ಬೊನಾನ್ಜ ಸೇಲ್‌ನಲ್ಲಿ ಈ ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ!

|

ಫ್ಲಿಪ್ ಕಾರ್ಟ್ ನ ಬೊನಾನ್ಜ ಸೇಲ್ ಮತ್ತೆ ಆರಂಭವಾಗಿದ್ದು ಇಂದು ಮಧ್ಯರಾತ್ರಿಯಿಂದ ನವೆಂಬರ್ 22 ರ ವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ಹೆಸರೇ ಸೂಚಿಸುವಂತೆ ಎಲ್ಲಾ ರೀತಿಯ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತದೆ. ಐಫೋನ್, ಹಾನರ್, ಗುಗಲ್ ಪಿಕ್ಸಲ್, ಶಿಯೋಮಿ ರೆಡ್ಮಿ ಫೋನ್ಸ್ ಸೇರಿದಂತೆ ಹಲವು ಬ್ರ್ಯಾಂಡ್ ಫೋನ್ ಗಳು ಈ ಸೇಲ್ ನಲ್ಲಿ ಕಡಿಮೆ ಬೆಲೆಗೆ ಖರೀದಿಸುವುದಕ್ಕೆ ಅವಕಾಶವಿದೆ.ಹೆಚ್ ಡಿಎಫ್ ಸಿ ಬ್ಯಾಂಕ್ ಜೊತೆಗೆ ಫ್ಲಿಪ್ ಕಾರ್ಟ್ ಕೈಜೋಡಿಸಿದ್ದು ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಅತೀ ಕಡಿಮೆ ಅಂದರೆ ತಿಂಗಳು 499 ರುಪಾಯಿ ಬೆಲೆಯಲ್ಲಿ ನೀಡುತ್ತಿದೆ.

ಬೊನಾನ್ಜ ಸೇಲ್‌ನಲ್ಲಿ ಈ ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ!

ಇಂದು ಮೊದಲ ದಿನ ಆಗಿರುವುದರಿಂದಾಗಿ ಯಾವೆಲ್ಲ ಫೋನ್ ಗಳು ಲಭ್ಯವಿದೆ ಎಂಬ ಬಗ್ಗೆ ಈ ಕೆಳಗೆ ಮಾಹಿತಿ ಇದೆ.

ಹಾನರ್ 9ಎನ್ ರೂಪಾಯಿ 9,999ಕ್ಕೆ:

ಹಾನರ್ 9ಎನ್ ರೂಪಾಯಿ 9,999ಕ್ಕೆ:

ಹಾನರ್ 9ಎನ್ ನ್ನು 13,999 ರುಪಾಯಿ ಬೆಲೆಗೆ ಬಿಡುಗಡೆಗೊಳಿಸಲಾಗಿದ್ದು ಈ ಸೇಲ್ ನಲ್ಲಿ ಫ್ಲಿಪ್ ಕಾರ್ಟ್ ಅತೀ ಕಡಿಮೆ ಅಂದರೆ 9,999 ರುಪಾಯಿಗೆ ಮಾರಾಟ ಮಾಡುತ್ತಿದೆ. ಈ ಬೆಲೆ 32ಜಿಬಿ ಸ್ಟೋರೇಜ್ ನ ಮಾಡೆಲ್ ದ್ದಾಗಿದೆ.

ಗೂಗಲ್ ಪಿಕ್ಸಲ್ 2ಎಕ್ಸ್ಎಲ್ ರುಪಾಯಿ 40,999ಕ್ಕೆ:

ಗೂಗಲ್ ಪಿಕ್ಸಲ್ 2ಎಕ್ಸ್ಎಲ್ ರುಪಾಯಿ 40,999ಕ್ಕೆ:

