ಹಾರಲು ಸಿದ್ಧವಾಗಿದೆ ಬ್ಲ್ಯಾಕ್ ಬರ್ಡ್ ಫ್ಲೈ ಮೊಬೈಲ್

Posted By: Staff
ಹಾರಲು ಸಿದ್ಧವಾಗಿದೆ ಬ್ಲ್ಯಾಕ್ ಬರ್ಡ್ ಫ್ಲೈ ಮೊಬೈಲ್

ಭಾರತದಲ್ಲಿ ಅಭಿವೃದ್ಧಿಯಾಗುತ್ತಿರುವ ಫ್ಲೈ ಮೊಬೈಲ್ ಕಂಪನಿ ಅತ್ಯಾಕರ್ಷಕವಾದ ಮೊಬೈಲನ್ನು ತೆರೆಕಾಣಿಸಲಿದೆ. ಡ್ಯೂಯಲ್ ಸಿಮ್ ಫೋನ್, ಮ್ಯುಸಿಕ್ ಫೋನ್, ಟಚ್ ಫೋನ್ ಮುಂತಾದ ವರ್ಗಗಳಲ್ಲಿ ಅನೇಕ ಮೊಬೈಲ್ ಗಳನ್ನು ಹೊರತರಲು ಯೋಜಿಸಿದೆ. ಅದೂ ಕೂಡ ಕೈಗೆಟುಕುವ ದರದಲ್ಲಿ.

ಇತ್ತೀಚೆಗಷ್ಟೆ ಕಂಪನಿ ಫ್ಲೈ ಬ್ಲ್ಯಾಕ್ ಬರ್ಡ್ ಎಂಬ ಮೊಬೈಲನ್ನು ಬಿಡುಗಡೆಗೊಳಿಸಿತು. ಈ ಸ್ಟೈಲಿಶ್ ಮೊಬೈಲ್ ಇನ್ನೂ ಅತ್ಯಾಕರ್ಷಕವಾದ ಆಯ್ಕೆಯನ್ನೂ ಒಳಗೊಂಡಿದೆ. 600MHz ಪ್ರೊಸೆಸರನ್ನು ಪಡೆದುಕೊಂಡಿರುವ ಈ ಮೊಬೈಲ್ 2.3.4 ಆಯಾಮದ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

ಫ್ಲೈ ಬ್ಲ್ಯಾಕ್ ಬರ್ಡ್ ವಿಶೇಷತೆ:

* ಡ್ಯೂಯಲ್ ಸಿಮ್

* 3.5 ಇಂಚಿನ ಡಿಸ್ಲ್ಪೇ, TFT ಟಚ್ ಸ್ಕ್ರೀನ್

* 120 ಗ್ರಾಂ ತೂಕ

* * 3 ಮೆಗಾ ಪಿಕ್ಸಲ್ ಕ್ಯಾಮೆರಾ, 0.3 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ

* 3.5 ಎಂಎಂ ಆಡಿಯೋ ಜ್ಯಾಕ್

* 512 ಎಂಬಿ ಆಂತರಿಕ ಮೆಮೊರಿ, 256 ಎಂಬಿ ಸಿಸ್ಟಮ್ ಮೆಮೊರಿ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಆಯ್ಕೆ

* ವೈ-ಫೈ, ಬ್ಲೂಟೂಥ್

* WAP, GPS

ಮನರಂಜನೆಗೆಂದು ಎಫ್. ಎಂ, ಅನೇಕ ಆಡಿಯೋ, ವಿಡಿಯೋ ಫಾರ್ಮೆಟ್ ಗಳನ್ನು ಬೆಂಬಲಿಸುತ್ತದೆ. ಈ ಮೊಬೈಲ್ ಕಪ್ಪು ಬಣ್ಣದಲ್ಲಿರುವುದರಿಂದ ಮೊಬೈಲ್ ಗೆ ಬ್ಲ್ಯಾಕ್ ಬರ್ಡ್ ಎಂದು ಹೆಸರಿಡಲಾಗಿದೆ. ಕಪ್ಪು ಬಣ್ಣದೊಂದಿಗೆ ಎಡ್ಜ್ ಗಳು ಆಕರ್ಷಕವೆನಿಸಿದೆ. 1000mAh  ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಈ ಮೊಬೈಲ್ 220 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 7.5 ಗಂಟೆ ಟಾಕ್ ಟೈಂ ನೀಡುತ್ತದೆ. ಈ ಫ್ಲೈ ಬ್ಲ್ಯಾಕ್ ಬರ್ಡ್ ಮೊಬೈಲ್ ಬೆಲೆ 11,000 ರು ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot