ರೆಡ್‌ಮಿ ನೋಟ್ 5 ಪ್ರೋ ಮೇಲೆ ಬಿಗ್ ಡಿಸ್ಕೌಂಟ್..! ಇಷ್ಟು ಕಮ್ಮಿ ಬೆಲೆಗೆ ಮತ್ಯಾವತ್ತೂ ಸಿಗಲ್ಲ..!
ಭಾರತೀಯ ಸ್ಮಾರ್ಟ್‌ಫೋನ್‌ನ ಮಧ್ಯಮ ಶ್ರೇಣಿಯ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದ ರೆಡ್‌ಮಿ ನೋಟ್ 5 ಪ್ರೋ ಈಗ ಮತ್ತಷ್ಟು ಕೈಗೆಟಕುವ ದರದಲ್ಲಿ ಸಿಗಲಿದೆ. ಹೌದು, ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ಭಾರೀ ರಿಯಾಯಿತಿಯೊಂದಿಗೆ ರೆಡ್‌ಮಿ ನೋಟ್ 5 ಪ್ರೋ ಮಾರಾಟವಾಗುತ್ತಿದೆ.

ಹೀಗಾಗಲೇ ಭಾರತದಲ್ಲಿ ಹಬ್ಬದ ಸೀಸನ್ ಪ್ರಾರಂಭವಾಗಿದ್ದು, ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಪೇಟಿಎಂ ಮಾಲ್‌ಗಳು ಭಾರೀ ಸೇಲ್‌ಗಳನ್ನು ಆಯೋಜಿಸಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಫ್ಲಿಪ್‌ಕಾರ್ಟ್‌ನಲ್ಲೂ ಕೂಡ 5ನೇ ಆವೃತ್ತಿಯ ಬಿಗ್ ಬಿಲಿಯನ್ ಡೇ ಸೇಲ್ ಇಂದಿನಿಂದ ಆರಂಭವಾಗಿದ್ದು. ಆದರೆ, ಇಂದು ಮಧ್ಯರಾತ್ರಿ 12ರಿಂದ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ದೊರೆಯಲಿದ್ದು, ಅದರಂತೆ, ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ₹2000 ಕಡಿತಗೊಂಡು ಮಾರಾಟವಾಗಲಿದೆ. ಭಾರೀ ಎಕ್ಸ್‌ಚೆಂಜ್ ಆಫರ್‌ನ್ನು ಕೂಡ ನೀಡಲಾಗಿದೆ.

ಏನೀದು ಆಫರ್..?
ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ರೆಡ್‌ಮಿ ನೋಟ್ 5 ಪ್ರೋ ₹ 12,999ಕ್ಕೆ ದೊರೆಯಲಿದೆ. ಈ ಆಫರ್ ಕೇವಲ 4GB RAM ಆವೃತ್ತಿಗೆ ಲಭ್ಯವಿದ್ದು, ಇದು ಪ್ರಸ್ತುತ ₹14,999ಕ್ಕೆ ಲಭ್ಯವಿದೆ.

₹12 ಸಾವಿರಕ್ಕಿಂತಲೂ ಕಡಿಮೆಗೆ ಲಭ್ಯ
ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ₹ 2000 ಕಡಿತವಷ್ಟೇ ಅಲ್ಲದೇ, HDFC ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಂದ ಸ್ಮಾರ್ಟ್‌ಫೋನ್ ಖರೀದಿಸಿದರೆ ಶೇ.10ರಷ್ಟು ತ್ವರಿತ ರಿಯಾಯಿತಿ ಸಿಗುತ್ತದೆ. ಇದರಿಂದ ₹12 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ನೋಟ್ 5 ಪ್ರೋವನ್ನು ಖರೀದಿಸಬಹುದು.

ಫ್ಲಿಪ್‌ಕಾರ್ಟ್ ಎಕ್ಸ್‌ಚೆಂಜ್ ಆಫರ್‌ನ್ನು ನೀಡಿದ್ದು, ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಮೇಲೆ ₹11,700ರವರೆಗೂ ಎಕ್ಸ್‌ಚೆಂಜ್ ಮೌಲ್ಯವನ್ನು ಪಡೆಯಬಹುದು. ಆಗ, ನಿಮಗೆ ರೆಡ್‌ಮಿ ನೋಟ್ 5 ಪ್ರೋ ₹ 1299ಕ್ಕೆ ಲಭ್ಯವಾಗಲಿದೆ.