ಫ್ಲಿಪ್ ಕಾರ್ಟ್ ನಲ್ಲಿ ಪಿಕ್ಸಲ್ 2ಎಕ್ಸ್ಎಲ್ ಗೆ 4,500 ರುಪಾಯಿ ರಿಯಾಯಿತಿ ಇದೆ. ಇತ್ತೀಚೆಗಷ್ಟೇ ಈ ಪೋನಿನ ಬೆಲೆಯನ್ನು 45,499 ರುಪಾಯಿಗೆ ಇಳಿಸಲಾಗಿತ್ತು. ಇದೀಗ ಈ ಸೇಲ್ ನಲ್ಲಿ ಕೇವಲ 40,999 ರುಪಾಯಿ ಬೆಲೆಗೆ ಇದನ್ನು ಖರೀದಿಸುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ. ಇದು 64 ಜಿಬಿ ವೇರಿಯಂಟ್ ನ ಪಿಕ್ಸಲ್ 2ಎಕ್ಸ್ಎಲ್ ಫೋನಿನ ಬೆಲೆ ಆಗಿದೆ.

Nokia 5.1 Plus for Rs 10,499:

Nokia 5.1 Plus for Rs 10,499:

ನೋಕಿಯಾ ಫೋನ್ ಅತೀ ಕಡಿಮೆ ಬೆಲೆಗೆ ಅಂದರೆ 10,499 ರುಪಾಯಿಗೆ ಲಭ್ಯವಿದೆ ಅಂದರೆ ಅದಕ್ಕಿಂತ ಬೆಸ್ಟ್ ಆಫರ್ ಮತ್ತೊಂದಿಲ್ಲ. ಹೌದು ನೋಕಿಯಾ 5.1 ಈ ಬೆಲೆಗೆ ಸಿಗುವ ಬಂಪರ್ ಕೊಡುಗೆ ಎನ್ನಬಹುದು. ಬಿಡುಗಡೆಗೊಂಡಿನ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಫ್ಲಿಪ್ ಕಾರ್ಟ್ ನ ಈ ಸೇಲ್ ನಲ್ಲಿ ನೋಕಿಯಾ 5.1 ಲಭ್ಯವಿದೆ.

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 9,999 ರುಪಾಯಿ ಬೆಲೆಗೆ:

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 9,999 ರುಪಾಯಿ ಬೆಲೆಗೆ:

ಫ್ಲಿಪ್ ಕಾರ್ಟ್ ನಲ್ಲಿ ಝೆನ್ ಪೋನ್ ಗೆ ಅತ್ಯಂತ ಹೆಚ್ಚಿನ ರಿಯಾಯಿತಿ ಇದೆ.ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 ನ್ನು ಈ ಸೇಲ್ ನಲ್ಲಿ 9,999 ರುಪಾಯಿ ಬೆಲೆಗೆ ಮಾರಲಾಗುತ್ತಿದೆ. ಇದು ಬಿಡುಗಡೆಗೊಂಡಾಗ ಇದರ ಬೆಲೆ 10,999 ರುಪಾಯಿ ಆಗಿತ್ತು.

ನೋಕಿಯಾ 8 ಸಿರಿಕ್ಕೋ ರೂಪಾಯಿ 36,999ಕ್ಕೆ:

ನೋಕಿಯಾ 8 ಸಿರಿಕ್ಕೋ ರೂಪಾಯಿ 36,999ಕ್ಕೆ:

ಇದು ಅತ್ಯಂತ ಸುಂದರವಾಗಿರುವ ನೋಕಿಯಾ ಫೋನ್ ಇದಾಗಿದ್ದು ಫ್ಲಿಪ್ ಕಾರ್ಟ್ ನಲ್ಲಿ 13,000 ರುಪಾಯಿಯ ಫ್ಲ್ಯಾಟ್ ಡಿಸ್ಕೌಂಟ್ ನ್ನು ಈ ಮೊಬೈಲ್ ಬೋನಾನ್ಜ ಸೇಲ್ ನಲ್ಲಿ ನೀಡಲಾಗುತ್ತಿದೆ. ಹೌದು 36,999 ರುಪಾಯಿಗೆ 49,999 ರುಪಾಯಿಯ ಫೋನ್ ನ್ನು ಮಾರಾಟ ಮಾಡಲಾಗುತ್ತಿದೆ.

