Home
ಮೊಬೈಲ್

ಫ್ಲಿಪ್ ಕಾರ್ಟ್ ರಿಯಲ್ ಮಿ ಡೇ ಸೇಲ್ ನಲ್ಲಿ ಸ್ಮಾರ್ಟ್ ಫೋನ್ ಗಳಿಗೆ ಡಿಸ್ಕೌಂಟ್

By Gizbot Bureau

ಫೆಬ್ರವರಿ 10 ರಿಂದ ಫ್ಲಿಪ್ ಕಾರ್ಟ್ ನಲ್ಲಿ ರಿಯಲ್ ಮಿ ಡೇ ಸೇಲ್ ಪ್ರಾರಂಭವಾಗಿದೆ ಮತ್ತು ಫೆಬ್ರವರಿ 13 ರ ವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ರಿಯಲ್ ಮಿ ಫೋನ್ ಗಳಿಗೆ ಭರ್ಜರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ನಾವಿಲ್ಲಿ ಯಾವೆಲ್ಲಾ ಫೋನ್ ಗಳಿಗೆ ಡಿಸ್ಕೌಂಟ್ ಇದೆ ಎಂಬ ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ.

ಕ್ರೆಡಿಟ್ ಕಾರ್ಟ್

ಕ್ರೆಡಿಟ್ ಕಾರ್ಟ್ ಮತ್ತು ಇಎಂಐ ವ್ಯವಹಾರಕ್ಕೆ 10% ಇನ್ಸೆಂಟ್ ರಿಯಾಯಿತಿ ಲಭ್ಯವಿದೆ.ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 5% ಅನಿಯಮಿತ ಕ್ಯಾಷ್ ಬ್ಯಾಕ್ ಆಫರ್ ಇದೆ.ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ಬಳಸಿದರೆ ಹೆಚ್ಚುವರಿಯಾಗಿ 5% ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ದೊಡ್ಡ ದೊಡ್ಡ ಎಕ್ಸ್ ಚೇಂಜ್ ಆಫರ್ ಗಳು ಸೇರಿದಂತೆ ಅನೇಕ ಲಾಭವನ್ನು ಪಡೆಯುವುದಕ್ಕೆ ಗ್ರಾಹಕರಿಗೆ ಅವಕಾಶವಿದೆ.

ರಿಯಲ್ ಮಿ 5 ಪ್ರೋ

ರಿಯಲ್ ಮಿ 5 ಪ್ರೋ

ಮೂರು ವಿಭಿನ್ನ ಸ್ಟೋರೇಜ್ ವೇರಿಯಂಟ್ ಗಳು ಲಭ್ಯವಿದೆ. 4GB RAM ಮತ್ತು 64GB ROM ವೇರಿಯಂಟ್ ಗೆ 11,999 ರುಪಾಯಿಗಳು, 6GB RAM/64GB ROM ಗೆ 12,999 ರುಪಾಯಿಗಳು, ಮತ್ತು 8GB RAM/128GB ROM ವೇರಿಯಂಟ್ ಗೆ 14,999 ರುಪಾಯಿ ಬೆಲೆಯಲ್ಲಿ ಖರೀದಿಸಬಹುದು.

ರಿಯಲ್ ಮಿ ಸಿ2

ರಿಯಲ್ ಮಿ ಸಿ2

4,000mAh ಬ್ಯಾಟರಿ ವ್ಯವಸ್ಥೆಯನ್ನು ಇದು ಒಳಗೊಂಡಿದೆ. 2GB RAM ಮತ್ತು 32GB ROM ಆಯ್ಕೆಯ ಫೋನ್ 5,999 ರುಪಾಯಿ ಬೆಲೆಗೆ ಖರೀದಿಸಬಹುದು. ಟಾಪ್-ಎಂಡ್ ವೇರಿಯಂಟ್ 3GB RAM ಮತ್ತು 32GB ROM ವ್ಯವಸ್ಥೆಯ ಫೋನ್ 6,999 ರುಪಾಯಿ ಬೆಲೆಗೆ ಲಭ್ಯವಿದೆ.

