26% ರಿಯಾಯಿತಿಯನ್ನು ಫ್ಲಿಪ್ ಕಾರ್ಟ್ ನಲ್ಲಿ ಈ ಫೋನಿಗೆ ನೀಡಲಾಗುತ್ತಿದ್ದು 13,990 ರುಪಾಯಿ ಬೆಲೆಗೆ ಖರೀದಿಸಬಹುದಾಗಿದೆ. 3600mAh ಬ್ಯಾಟರಿ ಕೆಪಾಸಿಟಿ ಇದರಲ್ಲಿದ್ದು,ಇಎಂಐ ಆಯ್ಕೆಯಲ್ಲಿಯೂ ಕೂಡ ಈ ಫೋನ್ ಖರೀದಿಸಬಹುದು. 1,166 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ಖರೀದಿಸಬಹುದು.

ಆಪಲ್ ಐಫೋನ್ ಎಕ್ಸ್ಎಸ್
ಈ ಫೋನಿನ 64GB ROM ನ್ನು 59,999 ರುಪಾಯಿ ಬೆಲೆಗೆ ಖರೀದಿಸಬಹುದು. ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ಬಳಸುವಿಕೆಯಿಂದ ಹೆಚ್ಚುವರಿಯಾಗಿ 5% ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಇದು ಎ12 ಬಯೋನಿಕ್ ಚಿಪ್ ಪ್ರೊಸೆಸರ್ ನ್ನು ಹೊಂದಿದೆ. ಪ್ರತಿ ತಿಂಗಳು 5,000 ರುಪಾಯಿ ಪಾವತಿ ಮಾಡುವ ಮೂಲಕ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದು.

ಗೂಗಲ್ ಪಿಕ್ಸಲ್ 3ಎ
ಈ ಸ್ಮಾರ್ಟ್ ಫೋನ್ ನ್ನು 22% ರಿಯಾಯಿತಿಯಲ್ಲಿ ಅಂದರೆ 30,999 ರುಪಾಯಿ ಬೆಲೆಗೆ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸುವ ಅವಕಾಶವಿದೆ. ಇದು 12.2MP ಹಿಂಭಾಗದ ಕ್ಯಾಮರಾ, FHD+ ಡಿಸ್ಪ್ಲೇ ಮತ್ತು 3000mAh ಲೀಥಿಯಂ ಬ್ಯಾಟರಿ ವ್ಯವಸ್ಥೆಯನ್ನು ಒಳಗೊಂಡಿದೆ. 2,584 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದು.


Click it and Unblock the Notifications