ರೆಡ್ಮಿ ನೋಟ್ 5 ಪ್ರೋ ನ್ನು ಹೊಸ ಬೆಲೆಯಲ್ಲಿ ಮಾರಾಟ:

ರೆಡ್ಮಿ ನೋಟ್ 5 ಪ್ರೋ ನ್ನು ಹೊಸ ಬೆಲೆಯಲ್ಲಿ ಮಾರಾಟ:

ನವೆಂಬರ್ 22 ರಂದು ಭಾರತದಲ್ಲಿ ರೆಡ್ಮಿ ನೋಟ್ 6 ಪ್ರೋ ವನ್ನು ಬಿಡುಗಡೆಗೊಳಿಸಿದ ನಂತರ ಶಿಯೋಮಿ ಸಂಸ್ಥೆ ಅದರ ಬೆಲೆಯನ್ನು 1,000 ರುಪಾಯಿ ಇಳಿಸಿತ್ತು. ಇದೀಗ ಈ ಫೋನ್ ನ್ನು ಮತ್ತೊಮ್ಮೆ ಹೊಸ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು ಫ್ಲಿಪ್ ಕಾರ್ಟ್ ನ ಸೇಲ್ ನಲ್ಲಿ 13,999 ರುಪಾಯಿ ಬೆಲೆಗೆ ಲಭ್ಯವಿದೆ. ಇದಿಷ್ಟೇ ಅಲ್ಲದೆ ಎಂಐ ಎ2 ಮತ್ತು ರೆಡ್ಮಿ ವೈ2 ಬೆಲೆಯನ್ನೂ ಕೂಡ ಇಳಿಕೆ ಮಾಡಲಾಗಿದೆ.

ಪೋಕೋ ಎಫ್ 1 18,999 ರುಪಾಯಿಗೆ:

ಪೋಕೋ ಎಫ್ 1 18,999 ರುಪಾಯಿಗೆ:

ಪೋಕೋ ಎಫ್ 1 ಆಗಾಗ ಸುದ್ದಿಯಾಗಿದ್ದು ಬೇರೆಬೇರೆ ಕಾರಣಗಳಿಂದಲೇ ಆಗಿದೆ. ಪೋಕೋ ಮತ್ತು ಶಿಯೋಮಿ 20,000 ರುಪಾಯಿ ಒಳಗೆ ಸ್ನ್ಯಾಪ್ ಡ್ರ್ಯಾಗನ್ 945 ಪವರ್ಡ್ ಫೋನ್ ಬಿಡುಗಡೆಗೊಳಿಸಿ ಸುದ್ದಿ ಮಾಡಿದವು. ಪೋಕೋ ಭಾರತದಲ್ಲಿ 20,999 ರುಪಾಯಿ ಬೆಲೆಗೆ ಬಿಡುಗಡೆಗೊಂಡಿತ್ತು. ಇದೀಗ ಈ ಸೇಲ್ ನಲ್ಲಿ 18,999 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ.ಇದಿಷ್ಟೇ 2,000 ರುಪಾಯಿವರೆಗೆ ಎಕ್ಸ್ ಚೇಂಜ್ ಆಫರ್ ನ್ನು ಕೂಡ ಫ್ಲಿಪ್ ಕಾರ್ಟ್ ಈ ಸೇಲ್ ನಲ್ಲಿ ನೀಡುತ್ತಿದೆ.

ಮೋಟೋ ಎಕ್ಸ್ 4 ರುಪಾಯಿ 12,999:

ಮೋಟೋ ಎಕ್ಸ್ 4 ರುಪಾಯಿ 12,999:

ಮೋಟೋ ಎಕ್ಸ್ 4 ಒಂದು ಬೆಸ್ಟ್ ಫೋನ್ ಆಗಿದ್ದು ಮೊಬೈಲ್ ಬೊನಾನ್ಜ ಸೇಲ್ ನಲ್ಲಿ ಇದು ಬಿಡುಗಡೆಗೊಳ್ಳುತ್ತಿದೆ. ಫ್ಲಿಪ್ ಕಾರ್ಟ್ ನಲ್ಲಿ ಇದರ ಬೆಲೆ 12,999 ರುಪಾಯಿಗಳು.

