ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ರಿಯಾಯಿತಿ ನೀಡುತ್ತಿರುವ ಫ್ಲಿಪ್ ಕಾರ್ಟ್ ಮೊಬೈಲ್ಸ್ ಬೊನಾನ್ಜಾ ಆಫರ್
ನವೆಂಬರ್ 14 ರಿಂದ ನವೆಂಬರ್ 18 ರ ವರೆಗೆ ಫ್ಲಿಪ್ ಕಾರ್ಟ್ ನಲ್ಲಿ ಬೊನಾನ್ಜಾ ಆಫರ್ ಮಾರಾಟ ನಡೆಯಲಿದೆ. ಈ ಸಂದರ್ಬದಲ್ಲಿ ಹಲವು ಸ್ಮಾರ್ಟ್ ಫೋನ್ ಗಳಿಗೆ ಫ್ಲಿಪ್ ಕಾರ್ಟ್ ನಲ್ಲಿ ರಿಯಾಯಿತಿ ಸಿಗುತ್ತದೆ. ಕೆಲವು ಡಿವೈಸ್ ಗಳನ್ನು ಭರ್ಜರಿ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ.

ಫ್ಲಿಪ್ ಕಾರ್ಟ್ ನಲ್ಲಿ ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡಿದರೆ 5% ಅನಿಯಮಿತ ಕ್ಯಾಷ್ ಬ್ಯಾಕ್, ಹೆಚ್ಚುವರಿ 5% ರಿಯಾಯಿತಿ ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ,ದೊಡ್ಡ ದೊಡ್ಡ ಎಕ್ಸ್ ಚೇಂಜ್ ಆಫರ್ ಗಳು ಮತ್ತು ಕ್ಯಾಷ್ ಬ್ಯಾಕ್ ಆಫರ್ ಗಳು, ಹೆಚ್ಚುವರಿ ರಿಯಾಯಿತಿಗಳು, ನೋ ಕಾಸ್ಟ್ ಇಎಂಐ ಆಯ್ಕೆಗಳು ಸೇರಿದಂತೆ ಹಲವು ಲಾಭಗಳನ್ನು ಗ್ರಾಹಕರು ಈ ಸಂದರ್ಬದಲ್ಲಿ ತಮ್ಮದಾಗಿಸಿಕೊಳ್ಳಬಹುದು.
ವಾರೆಂಟಿ ಸೇವೆಯೂ ಕೂಡ ಹಲವು ಡಿವೈಸ್ ಗಳಿಗೆ ಬಳಕೆದಾರರು ಪಡೆದುಕೊಳ್ಳಬಹುದು. ವೈಶಿಷ್ಟ್ಯತೆಗಳನ್ನು ಹೇಳುವುದಾದರೆ ದೊಡ್ಡ RAM ವ್ಯವಸ್ಥೆ ಇರುವ ಫೋನ್ ಗಳು, FHD+ ಡಿಸ್ಪ್ಲೇ, 48MP ಪ್ರೈಮರಿ ಹಿಂಭಾಗದ ಕ್ಯಾಮರಾ ವ್ಯವಸ್ಥೆ, ದೊಡ್ಡ ಬ್ಯಾಟರಿ ವ್ಯವಸ್ಥೆ ಜೊತೆಗೆ ಫಾಸ್ಟ್ ಚಾರ್ಜಿಂಗ್, P2i ಕೋಟಿಂಗ್ ಮತ್ತು ಹಲವು ವೈಶಿಷ್ಟ್ಯತೆಗಳಿರುವ ಫೋನ್ ಗಳು ಲಭ್ಯವಾಗುತ್ತದೆ. ಯಾವೆಲ್ಲಾ ಪ್ರಮುಖ ಫೋನ್ ಗಳು ರಿಯಾಯಿತಿಯಲ್ಲಿ ಸಿಗುತ್ತದೆ ಎಂಬ ಪಟ್ಟಿಯನ್ನು ನೋಡೋಣ ಬನ್ನಿ.

