Home
ಮೊಬೈಲ್

Flipkart Super Value Days Sale: ಈ ಸ್ಮಾರ್ಟ್‌ಫೋನ್‌ಗಳು ತುಂಬಾ ಕಡಿಮೆ ಬೆಲೆಗೆ ಲಭ್ಯ; ಇಲ್ಲಿದೆ ಪಟ್ಟಿ

ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ನೀಡುತ್ತಿದೆ. ನೀವು, ಕಡಿಮೆ ಬೆಲೆಯಲ್ಲಿ ಪ್ರಸಿದ್ಧ ಕಂಪನಿಗಳ ಮೊಬೈಲ್‌ಗಳನ್ನು ಖರೀದಿಸಬಹುದು. ಹೌದು, ಫ್ಲಿಪ್‌ಕಾರ್ಟ್ ಸೂಪರ್ ವ್ಯಾಲ್ಯೂ ಡೇಸ್ ಸೇಲ್ (Flipkart Super Value Days Sale) ಡಿಸೆಂಬರ್ 14 ರಿಂದ 18 ರವರೆಗೆ ನಡೆಯಲಿದೆ. ಈ ವಿಶೇಷ ಮಾರಾಟದಲ್ಲಿ ಟೆಕ್ ದೈತ್ಯ ಸ್ಯಾಮ್‌ಸಂಗ್, ಗೂಗಲ್ ಪಿಕ್ಸೆಲ್, ರೆಡ್ಮಿ ಸೇರಿದಂತೆ ಇನ್ನಿತರ ಪ್ರಮುಖ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ ಲಭ್ಯವಿದೆ. ಬನ್ನಿ, ಫ್ಲಿಪ್‌ಕಾರ್ಟ್ ಯಾವೆಲ್ಲಾ ಫೋನ್‌ಗಳ ಮೇಲೆ ಆಫರ್‌ ನೀಡುತ್ತಿದೆ? ಡಿಸ್ಕೌಂಟ್ ಎಷ್ಟು? ಎನ್ನುವುದನ್ನು ತಿಳಿಯೋಣ.

ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರು ಎಲ್ಲಿಯೂ ಹೋಗಬೇಕಾಗಿಲ್ಲ. ಯಾಕಂದ್ರೆ, ಫ್ಲಿಪ್‌ಕಾರ್ಟ್‌ನ ಸೂಪರ್ ವ್ಯಾಲ್ಯೂ ಡೇಸ್ ಮಾರಾಟ ಶುರುವಾಗಿದೆ. ಈ ಸೇಲ್ ಡಿಸೆಂಬರ್ 18 ರವರೆಗೆ ಮುಂದುವರೆಯಲಿದೆ. ಈ ಮಾರಾಟದಲ್ಲಿ ನೀವು ಮೊಟೊರೊಲಾ, ನಥಿಂಗ್ ಮತ್ತು ಸ್ಯಾಮ್‌ಸಂಗ್‌ ಫೋನ್‌ಗಳನ್ನು ಸುಲಭವಾಗಿ ಖರೀದಿಸಬಹುದು. ಬ್ಯಾಂಕ್ ರಿಯಾಯಿತಿಗಳು ಮತ್ತು ಕ್ಯಾಶ್‌ಬ್ಯಾಕ್‌ಗಳೊಂದಿಗೆ ಈ ಫೋನ್‌ಗಳನ್ನು ಕೊಳ್ಳಬಹುದು. ಜೊತೆಗೆ ಎಕ್ಸ್‌ಚೇಂಜ್ ಆಫರ್‌ ಸಹ ಲಭ್ಯವಿದೆ. ಕೆಲವು ಸ್ಮಾರ್ಟ್‌ಫೋನ್‌ಗಳ ಬೆಲೆ ತುಂಬಾನೇ ಕಡಿಮೆ ಇದೆ.

Flipkart Super Value Days Sale: ಕಡಿಮೆ ಬೆಲೆಗೆ ಈ ಸ್ಮಾರ್ಟ್‌ಫೋನ್‌ಗಳು ಲಭ್ಯ!