ಝೆನ್ ಫೋನ್ 5ಝಡ್ 8ಜಿಬಿ ಮೆಮೊರಿ ಮೊಡೆಲ್ ಗೆ 31,999 ರುಪಾಯಿ:

ಝೆನ್ ಫೋನ್ 5ಝಡ್ 8ಜಿಬಿ ಮೆಮೊರಿ ಮೊಡೆಲ್ ಗೆ 31,999 ರುಪಾಯಿ:

ಝೆನ್ ಫೋನ್ 5ಝಡ್ 8ಜಿಬಿ ಮೆಮೊರಿ ಮತ್ತು 256ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನಿನ ಬೆಲೆ ಇದೀಗ ಫ್ಲಿಪ್ ಕಾರ್ಟ್ ನಲ್ಲಿ 31,999 ಅಂದರೆ 5,000 ರುಪಾಯಿಯ ರಿಯಾಯಿತಿ ಲಭ್ಯವಾಗುತ್ತಿದೆ. ಹೌದು ಈ ಫೋನಿನ ಎಂಆರ್ ಪಿ ಬೆಲೆ 36,999 ರುಪಾಯಿಗಳು. ಇದು ಸ್ನ್ಯಾಪ್ ಡ್ರ್ಯಾಗನ್ 845 ಚಿಪ್ ಸೆಟ್ ನ್ನು ಹೊಂದಿದೆ ಮತ್ತು ಈ ವರ್ಷ ಬಿಡುಗಡೆಗೊಂಡ ಆಸೂಸ್ ನ ಬೆಸ್ಟ್ ಫೋನ್ ಗಳಲ್ಲಿ ಒಂದಾಗಿದೆ.

ಹಾನರ್ 10 ಬೆಲೆ 24,999:

ಹಾನರ್ 10 ಬೆಲೆ 24,999:

ಹಾನರ್ 110 32,999 ರುಪಾಯಿ ಬೆಲೆಗೆ 6ಜಿಬಿ ಮೆಮೊರಿ ಮತ್ತು 128ಜಿಬಿ ಸ್ಟೋರೇಜ್ ಆಯ್ಕೆಯ ಫೋನ್ ಬಿಡುಗಡೆಗೊಂಡಿತ್ತು. ಆದರೆ ಇದೀಗ 24,999 ರುಪಾಯಿ ಬೆಲೆಗೆ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಬಹುದು.

ಐಫೋನ್ ಮೇಲಿನ ರಿಯಾಯಿತಿಗಳು:

ಐಫೋನ್ ಮೇಲಿನ ರಿಯಾಯಿತಿಗಳು:

ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ ಗಳಿಗೂ ಕೂಡ ಉತ್ತಮ ರಿಯಾಯಿತಿ ಇದೆ.

ಐಫೋನ್ ಎಕ್ಸ್ - Rs 79,999.

ಐಫೋನ್ 7 - Rs 34,999.

ಐಫೋನ್ 7 ಪ್ಲಸ್ - Rs 53,990.

ಐಫೋನ್ 6 - Rs 23,999.

ಐಫೋನ್ 6 ಎಸ್ - Rs 24,999.

ಐಫೋನ್ 6 ಎಸ್ ಪ್ಲಸ್ - Rs 30,999.

ಐಫೋನ್ 8 - Rs 54,999.

ಐಫೋನ್ 8 - Rs 64,999.

Best Mobiles in India

Read more about:
English summary
Flipkart Mobile Bonanza sale begins: Big discounts on Pixel 2 XL, Nokia 8 Sirocco, Poco F1, and iphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X