ರೆಡ್ಮಿ ನೋಟ್ 7 ಪ್ರೋ
ಈ ಸ್ಮಾರ್ಟ್ ಫೋನ್ 11,999 ರುಪಾಯಿಗೆ ಲಭ್ಯವಾಗಲಿದ್ದು ಇದರಲ್ಲಿ 4GB RAM ಮತ್ತು 64GB ROM ವ್ಯವಸ್ಥೆ ಇರುತ್ತದೆ. ಇದು ನೆಪ್ಚೂನ್ ನೀಲಿ ಬಣ್ಣದಲ್ಲಿರುವ ಫೋನ್ ಆಗಿದೆ. ಪ್ರತಿ ತಿಂಗಳಿಗೆ 1,000 ಆರಂಭಿಕ ಇಎಂಐ ಪಾವತಿಸಿ ಕೂಡ ಖರೀದಿಸಬಹುದು.

ರಿಯಲ್ ಮಿ ಸಿ2
ಈ ಡಿವೈಸ್ ಖರೀದಿಸುವ ಮೂಲಕ ಹೆಚ್ಚುವರಿಯಾಗಿ 1,500 ರುಪಾಯಿ ರಿಯಾಯಿತಿ ಪಡೆದುಕೊಳ್ಳಬಹುದು. 2GB RAM ಮತ್ತು 32GB ROM ವೇರಿಯಂಟ್ ನ ಫೋನಿಗೆ ಈ ಸೇಲ್ ನಲ್ಲಿ 6,499 ರುಪಾಯಿ ಬೆಲೆ ನಿಗದಿಗೊಳಿಸಲಾಗಿದೆ. 6,400 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ನ್ನು ಕೂಡ ನೀವಿದಕ್ಕೆ ಪಡೆದುಕೊಳ್ಳಬಹುದು.

ರಿಯಲ್ ಮಿ 3 ಪ್ರೋ
ಈ ಫೋನಿಗೆ ನಿಮಗೆ 9,250 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ಸಿಗುತ್ತದೆ. 4GB RAM ಮತ್ತು 64GB ROM ಇರುವ ಈ ಫೋನಿನ ಬೆಲೆ 9,999 ರುಪಾಯಿಗಳು ಹೆಚ್ಚುವರಿಯಾಗಿ ನೀವು 3,000 ರುಪಾಯಿ ರಿಯಾಯಿತಿಯನ್ನು ಪಡೆದುಕೊಳ್ಳುವ ಅವಕಾಶವೂ ಇದೆ.

ಒಪ್ಪೋ ಎಫ್ 11 ಪ್ರೋ
ಇದನ್ನು ಮಾಸಿಕ 1,666 ರುಪಾಯಿ ಇಎಂಐ ಆಯ್ಕೆಯಲ್ಲಿ ಖರೀದಿಸಬಹುದು. ಹೆಚ್ಚುವರಿಯಾಗಿ 10,000 ರುಪಾಯಿವರೆಗೆ ರಿಯಾಯಿತಿಯನ್ನು ಈ ಹ್ಯಾಂಡ್ ಸೆಟ್ ಗೆ ಪಡೆದುಕೊಳ್ಳಬಹುದು. ಒಂದು ವರ್ಷದ ವಾರೆಂಟಿ ಸೇವೆ ಸಿಗುತ್ತದೆ. ಬ್ಯಾಟರಿಗೆ 6 ತಿಂಗಳ ಗ್ಯಾರೆಂಟಿ, ಚಾರ್ಜರ್ ಗೆ 6 ತಿಂಗಳ ಗ್ಯಾರೆಂಟಿ ಮತ್ತು ಡಾಟಾ ಕೇಬಲ್ ಗೆ 3 ತಿಂಗಳ ಗ್ಯಾರೆಂಟಿಯನ್ನು ನೀಡಲಾಗುತ್ತದೆ.

ರಿಯಲ್ ಮಿ 3
667 ರುಪಾಯಿಯನ್ನು ಪ್ರತಿ ತಿಂಗಳು ಪಾವತಿಸುವಂತೆ ಇಎಂಐ ಆಯ್ಕೆಯಲ್ಲಿ ನೀವು ಈ ಹ್ಯಾಂಡ್ ಸೆಟ್ ನ್ನು ಖರೀದಿಸಬಹುದು. ಸ್ಟ್ಯಾಂಡರ್ಡ್ ಇಎಂಐ ಆಯ್ಕೆಯಲ್ಲಿಯೂ ಖರೀದಿಸಬಹುದು. 7,700 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ಕೂಡ ಈ ಫೋನಿಗೆ ಸಿಗುತ್ತದೆ.