ಮೊಟೊ G85

ಮೊಟೊ G85 (Moto G85) ಫೋನಿನ 8GB RAM ರೂಪಾಂತರವನ್ನು 17,999 ರೂ.ಗೆ ಖರೀದಿಸಬಹುದು. ನೀವು, ಇದನ್ನು 1500 ರೂ. ರಿಯಾಯಿತಿಯೊಂದಿಗೆ ಕೊಳ್ಳಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೇಲೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ. ಜೊತೆಗೆ 16,500 ರೂ.ಗಳ ಎಕ್ಸ್‌ಚೇಂಜ್ ಆಫರ್‌ ಸಿಗುತ್ತದೆ. ಈ ಫೋನ್ 6.67 ಇಂಚಿನ ದೊಡ್ಡ ಡಿಸ್ಪ್ಲೇ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 6s ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 5G

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 5G (Samsung Galaxy S23 5G) ಫೋನಿನ 8GB RAM ಮತ್ತು 128GB ಸ್ಟೋರೇಜ್‌ನ ಬೆಲೆ 42,999 ರೂ. ಇದೆ. ನೀವು, ಬ್ಯಾಂಕ್‌ ಕ್ರೆಡಿಟ್ ಕಾರ್ಡ್ ಬಳಸಿ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಜೊತೆಗೆ 39,200 ರೂ.ಗಳ ಎಕ್ಸ್‌ಚೇಂಜ್‌ ಆಫರ್‌ ಲಭ್ಯವಿದೆ. ಫೋನಿನಲ್ಲಿ 6.1 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE (Samsung Galaxy S23 FE) ಸಹ ಫ್ಲಿಪ್‌ಕಾರ್ಟ್ ಸೂಪರ್ ವ್ಯಾಲ್ಯೂ ಡೇಸ್ ಸೇಲ್‌ನಲ್ಲಿ ತುಂಬಾ ಕಡಿಮೆ ಬೆಲೆಗೆ ಲಭ್ಯವಿದೆ. ಅರ್ಧಕ್ಕಿಂತ ಕಡಿಮೆ ಬೆಲೆಗೆ ಈ ಫೋನ್ ಖರೀದಿಸಬಹುದು. ನೀವು, 79,999 ಬೆಲೆಯ ಈ ಫೋನನ್ನು ಪ್ರಸ್ತುತ 34,999 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು.

ನಥಿಂಗ್ ಫೋನ್‌ (2a)

ನಥಿಂಗ್ ಫೋನ್‌ 2a (Nothing phone (2a) ಫೋನಿನ 12GB RAM ಅನ್ನು 25,999 ರೂ.ಗೆ ಖರೀದಿಸಬಹುದು. ನೀವು, 1500 ರೂ. ರಿಯಾಯಿತಿ ಪಡೆಯಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೇಲೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ. ಜೊತೆಗೆ 24,050 ರೂ. ಎಕ್ಸ್‌ಚೇಂಜ್ ಆಫರ್‌ ಸಿಗುತ್ತದೆ. ಇದು ಡೈಮೆನ್ಸಿಟಿ 7200 ಪ್ರೊಸೆಸರ್ ಹೊಂದಿದೆ. ಇದರಲ್ಲಿ 6.7 ದೊಡ್ಡ ಇಂಚಿನ ಡಿಸ್ಪ್ಲೇ ಇದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಫೋನಿನಲ್ಲಿ 5000mAh ಸಾಮರ್ಥ್ಯದ ಬ್ಯಾಟರಿ ಲಭ್ಯವಿದೆ.

ಗೂಗಲ್ ಪಿಕ್ಸೆಲ್ 8a

ಗೂಗಲ್ ಪಿಕ್ಸೆಲ್ 8a (Google Pixel 8a) ಮೊಬೈಲ್‌ ಸಹ ಈ ಸೇಲ್‌ನಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ನೀವು, 52,999 ಬೆಲೆಯ ಈ ಫೋನನ್ನು ಪ್ರಸ್ತುತ 36,999 ರೂ.ಗೆ ಖರೀದಿಸಬಹುದು. ಐಸಿಐಸಿಐ ಕ್ರೆಡಿಟ್ ಕಾರ್ಡ್‌ನಲ್ಲಿ 2,000 ರೂ. ಡಿಸ್ಕೌಂಟ್ ಸಹ ಲಭ್ಯವಿದೆ.

Best Mobiles in India

English summary
Flipkart Super Value Days Sale: Huge discount On Google Pixel 8a, Moto G85, Samsung Galaxy S23 FE and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+