ರಿಯಲ್ ಮಿ X2 ಪ್ರೋ

ರಿಯಲ್ ಮಿ X2 ಪ್ರೋ

ಅನೇಕ ಫೀಚರ್ ಗಳನ್ನು ಇದು ಹೊಂದಿದೆ. 50W VOOC ಸೂಪರ್ VOOC ಫ್ಲ್ಯಾಶ್ ಚಾರ್ಜಿಂಗ್ ತಂತ್ರಗಾರಿಕೆಯನ್ನು ಇದು ಹೊಂದಿದೆ.ಕೆಲವೇ ನಿಮಿಷದಲ್ಲಿ ಫೋನ್ ಚಾರ್ಜ್ ಆಗುತ್ತದೆ. 6GB RAM ಮತ್ತು 64GB ROMಆಯ್ಕೆಯ ಫೋನ್ 27,999 ರುಪಾಯಿ ಬೆಲೆಗೆ ಲಭ್ಯವಿದೆ.

ರಿಯಲ್ ಮಿ 5

ರಿಯಲ್ ಮಿ 5

ಇದರಲ್ಲಿ ಕ್ವಾಡ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇದೆ. ಇದರ ಆರಂಭಿಕ ಬೆಲೆ 8,499 ರುಪಾಯಿಗಳು ಮತ್ತು 10,499 ಗೆ ಕ್ರಮವಾಗಿ 3GB RAM/32GB ROM ಮತ್ತು 4GB RAM/64GB ROM ಆಯ್ಕೆಯ ಫೋನ್ ಗಳು ಲಭ್ಯವಾಗುತ್ತದೆ.

ರಿಯಲ್ ಮಿ 3

ರಿಯಲ್ ಮಿ 3

ಈ ಫೋನಿನಲ್ಲಿ 16MP ಪಾಪ್ ಅಪ್ ಕ್ಯಾಮರಾ ಇದೆ.ಈ ಡಿವೈಸ್ ನಿಮಗೆ 7,499 ರುಪಾಯಿ ಬೆಲೆಗೆ ಸಿಗುತ್ತದೆ.

ರಿಯಲ್ ಮಿ XT

ರಿಯಲ್ ಮಿ XT

ಈ ಹ್ಯಾಂಡ್ ಸೆಟ್ಟಿನ ಪ್ರಮುಖ ಫೀಚರ್ ಎಂದರೆ 64MP ಕ್ವಾಡ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ. Rs. 15,999/Rs. 16,999/Rs. 18,999 ಗೆ ಕ್ರಮವಾಗಿ 4GB RAM + 64GB ROM/6GB RAM + 64GB ROM/8GB RAM + 128GB ROM ವೇರಿಯಂಟ್ ನ ಫೋನ್ ಗಳು ಸಿಗುತ್ತದೆ.

ರಿಯಲ್ ಮಿ X

ರಿಯಲ್ ಮಿ X

ಇದರಲ್ಲಿ 16MP ಪಾಪ್ ಅಪ್ ಕ್ಯಾಮರಾ ಜೊತೆಗೆ ಅತ್ಯುತ್ತಮ ಅಕ್ಯುರೆಸಿ ಇರುವ ಇಮೇಜ್ ಕ್ಯಾಪ್ಚರ್ ಮಾಡುವ ತಂತ್ರಗಾರಿಕೆಯನ್ನು ಅಳವಡಿಸಲಾಗಿದೆ. ಈ ಸೇಲ್ ನಲ್ಲಿ 4GB RAM ಮತ್ತು 128GB ROM ನ ಫೋನ್ 14,999 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ.

ರಿಯಲ್ ಮಿ 3 ಪ್ರೋ

ರಿಯಲ್ ಮಿ 3 ಪ್ರೋ

ಇದರಲ್ಲಿ ಅತೀ ದೊಡ್ಡ ಅಂದೆರೆ 4,245 mAh ನ ಬ್ಯಾಟರಿ ವ್ಯವಸ್ಥೆ ಇದೆ. 15,999 ರುಪಾಯಿ ಬೆಲೆಗೆ ಬಿಡುಗಡೆಗೊಂಡಿದ್ದ ಈ ಫೋನ್ ಇದೀಗ ಈ ಸೇಲ್ ನಲ್ಲಿ 9,999 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ.

Best Mobiles in India

English summary
Flipkart's Realme Days sales start from February 10th and will run until February 13th, 2020. During the sales, you will find innumerable offers on some Realme smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+