ರಿಯಲ್ ಮಿ 5
3GB RAM ಮತ್ತು 32GB ROM ವೇರಿಯಂಟ್ ನ ಈ ಫೋನ್ ಫ್ಲಿಪ್ ಕಾರ್ಟ್ ನ ಈ ಸೇಲ್ ನಲ್ಲಿ 8,999 ರುಪಾಯಿ ಬೆಲೆಗೆ ಸಿಗುತ್ತದೆ. ಹೆಚ್ಚುವರಿಯಾಗಿ 2,000 ರುಪಾಯಿ ರಿಯಾಯಿತಿ ಪಡೆಯುವ ಅವಕಾಶವೂ ಇದೆ. 5000 mAh ಬ್ಯಾಟರಿ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 665 ಆಕ್ಟಾ ಕೋರ್ ಪ್ರೊಸೆಸರ್ ವ್ಯವಸ್ಥೆಯನ್ನು ಇದು ಹೊಂದಿದೆ.

ವಿವೋ ಝಢ್1 ಪ್ರೋ
ಈ ಫೋನಿನ ಬೇಸ್ ವೇರಿಯಂಟ್ 4GB RAM/64GB ROM 13,990 ರುಪಾಯಿ ಬೆಲೆಗೆ ಸಿಗುತ್ತದೆ. ಇಎಂಐ ಆಯ್ಕೆ ಕೂಡ ಲಭ್ಯವಿದ್ದು ತಿಂಗಳಿಗೆ 1,166 ರುಪಾಯಿ ಪಾವತಿಸಿಯೂ ಕೂಡ ಖರೀದಿಸಬಹುದು.

ರೆಡ್ಮಿ 8ಎ
2GB RAM ಮತ್ತು 32GB ROM ಆಯ್ಕೆಯ ಈ ಫೋನ್ 6,499 ರುಪಾಯಿ ಬೆಲೆಗೆ ಸಿಗುತ್ತದೆ. ಹೆಚ್ಚುವರಿಯಾಗಿ 1,500 ರುಪಾಯಿ ರಿಯಾಯಿತಿ ಪಡೆಯುವ ಅವಕಾಶವೂ ಇದೆ. ಇದರ ಪ್ರಮುಖ ವೈಶಿಷ್ಟ್ಯತೆಯೇನೆಂದರೆ 5,000 mAh ಬ್ಯಾಟರಿ ಕೆಪಾಸಿಟಿಯನ್ನು ಇದು ಹೊಂದಿದೆ.

ರಿಯಲ್ ಮಿ ಎಕ್ಸ್ ಟಿ
4GB RAM ಮತ್ತು 64GB ROM ವೇರಿಯಂಟ್ ನ ಈ ಫೋನ್ 15,999 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ. 10,800 ರುಪಾಯಿ ಎಕ್ಸ್ ಚೇಂಜ್ ಆಫರ್ ಕೂಡ ಇದೆ. ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 712 SoC ಮತ್ತು 4,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುತ್ತದೆ.

ಲೆನೋವೊ ಕೆ10 ಪ್ಲಸ್
21% ರಿಯಾಯಿತಿಯಲ್ಲಿ ಅಂದರೆ 10,999 ರುಪಾಯಿ ಬೆಲೆಗೆ ಈ ಪೋನ್ ಕೈಗೆಟುಕುತ್ತದೆ. ಹೆಚ್ಚುವರಿಯಾಗಿ 3,000 ರುಪಾಯಿ ರಿಯಾಯಿತಿಯನ್ನು ಕೂಡ ಪಡೆದುಕೊಳ್ಳಬಹುದು. ಇಎಂಐ ಆಯ್ಕೆ ಕೂಡ ಲಭ್ಯವಿದ್ದು ತಿಂಗಳಿಗೆ 917 ರುಪಾಯಿ ಪಾವತಿಸಿಯೂ ಕೂಡ ಖರೀದಿಸಬಹುದು.


Click it and Unblock the Notifications