ರೆಡ್‌ಮಿ ನೋಟ್ 5 ಪ್ರೊ ಡಿಸೈನ್
ರೆಡ್‌ಮಿ ನೋಟ್ 5 ಪ್ರೊ ಪ್ರಿಮಿಯಮ್ ವಿನ್ಯಾಸ ಹೊಂದಿದ್ದು, ಹಿಂಭಾಗದಲ್ಲಿ ಐಫೋನ್ X ಮಾದರಿಯಲ್ಲಿ ಕಾಣಿಸುವ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. 18:9 ಅನುಪಾತದಲ್ಲಿರುವ 5.99 ಇಂಚ್ ಡಿಸ್‌ಪ್ಲೇ ಮಲ್ಟಿಮೀಡಿಯಾ ಮತ್ತು ಗೇಮಿಂಗ್‌ಗಾಗಿ ಹೇಳಿ ಮಾಡಿಸಿದಂತಿದೆ. ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಬಾಗದಲ್ಲಿ ನೀಡಲಾಗಿದೆ.

ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ 636 ಪ್ರೊಸೆಸರ್
ಅತ್ಯಂತ ಕಡಿಮೆ ಬೆಲೆಯಲ್ಲಿ ಕ್ವಾಡ್ ಕೋರ್ ಕ್ವಾಲ್‌ಕಮ್ ಸ್ನಾಪ್‌ಡ್ರಾಗನ್ 636 CPU ಪ್ರೊಸೆಸರ್, ಕರಿಯೋ 260 CPU ವಿಶೇಷತೆಗಳನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್ ಇದಾಗಿದೆ. ಅತ್ಯಂತ ವೇಗದ ಕಾರ್ಯಾಚರಣೆ ಹೊಂದಿರುವ ಈ ಫೋನ್ ಒಂದೇ ಸಮಯದಲ್ಲಿ ಮಲ್ಟಿ ಟಾಸ್ಕ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

20MP ಸೆಲ್ಫಿ ಕ್ಯಾಮೆರಾ
ಭಾರತೀಯರು ಸೆಲ್ಫಿ ಪ್ರಿಯರು ಎಂದು ಅರಿತಿರುವ ಶಿಯೋಮಿ 20MP ಸೆಲ್ಫಿ ಕ್ಯಾಮೆರಾವನ್ನು ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಲ್ಲಿ ನೀಡಿದೆ. ಕೃತಕ ಬುದ್ದಿ ಮತ್ತೆಯ ಮೂಲಕ ಕಾರ್ಯನಿರ್ವಹಿಸಲಿರುವ ಈ ಸೆಲ್ಫಿ ಕ್ಯಾಮೆರಾ ಬ್ಯೂಟಿಫೈ 4.0 ಮೂಡ್ ಆಯ್ಕೆಯನ್ನು ಸಹ ಹೊಂದಿರುವುದರಿಂದ ಅತ್ಯುತ್ತಮ ಸೆಲ್ಫಿ ಚಿತ್ರಗಳನ್ನು ನೀಡುತ್ತದೆ.

ಬೆಸ್ಟ್ ಡ್ಯುಯಲ್ ಕ್ಯಾಮೆರಾ
12MP+5MP ಕ್ಯಾಮೆರಾ ವ್ಯವಸ್ಥೆಯನ್ನು ರೆಡ್‌ಮಿ ನೋಟ್ 5 ಪ್ರೊ ಫೋನಿನಲ್ಲಿ ಕಾಣಹುದಾಗಿದೆ. AI (ಕೃತಕ ಬುದ್ದಿಮತ್ತೆ) ಮತ್ತು EIS ತಂತ್ರಜ್ಞಾನದ ಸಹಾಯದಿಂದ ಕಾರ್ಯನಿರ್ವಹಿಸುವ ಈ ಫೋನಿನ ಕ್ಯಾಮೆರಾದಿಂದ ಅತ್ಯುತ್ತಮ ಬೊಕ್ಕೆ ಚಿತ್ರಗಳನ್ನು ಸೆರೆಹಿಡಿಯುವ ವಿಶೇಷತೆ ಹೊಂದಿದೆ.

RAM ಮತ್ತು ಮೆಮೊರಿ
4GB ಮತ್ತು 6GB RAM ಎರಡು ಆವೃತ್ತಿಗಳಲ್ಲಿ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನ್ ಬಿಡುಗಡೆಯಾಗಿದೆ. ಎರಡೂ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಲ್ಲಿ 64GB ಆಂತರಿಕ ಮೆಮೊರಿ ನೀಡಲಾಗಿದ್ದು, ಎಸ್‌ಡಿ ಕಾರ್ಡ್ ಮೂಲಕ 128GB ವರೆಗೆ ಮೆಮೊರಿಯನ್ನು ವಿಸ್ತರಿಸುವ ಅವಕಾಶವಿದೆ. ಫ್ಲಿಪ್‌ಕಾರ್ಟ್‌ನ ₹2,000 ರಿಯಾಯಿತಿ ಆಫರ್ ಕೇವಲ 4GB ಆವೃತ್ತಿಗೆ ಲಭ್ಯವಿದೆ.


Click it and Unblock the Notifications








